ಕನ್ನಡ ಸುದ್ದಿ  /  ಕರ್ನಾಟಕ  /  Kalburgi Crime: ಕಲಬುರಗಿಯಲ್ಲಿ ಹಾಡ ಹಗಲೆ ಜೋಡಿ ಕೊಲೆ, ಕಾರಣ ನಿಗೂಢ

Kalburgi Crime: ಕಲಬುರಗಿಯಲ್ಲಿ ಹಾಡ ಹಗಲೆ ಜೋಡಿ ಕೊಲೆ, ಕಾರಣ ನಿಗೂಢ

Women Murder ಕಲಬುರಗಿ ಹೊರ ವಲಯದಲ್ಲಿ ಇಬ್ಬರು ಮಹಿಳೆಯರನ್ನು ಭಾನುವಾರ ಕಲ್ಲು ಎತ್ತಿ ಹಾಕಿ ಭೀಕರವಘಿ ಕೊಲೆ ಮಾಡಲಾಗಿದೆ.

ಕಲಬುರಗಿಯಲ್ಲಿ ಜೋಡಿ ಕೊಲೆ ನಡೆದಿದೆ.
ಕಲಬುರಗಿಯಲ್ಲಿ ಜೋಡಿ ಕೊಲೆ ನಡೆದಿದೆ.

ಕಲಬುರಗಿ: ಕಲಬುರಗಿ ಹೊರ ವಲಯದಲ್ಲಿ ಜೋಡಿ ಮಹಿಳೆಯರ ಕೊಲೆ ಭಾನುವಾರ ನಡೆದಿದೆ. ಕೂಲಿ ಕೆಲಸಕ್ಕೆಂದು ಹೋಗಿದ್ದ ಇಬ್ಬರು ಮಹಿಳೆಯರನ್ನು ಅಪರಿಚತರು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಯಾರು ಕೊಲೆ ಮಾಡಿದವರು, ಏಕೆ ಕೊಲೆ ಮಾಡಿದ್ದಾರೆ ಎನ್ನುವ ಕುರಿತು ಕಲಬುರಗಿ ಗ್ರಾಮಾಂತರ ಠಾಣೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಕಲಬುರಗಿ ನಗರದ ನಿವಾಸಿಗಳಾಗಿರುವ ತಾಜ್‌ ಸುಲ್ತಾನ್‌ ಪುರದ ಚಂದಮ್ಮ(53) ಹಾಗೂ ಕೆಕೆನಗರದ ಶರಣಮ್ಮ(51) ಕೊಲೆಯಾದವರು. ಇಬ್ಬರು ಕಲಬುರಗಿ ಗಂಜ್‌ ಪ್ರದೇಶದಿಂದ ಕೂಲಿ ಕೆಲಸಕ್ಕೆಂದು ಬಸ್‌ ಹಿಡಿದು ತಾವರಗೇರಾ ಕ್ರಾಸ್‌ಗೆ ತೆರಳಿದ್ದರು. ಅಲ್ಲಿಯೇ ಬೆಳಿಗ್ಗೆಯಿಂದ ಕೆಲಸ ಮಾಡುತ್ತಿದ್ದು, ಮಧ್ಯಾಹ್ನದ ಹೊತ್ತಿಗೆ ಶವವಾಗಿದ್ದಾರೆ. ಕೊಲೆಯಾಗಿರುವುದನ್ನು ಗಮನಿಸಿದ ಸ್ಥಳೀಯರು ಕಲಬುರಗಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಧಾವಿಸಿದ ಪೊಲೀಸರು ಎರಡೂ ಶವಗಳ ಮಹಜರು ನಡೆಸಿದರು. ಕಲ್ಲುಗಳನ್ನು ಎತ್ತಿ ಹಾಕಿ ಇಬ್ಬರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಬ್ಬರ ಶವಗಳನ್ನು ಗುರುತಿಸಿ ನಂತರ ಕುಟುಂಬದವರಿಗೆ ಮಾಹಿತಿ ನೀಡಿದರು.

ಟ್ರೆಂಡಿಂಗ್​ ಸುದ್ದಿ

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳವನ್ನು ಕರೆ ತರಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿದ್ದರು. ಕೊಲೆ ಪ್ರಕರಣಗಳ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಬ್ಬರು ಮಹಿಳೆಯರ ಕೊಲೆಯಾಗಿರುವ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದಾಗ ಭೀಕರವಾಗಿ ಕೊಲೆ ಮಾಡಿರುವುದು ಕಂಡು ಬಂದಿತು.ಕುಟುಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಕೊಲೆ ಮಾಡಿದವರ ವಿವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

IPL_Entry_Point

ವಿಭಾಗ