ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದ ನಾಲ್ಕು ದಿನಗಳಲ್ಲಿ ಏನಿರುತ್ತೆ? ಯಾರೆಲ್ಲಾ ಚರ್ಚೆಯಲ್ಲಿ ಯಾರು ಭಾಗವಹಿಸುವರು, ಲೈವ್‌ ಇಲ್ಲಿ ವೀಕ್ಷಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದ ನಾಲ್ಕು ದಿನಗಳಲ್ಲಿ ಏನಿರುತ್ತೆ? ಯಾರೆಲ್ಲಾ ಚರ್ಚೆಯಲ್ಲಿ ಯಾರು ಭಾಗವಹಿಸುವರು, ಲೈವ್‌ ಇಲ್ಲಿ ವೀಕ್ಷಿಸಿ

ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದ ನಾಲ್ಕು ದಿನಗಳಲ್ಲಿ ಏನಿರುತ್ತೆ? ಯಾರೆಲ್ಲಾ ಚರ್ಚೆಯಲ್ಲಿ ಯಾರು ಭಾಗವಹಿಸುವರು, ಲೈವ್‌ ಇಲ್ಲಿ ವೀಕ್ಷಿಸಿ

Invest Karnataka 2025: ಬೆಂಗಳೂರಿನಲ್ಲಿ ಮಂಗಳವಾರದಿಂದ ನಾಲ್ಕು ದಿನಗಳ ಕಾಲ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮದ ಕುರಿತು ಚರ್ಚೆಗಳು ನಡೆಯಲಿವೆ. ಹಲವು ತಜ್ಞರು ಭಾಗಿಯಾಗುವರು. ನಾಲ್ಕು ದಿನದ ವಿವರ ಇಲ್ಲಿದೆ.

ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಏನೇನಿದೆ
ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಏನೇನಿದೆ

Invest Karnataka 2025:ಕರ್ನಾಟಕದ ಬಹುನಿರೀಕ್ಷಿತ ಜಾಗತಿಕ ಹೂಡಿಕೆದಾರರ ಸಮಾವೇಶ ಬೆಂಗಳೂರಿನಲ್ಲಿ ಫೆಬ್ರವರಿ 11ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ. ಭಾರತ ಮಾತ್ರವಲ್ಲದೇ ವಿಶ್ವದ ನಾನಾ ಭಾಗಗಳಿಂದ ಉದ್ಯಮಿಗಳು, ನಾನಾ ಕ್ಷೇತ್ರದ ತಜ್ಞರು ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆ. ಕೈಗಾರಿಕೆ. ನಾವಿನ್ಯತೆ, ಕೌಶಲ್ಯ, ಉದ್ಯಮ ಸಹಿತ ಹಲವು ವಲಯಗಳ ಕುರಿತು ನಾಲ್ಕು ದಿನ ಎಲ್ಲಾ ಆಯಾಮಗಳಲ್ಲೂ ಚರ್ಚೆಯಾಗಲಿವೆ. ಸಮಾವೇಶದ ಉದ್ಘಾಟನೆಯು ಫೆ.11ರ ಸಂಜೆ 4ಕ್ಕೆ ನಡೆಯಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೂ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ 2025-30ರ ಅವಧಿಯ ನೂತನ ಕೈಗಾರಿಕಾ ನೀತಿ ಮತ್ತು ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಲು ಏಕಗವಾಕ್ಷಿ ಪೋರ್ಟಲ್ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಫೆ.11-14ರ ನಡುವೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್ ಡಿ ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಪೀಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಅಶ್ವಿನಿ ವೈಷ್ಣವ್ ಸಮಾವೇಶಕ್ಕೆ ಬರಲಿದ್ದಾರೆ. ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮಾರೋಪಕ್ಕೆ ಆಗಮಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆ ಇದು ವೇದಿಕೆ ಒದಗಿಸಲಿದೆ. ವಿವಿಧ ಕ್ಷೇತ್ರಗಳ ದಿಗ್ಗಜರು ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಪ್ರಗತಿಯ ಭವಿಷ್ಯ ರೂಪಿಸಲು ತಮ್ಮ ಒಳನೋಟಗಳನ್ನು ನೀಡಲಿದ್ದಾರೆ.

