Indian Railways: ಗೌರಿ ಗಣೇಶ ಹಬ್ಬಕ್ಕೆ ಮಾತ್ರವಲ್ಲ, ದಸರಾ, ದೀಪಾವಳಿಗೂ ಕರ್ನಾಟಕದಲ್ಲಿ ವಿಶೇಷ ರೈಲುಗಳ ಸಂಚಾರ, ಎಲ್ಲಿಂದ ಎಲ್ಲಿಗೆ-indian railways special trains for gowri ganesha festival dasara deepavali celebrations in karnataka kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಗೌರಿ ಗಣೇಶ ಹಬ್ಬಕ್ಕೆ ಮಾತ್ರವಲ್ಲ, ದಸರಾ, ದೀಪಾವಳಿಗೂ ಕರ್ನಾಟಕದಲ್ಲಿ ವಿಶೇಷ ರೈಲುಗಳ ಸಂಚಾರ, ಎಲ್ಲಿಂದ ಎಲ್ಲಿಗೆ

Indian Railways: ಗೌರಿ ಗಣೇಶ ಹಬ್ಬಕ್ಕೆ ಮಾತ್ರವಲ್ಲ, ದಸರಾ, ದೀಪಾವಳಿಗೂ ಕರ್ನಾಟಕದಲ್ಲಿ ವಿಶೇಷ ರೈಲುಗಳ ಸಂಚಾರ, ಎಲ್ಲಿಂದ ಎಲ್ಲಿಗೆ

Indian Railways ಭಾರತೀಯ ರೈಲ್ವೆ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ವಲಯವು ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ರೈಲು ಓಡಿಸಲಿದೆ.

ನೈರುತ್ಯ ರೈಲ್ವೆ ವಲಯವು ಗೌರಿ ಗಣೇಶ, ದಸರಾ ಹಬ್ಬಕ್ಕೆ ವಿಶೇಷ ರೈಲು ಓಡಿಸಲಿದೆ.
ನೈರುತ್ಯ ರೈಲ್ವೆ ವಲಯವು ಗೌರಿ ಗಣೇಶ, ದಸರಾ ಹಬ್ಬಕ್ಕೆ ವಿಶೇಷ ರೈಲು ಓಡಿಸಲಿದೆ.

ಬೆಂಗಳೂರು: ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಕರ್ನಾಟಕದಲ್ಲಿ ಪ್ರಮುಖ ಹಬ್ಬಗಳಾದ ಗೌರಿ ಗಣೇಶ, ದಸರಾ ಹಾಗೂ ದೀಪಾವಳಿಗೆ ವಿಶೇಷ ರೈಲು ಸಂಚಾರಕ್ಕೆ ಮುಂದಾಗಿದೆ. ಬೆಂಗಳೂರಿನಿಂದ ಕಲಬುರಗಿ. ವಿಜಯಪುರ, ಬೆಳಗಾವಿ, ಚಾಮರಾಜನಗರ ಸಹಿತ ಹಲವು ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಪ್ರಯಾಣಿಕರ ದಟ್ಟಣೆ ತಪ್ಪಿಸುವ ಜತೆಗೆ ಹಬ್ಬಗಳಿಗೆ ಸುಸೂತ್ರವಾಗಿ ಊರಿಗೆ ತಲುಪಿ ವಾಪಾಸಾಗುವ ಉದ್ದೇಶದಿಂದ ವಿಶೇಷ ರೈಲಿನ ಸಂಚಾರದ ಯೋಜನೆ ಮಾಡಿಕೊಳ್ಳಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ

ಗೌರಿ ಗಣೇಶ ಹಬ್ಬ

ರೈಲು ಸಂಖ್ಯೆ 06589/06590 ಅನ್ನು ಓಡಿಸಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ. ಬೆಂಗಳೂರು-ಕಲಬುರಗಿ- ಸರ್‌ ಎಂವಿ ವಿಶ್ವೇಶರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ (TOD) ಗಣೇಶ ಚತುರ್ಥಿ-2024 ರ ಸಮಯದಲ್ಲಿ ‌ಸಂಚರಿಸುವ ದಿನಾಂಕ ಹಾಗೂ ಸಮಯವನ್ನು ಬಿಡುಗಡೆ ಮಾಡಲಾಗಿದೆ.

