ಬೆಂಗಳೂರು ಬಾಡಿಗೆ ಮನೆ ನಿವಾಸಿಗಳಾ ನೀವು, ಹಾಗಿದ್ದರೆ ಇದು ನಿಮ್ಮ ಸಮಸ್ಯೆಯೂ ಹೌದು, ವರುಣ್‌ ಮಯ್ಯ ಅವರ ಟ್ವೀಟ್ ಗಮನಿಸಿದ್ರಾ?
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಬಾಡಿಗೆ ಮನೆ ನಿವಾಸಿಗಳಾ ನೀವು, ಹಾಗಿದ್ದರೆ ಇದು ನಿಮ್ಮ ಸಮಸ್ಯೆಯೂ ಹೌದು, ವರುಣ್‌ ಮಯ್ಯ ಅವರ ಟ್ವೀಟ್ ಗಮನಿಸಿದ್ರಾ?

ಬೆಂಗಳೂರು ಬಾಡಿಗೆ ಮನೆ ನಿವಾಸಿಗಳಾ ನೀವು, ಹಾಗಿದ್ದರೆ ಇದು ನಿಮ್ಮ ಸಮಸ್ಯೆಯೂ ಹೌದು, ವರುಣ್‌ ಮಯ್ಯ ಅವರ ಟ್ವೀಟ್ ಗಮನಿಸಿದ್ರಾ?

ಬೆಂಗಳೂರು ಬಾಡಿಗೆ ಮನೆ, ಬಾಡಿಗೆ ಕಟ್ಟಡ ವಾಸಿಗಳ ಸಮಸ್ಯೆ ಒಂದಲ್ಲ, ಎರಡಲ್ಲ. ವಿಶೇಷವಾಗಿ ಬಾಡಿಗೆ ಮುಂಗಡ ಅಥವಾ ಭದ್ರತಾ ಠೇವಣಿ ವಿಚಾರದಲ್ಲಿ ನಷ್ಟವೇ. ಬೆಂಗಳೂರು ಬಾಡಿಗೆ ಮನೆ ನಿವಾಸಿಗಳಾ ನೀವು, ಹಾಗಿದ್ದರೆ ಇದು ನಿಮ್ಮ ಸಮಸ್ಯೆಯೂ ಹೌದು, ವರುಣ್‌ ಮಯ್ಯ ಅವರ ಟ್ವೀಟ್ ಗಮನಿಸಿದ್ರಾ? ಇಲ್ಲಾಂದ್ರೆ ಈ ವರದಿ ಓದಿ..

ಬೆಂಗಳೂರು ಬಾಡಿಗೆ ಮನೆ ನಿವಾಸಿಗಳಾ ನೀವು, ಹಾಗಿದ್ದರೆ ಇದು ನಿಮ್ಮ ಸಮಸ್ಯೆಯೂ ಹೌದು, ವರುಣ್‌ ಮಯ್ಯ ಅವರ ಟ್ವೀಟ್ ಗಮನಿಸಿದ್ರಾ?. ಇಲ್ಲದಿದ್ರೆ ಒಮ್ಮೆ ಈ ವರದಿ ಓದಿ. (ಸಾಂಕೇತಿಕ ಚಿತ್ರ)
ಬೆಂಗಳೂರು ಬಾಡಿಗೆ ಮನೆ ನಿವಾಸಿಗಳಾ ನೀವು, ಹಾಗಿದ್ದರೆ ಇದು ನಿಮ್ಮ ಸಮಸ್ಯೆಯೂ ಹೌದು, ವರುಣ್‌ ಮಯ್ಯ ಅವರ ಟ್ವೀಟ್ ಗಮನಿಸಿದ್ರಾ?. ಇಲ್ಲದಿದ್ರೆ ಒಮ್ಮೆ ಈ ವರದಿ ಓದಿ. (ಸಾಂಕೇತಿಕ ಚಿತ್ರ) (SM)

