Kalaburagi News: ಆಸ್ತಿ ವಿಚಾರಕ್ಕಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಆಸ್ತಿ ವಿಚಾರಕ್ಕಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

Kalaburagi News: ಆಸ್ತಿ ವಿಚಾರಕ್ಕಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

Crime News: ಕಲಬುರಗಿ ತಾಲೂಕಿನ ಸಿಂದಗಿ ಗ್ರಾಮದ ಮೃತ ವಿಜಯಲಕ್ಷ್ಮಿ ಹಾಗೂ ಅವರ ಪತಿ ಮಲಕಯ್ಯ ಅವರ ಸಹೋದರ ಕುಪೇಂದ್ರ ನಡುವೆ ಸಿಂದಗಿ ಗ್ರಾಮದಲ್ಲಿರುವ 9 ಎಕರೆ ಜಮೀನಿಗಾಗಿ ಕಳೆದ 20 ವರ್ಷಗಳಿಂದ ಜಗಳ‌ನಡೆಯುತ್ತಿತ್ತು, ಈ ವಿಚಾರವಾಗಿ ನ್ಯಾಯಾಲಯದಲ್ಲೂ ವಿಚರಾಣೆ ನಡೆದಿತ್ತು.

ಕಲಬುರಗಿ ನಗರದ ಕೆಕೆ ಕಾಲೋನಿಯಲ್ಲಿ ಜಮೀನು ವಿಚಾರವಾಗಿ 45ವರ್ಷದ ವಿಜಯಲಕ್ಷ್ಮಿ ಎಂಬುವರನ್ನು ಸಂಬಂದಿಕರೆ ಭೀಕರವಾಗಿ ಕೊಲೆಗೈದಿದ್ದಾರೆ.
ಕಲಬುರಗಿ ನಗರದ ಕೆಕೆ ಕಾಲೋನಿಯಲ್ಲಿ ಜಮೀನು ವಿಚಾರವಾಗಿ 45ವರ್ಷದ ವಿಜಯಲಕ್ಷ್ಮಿ ಎಂಬುವರನ್ನು ಸಂಬಂದಿಕರೆ ಭೀಕರವಾಗಿ ಕೊಲೆಗೈದಿದ್ದಾರೆ.

ಕಲಬುರಗಿ: ನಗರದ ಕೆಕೆ ಕಾಲೋನಿಯಲ್ಲಿ ಜಮೀನು ವಿಚಾರವಾಗಿ 45ವರ್ಷದ ವಿಜಯಲಕ್ಷ್ಮಿ ಎಂಬುವರನ್ನು ಸಂಬಂದಿಕರೆ ಭೀಕರವಾಗಿ ಕೊಲೆಗೈದಿದ್ದಾರೆ.

ಕಲಬುರಗಿ ತಾಲೂಕಿನ ಸಿಂದಗಿ ಗ್ರಾಮದ ಮೃತ ವಿಜಯಲಕ್ಷ್ಮಿ ಹಾಗೂ ಅವರ ಪತಿ ಮಲಕಯ್ಯ ಅವರ ಸಹೋದರ ಕುಪೇಂದ್ರ ನಡುವೆ ಸಿಂದಗಿ ಗ್ರಾಮದಲ್ಲಿರುವ 9 ಎಕರೆ ಜಮೀನಿಗಾಗಿ ಕಳೆದ 20 ವರ್ಷಗಳಿಂದ ಜಗಳ‌ನಡೆಯುತ್ತಿತ್ತು, ಈ ವಿಚಾರವಾಗಿ ನ್ಯಾಯಾಲಯದಲ್ಲೂ ವಿಚರಾಣೆ ನಡೆದಿತ್ತು, ಪಿತ್ರಾರ್ಜಿತ ಆಸ್ತಿಯಲ್ಲಿ ಮೃತ ವಿಜಯಲಕ್ಷ್ಮಿ ಗಂಡ ಮಲಕಯ್ಯ ಅವರ ಪರವಾಗಿ ಆಗಿತ್ತು, ಈ ವಿಚಾರವಾಗಿ ವಿಜಯಲಕ್ಷ್ಮಿ ತನ್ನ ಪತಿ ಸಹೋದರ ಕುಪೇಂದ್ರ ಅವರಿಗೆ ತಮ್ಮ ಜಮೀನು ಬಿಟ್ಟುಕೊಡುವಂತೆ ಕ್ಯಾತೆ ತಗೆದಿದ್ದರು, ಕಳೆದ ಹಲವು ಬಾರಿ ಜಗಳವಾಗಿತ್ತು, ಇಂದು ಬೆಳಿಗೆ ಕೆಕೆ ನಗರದಲ್ಲಿರುವ ವಿಜಯಲಕ್ಷ್ಮಿ‌ಮನೆಗೆ ಬಂದ ಕುಪೇಂದ್ರ ಹಾಗೂ ಅವರ ಮಕ್ಕಳು ಏಕಾ ಎಕಿ ವಿಜಯಲಕ್ಷ್ಮಿ ಹಾಗೂ ಅವರ ಮನೆಯವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಘಟನೆಯಲ್ಲಿ ವಿಜಯಲಕ್ಷ್ಮಿ ಸಾವನ್ನಪ್ಪಿದ್ದು, ಇನ್ನು ಘಟನೆಯಲ್ಲಿ ರೇಣುಕಾ,ಪಲ್ಲವಿ,ನಾಗರಾಜ್ ಗಾಯಗೊಂಡಿದ್ದು‌ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಷಯ ತಿಳಿದ ಸಬ್ ಅರ್ಬನ್ ಪೊಲೀಸರು ಹಾಗೂ ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ‌ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

Whats_app_banner