Kalburgi Crime: ಕಲಬುರಗಿಯಲ್ಲಿ ಭಾವನನ್ನೇ ಕೊಲೆ ಮಾಡಿದ್ದ ನಾದಿನಿ, ಯುವತಿ ಸೇರಿ 7 ಆರೋಪಿಗಳ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Kalburgi Crime: ಕಲಬುರಗಿಯಲ್ಲಿ ಭಾವನನ್ನೇ ಕೊಲೆ ಮಾಡಿದ್ದ ನಾದಿನಿ, ಯುವತಿ ಸೇರಿ 7 ಆರೋಪಿಗಳ ಬಂಧನ

Kalburgi Crime: ಕಲಬುರಗಿಯಲ್ಲಿ ಭಾವನನ್ನೇ ಕೊಲೆ ಮಾಡಿದ್ದ ನಾದಿನಿ, ಯುವತಿ ಸೇರಿ 7 ಆರೋಪಿಗಳ ಬಂಧನ

kalaburgi police ಭಾವನ ಕಿರುಕುಳ ತಾಳಲಾರದೇ ಪ್ರಿಯತಮನೊಂದಿಗೆ ಸೇರಿ ಕೊಲೆ ಮಾಡಿಸಿದ್ದ ಯುವತಿ ಹಾಗೂ ಇತರೆ ಆರು ಮಂದಿಯನ್ನು ಕಲಬುರಗಿ ಜಿಲ್ಲೆ ಕಮಲಾಪುರ ಪೊಲೀಸರು ಬಂಧಿಸಿದ್ಧಾರೆ.

ಕಿರುಕುಳ ತಾಳಲಾರದೇ ಭಾವನನ್ನೇ ಕೊಲ್ಲಿಸಿದ್ದ ಯುವತಿಯನ್ನು ಕಲಬುರಗಿ ಜಿಲ್ಲಾ ಪೊಲೀಸರು ಬಂಧಿಸಿದ್ಧಾರೆ.
ಕಿರುಕುಳ ತಾಳಲಾರದೇ ಭಾವನನ್ನೇ ಕೊಲ್ಲಿಸಿದ್ದ ಯುವತಿಯನ್ನು ಕಲಬುರಗಿ ಜಿಲ್ಲಾ ಪೊಲೀಸರು ಬಂಧಿಸಿದ್ಧಾರೆ.

ಕಲಬುರಗಿ: ಹೆಂಡತಿಯ ತಂಗಿಯನ್ನು ಮಂಚಕ್ಕೆ ಕರೆಯುತ್ತಿದ್ದ ಭಾವನ ಕಾಟ ತಾಳದೆ ಪ್ರಿಯಕರನೊಂದಿಗೆ ಸೇರಿ ಭಾವನನ್ನೆ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾದಿನಿ ಸೇರಿ 7 ಜನ ಆರೋಪಿಗಳನ್ನು ಬಂಧಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳು ಕಮಲಾಪುರದಿಂದ ಓಕಳಿಗೆ ಹೋಗುವ ರಸ್ತೆಯಲ್ಲಿ ನಡೆದ ಜೇವರ್ಗಿ ತಾಲೂಕಿನ ಕೂಡಿ ಗ್ರಾಮದ ಅಂಬಾರಾಯ ಅಲಿಯಾಸ್ ಅಂಬ್ರೇಶ್ ಪಟ್ಟೇದಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಮಾಡಿದ ಪ್ರಮುಖ ಆರೋಪಿ ಕೊಲೆಯಾದ ವ್ಯಕ್ತಿಯ ನಾದಿನಿ ಬೆಳಕೋಟಾ ಗ್ರಾಮದ ಅಂಬಿಕಾ ಅಲಿಯಾಸ್‌ ರಾಧಿಕಾ, ಗೋಳಾ (ಬಿ) ಗ್ರಾಮದ ರಾಜು ಬುರುಡ, ಅರುಣಕುಮಾರ ಹಡಪದ, ಸಾಹೇಬ ಪಟೇಲ್, ವೀರೇಶ್ ವಿಭೂತಿ, ಜವಳಗಾ (ಡಿ) ಗ್ರಾಮದ ವಿಶಾಲ ಜವಳಕರ, ರಾವೂರ ಗ್ರಾಮದ ಕಲ್ಮೇಶ ಸ್ವಾಮಿ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ

ಮನೆಯಲ್ಲಿ ಹೆಂಡತಿ ಇದ್ದರೂ ಅಂಬಾರಾಯ ಪಟ್ಟೇದಾರಗೆ ಹೆಂಡತಿಯ ಮದುವೆಯಾಗದ ತಂಗಿ (ನಾದಿನಿ) ಮೇಲೆ ಕಣ್ಣು ಬಿದ್ದಿತ್ತು. ತನ್ನ ಹೆಂಡತಿ ಮನೆಯಿಂದ ಹೊರಗೆ ಹೋದಾಗ ಪ್ರತಿನಿತ್ಯ ನಾದಿನಿಯನ್ನು ಮಂಚಕ್ಕೆ ಕರೆಯುತ್ತಿದ್ದ. ಆದರೆ, ಮದುವೆಗೂ ಮುಂಚೆಯೇ ಪ್ರೀತಿಯಲ್ಲಿ ಬಿದ್ದಿದ್ದ ನಾದಿನಿ, ತನ್ನ ಪ್ರಿಯತಮನೊಂದಿಗೆ ಸೇರಿ ಕಿರುಕುಳ ಕೊಡುತ್ತಿದ್ದ ಅಕ್ಕನ ಗಂಡನನ್ನೇ (ಭಾವ) ಭೀಕರವಾಗಿ ಕೊಲೆ ಮಾಡಿಸಿದ್ದಳು.

