ಜೇವರ್ಗಿಯಲ್ಲಿ ಬಾಲಕಿಯರ ವಸತಿ ನಿಲಯದ ಬಾತ್‌ರೂಮಲ್ಲಿ ಕ್ಯಾಮೆರಾ ಇಟ್ಟ ನೆರೆಮನೆಯ 3 ಮಕ್ಕಳ ಅಪ್ಪ ಅರೆಸ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  ಜೇವರ್ಗಿಯಲ್ಲಿ ಬಾಲಕಿಯರ ವಸತಿ ನಿಲಯದ ಬಾತ್‌ರೂಮಲ್ಲಿ ಕ್ಯಾಮೆರಾ ಇಟ್ಟ ನೆರೆಮನೆಯ 3 ಮಕ್ಕಳ ಅಪ್ಪ ಅರೆಸ್ಟ್‌

ಜೇವರ್ಗಿಯಲ್ಲಿ ಬಾಲಕಿಯರ ವಸತಿ ನಿಲಯದ ಬಾತ್‌ರೂಮಲ್ಲಿ ಕ್ಯಾಮೆರಾ ಇಟ್ಟ ನೆರೆಮನೆಯ 3 ಮಕ್ಕಳ ಅಪ್ಪ ಅರೆಸ್ಟ್‌

ಕಲಬುರಗಿಯ ಜೇವರ್ಗಿಯಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯ ವಸತಿ ನಿಲಯದ ಬಾತ್‌ರೂಮ್‌ನಲ್ಲಿ ನೆರೆಮನೆಯಾತ ರಾತ್ರೋರಾತ್ರಿ ಕ್ಯಾಮೆರಾ ಫಿಕ್ಸ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಮೂರು ಮಕ್ಕಳ ತಂದೆಯನ್ನು ಪೊಲೀಸರು ಬಂಧಿಸಿದ್ದು, ಕೇಸ್ ದಾಖಲಿಸಿಕೊಂಡಿದ್ದಾರೆ.

ಜೇವರ್ಗಿಯಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯದ ಬ್ಯಾತ್‌ ರೂಂನಲ್ಲಿ ಕ್ಯಾಮೆರಾ ಅಳವಡಿಸಿದ ಕಾಮುಕನನ್ನು ಬಂಧಿಸಿದ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಜೇವರ್ಗಿಯಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯದ ಬ್ಯಾತ್‌ ರೂಂನಲ್ಲಿ ಕ್ಯಾಮೆರಾ ಅಳವಡಿಸಿದ ಕಾಮುಕನನ್ನು ಬಂಧಿಸಿದ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.

ಕಲಬುರಗಿ: ಜೇವರ್ಗಿಯಲ್ಲಿ ಕಾಮುಕನೊಬ್ಬ ಬಾಲಕಿಯರ ವಸತಿ ನಿಲಯದ ಬಾತ್‌ ರೂಂನಲ್ಲಿ ಕ್ಯಾಮೆರಾ ಅಳವಡಿಸಿ ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿದ ಘಟನೆ ವರದಿಯಾಗಿದೆ.

ಜೇವರ್ಗಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಈ ಕೆಲಸ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಜೇವರ್ಗಿಯ ಶಾಂತ ನಗರದ ನಿವಾಸಿ ಸಲೀಮ್‌ (34) ಎಂದು ಗುರುತಿಸಲಾಗಿದೆ.

ಮದುವೆಯಾಗಿ ಮೂರು ಮಕ್ಕಳಿದ್ದರೂ ಈ ಕಾಮುಕ ಈ ಕೃತ್ಯ ನಡೆಸಿದ್ದು, ಮಂಗಳವಾರ ರಾತ್ರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದ ಗೊಡೆಯ ಪೈಪ್ ಮೂಲಕ ಕ್ಯಾಮೆರಾ ಅಳವಡಿಸಿದ ಎನ್ನಲಾಗಿದೆ. ಬುಧವಾರ ಬೆಳಗ್ಗೆ ವಸತಿ ನಿಲಯದ ವಿದ್ಯಾರ್ಥಿನಿಯರು ಎಂದಿನಂತೆ ಸ್ನಾನಕ್ಕೆ ತೆರಳಿದ್ದಾಗ ಕ್ಯಾಮೆರಾ ಇಟ್ಟಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅನುಮಾನಗೊಂಡ ವಿದ್ಯಾರ್ಥಿನಿಯರು ವಸತಿ ನಿಲಯದ ವಾರ್ಡನ್ ಗೆ ಮಾಹಿತಿ ನೀಡಿದ್ದಾರೆ.

