Kalaburagi News: ಕಲಬುರಗಿ ಜೈಲಿನಲ್ಲಿ ಐದು ಮೊಬೈಲ್ ಪತ್ತೆ
ಕಲಬುರಗಿ ಜೈಲಿನ ಆವರಣದಲ್ಲಿ ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಚೀಲ ಪತ್ತೆಯಾಗಿದ್ದವು, ಅವನ್ನು ಬಿಚ್ಚಿ ನೋಡಿದಾಗ ಎರಡು ಕಟ್ಟುಗಳಲ್ಲಿ ಮೊಬೈಲ್, ಚಾರ್ಜರ್, ಸಿಮ್ ಇರುವುದು ಬೆಳಕಿಗೆ ಬಂದಿದೆ.
ಕಲಬುರಗಿ: ಅಕ್ರಮ ಗಾಂಜಾ, ನಶೆ ಪದಾರ್ಥ ಪತ್ತೆಯಾಗುತ್ತಿರುವ ಕಲಬುರಗಿ ಜೈಲಿಯಲ್ಲಿ ಮತ್ತೆ ಮೊಬೈಲ್‌ಗಳು ಪತ್ತೆಯಾಗುವ ಮೂಲಕ ಸುದ್ದಿ ಮಾಡಿದೆ.
ನಗರದ ಹೊರವಲಯದಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಐದು ಮೊಬೈಲಗಳು, ಸಿಮ್ ಕಾರ್ಡ್ ಹಾಗೂ ಯುಎಸ್ಬಿ ಪತ್ತೆಯಾಗಿವೆ.
ಎಂದಿನಂತೆ ಜೈಲಿನ ಬ್ಯಾರೆಕಗಳ ಬೀಗ ತೆರೆಯುವ ಮೊದಲು ಜೈಲಿನ ಆವರಣವನ್ನು ಸಿಬ್ಭಂದಿ ಒಂದು ಸಲ ಶೋಧ ನಡೆಸುತ್ತಾರೆ. ಬಳಿಕವೇ ಬ್ಯಾರೆಕ್ ತೆರೆಯುವುದು ಪದ್ದತಿ. ಹೀಗಿರುವಾಗ ಮಂಗಳವಾರ ಬೆಳಗ್ಗೆ ಬೀಗ ತೆರೆಯುವ ಮೊದಲು ಜೈಲಿನ ಆವರಣದಲ್ಲಿ ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಚೀಲ ಪತ್ತೆಯಾದವು.
ಅವನ್ನು ಬಿಚ್ಚಿ ನೋಡಿದಾಗ ಎರಡು ಕಟ್ಟುಗಳಲ್ಲಿ ಮೊಬೈಲ್, ಚಾರ್ಜರ್, ಸಿಮ್ ಇರುವುದು ಬೆಳಕಿಗೆ ಬಂದಿದೆ. ಈ ಕುರಿತು ಅಧೀಕ್ಷರಾದ ಪಿ.ರಂಗನಾಥ ಅವರು ದೂರು ನೀಡಿದ್ದಾರೆ. ಪತ್ತೆಯಾಗಿರುವ ಮೊಬೈಲ್‌ಗಳನ್ನು ಯಾರೊ ಎಸೆದು ಹೋಗಿದ್ದಾರೆ. ಯಾರ ಹೆಸರಿನಲ್ಲಿವೆ ಪತ್ತೆ ಮಾಡುವಂತೆ ಕೋರಿದ್ದಾರೆ. ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿ ಪೊಲೀಸ್ ಭದ್ರತೆ ನಡೆವೆಯೂ ಅಕ್ರಮವಾಗಿ ನಶ ಭರಿಸುವ ಪದಾರ್ಥಗಳು, ಮೊಬೈಲ್‌ಗಳು ಸಾಗಾಟವಾಗುತ್ತಿರುವುದು ಜೈಲು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತಿದೆ. ಜೈಲಿನಲ್ಲಿ ಅಕ್ರಮ ವಟುವಟಿಕೆ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)