Job Alert: ಪದವೀಧರರಿಗೆ ಸುವರ್ಣಾವಕಾಶ; ಮತ್ತೆ ಪ್ರೌಢಶಾಲೆಗಳಿಗೆ 2000 ಅತಿಥಿ ಶಿಕ್ಷಕರ ನೇಮಕ
ಕನ್ನಡ ಸುದ್ದಿ  /  ಕರ್ನಾಟಕ  /  Job Alert: ಪದವೀಧರರಿಗೆ ಸುವರ್ಣಾವಕಾಶ; ಮತ್ತೆ ಪ್ರೌಢಶಾಲೆಗಳಿಗೆ 2000 ಅತಿಥಿ ಶಿಕ್ಷಕರ ನೇಮಕ

Job Alert: ಪದವೀಧರರಿಗೆ ಸುವರ್ಣಾವಕಾಶ; ಮತ್ತೆ ಪ್ರೌಢಶಾಲೆಗಳಿಗೆ 2000 ಅತಿಥಿ ಶಿಕ್ಷಕರ ನೇಮಕ

Guest teachers recruitment 2023: ಮತ್ತೆ ಕರ್ನಾಟಕದ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸುಮಾರು 2000 ಪದವೀಧರರಿಗೆ ಉದ್ಯೋಗಾವಕಾಶ ಸಿಗಲಿದೆ. ಜಿಲ್ಲಾವಾರು ವಿವರ ಇಲ್ಲಿದೆ.

ಅತಿಥಿ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ (ಪ್ರಾತಿನಿಧಿಕ ಚಿತ್ರ)
ಅತಿಥಿ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: 2023-24ನೇ ಸಾಲಿನಲ್ಲಿ ಕರ್ನಾಟಕದ ಸರ್ಕಾರಿ ಪ್ರೌಢಶಾಲೆಗಳಲ್ಲಿ ವರ್ಗಾವಣೆ ನಡೆದ ನಂತರ ಖಾಲಿ ಉಳಿದಿರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು 2ನೇ ಹಂತದಲ್ಲಿ ನೇಮಕ ಮಾಡಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಸುಮಾರು ಎರಡು ಸಾವಿರ ಪದವೀಧರರಿಗೆ ಉದ್ಯೋಗದ ಅವಕಾಶ ಲಭಿಸುತ್ತದೆ. ಈಗಾಗಲೇ ಮೊದಲ ಹಂತದಲ್ಲಿ 6000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಹೆಚ್ಚುವರಿಯಾಗಿ 2000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ ಜಿಲ್ಲಾ ಉಪ ನಿರ್ದೇಶಕರುಗಳ ಸಭೆಯಲ್ಲಿ ಅವರು ನೀಡಿರುವ ಬೇಡಿಕೆಗಗೆ ಅನುಗುಣವಾಗಿ 1912 ಹುದ್ದೆಗಳು ಮಾತ್ರ ಖಾಲಿ ಇರುವುದಾಗಿ ತಿಳಿದು ಬಂದಿದ್ದು ಅಷ್ಟೇ ಹುದ್ದೆಗಳಿಗೆ ಷರತ್ತುಗಳಿಗೆ ಅನ್ವಯವಾಗಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಈ ಶಿಕ್ಷಕರನ್ನು ತಾಲ್ಲೂಕಿನಲ್ಲಿರುವ ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಶಾಲೆಗಳ ಹುದ್ದೆಗಳಿಗೆ ಮತ್ತು ಅತಿ ಕಡಿಮೆ ಶಿಕ್ಷಕರು ಇರುವ ಶಾಲೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯಾ ತಾಲ್ಲೂಕಿಗೆ ಆಯಾ ತಾಲ್ಲೂಕಿನ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳಬೇಕಿದೆ. ಈಗಾಗಲೇ ಮೊದಲ ಹಂತದಲ್ಲಿ ಅತಿಥಿ ಶಿಕ್ಷಕರು ನೇಮಕ ಮಾಡಿಕೊಂಡಿದ್ದು, ಆ ಸ್ಥಳಕ್ಕೆ ವರ್ಗಾವಣೆ ಮೂಲಕ ಶಿಕ್ಷಕರು ನೇಮಕಗೊಂಡಿದ್ದರೆ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕಾಗಿರುತ್ತದೆ. ಯಾವುದೇ ಜನಪ್ರತಿನಿಧಿ ಅಥವಾ ಗ್ರಾಮ ಪಂಚಾಯತ್ ಸದಸ್ಯರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳುವಂತಿಲ್ಲ.

2ನೇ ಹಂತದಲ್ಲಿ ಅವಶ್ಯಕತೆ ಇರುವ ಜಿಲ್ಲಾ ಮಟ್ಟದ ಅತಿಥಿ ಶಿಕ್ಷಕರ ವಿವರ

ಬಾಗಲಕೋಟೆ(40), ಬಳ್ಳಾರಿ(58), ಬೆಳಗಾವಿ(158), ಬೆಂಗಳೂರು ಉತ್ತರ(0), ಬೆಂಗಳೂರು ದಕ್ಷಿಣ( 0), ಬೀದರ್(74), ಚಾಮರಾಜನಗರ(63), ಚಿಕ್ಕಮಗಳೂರು(36), ಚಿಕ್ಕಬಳ್ಳಾಪುರ(77), ಚಿತ್ರದುರ್ಗ(10), ದಕ್ಷಿಣ ಕನ್ನಡ(75), ದಾವಣಗೆರೆ(0), ಧಾರವಾಡ(0), ಗದಗ(53), ಹಾಸನ(20), ಹಾವೇರಿ(50), ಕಲಬುರ್ಗಿ(70), ಕೋಲಾರ(22), ಕೊಪ್ಪಳ(99), ಮಂಡ್ಯ(128), ಮೈಸೂರು(12), ರಾಯಚೂರು(234), ರಾಮನಗರ(62), ಶಿವಮೊಗ್ಗ(16), ತುಮಕೂರು(92), ಉಡುಪಿ(23), ಉತ್ತರಕನ್ನಡ(32), ವಿಜಯನಗರ(25), ವಿಜಯಪುರ(0), ಯಾದಗಿರಿ(175)

ಬೆಂಗಳೂರು ಉತ್ತರ ಮತ್ತು ದಕ್ಷಿಣ, ವಿಜಯಪುರ, ದಾವಣಗೆರೆ, ಧಾರವಾಡ, ಜಿಲ್ಲೆಗಳಲ್ಲಿ ಯಾವುದೇ ಹುದ್ದೆ ಖಾಲಿ ಇರುವುದಿಲ್ಲ. ರಾಯಚೂರು ಯಾದಗಿರಿ ಬೆಳಗಾವಿ ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಅತಿಥಿ ಶಿಕ್ಷಕರ ಅವಶ್ಯಕತೆ ಇದೆ.

Whats_app_banner