IBPS RRB Jobs: ಐಬಿಪಿಎಸ್ ಆರ್‌ಆರ್‌ಬಿ ನೇಮಕ, ಕನ್ನಡದಲ್ಲಿಯೇ ಬರೆಯಿರಿ ಪರೀಕ್ಷೆ, ಕರ್ನಾಟಕದ ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಹುದ್ದೆಗಳಿವೆ?
IBPS RRB recruitment 2023: ಐಬಿಪಿಎಸ್ ಆರ್‌ಆರ್‌ಬಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ನಡೆಯುವ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಲಭ್ಯವಿರುವ ಹುದ್ದೆಗಳ ವಿವರ ಇಲ್ಲಿದೆ.
ಬೆಂಗಳೂರು: ಐಬಿಪಿಎಸ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಹುದ್ದೆಗಳಿಗೆ ಅಧಿಸೂಚನೆ ಹೊರಬಿದ್ದಿದೆ. ರಾಜ್ಯದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ವಿಕಾಸ ಗ್ರಾಮೀಣ ಬ್ಯಾಂಕ್ ಗಳಲ್ಲಿ 800ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ಲಭ್ಯವಿರುವ ಒಟ್ಟು ಹುದ್ದೆಗಳು, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರಕಟಿಸಿದೆ. ಈ ಕುರಿತ ವರದಿ ಓದಲು ಈ ಲಿಂಕ್ ಕ್ಲಿಕ್ ಮಾಡಬಹುದು.
ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಹುದ್ದೆಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ 832 ಹುದ್ದೆಗಳಿವೆ. ಅಂದರೆ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 606 ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ 202 ಹುದ್ದೆಗಳಿವೆ.
ಕನ್ನಡದಲ್ಲಿಯೇ ಬರೆಯಿರಿ ಬ್ಯಾಂಕ್ ಪರೀಕ್ಷೆ
ಲಕ್ಷಾಂತರ ಆಕಾಂಕ್ಷಿಗಳು ಈ ಪರೀಕ್ಷೆಗಾಗಿ ಕಾದು ಕುಳಿತಿದ್ದರು. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಹಾಗಿದ್ದರೆ ಈ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಬಹುದಾ ಎಂಬ ಪ್ರಶ್ನೆ ಸಾವಿರಾರು ಆಕಾಂಕ್ಷಿಗಳದ್ದು. ಬ್ಯಾಂಕ್‌ಪರೀಕ್ಷೆಗಳು ಎಂದರೆ ಇಂಗ್ಲೀಷ್‌ಭಾಷೆಯಲ್ಲಿ ನಡೆಯಲಿವೆ ಎಂಬುದು ಜನಜನಿತ. ಇತ್ತೀಚಿನ ವರ್ಷಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರಿ ಹುದ್ದೆಗಳಿಗೂ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ನಡೆಸುವ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಐಬಿಪಿಎಸ್‌ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಹುದ್ದೆಗಳಿಗೂ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶವಿದೆ.
ಇದಲ್ಲದೇ, ಇಂಗ್ಲೀಷ್, ಹಿಂದಿ, ಕೊಂಕಣಿ ಹಾಗೂ ಆಯಾಯಾ ರಾಜ್ಯದವರು ಅವರವರ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು. ರಾಜ್ಯದಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಆಫೀಸ್ ಅಸಿಸ್ಟೆಂಟ್, ಆಫೀಸರ್ ಸ್ಕೇಲ್-1, ಆಫೀಸರ್ ಸ್ಕೇಲ್-2, ಆಫೀಸರ್ ಸ್ಕೇಲ್ 2ನ ಕಾನೂನು, ಆಫೀಸರ್ ಸ್ಕೇಲ್-2ರ ಚಾರ್ಟಡ್ಡ್ ಅಕೌಂಟೆಂಟ್ ಹುದ್ದೆಗಳಿವೆ.
ಆರ್‌ಆರ್‌ಬಿಯ ಪ್ರಿಲಿಮ್ಸ್ 45 ನಿಮಿಷಗಳು,
ಮುಖ್ಯ ಪರೀಕ್ಷೆ 2 ಅಥವಾ 2.30 ಗಂಟೆಯ ಅವಧಿಯಾಗಿರುತ್ತದೆ.
ಪ್ರಿಲಿಮ್ಸ್‌ಪರೀಕ್ಷಾ ಕೇಂದ್ರಗಳು : ಹುಬ್ಬಳ್ಳಿ, ಮಂಗಳೂರು, ದಾವಣಗೆರೆ, ಧಾರವಾಡ, ಉಡುಪಿ, ಮೈಸೂರು, ಶಿವಮೊಗ್ಗ, ಕಲಬುರಗಿ, ಬೆಳಗಾವಿ, ಬೀದರ್, ಬೆಂಗಳೂರು
ಮುಖ್ಯ ಪರೀಕ್ಷೆ ನಡೆಯುವ ಕೇಂದ್ರಗಳು : ಮೈಸೂರು, ಬೆಂಗಳೂರು, ಧಾರವಾಡ, ದಾವಣಗೆರೆ, ಕಲಬುರಗಿ, ಶಿವಮೊಗ್ಗ, ಉಡುಪಿ
(ವರದಿ: ಅಕ್ಷರ ಕಿರಣ್)