ಕನ್ನಡ ಸುದ್ದಿ  /  Karnataka  /  International Astronomical Union Named Asteroid Jayantmurthy Who Is Prof Jayant Murthy Rmy

ಕ್ಷುದ್ರಗ್ರಹಕ್ಕೆ ಬೆಂಗಳೂರಿನ ವಿಜ್ಞಾನಿ ಜಯಂತಮೂರ್ತಿ ಹೆಸರಿಟ್ಟು ವಿಶೇಷ ಗೌರವ; ಪ್ರೊ ಜಯಂತ್ ಮೂರ್ತಿ ಯಾರು?

ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) ಕ್ಷುದ್ರಗ್ರಹವೊಂದಕ್ಕೆ ಬೆಂಗಳೂರು ಮೂಲದ ಪ್ರೊ ಜಯಂತ್ ಮೂರ್ತಿ ಅವರ ಹೆಸರನ್ನು ಇಟ್ಟು ವಿಶೇಷ ಗೌರವ ಸಲ್ಲಿಸಿದೆ. ಜಯಂತ್ ಯಾರು ಅನ್ನೋದರ ವಿವರ ಇಲ್ಲಿದೆ.

ಬೆಂಗಳೂರು ಮೂಲದ ಪ್ರೊ ಜಯಂತ್ ಮೂರ್ತಿ ಅವರ ಹೆಸರನ್ನು ಕ್ಷುದ್ರಗ್ರಹಕ್ಕೆ ಇಡುವ ಮೂಲಕ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ವಿಶೇಷ ಗೌರವ ಸಲ್ಲಿಸಿದೆ.
ಬೆಂಗಳೂರು ಮೂಲದ ಪ್ರೊ ಜಯಂತ್ ಮೂರ್ತಿ ಅವರ ಹೆಸರನ್ನು ಕ್ಷುದ್ರಗ್ರಹಕ್ಕೆ ಇಡುವ ಮೂಲಕ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ವಿಶೇಷ ಗೌರವ ಸಲ್ಲಿಸಿದೆ.

ಬೆಂಗಳೂರು: ಕ್ಷುದ್ರಗ್ರಹವೊಂದಕ್ಕೆ ಭಾರತೀಯ ಪ್ರೊಸೆಸರ್ ಮತ್ತು ಖ್ಯಾತ ವಿಜ್ಞಾನಿ ಜಯಂತ್ ಮೂರ್ತಿ (Prof Jayant Murthy) ಅವರ ಹೆಸರನ್ನು ಇಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಗಿದೆ. ಬಾಹ್ಯಾಕಾಶ ಕಾರ್ಯಾಚರಣೆಗಳು, ನೇರಳಾತೀತ ಖಗೋಳಶಾಸ್ತ್ರ ಮತ್ತು ಇಂಟರ್‌ಟೆಲ್ಲರ್ ಮೀಡಿಯಂ ವಿಭಾಗಗಳಲ್ಲಿ ಜಯಂತಿ ಮೂರ್ತಿ ಅವರು ಹೆಸರುವಾಸಿಯಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿರುವ ಅಂತಾರಾಷ್ಟ್ರೀಯ ಖಗೋಳ ಒಕ್ಕಟ (ಐಎಯು) 2005 EX296 ಎಂಬ ಕ್ಷುದ್ರಗ್ರಹಕ್ಕೆ ಜಯಂತಮೂರ್ತಿ ಅವರ ಹೆಸರನ್ನು ಮರುನಾಮಕರಣ ಮಾಡಿದೆ. 2005 EX296 ಕ್ಷುದ್ರಗ್ರಹ ಈಗ (215884) ಜಯಂತಮೂರ್ತಿ ಎಂದು ಕರೆಯಲಾಗುತ್ತಿದೆ.

ತಮ್ಮ ಹೆಸರನ್ನು ಕ್ಷುದ್ರಗ್ರಹಕ್ಕೆ ಮರುನಾಮಕರಣ ಮಾಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿರುವ ಮೂರ್ತಿಯವರು, ಡಾ ಅಲನ್ ಸ್ಟರ್ನ್ ನೇತೃತ್ವದ ನ್ಯೂ ಹೊರೈಜನ್ಸ್ ತಂಡದಲ್ಲಿ ನನ್ನ ಕೆಲಸಕ್ಕೆ ಸಂಬಂಧಿಸಿದಂತೆ ನನ್ನ ಹೆಸರನ್ನು ಕ್ಷುದ್ರಗ್ರಹಕ್ಕೆ ಇಟ್ಟಿರುವುದಕ್ಕೆ ನಾನು ರೋಮಾಂಚನಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಐಐಎ ನಿರ್ದೇಶಕಿ ಪ್ರೊ ಅನ್ನಪೂರ್‌ಣಿ ಸುಬ್ರಮಣ್ಯಂ ಅವರು ಈ ಬಗ್ಗೆ ಮಾತನಾಡಿ, ಇದು ಪ್ರೊ ಮೂರ್ತಿಯವರ ಸಂಶೋಧನೆಯ ಜಾಗತಿಕ ಪ್ರಭಾವಕ್ಕೆ ಸಂದಿರುವ ಒಂದು ಅನನ್ಯ ಮನ್ನಣೆ ಎಂದು ಶ್ಲಾಘಿಸಿದ್ದಾರೆ.

