Indian Railways: ಯಶವಂತಪುರ ರೈಲ್ವೆ ನಿಲ್ದಾಣ ಒಂದು ತಿಂಗಳು ಬಂದ್, ರೈಲುಗಳ ರದ್ದು, ಕೆಲವು ಸಂಚಾರ ಬದಲಾವಣೆ
Bangalore Train Updates ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣ ಅಭಿವೃದ್ದಿ ಕಾರ್ಯಕ್ಕೆ ಬಂದ್ ಆಗುವುದರಿಂದ ಹಲವಾರು ರೈಲು ರದ್ದಾಗಿದ್ದು, ಕೆಲ ರೈಲು ಮಾರ್ಗ ಬದಲಾಯಿಸಲಾಗಿದೆ.
ಬೆಂಗಳೂರು: ಬೆಂಗಳೂರಿನ ಪ್ರಮುಖ ರೈಲ್ವೆ ನಿಲ್ದಾಣವಾಗಿರುವ ಯಶವಂತಪುರ ರೈಲ್ವೆ ನಿಲ್ದಾಣ ಒಂದು ತಿಂಗಳು ಸಾರ್ವಜನಿಕ ಸೇವೆಗೆ ಸಿಗುವುದಿಲ್ಲ. ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಯಶವಂತಪುರ ರೈಲ್ವೆ ನಿಲ್ದಾಣ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಕಾರಣದಿಂದ ಆಗಸ್ಟ್ 20ರಿಂದಲೇ ರೈಲ್ವೆ ನಿಲ್ದಾಣ ಪ್ರಯಾಣಿಕರಿಗೆ ಬಂದ್ ಆಗಿರಲಿದೆ. ಸೆಪ್ಟೆಂಬರ್ 19 ರವರೆಗೂ ಈ ಆದೇಶ ಜಾರಿಯಲ್ಲಿರಲಿದ್ದು, ಸೇವೆಗಳು ವ್ಯತ್ಯಯವಾಗಲಿದೆ. ಈ ಹಿನ್ನೆಲೆಯಲ್ಲಿ ಯಶವಂತಪುರ ರೈಲ್ವೆ ನಿಲ್ದಾಣ ಅವಲಂಬಿಸಿರುವ ಪ್ರಯಾಣಿಕರು ಸಹಕರಿಸಬೇಕು ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮನವಿ ಮಾಡಿದ್ದಾರೆ.
ಯಶವಂತಪುರ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಒಂದು ತಿಂಗಳು ಪ್ಲಾಟ್‌ಫಾರ್ಮ್‌ಗಳನ್ನು ಬಂದ್ ಮಾಡಲಾಗಿದೆ. ಯಶವಂತಪುರಕ್ಕೆ ಬರುವ ಆರು ರೈಲುಗಳ ಸಂಚಾರ ರದ್ದು ಮಾಡಲಾಗಿದೆ, ಇನ್ನೂ 8 ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿ ಆದೇಶಿಸಲಾಗಿದೆ. ಆಗಸ್ಟ್ 21 ರಿಂದ ಸೆಪ್ಟೆಂಬರ್ 4ರ ವರೆಗೆ ಯಶವಂತಪುರ ನಿಲ್ದಾಣದ 2, 3ನೇ ಪ್ಲಾಟ್‌ಫಾರ್ಮ್ ಹಾಗೂ ಸೆಪ್ಟೆಂಬರ್5 ರಿಂದ 19ರ ವರೆಗೆ 4, 5ನೇ ಪ್ಲಾಟ್‌ಫಾರ್ಮ್ ಬಂದ್ ಆಗಿರಲಿವೆ. ಮುಂದಿನ ಸನ್ನಿವೇಶ ನೋಡಿಕೊಂಡು ಬದಲಾವಣೆ ಇದ್ದರೆ ತಿಳಿಸಲಾಗುತ್ತದೆ ಎಂದು ರೈಲ್ವೆ ಹೇಳಿದೆ.
ಇದರೊಟ್ಟಿಗೆ ಭಾಗಶಃ ರದ್ದುಗೊ ಳಿಸಿದ್ದ ತುಮಕೂರು–ಯಶವಂತಪುರ (06580) ರೈಲು ಎಂದಿನಂತೆ ಯಶ ವಂತಪುರದವರೆಗೆ ಮಾತ್ರ ಸಂಚಾರ ಮಾಡಸಲಿದೆ. ಬೆಳಿಗ್ಗೆ 10 ಗಂಟೆಗೆ ಬದಲಾಗಿ ಬೆಳಿಗ್ಗೆ 9.24ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಯಶವಂತಪುರ–ತುಮ ಕೂರು (06573) ರೈಲು ಯಶವಂತಪುರ ನಿಲ್ದಾಣದಿಂದ ಸಂಜೆ 7.50ಕ್ಕೆ ಹೊರಡಲಿದೆ. ಬೆಂಗಳೂರು–ಕುಪ್ಪಂ (06529) ರೈಲು ಕೃಷ್ಣರಾಜಪುರದಿಂದ ಮಧ್ಯಾಹ್ನ 12.17ಕ್ಕೆ ತೆರಳಲಿದೆ.
