ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಕಲಬುರಗಿ ನಗರಕ್ಕೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು

Kalaburagi News: ಕಲಬುರಗಿ ನಗರಕ್ಕೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು

ಕಲಬುರಗಿ ನಗರದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಹಿನ್ನೆಲೆಯಲ್ಲಿ ಗುರುವಾರದಿಂದ ನಾಲ್ಕು ದಿನಗಳ ಬದಲಾಗಿ ಮೂರು ದಿವಸಕೊಮ್ಮೆ ನೀರು ಬಿಡಲಾಗುವುದು ಎಂದು ಕಲಬುರಗಿ ಕೆಯುಡಬ್ಲೂಯುಎಸ್‌ಎಂಪಿ, ಕೆಯುಐಡಿಎಫ್‌ಸಿ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಕಲಬುರಗಿ ನಗರಕ್ಕೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು (HT PHOTO)
ಕಲಬುರಗಿ ನಗರಕ್ಕೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು (HT PHOTO)

ಕಲಬುರಗಿ: ಕಲಬುರಗಿ ನಗರದ ಮೇಲ್ಪಟ್ಟ ಮತ್ತು ಕೆಳಮಟ್ಟ ಜಲಸಂಗ್ರಹಾಗಾರಗಳಿಂದ ಈಗಾಗಲೇ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿರುವ ಪ್ರಯುಕ್ತ ಹಲವಾರು ಬಡಾವಣೆಗಳಲ್ಲಿ ಮೂರು ದಿನಕ್ಕೊಮ್ಮೆ ಗುರುವಾರದಿಂದ ನೀರು ಬಿಡಲಾಗುವುದು ಎಂದು ಕಲಬುರಗಿ ಕೆಯುಡಬ್ಲೂಯುಎಸ್‌ಎಂಪಿ, ಕೆಯುಐಡಿಎಫ್‌ಸಿ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ನಾಲ್ಕು ದಿನಗಳ ಬದಲಾಗಿ ಮೂರು ದಿವಸಕ್ಕೊಮ್ಮೆ ನೀರು ಬೀಡುವ ಬಡಾವಣೆಗಳ ವಿವರ ಇಂತಿದೆ.

ಡಿ.ಸಿ ಕಚೇರಿಯ ಮೇಲ್ಮಟ್ಟ ಜಲಸಂಗ್ರಹಗಾರ (ವಾರ್ಡ್ ನಂ. ಭಾಗಶಃ 33, ಭಾಗಶಃ 34, ಭಾಗಶಃ 35, ಭಾಗಶಃ 46 ಲುಕ್ಮಾನ್ ಕಾಲೇಜು, ಭರತ ತಾಂಡಾ, ಬಾಪು ನಗರ, ಜಗತ್ ಅಪ್ಪರ್ ಲೈನ್, ಜಗತ್ ಲೋವರ್ ಲೈನ್, ಗಾಜಿಪುರ, ಹಟ್ಟಿ ಗಲ್ಲಿ, ಯತೀಮ ಖಾನಾ, ಪರಿವಾರ ಹೋಟೆಲ್ ಏರಿಯಾ. ಪೊಲೀಸ್ ಗ್ರೌಂಡ್

