ಕನ್ನಡ ಸುದ್ದಿ  /  Karnataka  /  Jds Pancharatna Yatre Explained: What Is The Pancharatna Yojana Of Jds, When And Where Does The Pancharatna Rath Yatra Start?

JDS Pancharatna yatre Explained: ಏನಿದು ಜೆಡಿಎಸ್‌ನ ಪಂಚರತ್ನ ಯೋಜನೆ, ಪಂಚರತ್ನ ರಥಯಾತ್ರೆ ಯಾವಾಗ, ಎಲ್ಲಿಂದ ಶುರು?

Explainer JDS Pancharatna yatra - ರಾಜ್ಯ ಚುನಾವಣಾ ವರ್ಷವನ್ನು ನೋಡುತ್ತಿದೆ. ವಿಪಕ್ಷ ಕಾಂಗ್ರೆಸ್‌ ಆಗಲೇ ಮತದಾರರ ಮನವೊಲಿಸಲು ಭಾರತ್‌ ಐಕ್ಯ ಯಾತ್ರೆ, ಬೃಹತ್‌ ಸಮಾವೇಶಗಳನ್ನು ಒಂದಾದ ಮೇಲೊಂದರಂತೆ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿಯೂ ಜನಸಂಕಲ್ಪ ಯಾತ್ರೆ ಶುರುಮಾಡಿಕೊಂಡಿದೆ. ಜೆಡಿಎಸ್‌ ಕೂಡ ಹಿಂದೆ ಬಿದ್ದಿಲ್ಲ. ʻಪಂಚರತ್ನʼ ಅಜೆಂಡಾದಲ್ಲಿ ಸಮರ ಶುರುಮಾಡಿದೆ.

ಏನಿದು ಜೆಡಿಎಸ್‌ನ ಪಂಚರತ್ನ ಯೋಜನೆ, ಪಂಚರತ್ನ ರಥಯಾತ್ರೆ ಯಾವಾಗ, ಎಲ್ಲಿಂದ ಶುರು?
ಏನಿದು ಜೆಡಿಎಸ್‌ನ ಪಂಚರತ್ನ ಯೋಜನೆ, ಪಂಚರತ್ನ ರಥಯಾತ್ರೆ ಯಾವಾಗ, ಎಲ್ಲಿಂದ ಶುರು?

ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಜತೆಗೆ ಜೆಡಿಎಸ್‌ ಕೂಡ ಸಜ್ಜಾಗಿದೆ. ಮತದಾರರ ಮನವೊಲಿಸುವ ಪ್ರಯತ್ನದಲ್ಲಿ ರಥಯಾತ್ರೆಗಳು, ಬೃಹತ್‌ ಸಮಾವೇಶಗಳು ಒಂದಾದ ಮೇಲೆ ಒಂದರಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಆಯೋಜನೆ ಆಗುತ್ತಿವೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯುವುದಷ್ಟೆ ಮುಖ್ಯ ಗುರಿ, ಉದ್ದೇಶ.

ವಿಪಕ್ಷ ಕಾಂಗ್ರೆಸ್‌ ಆಗಲೇ ಮತದಾರರ ಮನವೊಲಿಸಲು ಭಾರತ್‌ ಐಕ್ಯ ಯಾತ್ರೆ, ಬೃಹತ್‌ ಸಮಾವೇಶಗಳನ್ನು ಒಂದಾದ ಮೇಲೊಂದರಂತೆ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿಯೂ ಜನಸಂಕಲ್ಪ ಯಾತ್ರೆ ಶುರುಮಾಡಿಕೊಂಡಿದೆ. ಜೆಡಿಎಸ್‌ ಕೂಡ ಹಿಂದೆ ಬಿದ್ದಿಲ್ಲ. ʻಪಂಚರತ್ʼ ಅಜೆಂಡಾದಲ್ಲಿ ಸಮರ ಶುರುಮಾಡಿದೆ.

ಪಂಚರತ್ನ ರಥಯಾತ್ರೆ

ಜೆಡಿಎಸ್​​​ ಪಂಚರತ್ನ ಜನಸಂಪರ್ಕ ರಥಯಾತ್ರೆ ನವೆಂಬರ್ 1ರಿಂದ ಆರಂಭವಾಗುತ್ತಿದ್ದು ಮೊದಲ ಹಂತದ ಪಂಚರತ್ನ ರಥಯಾತ್ರೆಯ ಪಟ್ಟಿ ಬಿಡುಗಡೆ ಆಗಿದೆ. ನ.1ರಿಂದ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ರಥಯಾತ್ರೆ ಆರಂಭವಾಗಲಿದೆ. ಮೊದಲ ಹಂತದಲ್ಲಿ 35 ದಿನಗಳ ಕಾಲ ರಥಯಾತ್ರೆ ನಡೆಯಲಿದೆ.