ರೈಲು ಸಂಖ್ಯೆ 06589/06590 SMVT ಬೆಂಗಳೂರು-ಕಲಬುರಗಿ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷವು 3 ಟ್ರಿಪ್‌ಗಳಿಗೆ ಚಲಿಸುತ್ತದೆ. 2024ರ ಸೆಪ್ಟೆಂಬರ್ 05, 06 ಮತ್ತು 07 ರೈಲು ಸಂಖ್ಯೆ 06589 SMVT ಬೆಂಗಳೂರಿನಿಂದ ರಾತ್ರಿ 9 :15 ಗಂಟೆಗೆ ಹೊರಡಲಿದೆ. ಮರು ದಿನ ಈ ರೈಲು ಬೆಳಿಗ್ಗೆ 07:40 ಕ್ಕೆ ಕಲಬುರಗಿಗೆ ಆಗಮಿಸಲಿದೆ

ಹಿಂದಿರುಗುವ ದಿಕ್ಕಿನಲ್ಲಿ,ಸೆಪ್ಟೆಂಬರ್ 06, 07, ಮತ್ತು 08 2024 ರಂದು ರೈಲು ಸಂಖ್ಯೆ 06590 ಕಲಬುರಗಿಯಿಂದ ಬೆಳಿಗ್ಗೆ 09:35 ಕ್ಕೆ ಹೊರಡಲಿದೆ. ಅದೇ ದಿನ ರಾತ್ರಿ 8 ಗಂಟೆಗೆ SMVT ಬೆಂಗಳೂರು ತಲುಪಲಿದೆ. ರೈಲುಗಳು ಯಲಹಂಕ, ಧರ್ಮಾವರಂ ಜಂ., ಅನಂತಪುರ, ಗುಂತಕಲ್ ಜಂ, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ವಿಶೇಷ ರೈಲುಗಳು ಒಟ್ಟು 18 ಕೋಚ್‌ಗಳನ್ನು ಒಳಗೊಂಡಿರುತ್ತವೆ, ಎಸಿ-3 ಶ್ರೇಣಿ-2, ಸ್ಲೀಪರ್

ವರ್ಗ-10, ಸಾಮಾನ್ಯ ದ್ವಿತೀಯ ದರ್ಜೆ-4, ಎರಡನೇ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು/ಅಂಗವಿಕಲರು ತರಬೇತುದಾರ-2 ಬೋಗಿ ಇರಲಿವೆ

⦁ ದಸರಾ ಹಬ್ಬದ ವಿಶೇಷ ರೈಲುಗಳು

⦁ ರೈಲು ಗಾಡಿ ಸಂಖ್ಯೆ06501 SMVT ಬೆಂಗಳೂರು ಸಂಜೆ 07ಕ್ಕೆ ಹೊರಟು ವಿಜಯಪುರವನ್ನು ಬೆಳಿಗ್ಗೆ10:30 ಕ್ಕೆ ತಲುಪಲಿವೆ. 24ರ ಅಕ್ಟೊಬರ್‌ 09 ಹಾಗೂ 12ರಂದು ರೈಲು ಸಂಚಾರ ಇರಲಿದೆ. ರೈಲು ಗಾಡಿ ಸಂಖ್ಯೆ 06502 ವಿಜಯಪುರ ದಿಂದ ಸಂಜೆ 07ಕ್ಕೆ ಹೊರಟು SMVT ಬೆಂಗಳೂರು ಬೆಳಿಗ್ಗೆ 11:15ಕ್ಕೆ ತಲುಪಲಿದೆ. ಅಕ್ಟೋಬರ್ 10 ಹಾಗೂ 13ರಂದು ಈ ರೈಲು ಸಂಚರಿಸಲಿದೆ.

⦁ರೈಲು ಗಾಡಿ ಸಂಖ್ಯೆ06505 ಯಶವಂತಪುರದಿಂದ ಸಂಜೆ 06:15 ಕ್ಕೆ ಹೊರಟು ಬೆಳಗಾವಿಯನ್ನು ಬೆಳಿಗ್ಗೆ 05ಕ್ಕೆ ತಲುಪಲಿದೆ. ಅಕ್ಟೋಬರ್‌ 09ರಂದು ರೈಲು ಸಂಚರಿಸಲಿದೆ. ರೈಲು ಗಾಡಿ ಸಂಖ್ಯೆ06506 ಬೆಳಗಾವಿಯಿಂದ ಸಂಜೆ 05:30ಕ್ಕೆ ಹೊರಟು ಯಶವಂತಪುರವನ್ನು ಬೆಳಿಗ್ಗೆ04:30ಕೆಕ ತಲುಪಲಿದ್ದು. ಅಕ್ಟೋಬರ್‌ 10ರಂದು ಸಂಚಾರ ಇರಲಿದೆ.

⦁ ರೈಲು ಗಾಡಿ ಸಂಖ್ಯೆ 06507 ಯಶವಂತಪುರದಿಂದ ಸಂಜೆ 06:15ಕ್ಕೆ ಹೊರಟು ಮರು ದಿನ ಬೆಳಗಾವಿಯನ್ನು ಬೆಳಿಗ್ಗೆ05ಕ್ಕೆ ತಲುಪಲಿದೆ. ಅಕ್ಟೋಬರ್‌12ರಂದು ರೈಲು ಸಂಚರಿಸಲಿದೆ. ರೈಲು ಗಾಡಿ ಸಂಖ್ಯೆ 06508 ಬೆಳಗಾವಿಯಿಂದ ಸಂಜೆ 05:30 ಕ್ಕೆ ಹೊರಟು ಯಶವಂತಪುರವನ್ನು ಬೆಳಿಗ್ಗೆ04:30 ಕ್ಕೆ ತಲುಪಲಿದೆ. ಈ ರೈಲು ಸಂಚಾರ ಅಕ್ಟೋಬರ್‌ 13ರಂದು ಇರಲಿದೆ.