ಮೇಲ್ಮಟ್ಟ ಜಲಸಂಗ್ರಹಗಾರ (ವಾರ್ಡ್ ನಂ. ಭಾಗಶಃ 33, ಭಾಗಶಃ 46) ಕುವೆಂಪು ನಗರ, ವೀರೇಶ್ ನಗರ, ಸುಂದರ್ ನಗರ(ಭಾಗ), ಭಾರತ್ ನಗರ ತಾಂಡಾ, ಪೊಲೀಸ್ ಕ್ವಾರ್ಟರ್ಸ್ (ಪೂರ್ಣ). ಡಿ.ವಿ.ಸಿ ಮೇಲ್ಮಟ್ಟ ಜಲಸಂಗ್ರಹಗಾರ (ವಾರ್ಡ್ ನಂ. ಭಾಗಶಃ 46, ಭಾಗಶಃ 49) ಬ್ಯಾಂಕ್ ಕಾಲೋನಿ, ಮಡ್ಡಿ, ವಕೀಲರ ಕಾಲೋನಿ, ಲಕ್ಷ್ಮಿ ಲೇಔಟ್, ಗುಲ್ಲಾಬವಾಡಿ, ಐವಾನ್-ಇ-ಶಾಹಿ, ಮಸೀದಿ ಲೈನ್, ತೋಟಪ್ಪ ಚಾಲ ಮತ್ತು ಪಿಡಬ್ಲೂಡಿ ಕ್ವಾರ್ಟರ್ಸ್. ಹಳೇ ಫಿಲ್ಟರ್ ಬೆಡ್

ಟ್ರೆಂಡಿಂಗ್​ ಸುದ್ದಿ

ಕೆಳಮಟ್ಟದ ಜಲಸಂಗ್ರಹಗಾರ (ವಾರ್ಡ್ ನಂ. ಭಾಗಶಃ 35) ಹೋಳಿ ಕಟ್ಟಾ, ಚಪ್ಪಲ್ ಬಜಾರ್, ಅಪ್ಪರ್ ಸಂತ್ರಾಸವಾಡಿ, ಕರಣ್ವೀರ್ ಗಲ್ಲಿ, ಗಾದಗಿ ಮಠ, ಮರಗಮ್ಮ ದೇವಸ್ಥಾನ, ಮಿಲನ್ ಚೌಕ್. ಶೇಕರೋಜಾ.

ಮೇಲ್ಮಟ್ಟ ಜಲಸಂಗ್ರಹಗಾರ (ವಾರ್ಡ್ ನಂ. ಭಾಗಶಃ 7, ಭಾಗಶಃ 11, ಭಾಗಶಃ 23) ಜಿಡಿಎ ಕಾಲೋನಿ, ಕಾವೇರಿ ನಗರ, ಲಕ್ಷ್ಮಿನಗರ, ಹೌಸಿಂಗ್ ಬೋರ್ಡ್, ತಾಂಡಾ, ಸುವರ್ಣ ನಗರ. ರಾಜಾಪುರ ಮೇಲ್ಮಟ್ಟ ಜಲಸಂಗ್ರಹಗಾರ (ವಾರ್ಡ್ ನಂ.47) ರಾಜಾಪುರ, ಪ್ರಶಾಂತ್ ನಗರ ಎ ಆಂಡ್ ಬಿ, ಆನಂದ್ ನಗರ, ಅಮೃತ್ ನಗರ.

ಗಣೇಶ ನಗರ ಮೇಲ್ಮಟ್ಟ ಜಲಸಂಗ್ರಹಗಾರ (ವಾರ್ಡ್ ನಂ. 31) ಗಣೇಶ್ ನಗರ್, ಹೌಸಿಂಗ್ ಬೋರ್ಡ್. ಹೈಕೋರ್ಟ್ ಮೇಲ್ಮಟ್ಟ ಜಲಸಂಗ್ರಹಗಾರ (ವಾರ್ಡ್ ನಂ. 51) ಎಲ್‌ಐಜಿ, ಎಂಐಜಿ, ಹೆಚ್‌ಐಜಿ ಕ್ವಾರ್ಟರ್ಸ್.