ಸೌರವ್ಯೂಹದಲ್ಲಿ ಕ್ಷುದ್ರಗ್ರಹಳಿಗೆ ಹೆಸರಿಡುವ ಜವಾಬ್ದಾರಿಯನ್ನು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟದ ವರ್ಕಿಂಗ್ ಗ್ರೂಪ್ ನಿರ್ವಹಿಸುತ್ತದೆ. ಎಂಡಬ್ಲ್ಯೂ ಬೂಯಿ (MW Buie) ಅವರು (215884) 'ಜಯಂತಮೂರ್ತಿ' ಕ್ಷುದ್ರಗ್ರಹವನ್ನು 2005 ರಲ್ಲಿ ಅಮೆರಿಕಾದ ಅರಿಜೋನಾದ ಕಿಟ್ ಪೀಕ್ ರಾಷ್ಟ್ರೀಯ ವೀಕ್ಷಣಾಲಯದಿಂದ ಕಂಡು ಹಿಡಿದಿದ್ದರು. ಇದು ಪ್ರತಿ 3.3 ವರ್ಷಗಳಿಗೊಮ್ಮೆ ಮಂಗಳ ಮತ್ತು ಗುರುಗಳ ನಡುವೆ ಸೂರ್ಯನ ಸಂಪೂರ್ಣ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ.

ನಾಸಾದ ನ್ಯೂ ಹೊರೈಜನ್ಸ್ ಬಾಹ್ಯಾಕಾಶ ನೌಕೆಯು 2015ರಲ್ಲಿ ಪ್ಲುಟೊದ ಐತಿಹಾಸಿಕ ಹಾರಾಟದೊಂದಿಗೆ ಕುಬ್ಜ ಗ್ರಹ ಮತ್ತು ಅದರ ಚಂದ್ರನ ಹಿಂದಿನ ನೋಟದ ಡೇಟಾ ಒದಗಿಸುವ ಮೂಲಕ ಜಾಗತಿ ಗಮನ ಸೆಳೆದಿತ್ತು.

ಪ್ರೊಫೆಸರ್ ಜಯಂತ್ ಮೂರ್ತಿ ಯಾರು?

ಬೆಂಗಳೂರು ಮೂಲದ ಪ್ರೊಫೆಸರ್ ಜಯಂತ್ ಮೂರ್ತಿ ಅವರು 2021 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಕ್ ಆಫ್ ಆಸ್ಟೋಫಿಸಿಕ್ಸ್ (ಐಐಎ) ನಿಂದ ನಿವೃತ್ತಿಯನ್ನು ಹೊಂದಿದ್ದಾರೆ. ಅಂದಿನಿಂದ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.2018ರ ಜುಲೈ ನಿಂದ 2019ರ ಅಕ್ಟೋಬರ್ ವರೆಗೆ ಐಐಎ ನಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಪ್ರೊ ಮೂರ್ತಿ ಅವರು ನಾಸಾದ ನ್ಯೂ ಹೊರೈಜನ್ಸ್ ಸೈನ್ಸ್ ಟೀಂನಲ್ಲೂ ಕೆಲಸ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಯುವಿ ವಿಕಿರಣದ ಅವಲೋಕನಗಳು ಕಾಸ್ಮಿಕ್ ವಿದ್ಯಮಾನಗಳ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ. ಸೌರವ್ಯೂಹದಲ್ಲಿ ನೇರಳಾತೀತ ಹಿನ್ನೆಲೆಯ ವಿಕಿರಣವನ್ನು ಅಧ್ಯಯನ ಮಾಡುವ ಬಗ್ಗೆ ಸೂರ್ಯ ಮತ್ತು ಅಂತರಗ್ರಹ ಮಾಧ್ಯಮದಿಂದ ಹಸ್ತಪೇಕ್ಷಪವು ಕಡಿಮೆ ಇರುತ್ತದೆ. ನ್ಯೂ ಹೊರೈಜನ್ಸ್ ಮಿಷನ್‌ಗೆ ಪ್ರೊ ಮೂರ್ತಿ ಅವರು ಅಮೂಲ್ಯ ಕೊಡುಗೆಗಳ ಪರಿಣಾಮವಾಗಿ ಅವರ ಹೆಸರನ್ನು ಕ್ಷುದ್ರಗ್ರಹಕ್ಕೆ ಇಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಗಿದೆ.

IPL_Entry_Point