ಬೆಂಗಳೂರು: ಭದ್ರತಾ ಠೇವಣಿಯಾಗಿ ಕೊಟ್ಟ 11 ತಿಂಗಳ ಬಾಡಿಗೆ ಅಡ್ವಾನ್ಸ್ ಹಣದಲ್ಲಿ ಒಂದು ಭಾಗವನ್ನು ಹಿಡಿದಿಟ್ಟುಕೊಳ್ಳುವ ದಂಧೆ ಬೆಂಗಳೂರಿನಲ್ಲಿ ಅತಿದೊಡ್ಡ ಹಗರಣ ಎಂದು ಬಾಡಿಗೆದಾರರೊಬ್ಬರು ಟ್ವೀಟ್ ಮಾಡಿದ್ದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಒಳಗಾಗಿದೆ. ಈ ರೀತಿ ಬಾಡಿಗೆ ಅಡ್ವಾನ್ಸ್ ಹಣದ ಒಂದು ಭಾಗವನ್ನು ಹಿಡಿದಿಡುವಾಗ ಆಧಾರ ರಹಿತವಾದ ಹಾನಿಯನ್ನು ಕಟ್ಟಡ ಮಾಲೀಕರು ಉಲ್ಲೇಖಿಸುತ್ತಾರೆ ಎಂಬ ಅಂಶವನ್ನೂ ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಬಹುತೇಕರಿಗೆ 11 ತಿಂಗಳಿಗೊಮ್ಮೆ ಮನೆ ಬಾಡಿಗೆ ಹೆಚ್ಚು ಕೊಡುವ ಇಲ್ಲವೇ ಬೇರೆ ಬಾಡಿಗೆ ಮನೆ ಹುಡುಕುವ ಸವಾಲು. ಪ್ರತಿ ಬಾರಿಯೂ 11 ತಿಂಗಳ ಬಾಡಿಗೆ ಮುಂಗಡ ಅಥವಾ ಭದ್ರತಾ ಠೇವಣಿ ಕೊಡಲು ಹಣ ಹೊಂದಿಸುವ ಆರ್ಥಿಕ ಸವಾಲು ಕೂಡ ಇದೆ. ಹೀಗಾಗಿ ಈ ವಿಚಾರ ಬಹುಬೇಗ ಜನರ ಗಮನ ಸೆಳೆಯುತ್ತದೆ. ಇದರಂತೆ ವರುಣ್ ಮಯ್ಯ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಟ್ವೀಟ್‌ನಲ್ಲಿ ಇದೇ ವಿಚಾರ ಪ್ರಸ್ತಾಪಿಸಿದ್ದಾರೆ.

ಬೆಂಗಳೂರಿನ ಅತಿದೊಡ್ಡ ಹಗರಣ ಇದು- ಬಾಡಿಗೆ ಅಡ್ವಾನ್ಸ್‌ ಮೊತ್ತದ ಭದ್ರತಾ ಠೇವಣಿ ಕಡಿತ

"ಬೆಂಗಳೂರಿನಲ್ಲಿ ಅತಿ ದೊಡ್ಡ ಹಗರಣ" - ಬಾಡಿಗೆದಾರರು ಅಪಾರ್ಟ್‌ಮೆಂಟ್‌ಗಳನ್ನು ಖಾಲಿ ಮಾಡಿದಾಗ ಕಟ್ಟಡ ಮಾಲೀಕರು ಭದ್ರತಾ ಠೇವಣಿಯ ಒಂದು ಭಾಗವನ್ನು ತಡೆಹಿಡಿಯುತ್ತಾರೆ. ಆಗಾಗ್ಗೆ ಆಧಾರರಹಿತ ಹಾನಿಯನ್ನು ಉಲ್ಲೇಖಿಸುತ್ತಾರೆ. ನಾನು ಬಹುಶಃ 10 ಅಪಾರ್ಟ್‌ಮೆಂಟ್‌ಗಳನ್ನು ಬದಲಾಯಿಸಿದ್ದೇನೆ. ಪ್ರತಿ ಬಾರಿ ಈ ಅಕ್ರಮ ಠೇವಣಿ ಕಡಿತವನ್ನು ಅನುಭವಿಸಿದ್ದೇನೆ" ಎಂದು ವರುಣ್ ಮಯ್ಯ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮಂತೆಯೇ ದುಃಖಿತರಾದವರ ಮನದಾಳವನ್ನು ಕಲಕಿದ್ದಾರೆ. ಇಲ್ಲಿದೆ ಅವರ ಟ್ವೀಟ್‌.

ಎಕ್ಸ್‌ ಬಳಕೆದಾರರ ಪ್ರತಿಕ್ರಿಯೆ ಹೀಗಿದೆ

ವರುಣ್ ಮಯ್ಯ ಅವರು ವಿಶೇಷವಾಗಿ ಬೆಂಗಳೂರು ಅನುಭವವನ್ನು ಹಂಚಿಕೊಂಡರೆ, ಈ ಸಮಸ್ಯೆ ರಾಷ್ಟ್ರವ್ಯಾಪಿ ವಿಸ್ತರಿಸಿರುವಂಥದ್ದು ಎಂಬುದು ಎಕ್ಸ್‌ ಮೂಲಕ ಬಹಿರಂಗವಾಗಿದೆ. ಹೀಗಾಗಿ, ದೇಶವ್ಯಾಪಿ ಜನ ಇದಕ್ಕೆ ಸ್ಪಂದಿಸಿದ್ದಾರೆ. ವರುಣ್ ಮಯ್ಯ ಅವರ ಟ್ವೀಟ್ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. 700ಕ್ಕೂ ಹೆಚ್ಚು ಪ್ರತಿಕ್ರಿಯೆ, ಸಾವಿರಕ್ಕೂ ಹೆಚ್ಚು ರೀಟ್ವೀಟ್ ಆಗಿದೆ.