ಹೆಚ್.ಎಸ್.ಆರ್ ಕೆಳಮಟ್ಟದ ಜಲಸಂಗ್ರಹಗಾರ (ವಾರ್ಡ್ ನಂ. ಭಾಗಶಃ 12, ಭಾಗಶಃ 21, ಭಾಗಶಃ 22, ಭಾಗಶಃ 24, ಭಾಗಶಃ 28, ಭಾಗಶಃ 35) ಗಾಂಧಿ ನಗರ, ಬ್ಯಾಂಕ್ ಕಾಲೋನಿ, ಮೋಮಿನ್‌ಪುರ, ಮಿಜ್‌ಗುರಿ, ಬಂಬೂ ಬಜಾರ್, ಭಾರತ್ ಕಾಲೋನಿ, ಮಿಲ್ಕ್ ಡೈರಿ, ಸಂಜೀವ್ ನಗರ, ನೆಹರು ಗುಂಜ್, ಭೀಮಳ್ಳಿ ಇಂಡಸ್ಟಿ, ಸಂತ್ರಾಸವಾಡಿ, ಗಣೇಶ ಮಂದಿರ. ಹೆಚ್.ಎಸ್.ಆರ್ ಮೇಲ್ಮಟ್ಟ ಜಲಸಂಗ್ರಹಗಾರ (ವಾರ್ಡ್ ನಂ. ಭಾಗಶಃ 1, ಭಾಗಶಃ 5, ಭಾಗಶಃ 6, ಭಾಗಶಃ 12) ಶಿವಾಜಿ ನಗರ, ಭವಾನಿ ನಗರ, ನಂದಿ ಕಾಲೋನಿ, ರಾಜೀವ್ ಗಾಂಧಿ ನಗರ, ಮುನಿಮ್ ಸಂಘ, ಖಾಜಾ ಕಾಲೋನಿ, ತಾಜ್ ನಗರ, ಭವಾನಿ ನಗರ, ನಂದಿ ಕಾಲೋನಿ, ಚಪ್ಪರ ಬಂದ್ ಗಲ್ಲಿ, ಕನಕದಾಸ್ ಕಾಲೋನಿ, ರಾಜೀವ್ ಗಾಂಧಿ ನಗರ. ಮೋಮಿನಪುರಾ ಮೇಲ್ಮಟ್ಟ ಜಲಸಂಗ್ರಹಗಾರ (ವಾರ್ಡ್ ನಂ. 21, 22, ಭಾಗಶಃ 24) ಅಲಹಾಬಾದ್ ಪ್ರದೇಶ, ಚಾಚಾ ಹೋಟೆಲ್, ಪಲ್ಲಗಲ್ಲಿ, ಸಂದಲ್ ಗಲ್ಲಿ, ಮೋಮಿನ್‌ಪುರ, ಚಟ್ಟೆ ವಾಡಿ (ಭಾಗಶಃ), ಗಣೇಶ ಮಂದಿರ (ಸರಾಫ್ ಬಜಾರ್).

ಎಂಟು ದಿನಗಳ ಬದಲಾಗಿ ಮೂರು ದಿನಕ್ಕೊಮ್ಮೆ ನೀರು ಬಿಡುವ ಬಡಾವಣೆಗಳ ವಿವರ ಇಂತಿದೆ

ನಹಾ ಮೊಹಲ್ಲಾ ಮೇಲ್ಮಟ್ಟ ಜಲಸಂಗ್ರಹಗಾರ ಭಾಗಶಃ (ವಾರ್ಡ್ ನಂ. 19, ಭಾಗಶಃ 20, ಭಾಗಶಃ 22) ನಯಾ ಮೊಹಲ್ಲಾ, ಚಾಚಾ ಹೋಟೆಲ್, ಜಲಾಲವಾಡಿ ಹಾಗೂ ದರ್ಗಾ ಪ್ರದೇಶ.

ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ಕಳೆದ ಆಗಸ್ಟ್ 25 ರಂದು ಸಭೆ ನಡೆಸಿ ನಗರದ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರನ್ನು ಮೂರು ದಿವಸಕ್ಕೊಮ್ಮೆ ಸರಬರಾಜು ಮಾಡಲು ತಿಳಿಸಿರುವ ಪ್ರಯುಕ್ತ ಈ ಬದಲಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)