ಹಳೇ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸೀಮಿತವಾಗಲ್ಲ. ರಾಜ್ಯದೆಲ್ಲೆಡೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಸಂಘಟನೆ‌ ಆರಂಭಿಸಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಏನು ಎಂಬುದನ್ನು ಈ‌ ಕಾರ್ಯಕ್ರಮಗಳ ಮೂಲಕ ತೋರಿಸಲಾಗುತ್ತದೆ ಎಂದು ಎಚ್‌.ಡಿ.ಕುಮಾರ ಸ್ವಾಮಿ ಇತ್ತೀಚೆಗೆ ಹೇಳಿದ್ದರು.

ಪಂಚರತ್ನ ಯಾತ್ರೆ ಎಲ್ಲಿಂದ ಎಲ್ಲಿಗೆ ?

ನವೆಂಬರ್‌ 1 - ಕೋಲಾರ ಜಿಲ್ಲೆ ಮುಳಬಾಗಿಲು - ಪಂಚರತ್ನ ಯಾತ್ರೆ ಶುರು

ನವೆಂಬರ್ 6 ರಿಂದ 10 - ಚಿಕ್ಕಬಳ್ಳಾಪುರ

ನವೆಂಬರ್‌ 11ರಿಂದ 13 - ಬೆಂಗಳೂರು ಗ್ರಾಮಾಂತರ ಜಿಲ್ಲೆ

ನವೆಂಬರ್‌ 14ರಿಂದ 23 - ತುಮಕೂರು ಜಿಲ್ಲೆ

ನವೆಂಬರ್‌ 24 ರಿಂದ 30 - ಹಾಸನ ಜಿಲ್ಲೆ

ಡಿಸೆಂಬರ್‌ 1 - ಕುಣಿಗಲ್ ಕ್ಷೇತ್ರ

ಡಿಸೆಂಬರ್‌ 2ರಿಂದ 5 - ರಾಮನಗರ ಜಿಲ್ಲೆ

ಏನಿದು ಪಂಚರತ್ನ ಯೋಜನೆ ?

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಂಚರತ್ನ ಯೋಜನೆಗಳೇ ಪರಿಹಾರ ಎಂಬುದು ಜೆಡಿಎಸ್‌ ಐದು ಅಂಶಗಳ ಕಾರ್ಯಸೂಚಿ.

1. ಶಿಕ್ಷಣವೇ ಆಧುನಿಕ ಶಕ್ತಿ

2. ಆರೋಗ್ಯವೇ ಸಂಪತ್ತು

3. ರೈತ ಚೈತನ್ಯ

4. ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ

5. ವಸತಿಯ ಆಸರೆ

ಕ್ಷೇತ್ರವಾರು ಅಭ್ಯರ್ಥಿಗಳ ಘೋಷಣೆ ?

ವಿಧಾನಸಭೆ ಚುನಾವಣೆ ಘೋಷಣೆಗೂ ಮೊದಲೇ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕೆಲಸವನ್ನು ಜೆಡಿಎಸ್‌ ಮಾಡುತ್ತಿದೆ. ಬೆಂಗಳೂರಿನ ಜೆ.ಪಿ.ಭವನದಲ್ಲಿ ಮಾಜಿ ಸಿಎಂ ಎಚ್‌. ​ಡಿ ಕುಮಾರಸ್ವಾಮಿ ಗೊಂದಲವಿರುವ ಕ್ಷೇತ್ರಗಳ ಮುಖಂಡರ ಸಭೆ ನಡೆಸಿದ್ದಾರೆ. ಎಚ್.ಡಿ.ಕೋಟೆ, ಮಧುಗಿರಿ, ಶಿರಾ ಕ್ಷೇತ್ರಗಳ ಮುಖಂಡರ ಜತೆಗಿನ ಸಭೆ ಆಗಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಇದು ಮಹತ್ವ ಪಡೆದುಕೊಂಡಿದೆ. ಮೊದಲ ಹಂತದಲ್ಲಿ 120 ವಿಧಾನಸಭಾ ಕ್ಷೇತ್ರಗಳ‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

IPL_Entry_Point