ಬೆಂಗಳೂರಿನಿಂದ ಹೊರಡುವ ತಿರುವನಂತಪುರಂ ಸಹಿತ ಕೆಲ ರೈಲುಗಳ ಸೇವೆ ವಿಸ್ತರಣೆ, ಹೆಚ್ಚುವರಿ ಟ್ರಿಪ್‌ಗೆ ಅವಕಾಶ
ಭಾರತೀಯ ರೈಲ್ವೆ ನೈರುತ್ಯ ರೈಲ್ವೆ ವಲಯವು ಬೆಂಗಳೂರಿನಿಂದ ಕೇರಳದ ತಿರುವನಂತಪುರಂ ಸಹಿತ ವಿವಿಧೆಡೆ ಸಂಚರಿಸುವ ಕೆಲ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು: ಬೇಸಿಗೆ ರಜೆ ನಂತರವೂ ಇರುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆಯು ಬೆಂಗಳೂರಿನ ಹೊರಡುವ ಕೆಲವು ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿದೆ. ಬೆಂಗಳೂರು ಹಾಗೂ ಕೇರಳದ ತಿರುವನಂತಪುರಂ, ಸಾಂತ್ರಗಚಿ-ಯಶವಂತಪುರ ಸಾಪ್ತಾಹಿಕ ವಿಶೇಷ ರೈಲು ಸೇವೆಗಳು ವಿಸ್ತರಣೆಯಾಗಿವೆ. ಎರಡು ಜೋಡಿ ವಿಶೇಷ ರೈಲುಗಳ ವಿಸ್ತೃತ ಸಂಚಾರವನ್ನು ಮೇ 30 ರವರೆಗೆ ನಡೆಸಲು ಮೊದಲೇ ಸೂಚಿಸಲಾಗಿದ್ದ ರೈಲು ಸಂಖ್ಯೆ 06555 SMVT ಬೆಂಗಳೂರು-ತಿರುವನಂತಪುರಂ ಉತ್ತರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಜೂನ್ 6 ರಿಂದ ಸೆಪ್ಟೆಂಬರ್ 26 ರವರೆಗೆ 17 ಹೆಚ್ಚುವರಿ ಸೇವೆ ನೀಡಲಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಈ ಕೆಳಗಿನ ವಿಶೇಷ ರೈಲು ಸೇವೆಗಳನ್ನು ಅಸ್ತಿತ್ವದಲ್ಲಿರುವ ಸಮಯ ಹಾಗೂ ನಿಲುಗಡೆಗಳೊಂದಿಗೆ ವಿಸ್ತರಣೆ ಮಾಡಲಾಗಿದೆ ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಮೇ 30 ರವರೆಗೆ ನಡೆಸಲು ಮೊದಲೇ ಸೂಚಿಸಲಾಗಿದ್ದ ರೈಲು ಸಂಖ್ಯೆ 06555 SMVT ಬೆಂಗಳೂರು-ತಿರುವನಂತಪುರಂ ಉತ್ತರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಜೂನ್ 6 ರಿಂದ ಸೆಪ್ಟೆಂಬರ್ 26 ರವರೆಗೆ 17 ಹೆಚ್ಚುವರಿ ಬಾರಿ ಸಂಚಿಸರಿಸದೆ. ಜೂನ್ 1 ರವರೆಗೆ ನಡೆಸಲು ಮೊದಲೇ ಸೂಚಿಸಲಾಗಿದ್ದ ರೈಲು ಸಂಖ್ಯೆ 06556 ತಿರುವನಂತಪುರಂ ಉತ್ತರ-SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಜೂನ್ 8 ರಿಂದ ಸೆಪ್ಟೆಂಬರ್ 28 ರವರೆಗೆ 17 ಹೆಚ್ಚುವರಿ ಪ್ರಯಾಣಗಳನ್ನು ಒದಗಿಸಲಿದೆ.
