ಯಶವಂತಪುರ ಹೊಸೂರು ನಡುವೆ ಮೆಮು ರೈಲು ಸೇವೆ ಸೆಪ್ಟೆಂಬರ್ 28ರಿಂದ ಆರಂಭ, ಎಲ್ಲೆಲ್ಲಿ ನಿಲುಗಡೆಗೆ ಇದೆ ಅವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  ಯಶವಂತಪುರ ಹೊಸೂರು ನಡುವೆ ಮೆಮು ರೈಲು ಸೇವೆ ಸೆಪ್ಟೆಂಬರ್ 28ರಿಂದ ಆರಂಭ, ಎಲ್ಲೆಲ್ಲಿ ನಿಲುಗಡೆಗೆ ಇದೆ ಅವಕಾಶ

ಯಶವಂತಪುರ ಹೊಸೂರು ನಡುವೆ ಮೆಮು ರೈಲು ಸೇವೆ ಸೆಪ್ಟೆಂಬರ್ 28ರಿಂದ ಆರಂಭ, ಎಲ್ಲೆಲ್ಲಿ ನಿಲುಗಡೆಗೆ ಇದೆ ಅವಕಾಶ

Yeshwantpur Hosur Memu Train ಭಾರತೀಯ ರೈಲ್ವೆಯ ಬೆಂಗಳೂರು ವಿಭಾಗವು ಯಶವಂತಪುರ ಹೊಸೂರು ನಡುವೆ ಮೆಮು ರೈಲು ಸೇವೆಯನ್ನು ಈ ತಿಂಗಳಲ್ಲಿಯೇ ಆರಂಭಿಸಲಿದೆ.

ಯಶವಂತಪುರ ಹಾಗೂ ಹೊಸೂರು ನಡುವಿನ ಮೆಮು ರೈಲು ಸೇವೆ ಆರಂಭವಾಗಲಿದೆ.
ಯಶವಂತಪುರ ಹಾಗೂ ಹೊಸೂರು ನಡುವಿನ ಮೆಮು ರೈಲು ಸೇವೆ ಆರಂಭವಾಗಲಿದೆ.

ಬೆಂಗಳೂರು: ಬೆಂಗಳೂರಿನ ಯಶವಂತಪುರ ಹಾಗೂ ತಮಿಳುನಾಡಿನ ಹೊಸೂರು ನಡುವೆ ಮೆಮು ರೈಲು ಸೇವೆ ಆರಂಭಕ್ಕೆ ಸಿದ್ದತೆಗಳು ನಡೆದಿವೆ. ಈಗಾಗಲೇ ಮಾರ್ಗವಿದ್ದರೂ ಹೊಸೂರಿಗೆ ಮೆಮು ರೈಲು ಇರಲಿಲ್ಲ. ಈಗ ನಿತ್ಯ ರೈಲು ಸೇವೆಯನ್ನು ಭಾರತೀಯ ರೈಲ್ವೆಯ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಈ ರೈಲು ಸೇವೆಯನ್ನು ಆರಂಭಿಸುತ್ತಿದೆ. ರೈಲು ಸಂಖ್ಯೆ 06203/06204 ಯಶವಂತಪುರ-ಹೊಸೂರು-ಯಶವಂತಪುರ ಮೆಮುಗಳ ನಿಯಮಿತ ಸೇವೆಗಳು 2024ರ ಸೆಪ್ಟೆಂಬರ್ 28 ರಂದು ಯಶವಂತಪುರದಿಂದ ಮತ್ತು ಅದೇ ದಿನ ಹೊಸೂರಿನಿಂದ ಪ್ರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

1. ರೈಲು ಸಂಖ್ಯೆ 06203 (ಯಶವಂತಪುರ-ಹೊಸೂರು) ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಯಶವಂತಪುರದಿಂದ ಬೆಳಿಗ್ಗೆ 10:45 ಕ್ಕೆ ಹೊರಟು ಮಧ್ಯಾಹ್ನ 12:30 ಕ್ಕೆ ಹೊಸೂರಿಗೆ ತಲುಪುತ್ತದೆ. ಪ್ರಮುಖ ಮಾರ್ಗ ನಿಲುಗಡೆಗಳು: ಹೆಬ್ಬಾಳ (10:59/11:00 AM), ಬಾಣಸವಾಡಿ (11:10/11:11 ಬೆಳಿಗ್ಗೆ ), ಬೆಳಂದೂರು ರಸ್ತೆ (11:25/11:26 ಬೆಳಿಗ್ಗೆ ), ಕರ್ಮೇಲರಂ (11:31/11 :32 ಬೆಳಿಗ್ಗೆ ), ಹೀಲಳಿಗೆ (11:41/11:42 ಬೆಳಿಗ್ಗೆ ) ಮತ್ತು ಆನೇಕಲ್ ರಸ್ತೆ (11:51/11:52 ಬೆಳಿಗ್ಗೆ ).