ಯಶವಂತಪುರದಿಂದ ತುಮಕೂರಿಗೆ ಹಾಗೂ ತುಮಕೂರಿನಿಂದ ಯಶವಂತಪುರ ನಡುವೆ ಸಂಚರಿಸುವ ರೈಲುಗಳನ್ನು ರದ್ದುಪಡಿಸಲಾಗಿತ್ತು. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ವಿಶೇಷ ಆಸಕ್ತಿ ವಹಿಸಿ ಈ ಎರಡು ರೈಲುಗಳು ಈ ಮೊದಲಿನಂತೆಯೇ ಸಂಚರಿಸಲು ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರಿಂದ ಎಂದಿನಂತೆ ಸಂಚಾರ ಇರಲಿದೆ.
ರೈಲು ಸಂಚಾರ ರದ್ದು, ಮಾರ್ಗ ಬದಲು
ಆ.21 ರಿಂದ 31 ಹಾಗೂ ಸೆ.1ರಿಂದ 19ರ ಅವಧಿಯಲ್ಲಿ ತುಮಕೂರು–ಕೆಎಸ್‌ಆರ್ ಬೆಂಗಳೂರು, ಕೆಎಸ್‌ಆರ್ ಬೆಂಗಳೂರು–ತುಮಕೂರು, ಸಿಕಂದರಾಬಾದ್–ಯಶವಂತಪುರ, ಯಶವಂತಪುರ–ಸಿಕಂದರಾಬಾದ್, ಯಶವಂತಪುರ–ಕೊಚುವೇಲಿ ಮಾರ್ಗಗಳಲ್ಲಿ ರೈಲು ಸಂಚಾರ ಇರುವುದಿಲ್ಲ
ಆ. 24 ಮತ್ತು 31 ಹಾಗೂ ಸೆ.7 ಮತ್ತು 14 ರಂದು ಹುಬ್ಬಳ್ಳಿ- ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ, ಅರಸೀಕೆರೆ, ಚಿಕ್ಕಬಾಣಾ ವರ, ಯಶವಂತಪುರ ‘ಎ’ ಕ್ಯಾಬಿನ್, ಲೊಟ್ಟೆಗೊಲ್ಲಹಳ್ಳಿ, ಬಾಣಸವಾಡಿ, ಕೃಷ್ಣರಾಜಪುರ ಮಾರ್ಗವಾಗಿ ಸಂಚರಿಸಲಿದೆ ಆ. 21 ರಿಂದ ಸೆ. 19ರವರೆಗೆ ಬಾಣಸವಾಡಿ-ತುಮಕೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಬಾಣಸವಾಡಿ, ಯಶವಂತಪುರ ‘ಎ’ ಕ್ಯಾಬಿನ್, ಚಿಕ್ಕಬಾಣಾವರ ಮತ್ತು ತುಮಕೂರು ನಿಲ್ದಾಣಗಳ ಮಾರ್ಗದಲ್ಲಿ ಹೋಗಲಿದೆ.
ಆ.20 ರಿಂದ ಸೆ.18ರವರೆಗೆ ವಾಸ್ಕೊಡಗಾಮ–ಯಶವಂತಪುರ ರೈಲು ತುಮಕೂರು, ಚಿಕ್ಕಬಾಣಾವರ, ಯಶ ವಂತಪುರ ‘ಎ’ ಕ್ಯಾಬಿನ್, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ಬಾಣಸವಾಡಿ ಮೂಲಕ, ಆ.20ರಿಂದ ಸೆ.18ರ ವರೆಗೆ ಸೊಲ್ಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲು ಯಲಹಂಕ, ಯಶವಂತಪುರ ‘ಎ’ ಕ್ಯಾಬಿನ್ ಮತ್ತು ಚಿಕ್ಕಬಾಣಾವರ ನಿಲ್ದಾಣಗಳ ಮಾರ್ಗ ವಾಗಿ ತೆರಳಲಿದೆ.
ಮಾರ್ಗ ಬದಲಾವಣೆಯ ಎಲ್ಲ ರೈಲುಗಳು ಯಶವಂತಪುರ ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.