ಏಪ್ರಿಲ್ 24 ರವರೆಗೆ ನಡೆಸಲು ಮೊದಲೇ ಸೂಚಿಸಲಾಗಿದ್ದ ರೈಲು ಸಂಖ್ಯೆ 02863 ಸಾಂತ್ರಗಚಿ-ಯಶವಂತಪುರ ಸಾಪ್ತಾಹಿಕ ವಿಶೇಷ ರೈಲು ಮೇ 22 ರಿಂದ ಜೂನ್ 26 ರವರೆಗೆ ಆರು ಹೆಚ್ಚುವರಿ ಬಾರಿ ಪ್ರಯಾಣಿಸಲಿದೆ.
02864 ಯಶವಂತಪುರ-ಸಂತ್ರಗಚಿ ಸಾಪ್ತಾಹಿಕ ವಿಶೇಷ ರೈಲು ಏಪ್ರಿಲ್ 26 ರವರೆಗೆ ಕಾರ್ಯನಿರ್ವಹಿಸಲಿದ್ದು, ಮೇ 24 ರಿಂದ ಜೂನ್ 28 ರವರೆಗೆ ಆರು ಹೆಚ್ಚುವರಿ ಟ್ರಿಪ್‌ಗಳನ್ನು ಮಾಡಲಿದೆ.
ಯಲಹಂಕದಲ್ಲಿ ನಿಲುಗಡೆ
ಇದಲ್ಲದೆ, 02863/02864 ರೈಲುಗಳು ಯಲಹಂಕ ಜಂಕ್ಷನ್‌ನಲ್ಲಿ ಹೆಚ್ಚುವರಿ ನಿಲುಗಡೆಯನ್ನು ಹೊಂದಿರುತ್ತವೆ. ರೈಲು ಸಂಖ್ಯೆ 02863 ರಾತ್ರಿ 11.18 ಕ್ಕೆ ಯಲಹಂಕಕ್ಕೆ ಆಗಮಿಸಿ 11.20 ಕ್ಕೆ ಹೊರಡುತ್ತದೆ. ರೈಲು ಸಂಖ್ಯೆ 02864 ಬೆಳಿಗ್ಗೆ 4.50 ಕ್ಕೆ ಯಲಹಂಕಕ್ಕೆ ಆಗಮಿಸಿ 4.52 ಕ್ಕೆ ಹೊರಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೈರುತ್ಯ ರೈಲ್ವೆ ಹೊರಡಿಸಿರ ಬದಲಾವಣೆಗಳನ್ನು ಗಮನಿಸಿಕೊಂಡು ಪ್ರಯಾಣಿಕರು ಈ ರೈಲುಗಳ ಸೇವೆಯನ್ನು ಬಳಸಿಕೊಳ್ಳಬೇಕು. ರೈಲಿನ ಸಂಚಾರ ಸಮಯ, ಟಿಕೆಟ್ ಬುಕ್ಕಿಂಗ್ ಸೇರಿದಂತೆ ಇತರೆ ಮಾಹಿತಿಗಳನ್ನು ಪಡೆಯಲು ರೈಲ್ವೆ ಸಹಾಯವಾಣಿ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳ ತಾತ್ಕಾಲಿಕ ನಿಲುಗಡೆಗೆ ಮುಂದುವರಿಕೆ
ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು - ಎಸ್ಎಸ್ಎಸ್ ಹುಬ್ಬಳ್ಳಿ - ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12079/12080) ಮತ್ತು ಕೆಎಸ್ಆರ್ ಬೆಂಗಳೂರು - ಶಿವಮೊಗ್ಗ ಟೌನ್ - ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ (12089/12090) ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ತಿಪಟೂರು ರೈಲು ನಿಲ್ದಾಣದಲ್ಲಿ ಮುಂದುವರಿಸಲು ನಿರ್ಧರಿಸಿದೆ. ಈ ಪ್ರಾಯೋಗಿಕ ನಿಲುಗಡೆಯು ಇನ್ನೂ ಆರು ತಿಂಗಳ ಅವಧಿಗೆ, ಅಂದರೆ 2025ರ ಮೇ 16 ರಿಂದ 2025ರ ನವೆಂಬರ್ 15ರವರೆಗೆ ಜಾರಿಯಲ್ಲಿರುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ವೇಳಾಪಟ್ಟಿಯ ಪ್ರಕಾರವೇ ಈ ರೈಲುಗಳು ತಿಪಟೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿವೆ ಎಂದು ತಿಳಿಸಲಾಗಿದೆ.