2. ರೈಲು ಸಂಖ್ಯೆ 06204 (ಹೊಸೂರು-ಯಶವಂತಪುರ) ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಹೊಸೂರಿನಿಂದ ಮಧ್ಯಾಹ್ನ 03:20 ಕ್ಕೆ ಹೊರಡುತ್ತದೆ ಮತ್ತು ಸಂಜೆ 05:15 ಕ್ಕೆ ಯಶವಂತಪುರಕ್ಕೆ ತಲುಪುತ್ತದೆ. ಪ್ರಮುಖ ಮಾರ್ಗ ನಿಲುಗಡೆಗಳು ಸೇರಿವೆ: ಆನೇಕಲ್ ರಸ್ತೆ (03:35/03:36 ಮಧ್ಯಾಹ್ನ ), ಹೀಲಲಿಗೆ (03:46/03:47 ಮಧ್ಯಾಹ್ನ), ಕರ್ಮೇಲರಂ (03:56/03:57 ಮಧ್ಯಾಹ್ನ), ಬೆಳಂದೂರು ರಸ್ತೆ (04:00/ 04:01 ಮಧ್ಯಾಹ್ನ), ಬಾಣಸವಾಡಿ (04:14/04:15 ಮಧ್ಯಾಹ್ನ) ಮತ್ತು ಹೆಬ್ಬಾಳ (ಮಧ್ಯಾಹ್ನ04:26/04:27 )

ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

ಈ ರೈಲುಗಳಿಗೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಕೆಳಗೆ ನಮೂದಿಸಿದ ನಿಲ್ದಾಣಗಳಲ್ಲಿ ಮುಂದುವರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ರೈಲು ಸಂಖ್ಯೆ 01771/01772 ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ಮತ್ತು ರೈಲು ಸಂಖ್ಯೆ 16521 ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್‌ ರೈಲುಗಳಿಗೆ ದೇವನಗೊಂದಿ ನಿಲ್ದಾಣದಲ್ಲಿ ಒದಗಿಸಲಾಗಿರುವ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಅಕ್ಟೋಬರ್ 1 ರಿಂದ ಡಿಸೆಂಬರ್ 31, 2024 ರವರೆಗೆ ಮೂರು ತಿಂಗಳುಗಳ ಕಾಲ ಮುಂದುವರಿಸಲಾಗುವುದು.

ರೈಲು ಸಂಖ್ಯೆ 16315/16316 ಮೈಸೂರು-ಕೊಚುವೇಲಿ-ಮೈಸೂರು ಎಕ್ಸ್‌ಪ್ರೆಸ್‌ ಮತ್ತು ರೈಲು ಸಂಖ್ಯೆ 16231 ಕಡಲೂರ್ ಪೋರ್ಟ್-ಮೈಸೂರು ಎಕ್ಸ್‌ಪ್ರೆಸ್‌ ರೈಲುಗಳಿಗೆ ಮದ್ದೂರು ನಿಲ್ದಾಣದಲ್ಲಿ ಒದಗಿಸಲಾಗಿರುವ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಅಕ್ಟೋಬರ್ 1 ರಿಂದ ಮಾರ್ಚ್ 31, 2025 ರವರೆಗೆ ಆರು ತಿಂಗಳವರೆಗೆ ಮುಂದುವರಿಸಲಾಗುವುದು.

ಲಚ್ಯಾಣದಲ್ಲಿ ಬಸವ ಎಕ್ಸ್‌ಪ್ರೆಸ್‌ ತಾತ್ಕಾಲಿಕ ನಿಲುಗಡೆ

ವಿಜಯಪುರ ಜಿಲ್ಲೆಯ ಜಗವ ಬೆಳಗಿದ ಮಹಾಮಹಿಮರ ಸುಕ್ಷೇತ್ರ ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾರಾಜರ ಜಾತ್ರೆಯ ಅಂಗವಾಗಿ, ನೈಋತ್ಯ ರೈಲ್ವೆ ಬಸವ ಎಕ್ಸ್‌ಪ್ರೆಸ್‌ ರೈಲುಗಳಿಗೆ ಸೆಪ್ಟೆಂಬರ್ 24 ಮತ್ತು 25 ರಂದು ಲಚ್ಯಾಣ ನಿಲ್ದಾಣದಲ್ಲಿ ಎರಡು ನಿಮಿಷಗಳ ಕಾಲ ತಾತ್ಕಾಲಿಕ ನಿಲುಗಡೆ ನೀಡಲು ನಿರ್ಧರಿಸಿದೆ. ಈ ನಿಲ್ದಾಣದಲ್ಲಿ ಬಸವ ಎಕ್ಸ್‌ಪ್ರೆಸ್ ನ ಆಗಮನ ಮತ್ತು ನಿರ್ಗಮನದ ವಿವರಗಳು ಹೀಗಿವೆ:

1. ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟ ಬಸವ ಎಕ್ಸ್‌ಪ್ರೆಸ್ ರೈಲು ಲಚ್ಯಾಣ ನಿಲ್ದಾಣಕ್ಕೆ ಬೆಳಿಗ್ಗೆ 07:23 ಗಂಟೆಗೆ ಆಗಮಿಸಿ, 07:25 ಕ್ಕೆ ಹೊರಡಲಿದೆ.

2. ರೈಲು ಸಂಖ್ಯೆ 17308 ಬಾಗಲಕೋಟ-ಮೈಸೂರು ಬಸವ ಎಕ್ಸ್‌ಪ್ರೆಸ್ ರೈಲು ಲಚ್ಯಾಣ ನಿಲ್ದಾಣಕ್ಕೆ ಸಂಜೆ 05:25 ಗಂಟೆಗೆ ಆಗಮಿಸಿ, 05:27 ಕ್ಕೆ ಹೊರಡಲಿದೆ.

ಜಾತ್ರಾ ಮಹೋತ್ಸವಕ್ಕೆ ತೆರಳುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಈ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

Whats_app_banner