Kalburgi News: ಸಾವಿನಲ್ಲೂ ಒಂದಾದ ಶಿಕ್ಷಕ ಸಹೋದರರು: ತಮ್ಮನ ನಿಧನ ಸುದ್ದಿ ತಿಳಿದು ಅಣ್ಣನೂ ಪ್ರಾಣ ಬಿಟ್ಟರು
ಕನ್ನಡ ಸುದ್ದಿ  /  ಕರ್ನಾಟಕ  /  Kalburgi News: ಸಾವಿನಲ್ಲೂ ಒಂದಾದ ಶಿಕ್ಷಕ ಸಹೋದರರು: ತಮ್ಮನ ನಿಧನ ಸುದ್ದಿ ತಿಳಿದು ಅಣ್ಣನೂ ಪ್ರಾಣ ಬಿಟ್ಟರು

Kalburgi News: ಸಾವಿನಲ್ಲೂ ಒಂದಾದ ಶಿಕ್ಷಕ ಸಹೋದರರು: ತಮ್ಮನ ನಿಧನ ಸುದ್ದಿ ತಿಳಿದು ಅಣ್ಣನೂ ಪ್ರಾಣ ಬಿಟ್ಟರು

Kalburgi News ಕಲಬುರಗಿ ಜಿಲ್ಲೆ ಅಫಜಲಪುರದಲ್ಲಿ ಶಿಕ್ಷಕ ಸಹೋದರರು ಅನಾರೋಗ್ಯ ಕಾರಣದಿಂದ ಒಂದೇ ದಿನದ ಅಂತರದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಇಡೀ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಕಲಬುರಗಿ ಜಿಲ್ಲೆಯಲ್ಲಿ ಶಿಕ್ಷಕ ಸಹೋದರರು ಒಂದು ದಿನದ ಅಂತರದಲ್ಲೇ ಮೃತಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಶಿಕ್ಷಕ ಸಹೋದರರು ಒಂದು ದಿನದ ಅಂತರದಲ್ಲೇ ಮೃತಪಟ್ಟಿದ್ದಾರೆ.

ಕಲಬುರಗಿ: ಸಹೋದರರಿಬ್ಬರೂ ಒಂದೇ ದಿನದ ಅಂತರದಲ್ಲಿ ಮೃತಪಟ್ಟಿರುವ ಘಟನೆಯಿದು. ಶಿಕ್ಷಕರಾಗಿದ್ದ ಇಬ್ಬರೂ ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ. ತಮ್ಮ ಮೊದಲು ಮೃತಪಟ್ಟರೆ, ಅವರ ಸಾವಿನ ಸುದ್ದಿ ಕೇಳಿ ಅಣ್ಣನೂ ಜೀವಬಿಟ್ಟಿದ್ದಾರೆ. ಇದು ನಡೆದಿರುವ ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದಲ್ಲಿ

ಅಫಜಲಪುರ ಪಟ್ಟಣದ ಪುರಸಭೆ ಸದಸ್ಯ ಯಮನಪ್ಪ ಭಾಸಗಿ ಪುತ್ರರಾಗಿದ್ದ ಶಿಕ್ಷಕರಾದ ರಮೇಶ ಭಾಸಗಿ (45), ರಾಜು ಭಾಸಗಿ (43) ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.

ರಮೇಶ ಭಾಸಗಿ ಅಫಜಲಪುರ ತಾಲೂಕಿನ ಬಳೂಂಡಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸಹೋದರ ರಾಜು ಭಾಸಗಿ (43) ಯಾದಗಿರಿ ಜಿಲ್ಲೆಯ ದೇವಪೂರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಇಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ತಿಂಗಳು ರಮೇಶ ಭಾಸಗಿ ಹೈದ್ರಾಬಾದ್ ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾಗಿ ಮನೆಗೆ ಬಂದಿದ್ದರು. ಬಳಿಕ ರಾಜು ಭಾಸಗಿ ಅನಾರೋಗ್ಯಕ್ಕಿಡಾದಾಗ ಹೈದ್ರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಕೊನೆಯುಸಿರೆಳೆದಿದ್ದಾರೆ.

ಇತ್ತ ಸುದ್ದಿ ತಿಳಿಯುತ್ತಲೇ ಸಹೋದರ ರಮೇಶ ಭಾಸಗಿಗೆ ಬಿಪಿ ಲೋ ಆದಾಗ ತಕ್ಷಣ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಇವರಿಗೂ ಚಿಕಿತ್ಸೆ ಫಲಕಾರಿಯಾಗದೇ ಕೆಲವೇ ಹೊತ್ತಿನಲ್ಲಿ ಮೃತ ಪಟ್ಟಿದ್ದಾರೆ. ಶಿಕ್ಷಕ ರಮೇಶ ಭಾಸಗಿಗೆ ಪತ್ನಿ, ಮೂರು ಮೂವರು ಪುತ್ರರು ಇದ್ದಾರೆ. ರಾಜು ಭಾಸಗಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ‌

ಇಬ್ಬರು ಶಿಕ್ಷಕ ಸಹೋದರರು ಮೃತಪಟ್ಟಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪಟ್ಟಣದಲ್ಲಿ ಏಕಕಾಲಕ್ಕೆ ಸಹೋದರರ ಅಂತ್ಯಕ್ರಿಯೆಯೂ ನಡೆದಿದೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)