Employment news: ಕಲಬುರಗಿ, ಬೀದರ್‌ನಲ್ಲಿ ಉದ್ಯೋಗಾವಕಾಶ, ಏನೇನು ಹುದ್ದೆ ಇಲ್ಲಿದೆ ವಿವರ
ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಉದ್ಯೋಗಾವಕಾಶವಿದೆ. ಅದರ ವಿವರ ಇಲ್ಲಿದೆ.(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)
ಕಲಬುರಗಿ: ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ನಾನಾ ಉದ್ಯೋಗಾವಕಾಶಗಳಿದ್ದು, ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೀದರ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ ಆಹ್ವಾನಿಸಲಾಗಿದ್ದು, ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಅದೇ ರೀತಿ ಕಲಬುರಗಿಯಲ್ಲೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1 ರಲ್ಲಿ ತಾಂತ್ರಿಕ ವೃತ್ತಿಯ ಒಟ್ಟು 85 ಸ್ಥಾನಗಳ ಶಿಶಿಕ್ಷ ತರಬೇತಿದಾರ ಹುದ್ದೆಗೆ ಆಯ್ಕೆ ಪ್ರಕ್ರಿಯೆಗಳು ಮುಂದಿನ ವಾರ ನಡೆಯಲಿವೆ.
ಬೀದರ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಬೀದರ ಜಿಲ್ಲೆಯ ಸಂತಪೂರ(ಔ) ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ, ವಿವಿಧ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 36 ಅಂಗನವಾಡಿ ಕಾರ್ಯಕರ್ತೆ ಹಾಗೂ 44 ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು, ಫೆಬ್ರುವರಿ 13 ರಂದು ಕೊನೆ ದಿನವಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳು ಖಾಲಿ ಇರುವ ವಿವರ ಹಾಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶನಾಲಯದ ಜಾಲತಾಣ https://dwcd.karnataka.gov.in ದಲ್ಲಿ ಆನ್‌ಲೈನ್ ಸೇವೆಗಳ ಟ್ಯಾಬ್ನಲ್ಲಿ ಕಾರ್ಯಕರ್ತೆ/ ಸಹಾಯಕಿಯರ ಆನ್ಲೆನ್ ನೇಮಕಾತಿಯ ಸಬ್ ಟ್ಯಾಬ್ನಲ್ಲಿ ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಲು (https://karnemakaone.kar.nic.in/abcd/) ಮತ್ತು ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ನಾಡ ಕಚೇರಿ ಹತ್ತಿರ ಔರಾದ ರಸ್ತೆ, ಸಂತಪೂರ-08485-287634, 7892684401 ಇವರನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಬೀದರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 22 ರಂದು ಮೌಖಿಕ ಸಂದರ್ಶನ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1 ರಲ್ಲಿ ತಾಂತ್ರಿಕ ವೃತ್ತಿಯ ಒಟ್ಟು 85 ಸ್ಥಾನಗಳಿಗೆ ಶಿಶಿಕ್ಷ ತರಬೇತಿದಾರರನ್ನು ನೇಮಕಾತಿ ಮಾಡಿಕೊಳ್ಳಲು ಇದೇ ಜನವರಿ 22 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಿಗಮದ ಕಲಬುರಗಿ ವಿಭಾಗ-1ರ ಕಚೇರಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಲಾಗುತ್ತಿದೆ ಎಂದು ಕಲಬುರಗಿ ವಿಭಾಗ-೧ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಫಿಟ್ಟರ್, ಆಟೋ ಎಲೆಕ್ಟ್ರಿಶಿಯನ್, ಡಿಸೇಲ್ ಮೇಕ್ಯಾನಿಕ್ ಹಾಗೂ ಮೇಕ್ಯಾನಿಕ ಮೋಟರ್ ವಹಿಕಲ್ ವೃತ್ತಿಯಲ್ಲಿ ಪಾಸಾಗಿರುವ ಅಭ್ಯರ್ಥಿಗಳಿಗೆ ಮಾತ್ರ ಮೌಖಿಕ ಸಂದರ್ಶನ ನಡೆಸಲಾಗುತ್ತದೆ. ಮೌಖಿಕ ಸಂದರ್ಶನಕ್ಕೆ ಹಾಜರಾಗುವ ಎಲ್ಲಾ ಅರ್ಹ ಅಭ್ಯಥಿಗಳು ಕಡ್ಡಾಯವಾಗಿ ಅವರ ಹೆಸರಿನಲ್ಲಿರುವ ಇ-ಮೇಲ್ ಐಡಿ ಹೊಂದಿರಬೇಕು.
ಎಸ್.ಎಸ್.ಎಲ್.ಸಿ., ಐಟಿಐ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಆಧಾರ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು, ಅಭ್ಯರ್ಥಿಯ ಹೆಸರಿನಲ್ಲಿರುವ ಇ-ಮೇಲ್ ವಿಳಾಸ ಹಾಗೂ ಆಧಾರ ಕಾರ್ಡ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಯ ವಿವರಗಳೊಂದಿಗೆ https://www.apprenticeshipindia.gov.in ನಲ್ಲಿ Candidate Registration ನಲ್ಲಿ ನೋಂದಣಿ ಮಾಡಬೇಕು. ನಂತರ ಕಡ್ಡಾಯವಾಗಿ ನೊಂದಣಿ ಮಾಡಿಸಿದ ಪ್ರತಿ ಮೂಲ ದಾಖಲಾತಿ ಮತ್ತು ಸ್ವಯಂ ದೃಡೀಕೃತ ಒಂದು ಸೆಟ್ ಝೆರಾಕ್ಸ್ ಪ್ರತಿಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಮೌಖಿಕ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಕಕರಸಾ ನಿಗಮ ವಿಭಾಗ-೧ರ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 08472 221596ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಕೋರಲಾಗಿದೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)