ಸಮಾವೇಶದ ವಿವಿಧ ಕಾರ್ಯಕ್ರಮಗಳ ವಿವರ ಹೀಗಿದೆ:

ಮೊದಲ ದಿನ. ಫೆಬ್ರುವರಿ 12:

* ಬೆಳಿಗ್ಗೆ 10:35 - 11:05 | ಸಭಾಂಗಣ ಎ | ಸಂವಾದ ಕಾರ್ಯಕ್ರಮ – ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಮತ್ತು ಸರ್ಕಾರ: ಅನಿಶ್ಚಿತ ಜಗತ್ತಿನಲ್ಲಿ ಡಿಜಿಟಲ್ ಕ್ಷಮತೆ ನಿರ್ಮಾಣ (AI, Cybersecurity, and Government: Building Digital Resilience in an Uncertain World)

ಭಾಷಣಕಾರರು: ಸೈಮನ್ ಲಾಂಗ್ (ದಿ ಎಕನಾಮಿಸ್ಟ್-ನ ಸಂಪಾದಕ)

ಕಾರ್ಯಕ್ರಮ ನಿರೂಪಣೆ: ಆನ್ ಡಂಕಿನ್ (ಅಮೆರಿಕದ ಇಂಧನ ಇಲಾಖೆಯ ಮಾಜಿ ಸಿಐಒ)

* ಮಧ್ಯಾಹ್ನ 12:00 ರಿಂದ 1:00 | ಸಭಾಂಗಣ ಎ | ಸಂವಾದ ಕಾರ್ಯಕ್ರಮ – ಕ್ಷಮತೆಯ ಮಾರ್ಗೋಪಾಯಗಳು: ಜಾಗತಿಕ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ ಸಾಧಿಸುವುದು (Resilient Pathways: Charting India’s Economic Growth Amid Global Challenges)

ಮುಖ್ಯ ಭಾಷಣ: ಮೊಂಟೆಕ್ ಸಿಂಗ್ ಅಹ್ಲುವಾಲಿಯಾ (ಭಾರತದ ಅರ್ಥಶಾಸ್ತ್ರಜ್ಞ, ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ)

ಕಾರ್ಯಕ್ರಮ ನಿರ್ವಹಣೆ: ಸಲ್ಮಾನ್ ಸೋಜ್ (ಅರ್ಥಶಾಸ್ತ್ರಜ್ಞ ಮತ್ತು ಲೇಖಕ)

* ಮಧ್ಯಾಹ್ನ 2:00 ರಿಂದ 3:00 | ಸಭಾಂಗಣ ಎ | ಸಂವಾದ ಕಾರ್ಯಕ್ರಮ: ಭವಿಷ್ಯಕ್ಕೆ ನಾವೀನ್ಯತೆ (Innovating the Future)

ಮುಖ್ಯ ಭಾಷಣ: ಅಕಿಸ್ ಇವಾಂಜೆಲಿಡಿಸ್ (ನಥಿಂಗ್‌-ನ ಸಹ-ಸಂಸ್ಥಾಪಕ ಮತ್ತು ಮಾರಾಟ ಮುಖ್ಯಸ್ಥ,) ಕಾರ್ಯಕ್ರಮ ನಿರೂಪಣೆ: ಶಿವ್ ಅರೂರ್ (ಭಾರತದ ಪತ್ರಕರ್ತ ಮತ್ತು ಬರಹಗಾರ)

* ಮಧ್ಯಾಹ್ನ 4:30 ರಿಂದ 5:30 | ಸಭಾಂಗಣ ಎ |

ತಜ್ಞರ ಸಮೂಹ ಚರ್ಚೆ – ಮುಂದಾಳತ್ವ: ಭಾರತದ ಭವಿಷ್ಯ ರೂಪಿಸುತ್ತಿರುವ ಯುವ ನಾವೀನ್ಯಕಾರರು (Leading the Charge: Young Innovators Shaping India’s Future)

ಭಾಷಣಕಾರರು: ಪಾರ್ಥ್ ಜಿಂದಾಲ್ ( ಜೆಎಸ್‌ಡಬ್ಲ್ಯು ಸಿಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ), ಜಯ್‌ ಕೋಟಕ್ (ಕೋಟಕ್‌811-ನ ಸಹ-ಮುಖ್ಯಸ್ಥ), ಸುಜನ್ನಾಹ ಮುತ್ತೂಟ್ (ಮುತ್ತೂಟ್ ಹೌಸಿಂಗ್ ಫೈನಾನ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕಿ)

ಕಾರ್ಯಕ್ರಮ ನಿರೂಪಣೆ: ನಿಖಿಲ್ ಕಾಮತ್ (ಜಿರೋಧಾ, ಟ್ರೂ ಬಿಯಕಾನ್, ಗೃಹಸ್-ನ ಸಹ-ಸಂಸ್ಥಾಪಕ)