⦁ ರೈಲು ಗಾಡಿ ಸಂಖ್ಯೆ 06279 ಮೈಸೂರಿನಿಂದ ರಾತ್ರಿ 11:15 ಕ್ಕೆ ಹೊರಟು KSR ಬೆಂಗಳೂರು ನಿಲ್ದಾಣವನ್ನು ಬೆಳಿಗ್ಗೆ 02:30ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್‌ 09ರಿಂದ 13ರವರೆಗೆ ಸತತ ಐದು ದಿನ ಸಂಚರಿಸಲಿದೆ.ರೈಲು ಗಾಡಿ ಸಂಖ್ಯೆ06280 KSR ಬೆಂಗಳೂರಿನಿಂದ ಬೆಳಗಿನ ಜಾವ03ಕ್ಕೆ ಕ್ಕೆ ಹೊರಟು ಮೈಸೂರನ್ನ ಬೆಳಿಗ್ಗೆ 06:15ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್ 10ರಿಂದ 14ರವರೆಗೆ ಐದು ದಿನ ಸಂಚರಿಸಲಿದೆ.

⦁ ರೈಲು ಗಾಡಿ ಸಂಖ್ಯೆ 06285 KSR ಬೆಂಗಳೂರಿನಿಂದ ರಾತ್ರಿ12:15 ಕ್ಕೆ ಹೊರಟು ಮೈಸೂರು ಅನ್ನು ಬೆಳಗಿನ ಜಾವ 03:20ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್‌ 09ರಿಂದ 13ರವರೆಗೆ ಐದು ದಿನ ಸಂಚರಿಸಲಿದೆ. ರೈಲು ಗಾಡಿ ಸಂಖ್ಯೆ 06286 ಮೈಸೂರಿನಿಂದ ಬೆಳಗಿನ ಜಾವ03:30 ಕ್ಕೆ ಹೊರಟು KSR ಬೆಂಗಳೂರು ನಿಲ್ದಾಣವನ್ನು ಬೆಳಿಗ್ಗೆ07:15ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್‌ 09ರಿಂದ 13ರವರೆಗೆ ಸಂಚರಿಸಲಿದೆ.

⦁ ರೈಲು ಗಾಡಿ ಸಂಖ್ಯೆ 06281 ಮೈಸೂರಿನಿಂದ ರಾತ್ರಿ 11:30ಕ್ಕೆ ಹೊರಟು ಚಾಮರಾಜನಗರವನ್ನು ಬೆಳಿಗ್ಗೆ 01:15ಕ್ಕೆ ತಲುಪಿಲಿದೆ. ಈ ರೈಲು ಈ ರೈಲು ಅಕ್ಟೋಬರ್‌ 09ರಿಂದ 13ರವರೆಗೆ ಸಂಚರಿಸಲಿದೆ. ರೈಲು ಗಾಡಿ ಸಂಖ್ಯೆ 06282 ಚಾಮರಾಜನಗರದಿಂದ ಬೆಳಿಗ್ಗೆ 05:00 ಕ್ಕೆ ಹೊರಟು ಮೈಸೂರನ್ನು ಬೆಳಿಗ್ಗೆ 06:50ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್ 10ರಿಂದ 14ರವರೆಗೆ ಐದು ದಿನ ಸಂಚರಿಸಲಿದೆ.

⦁ ರೈಲು ಗಾಡಿ ಸಂಖ್ಯೆ 06283 ಮೈಸೂರಿನಿಂದ ರಾತ್ರಿ 09:15 ಕ್ಕೆ ಹೊರಟು ಚಾಮರಾಜನಗರವನ್ನು ರಾತ್ರಿ 11:15 ಕ್ಕೆ ತಲಿಪಲಿದೆ. ರೈಲು ಗಾಡಿ ಸಂಖ್ಯೆ 06284 ಚಾಮರಾಜನಗರದಿಂದ ರಾತ್ರಿ11:30 ಕ್ಕೆ ಹೊರಟು ಮೈಸೂರನ್ನು ಮಧ್ಯರಾತ್ರಿ 02:30ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್‌ 12ರಂದು ಸಂಚರಿಸಲಿದೆ.

ಈ ರೈಲುಗಳ ಮುಂಗಡ ಬುಕಿಂಗ್, ನಿಲುಗಡೆ ಮತ್ತು ವೇಳಾಪಟ್ಟಿ ಸೇರಿದಂತೆ ಯಾವುದೇ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ www.enquiry.indianrail.gov.in ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.