ಒಬ್ಬ ಬಳಕೆದಾರ, "ಇದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಅಪಾರ್ಟ್ಮೆಂಟ್ ಅನ್ನು ಹೊಸ ಬಾಡಿಗೆದಾರರಿಗೆ ಹಸ್ತಾಂತರಿಸುವುದು ಮತ್ತು ಅವರಿಂದ ನೇರವಾಗಿ ಠೇವಣಿ ಮೊತ್ತವನ್ನು ತೆಗೆದುಕೊಳ್ಳುವುದು" ಎಂದು ಪರಿಹಾರ ಸೂಚಿಸಿದ್ದಾರೆ.

ಇನ್ನೊಬ್ಬರು ಮುಂಬೈನಲ್ಲಿ ಇದೇ ರೀತಿಯ ಅನುಭವ ಆಗಿರುವುದನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಠೇವಣಿ ಹಿಂಪಡೆಯಲು ಸ್ನೇಹಿತರೊಬ್ಬರು ಪೊಲೀಸರ ಮೊರೆ ಹೋಗಬೇಕಾಗಿ ಬಂತು. ಆದರೂ ಮುಂಗಡ ಹಣದಲ್ಲಿ ಕಡಿತ ಮಾಡಿಸಿಕೊಳ್ಳಬೇಕಾಯಿತು. "ಪೊಲೀಸರು ಕಟ್ಟಡ ಮಾಲೀಕನ ಬೇಡಿಕೆಗೆ ಬೆಚ್ಚಿ ಬಿದ್ದರು. ಆದರೆ ಬಾಂಬೆ ಪೊಲೀಸರು ಉತ್ತಮ ರೀತಿಯಲ್ಲಿ ಸ್ಪಂದಿಸಿ ಬಾಡಿಗೆದಾರನಿಗೆ ನ್ಯಾಯ ಒದಗಿಸಿದರು ಎಂದು ಹೇಳಿಕೊಂಡಿದ್ಧಾರೆ.

ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತಾ ಒಬ್ಬ ಬಳಕೆದಾರ, “ಕನಿಷ್ಠ ನೀವು ಅದರಲ್ಲಿ ಸ್ವಲ್ಪ ಮೊತ್ತವನ್ನಾದರೂ ಮರಳಿ ಪಡೆಯಿರಿ. ಗುರ್ಗಾಂವ್‌ನಲ್ಲಿ, ನೀವು ಹೊರಟುಹೋದ ಕ್ಷಣದಲ್ಲಿ ಮಾಲೀಕರು ಬುದ್ಧಿಮಾಂದ್ಯತೆಗೆ ಒಳಗಾಗುತ್ತಾರೆ ಮತ್ತು ನೀವು ಅಸ್ತಿತ್ವದಲ್ಲಿರುವುದನ್ನು ಮರೆತುಬಿಡುತ್ತಾರೆ. ಸರಳವಾಗಿ ಹೇಳುವುದಾದರೆ ನಿಮ್ಮ ಹಣ ವಾಪಸ್ ಸಿಗಲ್ಲ ಎಂದು ಹೇಳಿಕೊಂಡಿದ್ಧಾರೆ.

ಅಪಾರ್ಟ್‌ಮೆಂಟ್ ಬಾಡಿಗೆ 40,000 ರೂಪಾಯಿ. ಭದ್ರತಾ ಠೇವಣಿ 5 ಲಕ್ಷ ರೂಪಾಯಿ ಎಂದು ಹರ್‌ನಿದ್ ಕೌರ್‌ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ. ಬಾಡಿಗೆ ವಿಚಾರದಲ್ಲಿ ಬೆಂಗಳೂರು ನಿಯಂತ್ರಣ ಕಳೆದುಕೊಂಡಿದೆ. ನಾನು ಕೂಡ ಬಾಡಿಗೆ ಕೊಟ್ಟು, ಭದ್ರತಾ ಠೇವಣಿ ಕಡಿತದ ಸಮಸ್ಯೆಯಿಂದ ಬಳಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Whats_app_banner