Vande Bharat to Tumkur: ತುಮಕೂರಿಗೂ ವಂದೇ ಭಾರತ್‌, ನಾಳೆಯಿಂದ ಆರಂಭ, ಸಮಯ, ದರ ಎಷ್ಟು?-indian railways news tumkur city getting bangalore dharwad vande bharat express service begin on august 23 kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Vande Bharat To Tumkur: ತುಮಕೂರಿಗೂ ವಂದೇ ಭಾರತ್‌, ನಾಳೆಯಿಂದ ಆರಂಭ, ಸಮಯ, ದರ ಎಷ್ಟು?

Vande Bharat to Tumkur: ತುಮಕೂರಿಗೂ ವಂದೇ ಭಾರತ್‌, ನಾಳೆಯಿಂದ ಆರಂಭ, ಸಮಯ, ದರ ಎಷ್ಟು?

Indian Railways ವಂದೇ ಭಾರತ್‌ ರೈಲು( Vande Bharat) ಸೇವೆ ಗುರುವಾರದಿಂದ ತುಮಕೂರು ನಗರಕ್ಕೂ ಸಿಗಲಿದೆ. ಬೆಂಗಳೂರು ಧಾರವಾಡ ವಂದೇ ಭಾರತ್‌ ರೈಲು ತುಮಕೂರಿನಲ್ಲಿ ನಿಲುಗಡೆಯಾಗಲಿದೆ.

ತುಮಕೂರಿನಲ್ಲೂ ಇನ್ನು ಮುಂದೆ ವಂದೇ ಭಾರತ್‌ ರೈಲು ನಿಲುಗಡೆಯಾಗಲಿದೆ.
ತುಮಕೂರಿನಲ್ಲೂ ಇನ್ನು ಮುಂದೆ ವಂದೇ ಭಾರತ್‌ ರೈಲು ನಿಲುಗಡೆಯಾಗಲಿದೆ.

ಬೆಂಗಳೂರು: ಬಹುದಿನಗಳ ಬೇಡಿಕೆಯಂತೆ ಕಲ್ಪತರು ನಗರಿ ತುಮಕೂರಿಗೂ ವಂದೇ ಭಾರತ್‌ ಸೇವೆ ಸಿಗಲಿವೆ. ಇದರಿಂದ ಬೆಂಗಳೂರು ಹಾಗೂ ತುಮಕೂರು ಮಾತ್ರವಲ್ಲದೇ ಮಧ್ಯಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗಕ್ಕೂ ತುಮಕೂರಿನ ಸಂಪರ್ಕ ಜಾಲ ಬಲಗೊಳ್ಳಲಿದೆ. ಆಗಸ್ಟ್‌ 23ರ ಶುಕ್ರವಾರದಿಂದಲೇ ಬೆಂಗಳೂರು ಹಾಗೂ ಧಾರವಾಡ, ಧಾರವಾಡ ಮತ್ತು ಬೆಂಗಳೂರು ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇವೆ ನೀಡಲಿದೆ. ಶುಕ್ರವಾರದಂದು ತುಮಕೂರಿನ ವಂದೇ ಭಾರತ್‌ ರೈಲು ಸೇವೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ ಬೆಂಗಳೂರು ಮಾರ್ಗದಿಂದ ಆಗಮಿಸುವ ವಂದೇ ಭಾರತ್‌ ರೈಲು ಸಂಜೆ ಧಾರವಾಡದಿಂದ ಬೆಂಗಳೂರು ಕಡೆಗೆ ನಿರ್ಗಮಿಸಲಿದೆ.

ತುಮಕೂರಿನಲ್ಲಿ ಧಾರವಾಡ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಅನುಮೋದನೆ ನೀಡಲಾಗಿದೆ. ಸಚಿವ ವಿ.ಸೋಮಣ್ಣ ಅವರು ಆ.23ರಂದು ಸಂಜೆ 6.18 ಕ್ಕೆ ತುಮಕೂರಿನಲ್ಲಿ ನಿಲುಗಡೆಗೆ ಹಸಿರು ನಿಶಾನೆ ತೋರಲಿದ್ದಾರೆ. ಬಳಿಕ ಸಚಿವರು ಅದೇ ರೈಲಿನಲ್ಲಿ ಬೆಂಗಳೂರಿನವರೆಗೆ ಪ್ರಯಾಣಿಸಲಿದ್ದಾರೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ಹಾಗೂ ತುಮಕೂರು ಸಮೀಪದ ನಗರಗಳು. ತುಮಕೂರಿನಿಂದ ನಿತ್ಯ ಬೆಂಗಳೂರಿಗೆ ಹೋಗಿ ಬರುವವರು, ಬೆಂಗಳೂರಿನಿಂದ ತುಮಕೂರಿಗೆ ಬರುವವ ಸಂಖ್ಯೆಯ ಅಧಿಕವಾಗಿದೆ. ತುಮಕೂರು ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾವೇರಿ. ಮಧ್ಯ ಕರ್ನಾಟಕದ ದಾವಣಗೆರೆ, ಮಲೆನಾಡಿನ ಚಿಕ್ಕಮಗಳೂರು ಭಾಗದೊಂದಿಗೂ ನಂಟು ಹೊಂದಿದೆ. ಈ ಕಾರಣದಿಂದಲೇ ಬೆಂಗಳೂರು ಧಾರವಾಡ ವಂದೇ ಭಾರತ್‌ ರೈಲನ್ನು ತುಮಕೂರಿನಲ್ಲಿಯೂ ನಿಲುಗಡೆ ಮಾಡಬೇಕು ಎನ್ನುವ ಬೇಡಿಕೆ ಇತ್ತು. ಇದು ಈಡೇರಿರಲಿಲ್ಲ. ಈಗ ಕೇಂದ್ರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿರುವ ತುಮಕೂರು ಸಂಸದ ವಿ.ಸೋಮಣ್ಣ ಅವರು ಇದನ್ನು ಆಗು ಮಾಡಿದ್ದಾರೆ. ಕಳೆದ ತಿಂಗಳು ಉತ್ತರ ಕರ್ನಾಟಕದ ಯಾದಗಿರಿಗೂ ವಂದೇ ಭಾರತ್‌ ಸಂಪರ್ಕ ಕಲ್ಪಿಸಲಾಗಿತ್ತು. ಕಲಬುರಗಿ ಬೆಂಗಳೂರು ವಂದೇ ಭಾರತ್‌ ರೈಲಿನ ನಿಲುಗಡೆಯಿಂದ ಯಾದಗಿರಿ ಭಾಗದ ಜನರಿಗೆ ಸಾಕಷ್ಟು ಸಹಾಯವಾಗಿದೆ.