Indian Railways: ಜನವರಿ 15 ರಂದು ಬೆಂಗಳೂರು- ನಾಂದೇಡ್‌, ಮೈಸೂರು-ಚೆನ್ನೈ ಸಹಿತ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಜನವರಿ 15 ರಂದು ಬೆಂಗಳೂರು- ನಾಂದೇಡ್‌, ಮೈಸೂರು-ಚೆನ್ನೈ ಸಹಿತ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ

Indian Railways: ಜನವರಿ 15 ರಂದು ಬೆಂಗಳೂರು- ನಾಂದೇಡ್‌, ಮೈಸೂರು-ಚೆನ್ನೈ ಸಹಿತ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ

Indian Railways: ಬೆಂಗಳೂರಿನಲ್ಲಿ ರೈಲ್ವೆ ಮಾರ್ಗದ ಕೆಲಸ ಇರುವುದರಿಂದ ಜನವರಿ 15ರಂದು ಬೆಂಗಳೂರು ನಾಂದೇಡ್‌, ಮೈಸೂರು ಚೆನ್ನೈ ಸಹಿತಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಲಿದೆ.

ಜನವರಿ 15 ರಂದು ಬೆಂಗಳೂರು ಮಾರ್ಗದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಜನವರಿ 15 ರಂದು ಬೆಂಗಳೂರು ಮಾರ್ಗದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು: ರೈಲ್ವೆ ಕಾಮಗಾರಿಗಳ ಕಾರಣದಿಂದಾಗಿ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆಯು 2025 ರ ಜನವರಿ 15ರಂದು ಬೆಂಗಳೂರು ನಾಂದೇಡ್‌, ಮೈಸೂರು ಚೆನ್ನೈ ಸಹಿತ ಕೆಲವು ರೈಲ್ವೆಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಿದೆ. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪಾವತಿಸದ ಫುಟ್ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಪ್ರಾರಂಭಿಸಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್‌ ಚಟುವಟಿಕೆ ಅಂದು ಇರುವುದರಿಂದ ಕೆಲವು ರೈಲುಗಳ ಸಂಚಾರವನ್ನು ಮರುಹೊಂದಿಸಲಾಗುತ್ತಿದೆ. ಇನ್ನು ಕೆಲವು ರೈಲುಗಳ ಸಂಚಾರವನ್ನು ನಿಯಂತ್ರಿಸಿದರೆ, ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ರೈಲುಗಳ ಮರುಹೊಂದಿಕೆ

1. ರೈಲು ಸಂಖ್ಯೆ 16593 ಕೆಎಸ್‌ಆರ್‌ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್‌ಪ್ರೆಸ್, ಜನವರಿ 15 ರಂದು ಬೆಂಗಳೂರಿನಿಂದ ಹೊರಡುವ ಸಮಯ 45 ನಿಮಿಷಗಳವರೆಗೆ ವಿಳಂಬವಾಗಲಿದೆ.

ರೈಲುಗಳ ನಿಯಂತ್ರಣ

1. ರೈಲು ಸಂಖ್ಯೆ 16022 ಮೈಸೂರು-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಕಾವೇರಿ ಡೈಲಿ ಎಕ್ಸ್‌ಪ್ರೆಸ್, ಜನವರಿ 15 ರಂದು ಪ್ರಾರಂಭವಾಗುವ ಪ್ರಯಾಣದ ಸಮಯವನ್ನು ಮೈಸೂರು ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲುಗಳ ತಿರುವು

1. ರೈಲು ಸಂಖ್ಯೆ. 16593 ಕೆಎಸ್‌ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್‌ಪ್ರೆಸ್, ಜನವರಿ 15 ರಂದು ಪ್ರಾರಂಭವಾಗುವ ಪ್ರಯಾಣವನ್ನು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಯಲಹಂಕ ನಿಲ್ದಾಣಗಳ ಮೂಲಕ ಬದಲಾಯಿಸಲಾಗುತ್ತಿದೆ, ಬೆಂಗಳೂರು ಕ್ಯಾಂಟೋನ್ಮೆಂಟ್‌ನಲ್ಲಿ ಅದರ ನಿಯಮಿತ ನಿಲುಗಡೆ ಇರುವುದಿಲ್ಲ.

2. ರೈಲು ಸಂಖ್ಯೆ 16022 ಮೈಸೂರು-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್, ಜನವರಿ 15 ರಂದು ಪ್ರಾರಂಭವಾಗುವ ಪ್ರಯಾಣವನ್ನು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಬೈಯ್ಯಪ್ಪನಹಳ್ಳಿ, ಕೃಷ್ಣರಾಜಪುರಂ ನಿಲ್ದಾಣಗಳ ಮೂಲಕ ಬದಲಿಸಲಾಗುತ್ತದೆ. ಬೆಂಗಳೂರಿನ ಕ್ಯಾಂಟೋನ್ಮೆಂಟ್‌ನಲ್ಲಿ ನಿಲುಗಡೆ ಇರುವುದಿಲ್ಲ. .

3. ರೈಲು ಸಂಖ್ಯೆ 06269 ಮೈಸೂರು-ಎಸ್‌ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ ವಿಶೇಷ, ಜನವರಿ 15, ರಂದು ಪ್ರಾರಂಭವಾಗುವ ಪ್ರಯಾಣವನ್ನು ಕೆಎಸ್ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಗಳ ಮೂಲಕ ಬದಲಿಸಲಾಗುತ್ತದೆ.

4. ರೈಲು ಸಂಖ್ಯೆ 06270 ಎಸ್‌ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ವಿಶೇಷ, ಜನವರಿ 15 ರಂದು ಪ್ರಾರಂಭವಾಗುವ ಪ್ರಯಾಣವನ್ನು ಎಸ್‌ಎಂವಿಟಿ ಬೆಂಗಳೂರು, ಬಾಣಸವಾಡಿ, ಯಶವಂತಪುರ, ಕೆಎಸ್‌ಆರ್‌ ಬೆಂಗಳೂರು ನಿಲ್ದಾಣಗಳ ಮೂಲಕ ಬದಲಾಯಿಸಲಾಗುತ್ತದೆ. ಅಂದು ಈ ರೈಲಿಗೆ ಬೆಂಗಳೂರು ಕ್ಯಾಂಟೋನ್ಮೆಂಟ್‌ನಲ್ಲಿ ನಿಯಮಿತ ನಿಲುಗಡೆ ಇರುವುದಿಲ್ಲ.

Whats_app_banner