ಸ್ವತಃ ನಾದಿನಿಯೇ ತನ್ನ ಅಕ್ಕನ ಗಂಡನನ್ನೇ ಕೊಲೆ ಮಾಡಿಸಿದ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಹೊರವಲಯದಲ್ಲಿ ಕಳೆದ ಡಿಸೆಂಬರ್‌ 31 ರಂದು ನಡೆದಿತ್ತು. ಪೊಲೀಸರಿಗೆ ಮೃತದೇಹ ಪತ್ತೆಯಾಗಿತ್ತು. ನಿರ್ಜನ ಪ್ರದೇಶದಲ್ಲಿ ಮೃತ ದೇಹ ಸಿಕ್ಕಿದ್ದರಿಂದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿದು ಕೊಂಡಿದ್ದರು. ಆದರೆ, ಮೃತದೇಹ ನೋಡಿದರೆ ಅಪಘಾತಕ್ಕಿಂತ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿತ್ತು.ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿದಾಗ ಇದು ಕೊಲೆ ಎಂಬುದು ತಿಳಿದು ಬಂದಿತ್ತು.

ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಯ ಜಾಡು ಹಿಡಿದವರಿಗೆ ಆತನ ಪತ್ನಿ ಹಾಗೂ ನಾದಿನಿಯ ಮೇಲೆ ಅನುಮಾನ ವ್ಯಕ್ತವಾಗಿ ನಾದಿನಿಯನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿಸಿರುವ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ನಮ್ಮ ಭಾವ ಹೆಂಡತಿ ಇದ್ದರೂ ನನ್ನ ಮೇಲೆಕಣ್ಣು ಹಾಕಿದ್ದ. ನಿತ್ಯವೂ ಅಕ್ಕನ ಗಂಡ ಕಾಡಿಸುತ್ತಿದ್ದರೂ, ಅಕ್ಕನ ಸಂಸಾರ ಹಾಳಾಗಬಾರದು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ, ಭಾವನ ಕಿರುಕುಳ ಹೆಚ್ಚಾದಾಗ ಪ್ರಿಯಕರನ ಬಳಿ ಹೇಳಿಕೊಂಡೆ. ಆತ, ನೀವು ಅವರನ್ನು ಹೊರಗೆ ಕರೆದುಕೊಂಡು ಬಾ, ನಂತರ ಕೊಲೆ ಮಾಡೋಣ ಎಂದು ಹೇಳಿದ್ದ. ಬಳಿಕ ಎಲ್ಲರೂ ಸೇರಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಇದೀಗ ಈ ಆರೋಪಿಗಳನ್ನು ಕಮಲಾಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

19 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ

ಜಾತಿ ನಿಂದನೆ ಮಾಡಿರುವ ಆರೋಪದಡಿ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ 19 ಆರೋಪಿಗಳ ವಿರುದ್ಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನರಿಬೋಳದ ನಿವಾಸಿಗಳಾದ ಬಸವರಾಜ ಶಿವಲಿಂಗಪ್ಪಗೌಡ, ವೀರೇಶ ಶಿವಲಿಂಗಪ್ಪ ಗೌಡ ಅವರ ಕುಮ್ಮಕ್ಕಿನಿಂದ ಮಲ್ಲಿಕಾರ್ಜುನ ಅರವಿಂದ, ನಿರ್ಮಲಾ ಮಲ್ಲಿಕಾರ್ಜುನ, ಅಂಬವ್ವ ಮಲ್ಲಿಕಾರ್ಜುನ ಗೊಳೆ, ದೇವಕಿ ಸೇರಿ 19 ಆರೋಪಿಗಳ ವಿರುದ್ಧ ಮರೆಣ್ಣ ತಿಪ್ಪಣ್ಣ ತಳವಾರ ದೂರು ನೀಡಿದ್ದಾರೆ.

14 ಎಕರೆ ಜಮೀನಿನಲ್ಲಿ ಜೋಳದ ರಾಶಿ ಮಾಡುತ್ತಿದ್ದ. ಗ್ರಾಮದ ಪ್ರಭಾವಿಗಳು ಗುಂಪುಕಟ್ಟಿಕೊಂಡು ಬಂದು ಜಮೀನಿಗೆ ನುಗ್ಗಿ ಜಾತಿ ನಿಂದನೆ ಮಾಡಿದರು. ಜೀವ ಬೆದರಿಕೆ ಹಾಕಿ, ಸುಮಾರು 100 ಚೀಲ ಜೋಳದ ರಾಶಿ ಮಾಡಿಕೊಂಡು ಹೋಗಿದ್ದರು ಎಂದು ದೂರು ನೀಡಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

Whats_app_banner