ಕ್ಯಾಮೆರಾದ ಜಾಡನ್ನು ಪತ್ತೆ ಹಚ್ಚಿದಾಗ, ಅದನ್ನು ಪಕ್ಕದ ಮನೆಯ ಸಲೀಮ್ ಎಂಬ ವ್ಯಕ್ತಿ ಇರಿಸಿರುವುದು ತಿಳಿದುಬಂದಿದೆ. ವಿದ್ಯಾರ್ಥಿನಿಯರ ಗೋಳಾಟ ಕೇಳಿಸಿಕೊಂಡು ಸ್ಥಳೀಯರು ಸಲೀಮ್ ಅನ್ನು ಹಿಡಿದು ಥಳಿಸಿದ್ದಾರೆ. ಆದರೆ, ಆತ ಅಲ್ಲಿಂದ ಪರಾರಿಯಾಗಿದ್ದ.

ಪರಾರಿಯಾದ ಕಾಮುಕನನ್ನು ಬಂಧಿಸುವಂತೆ ಬಾಲಕಿಯರು ಮತ್ತು ಸ್ಥಳೀಯರು ಜೇವರ್ಗಿ ತಹಸೀಲ್ದಾರ್ ಮತ್ತು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಸಿದ ಅಧಿಕಾರಿಗಳು, ಸ್ಥಳಪರಿಶೀಲನೆ ನಡೆಸಿದರು. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದರು.

ನರೇಗಾ ಕಾಮಗಾರಿ ಕಳಪೆ ಕಾರಣ ರಾಂಪೂರಹಳ್ಳಿ ಪಿಡಿಓ ಅಮಾನತು

ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ತಿ ಯೋಜನೆಯಡಿ ಕಳಪೆ ಸಾಧನೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶುಚಿತ್ವ-ನೈರ್ಮಲ್ಯ ಕಾಪಾಡದೆ ಕರ್ತವ್ಯದಲ್ಲಿನ ನಿರ್ಲಕ್ಷ್ಯ, ಬೇಜವಾಬ್ದಾರಿ ಆರೋಪದ ಹಿನ್ನೆಲೆಯಲ್ಲಿ ಇಲಾಖೆ‌ ವಿಚಾರಣೆ ಕಾಯ್ದಿರಿಸಿ ಚಿತ್ತಾಪುರ ತಾಲುಕಿನ ರಾಂಪೂರಹಳ್ಳಿ ಗ್ರಾಮ ಪಂಚಾಯತ್ ಪಿಡಿಓ ಬಸವರಾಜ ಭಾಸಗಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ ಅವರು ಮಂಗಳವಾರ ಅದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಕಟ್ಟಡಗಳ ಸಮಗ್ರ ತೆರಿಗೆಯನ್ನು ನಡೆಸಿ ನಮೂನೆ- 9-ಎ ನಲ್ಲಿ ನಮೂದಿಸಲೂ ಸೂಚಿಸಿದರೂ ಪೂರ್ಣಗೊಳಿಸಿಲ್ಲ, ನರೇಗಾ ಯೋಜನೆಯಡಿ ಗುರಿಗೆ ಎದುರಾಗಿ ಮಾನವ ದಿನಗಳ ಸೃಜಿಸುವಂತೆ ಹಲವಾರು ಬಾರಿ ಸೂಚಿಸಿದರೂ ಕೂಡ ಶೇ. 50ಕ್ಕಿಂತ ಕಡಿಮೆ ಪ್ರಗತಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮೀಣ ಸಮುದಾಯದಲ್ಲಿ ಶುಚಿತ್ವ ನೈರ್ಮಲ್ಯ ಕಾಪಾಡಲು ಬಿಟ್ಟುಹೋದ ಕುಟುಂಬಗಳ ಗುರುತಿಸುವಂತೆ ಸೂಚಿಸಿದರು ಅದನ್ನು ಪಾಲಿಸಿಲ್ಲ ಎಂದು ಚಿತ್ತಾಪೂರ ತಾಲೂಕ ಪಂಚಾಯತ್ ಇ.ಓ. ಅವರು ವರದಿ ನೀಡಿದ್ದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ರಾಂಪೂರಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ತರಕಸಪೇಟ ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದು ಮತ್ತು ಗ್ರಾಮದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮರ್ಪಕ ಸರಬರಾಜು ಮಾಡದೇ ಇರುವುದು ಕಂಡುಬಂದ ಕಾರಣ ಸದರಿ ಪಿಡಿಓ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚಿರುತ್ತಾರೆಂದು ಎಂದು ಇಓ ವರದಿ ಮಾಡಿದ್ದಾರೆ .

ಚಿತ್ತಾಪುರ ತಾಲೂಕ ಪಂಚಾಯತ್ ಇಓ ವರದಿ ಮೇರೆಗೆ ಶಿಸ್ತುಪಾಲನಾ ಅಧಿಕಾರಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಗ್ ಮೀನಾ ಅವರು ಇಲಾಖಾ‌ ವಿಚಾರಣೆ ಕಾಯ್ದಿರಿಸಿ ಬಸವರಾಜ ಭಾಸಗಿ ಅವರನ್ನು ಅಮಾನತುಗೊಳಿಸಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

Whats_app_banner