Indian Railways: ವಿಶಾಖ ಪಟ್ಟಣ- ಬೆಂಗಳೂರು ವಿಶೇಷ ರೈಲುಗಳ ಸೇವೆ ನವೆಂಬರ್‌ವರೆಗೂ ವಿಸ್ತರಣೆ, ಬಿಹಾರ ರೈಲು ಸೇವೆಯೂ ಮುಂದುವರಿಕೆ-indian railways south western railways extended of special train services to vishakhapatnam from bangalore kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ವಿಶಾಖ ಪಟ್ಟಣ- ಬೆಂಗಳೂರು ವಿಶೇಷ ರೈಲುಗಳ ಸೇವೆ ನವೆಂಬರ್‌ವರೆಗೂ ವಿಸ್ತರಣೆ, ಬಿಹಾರ ರೈಲು ಸೇವೆಯೂ ಮುಂದುವರಿಕೆ

Indian Railways: ವಿಶಾಖ ಪಟ್ಟಣ- ಬೆಂಗಳೂರು ವಿಶೇಷ ರೈಲುಗಳ ಸೇವೆ ನವೆಂಬರ್‌ವರೆಗೂ ವಿಸ್ತರಣೆ, ಬಿಹಾರ ರೈಲು ಸೇವೆಯೂ ಮುಂದುವರಿಕೆ

Train Updates ಬೆಂಗಳೂರಿನಿಂದ ವಿಶಾಖ ಪಟ್ಟಣ ಹಾಗೂ ಬಿಹಾರದ ದಾನಾಪುರಕ್ಕೆ ಹೋಗುವ ವಿಶೇಷ ರೈಲುಗಳ ಸೇವೆಯನ್ನು ಭಾರತೀಯ ರೈಲ್ವೆ( Indian Railway) ನೈರುತ್ಯ ವಿಸ್ತರಣೆ ಮಾಡಿದೆ.

South Western Railways ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು  ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸೇವೆ ವಿಸ್ತರಣೆ ಮಾಡಿದೆ.
South Western Railways ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸೇವೆ ವಿಸ್ತರಣೆ ಮಾಡಿದೆ.

ಬೆಂಗಳೂರು: ಭಾರತೀಯ ರೈಲ್ವೆಯ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಕೆಲವು ವಿಶೇಷ ರೈಲುಗಳ ಸೇವೆಯನ್ನು ಮುಂದುವರಿಸಿದೆ. ಬೆಂಗಳೂರಿನಿಂದ ನಾನಾ ಭಾಗಗಳಿಗೆ ಸಂಚರಿಸುವ ವಿಶೇಷ ರೈಲುಗಳ ಸೇವೆ ಮುಂದುವರೆಸಿ ಆದೇಶ ಹೊರಡಿಸಲಾಗಿದೆ. ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅದರಲ್ಲೂ ವಿಶಾಖಪಟ್ಟಣಂ ಮತ್ತು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳ ನಡುವೆ ಸಂಚರಿಸುವ ಸಾಪ್ತಾಹಿಕ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ (ರೈ.ಸಂ.08543/08544) ರೈಲುಗಳ ಸೇವೆಯನ್ನು ಈಗಿರುವ ಸಮಯ ಮತ್ತು ನಿಲುಗಡೆಗಳೊಂದಿಗೆ ವಿಸ್ತರಿಸಲು ಪೂರ್ವ ಕರಾವಳಿ ರೈಲ್ವೆ ವಲಯವು ಸೂಚಿಸಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

1. ವಿಶಾಖಪಟ್ಟಣಂ ನಿಲ್ದಾಣದಿಂದ ಪ್ರತಿ ಭಾನುವಾರ ಚಲಿಸುತ್ತಿರುವ ರೈಲು ಸಂಖ್ಯೆ 08543 ವಿಶಾಖಪಟ್ಟಣಂ– ಎಸ್ಎಂವಿಟಿ ಬೆಂಗಳೂರು ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 18 ರಿಂದ ನವೆಂಬರ್ 24, 2024 ರವರೆಗೆ (15 ಟ್ರಿಪ್‌) ಮುಂದುವರಿಸಲಾಗಿದೆ. ಈ ಮೊದಲು ಜೂನ್ 30, 2024 ರವರೆಗೆ ಓಡಿಸಲು ಸೂಚಿಸಲಾಗಿತ್ತು

2. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರತಿ ಸೋಮವಾರ ಹೊರಡುವ ರೈಲು ಸಂಖ್ಯೆ 08544 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ವಿಶಾಖಪಟ್ಟಣಂ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 19 ರಿಂದ ನವೆಂಬರ್ 25, 2024 ರವರೆಗೆ (15 ಟ್ರಿಪ್‌) ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂಲೈ 1, 2024 ರವರೆಗೆ ಓಡಿಸಲು ಸೂಚಿಸಲಾಗಿತ್ತು.