ದಿನ 2 - ಫೆಬ್ರುವರಿ 13, 2025

* ಬೆಳಿಗ್ಗೆ 11:05 ರಿಂದ 11:45 | ಸಭಾಂಗಣ ಎ | ಸಂವಾದ ಕಾರ್ಯಕ್ರಮ– ಕೃತಕ ಬುದ್ಧಿಮತ್ತೆ ಸೀಮಾರೇಖೆ: ದೈತ್ಯ ಜಿಗಿತದಿಂದ ನೈಜ-ಪ್ರಪಂಚದ ಪ್ರಭಾವಗಳವರೆಗೆ (Pioneering the AI Frontier: From Moonshots to Real-World Impact)

* ಭಾಷಣಕಾರರು: ಸೆಬಾಸ್ಟಿಯನ್ ಥ್ರನ್ (ಗೂಗಲ್‌ ಎಕ್ಸ್‌ನ ಸ್ಥಾಪಕ), ಪ್ರಶಾಂತ್ ಪ್ರಕಾಶ್ (ಆ್ಯಕ್ಸೆಲ್ ಪಾರ್ಟನರ್ಸ್‌ನ ಸ್ಥಾಪಕ ಪಾಲುದಾರ)

ಕಾರ್ಯಕ್ರಮ ನಿರೂಪಣೆ: ಮಿಷೆಲ್ ಹೆನ್ನೆಸ್ಸಿ (ದಿ ಎಕನಾಮಿಸ್ಟ್‌ನ ಗ್ರಾಫಿಕ್ ಡಿಟೆಲ್‌ ಸಂಪಾದಕ)

* ಮಧ್ಯಾಹ್ನ 4:30 - 5:30 | ಸಭಾಂಗಣ ಎ | ಗುಂಪು ಚರ್ಚೆ - ವೈವಿಧ್ಯಮಯ ಪಥಗಳಿಂದ ಸಾಮಾನ್ಯ ಗುರಿಯವರೆಗೆ (From Diverse Paths to a Common Goal)

ಭಾಷಣಕಾರರು: ಕಿರಣ್ ರಾವ್ (ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಮತ್ತು ಬರಹಗಾರ್ತಿ), ಐರಿನಾ ಘೋಸ್ (ಮೈಕ್ರೋಸಾಫ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ), ಸುಖಿ ಸಿಂಗ್ (ಸುಖೀಸ್ ಗೌರ್ಮೆಟ್ ಫುಡ್ಸ್ನ ಸಂಸ್ಥಾಪಕಿ)

ಕಾರ್ಯಕ್ರಮ ನಿರೂಪಣೆ: ಲಕ್ಷ್ಮಿ ಪ್ರತುರಿ (ಇಂಕ್ಟಾಲ್ಕ್ಸ್ ಸಂಸ್ಥಾಪಕಿ ಮತ್ತು ಸಿಇಒ)

ದಿನ 3 - ಫೆಬ್ರುವರಿ 14, 2025:

* ಬೆಳಿಗ್ಗೆ 10:30 ರಿಂದ 11:30 | ಸಭಾಂಗಣ ಎ | ಸಂವಾದ ಕಾರ್ಯಕ್ರಮ- ಪ್ರಕ್ಷುಬ್ಧತೆಯಲ್ಲಿ ಅಭಿವೃದ್ಧಿ ಸಾಧಿಸುವುದು: ದೇಶಗಳು ಶಾಶ್ವತ ಕ್ಷಮತೆ ಹೇಗೆ ನಿರ್ಮಿಸಬಹುದು (Thriving in Turbulence: How Nations Can Build Lasting Resilience)

ಭಾಷಣಕಾರರು: ಜಾರ್ಜ್ ಪಪಂಡ್ರಿಯೊ (ಗ್ರೀಸ್‌ನ ಮಾಜಿ ಪ್ರಧಾನಿ), ಶಶಿ ತರೂರ್ (ಲೋಕಸಭಾ ಸದಸ್ಯ) ಕಾರ್ಯಕ್ರಮ ನಿರೂಪಣೆ: ಲಕ್ಷ್ಮಿ ಪ್ರತುರಿ (ಇಂಕ್ಟಾಲ್ಕ್ಸ್ ಸಂಸ್ಥಾಪಕಿ ಮತ್ತು ಸಿಇಒ)‌

ಇಲ್ಲಿಗೆ ಭೇಟಿ ನೀಡಿ

ಸಮಾವೇಶದ ಕಾರ್ಯಕ್ರಮಗಳ ವಿವರಗಳಿಗೆ https://investkarnataka.co.in/gim2025/events-schedule/ ಭೇಟಿ ನೀಡಿ.

Whats_app_banner