JNVST Result: ನವೋದಯ ವಿದ್ಯಾಲಯ 6ನೇ ತರಗತಿ ಆಯ್ಕೆ ಪರೀಕ್ಷೆಯ ಫಲಿತಾಂಶ ಶೀಘ್ರ ಪ್ರಕಟ; ರಿಸಲ್ಟ್‌ ನೋಡಲು ಇಲ್ಲಿದೆ ಲಿಂಕ್
ಕನ್ನಡ ಸುದ್ದಿ  /  ಕರ್ನಾಟಕ  /  Jnvst Result: ನವೋದಯ ವಿದ್ಯಾಲಯ 6ನೇ ತರಗತಿ ಆಯ್ಕೆ ಪರೀಕ್ಷೆಯ ಫಲಿತಾಂಶ ಶೀಘ್ರ ಪ್ರಕಟ; ರಿಸಲ್ಟ್‌ ನೋಡಲು ಇಲ್ಲಿದೆ ಲಿಂಕ್

JNVST Result: ನವೋದಯ ವಿದ್ಯಾಲಯ 6ನೇ ತರಗತಿ ಆಯ್ಕೆ ಪರೀಕ್ಷೆಯ ಫಲಿತಾಂಶ ಶೀಘ್ರ ಪ್ರಕಟ; ರಿಸಲ್ಟ್‌ ನೋಡಲು ಇಲ್ಲಿದೆ ಲಿಂಕ್

JNVST Result Class 6: ನವೋದಯ ವಿದ್ಯಾಲಯ 6ನೇ ತರಗತಿ ಆಯ್ಕೆ ಪರೀಕ್ಷೆಯ ಫಲಿತಾಂಶ ಶೀಘ್ರ ಪ್ರಕಟವಾಗಲಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ navodaya.gov.in ರಿಸ್ಟಲ್ ನೋಡಬಹುದು. ಅಲ್ಲದೇ ಮೆರಿಟ್ ಶೀಟ್‌ನ ಪಿಡಿಎಫ್ ಕೂಡ ಡೌನ್‌ಲೋಡ್ ಮಾಡಿಕೊಳ್ಳಬಹುದು.

ನವೋದಯ ವಿದ್ಯಾಲಯ 6ನೇ ತರಗತಿ ಆಯ್ಕೆ ಪರೀಕ್ಷೆಯ ಫಲಿತಾಂಶ ಶೀಘ್ರ ಪ್ರಕಟ; ರಿಸ್ಟಲ್ ನೋಡಲು ಲಿಂಕ್ (ಸಾಂಕೇತಿಕ ಚಿತ್ರ)
ನವೋದಯ ವಿದ್ಯಾಲಯ 6ನೇ ತರಗತಿ ಆಯ್ಕೆ ಪರೀಕ್ಷೆಯ ಫಲಿತಾಂಶ ಶೀಘ್ರ ಪ್ರಕಟ; ರಿಸ್ಟಲ್ ನೋಡಲು ಲಿಂಕ್ (ಸಾಂಕೇತಿಕ ಚಿತ್ರ)

Jawahar Navodaya Vidyalaya Result Class 6: ಜವಾಹರ್ ನವೋದಯ ವಿದ್ಯಾಲಯ (ಜೆಎನ್‌ವಿ) 6ನೇ ತರಗತಿ ಆಯ್ಕೆ ಪರೀಕ್ಷೆಯ ಫಲಿತಾಂಶವು ಶೀಘ್ರದಲ್ಲೇ ಪ್ರಕಟವಾಗಲಿದೆ. 6ನೇ ತರಗತಿಯ ಜೆಎನ್‌ವಿಎಸ್‌ಟಿ (ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ) ಗೆ ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್- navodaya.gov.in ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು ಮತ್ತು ಮೆರಿಟ್ ಪಟ್ಟಿಯ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೆಎನ್‌ವಿಎಸ್‌ಟಿ 6ನೇ ತರಗತಿ ಫಲಿತಾಂಶದ ಜೊತೆಗೆ, 9ನೇ ತರಗತಿ ಫಲಿತಾಂಶ ಕೂಡ ಪ್ರಕಟವಾಗಲಿದೆ.