ವಿಶೇಷ ರೈಲುಗಳ ಸಂಚಾರ ಮುಂದುವರಿಕೆ

ಪೂರ್ವ ಸೆಂಟ್ರಲ್ ರೈಲ್ವೇಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ಬೆಂಗಳೂರು ಮತ್ತು ಬಿಹಾರದ ದಾನಾಪುರ ನಿಲ್ದಾಣಗಳ ನಡುವೆ ಜುಲೈ 2024 ರವರೆಗೆ ಹತ್ತು ವಿಶೇಷ ರೈಲು ಸೇವೆಗಳನ್ನು ಮುಂದುವರಿಸಲು ಸೂಚನೆ ನೀಡಿದೆ. ಈ ವಿಶೇಷ ರೈಲುಗಳು ಅಸ್ತಿತ್ವದಲ್ಲಿರುವ ಮಾರ್ಗ, ನಿಲುಗಡೆಗಳು ಮತ್ತು ಸಮಯದೊಂದಿಗೆ ಚಲಿಸುತ್ತವೆ.

ವಿಶೇಷ ರೈಲುಗಳ ವಿವರ

1. ರೈಲು ಸಂಖ್ಯೆ 03246 ಬೆಂಗಳೂರು-ದಾನಾಪುರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ 2024ರ ಆಗಸ್ಟ್‌ 16ರಂದು ಮುಂದುವರಿಯಲಿದೆ(1 ಟ್ರಿಪ್).

2. ರೈಲು ಸಂಖ್ಯೆ 03260 ಬೆಂಗಳೂರು-ದಾನಾಪುರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ 2024ರ ಆಗಸ್ಟ್‌15ರಂದು ನಿರ್ಗಮಿಸಿದೆ. (1 ಟ್ರಿಪ್).

3. ರೈಲು ಸಂಖ್ಯೆ 03247 ದಾನಾಪುರ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ 2024ರ ಆಗಸ್ಟ್‌15ರಂದು ತೆರಳಿದೆ. (1 ಟ್ರಿಪ್).

4. ರೈಲು ಸಂಖ್ಯೆ 03248 ಬೆಂಗಳೂರು-ದಾನಾಪುರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ 2024ರ ಆಗಸ್ಟ್‌ 17 ರಂದು ಮುಂದುವರಿಯುತ್ತದೆ (1 ಟ್ರಿಪ್).

5. ರೈಲು ಸಂಖ್ಯೆ 03241 ದಾನಾಪುರ- ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ 2024ರ ಆಗಸ್ಟ್‌16ರಂದು ಮುಂದುವರಿಯುತ್ತದೆ (1 ಟ್ರಿಪ್).

6. ರೈಲು ಸಂಖ್ಯೆ 03242 ಬೆಂಗಳೂರು-ದಾನಾಪುರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ 2024ರ ಆಗಸ್ಟ್‌ 18(1 ಟ್ರಿಪ್) ನಲ್ಲಿ ಸೇವೆಯನ್ನು ಮುಂದುವರಿಸುತ್ತದೆ.

ಪಡನೂರ ಹಾಲ್ಟ್‌ನಲ್ಲಿ ಪ್ರಾಯೋಗಿಕ ನಿಲುಗಡೆ ಮುಂದುವರಿಕೆ

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ - ಸೋಲಾಪುರ ನಿಲ್ದಾಣಗಳ ನಡುವೆ ದೈನಂದಿನ ಸಂಚರಿಸುವ ಪ್ಯಾಸೆಂಜರ್ ಸ್ಪೆಷಲ್ (ರೈ.ಸಂ.07331/07332) ರೈಲುಗಳನ್ನು ವಿಜಯಪುರ ಜಿಲ್ಲೆ ಪಡನೂರ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆಯನ್ನು ಇನ್ನೂ ಮೂರೂ ತಿಂಗಳ ಕಾಲ ಅಂದರೆ 2024ರ ನವೆಂಬರ್ 11 ರವರೆಗೆ, ಅಸ್ತಿತ್ವದಲ್ಲಿರುವ ವೇಳಾಪಟ್ಟಿಯೊಂದಿಗೆ ಮುಂದುವರಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.