ಇನ್ನೇನು ಕೆಲ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ನಂತರ navodaya.gov.in ಜೆಎನ್‌ವಿಎಸ್‌ಟಿ 6, 9ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಬಹುದು. ಈ ವೆಬ್‌ಸೈಟ್‌ಗೆ ಹೋಗಿ ಜೆಎನ್‌ವಿಎಸ್‌ಟಿ 6ನೇ, 9ನೇ ಮೆರಿಟ್ ಪಟ್ಟಿ 2025 ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಜೆಎನ್‌ವಿಎಸ್‌ಟಿ 6ನೇ, 9ನೇ ಮೆರಿಟ್ ಪಟ್ಟಿ 2025 PDF ಡೌನ್‌ಲೋಡ್ ಆಯ್ಕೆಯು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ನಂತರ ಈ ಪಿಡಿಎಫ್ ಅನ್ನು ಸೇವ್ ಮಾಡಿಕೊಂಡು ಇದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ. 

ಮೆರಿಟ್ ಶೀಟ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

  • ಮೊದಲು ನವೋದಯ ವಿದ್ಯಾಲಯದ ಅಧಿಕೃತ ವೆಬ್‌ಸೈಟ್ navodaya.gov.in ಗೆ ಭೇಟಿ ನೀಡಿ.
  • ಅಲ್ಲಿ 6 ಮತ್ತು 9ನೇ ತರಗತಿ ಟಾಪರ್‌ಗಳ ಪಟ್ಟಿಯ ಪಿಡಿಎಫ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಈಗ ನಿಮಗೆ ಸ್ಕ್ರೀನ್ ಮೇಲೆ ಪಿಡಿಎಫ್ ಡೌನ್‌ಲೋಡ್ ಮಾಡುವ ಆಯ್ಕೆ ಕಾಣಿಸುತ್ತದೆ.
  • ಪಿಡಿಎಫ್ ಅನ್ನು ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನ ಡೆಸ್ಕ್‌ಟಾಪ್‌ ಮೇಲೆ ಸೇವ್ ಮಾಡಿಕೊಳ್ಳಿ.
  • ನಂತರ ಇದರ ಪ್ರಿಂಟ್ ಔಟ್ ತೆಗೆದು ಇರಿಸಿಕೊಳ್ಳಿ.

ನವೋದಯ ವಿದ್ಯಾಲಯ 6, 9 ಆಯ್ಕೆ ಪಟ್ಟಿಯು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ, ಹಾಜರಿ ಸಂಖ್ಯೆ, ಇತರ ವಿವರಗಳನ್ನು ಒಳಗೊಂಡಿರುತ್ತದೆ.

navodaya.gov.in ಜೊತೆಗೆ cbseitms.nic.in ಮತ್ತು nvsadmissionclassnine.in. ನಲ್ಲೂ ಫಲಿತಾಂಶ ಪರಿಶೀಲನೆ ಮಾಡಬಹುದು.

ಜೆಎನ್‌ವಿಎಸ್‌ಟಿ 6, 9 ತರಗತಿ ಫಲಿತಾಂಶ 2025: ನಿರೀಕ್ಷಿತ ಕಟ್ ಆಫ್

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕಟ್ ಆಫ್ 82- 85, ಒಬಿಸಿ- 76- 79, ಎಸ್‌ಸಿ- 72- 75, ಎಸ್‌ಸಿ- 67- 70.

ಜವಾಹರ್ ನವೋದಯ ವಿದ್ಯಾಲಯಗಳ (JNVs) ಪ್ರವೇಶಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಜೆಎನ್‌ವಿಎಸ್‌ಟಿ ವರ್ಷಕ್ಕೊಮ್ಮೆ ನಡೆಯುತ್ತದೆ. ಜೆಎನ್‌ವಿಎಸ್‌ಟಿ ಲ್ಯಾಟರಲ್ ಎಂಟ್ರಿ ಸೆಲೆಕ್ಷನ್ ಟೆಸ್ಟ್ 2025 ಕುರಿತ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ- navodaya.gov.in, cbseitms.nic.in.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner