ಕನ್ನಡ ಸುದ್ದಿ  /  Karnataka  /  Kannada Rajyotsava 2022: On Kannada Rajyotsava, Top 5 Points Of A Lowdown On The History Of State Formation

Kannada Rajyotsava 2022: ರಾಜ್ಯ ರಚನೆಯ ಇತಿಹಾಸ ಅಗ್ರ 5 ವಿದ್ಯಮಾನ ಹೀಗಿದ್ದವು

Kannada Rajyotsava 2022: ಕರ್ನಾಟಕ ರಾಜ್ಯೋತ್ಸವ ನಿಮಿತ್ತವಾಗಿ, ರಾಜ್ಯ ರಚನೆಯ ಅಗ್ರ 5 ಐತಿಹಾಸಿಕ ವಿದ್ಯಮಾನಗಳ ಕಡೆಗೊಮ್ಮೆ ಇಣುಕುನೋಟ ಇಲ್ಲಿದೆ.

ರಾಜ್ಯ ರಚನೆಯ ದಿನವನ್ನು ಗುರುತಿಸಲು ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
ರಾಜ್ಯ ರಚನೆಯ ದಿನವನ್ನು ಗುರುತಿಸಲು ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. (Pinterest)

ಇಂದು ಕರ್ನಾಟಕ ರಾಜ್ಯೋತ್ಸವದ ಸಂಭ್ರಮ. ಪ್ರತಿ ವರ್ಷ ನವೆಂಬರ್‌ 1ರಂದು ರಾಜ್ಯ ರಚನೆ ಆದ ನೆನಪನ್ನು ಸಂಭ್ರಮಿಸುವ ಆಚರಣೆ ನಡೆಯುತ್ತದೆ. ಇದನ್ನು ಕರ್ನಾಟಕ ರಾಜ್ಯ ರಚನಾ ದಿನ, ಕನ್ನಡ ರಾಜ್ಯೋತ್ಸವ ಎಂದೂ ಹೇಳುತ್ತಾರೆ. ಕನ್ನಡ ರಾಜ್ಯೋತ್ಸವ ಎಂದೇ ಇದು ಜನಪ್ರಿಯವಾಗಿದೆ. ರಾಜ್ಯ ಸರ್ಕಾರ ಈ ದಿನ ರಜೆ ಘೋಷಿಸಿದ್ದು, ರಾಜ್ಯೋತ್ಸವ ಆಚರಣೆ, ಪ್ರಶಸ್ತಿ ಪ್ರದಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವುದು ವಾಡಿಕೆ.

ಕನ್ನಡ ಧ್ವಜಾರೋಹಣ, ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ ನಾಡಿನಾದ್ಯಂತ ನಡೆಯುತ್ತಿರುತ್ತದೆ. ಸರ್ಕಾರದ ಮಟ್ಟದಲ್ಲಿ, ಖಾಸಗಿ ಸಂಘ ಸಂಸ್ಥೆಗಳ ಮಟ್ಟದಲ್ಲಿ ಕೂಡ ಇದು ನಡೆಯುತ್ತದೆ.

ಈ ಐತಿಹಾಸಿಕ ದಿನ, ಇತಿಹಾಸದ ಕಡೆಗೆ ಒಂದು ಇಣುಕು ನೋಟ. ಅದು ಕೂಡ ರಾಜ್ಯ ರಚನೆಯ ಅಗ್ರ ಐದು ಅಂಶಗಳನ್ನು ಅವಲೋಕಿಸೋಣ.

  1. ಈಗಿನ ಉತ್ತರ ಕರ್ನಾಟಕದ ಜನ 1973 ರಲ್ಲಿ ಮೈಸೂರು ಎಂಬ ಹೆಸರನ್ನು ವಿರೋಧಿಸಿದಾಗ ರೂಪುಗೊಂಡದ್ದೇ ಕರ್ನಾಟಕ ಹೆಸರು. ಏಕೆಂದರೆ ಇದು ರಾಜರ ಪ್ರದೇಶ ಮತ್ತು ರಾಜ್ಯದ ಇತರ ದಕ್ಷಿಣ ಭಾಗಗಳನ್ನು ಪ್ರತಿನಿಧಿಸುತ್ತದೆ. ರಾಜ್ಯಕ್ಕೆ ʻಕರ್ನಾಟಕʼ ಎಂದು ನಾಮಕರಣ ಮಾಡಿದ ಸಂದರ್ಭದಲ್ಲಿ ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದರು.
  2. ಭಾರತವು ಗಣರಾಜ್ಯವಾದ ನಂತರ 1956 ರಲ್ಲಿ ಭಾಷಾವಾರು ಪ್ರಾಂತ್ಯ ರಚನೆ ವೇಳೆ ಮೊದಲು ರೂಪುಗೊಂಡ ಕರ್ನಾಟಕ ರಾಜ್ಯವೇ ಮೈಸೂರು. 'ಮೈಸೂರು ರಾಜ್ಯ' ಉತ್ತರ ಕರ್ನಾಟಕ, ಮಲೆನಾಡು (ಕೆನರಾ) ಮತ್ತು ಹಳೆಯ ಮೈಸೂರುಗಳನ್ನು ಒಳಗೊಂಡಿದೆ.
  3. ರಾಜರ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳನ್ನು ಒಳಗೊಂಡಿರುವ ಪ್ರದೇಶ, ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿರುವ ಪ್ರದೇಶ 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ ರಾಜ್ಯದೊಂದಿಗೆ ವಿಲೀನವಾಗಿದೆ.
  4. ಭಾಷಾವಾರು ಪ್ರಾಂತ್ಯ ರಚನೆ ಆಗುವುದಕ್ಕೆ ರಾಜ್ಯದ ಏಕೀಕರಣ ಚಳವಳಿಯಲ್ಲಿ ಅನೇಕರು ದೊಡ್ಡ ಪಾತ್ರ ನಿಭಾಯಿಸಿದ್ದರು. ಪತ್ರಕರ್ತ, ಲೇಖಕ, ಇತಿಹಾಸಕಾರ ಆಲೂರು ವೆಂಕಟರಾವ್‌ ಅವರು ಈ ಪೈಕಿ ಅಗ್ರಗಣ್ಯರು.
  5. ಕೆ.ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಅ.ನ.ಕೃಷ್ಣರಾವ್‌, ಬಿ.ಎಂ.ಶ್ರೀಕಂಠಯ್ಯ ಮತ್ತು ಇತರೆ ಕೆಲವರು ಏಕೀಕರಣ ಚಳವಳಿಯಲ್ಲಿ ಭಾಗಿಯಾದ ಪ್ರಮುಖರು.

ನನ್ನ ನಾಡು ನನ್ನ ಹೆಮ್ಮೆ - ಇದು ಕರುನಾಡ ಮಾಹಿತಿ ಮನೆ

HT Kannada Infographic: ಕರುನಾಡು ನಮ್ಮೆಲ್ಲರ ಹೆಮ್ಮೆಯ ಬೀಡು. ನಮ್ಮ ನಾಡಿನ ಬಗ್ಗೆ ಹೆಮ್ಮೆ ಪಡುವ ಅನೇಕ ವಿಚಾರಗಳಿವೆ. ನವೆಂಬರ್‌ ತಿಂಗಳು ಪೂರ್ತಿ ಈ ಪೋಸ್ಟ್‌ ನಿತ್ಯ ಅಪ್ಡೇಟ್‌ ಆಗಲಿದೆ. ನನ್ನ ನಾಡು - ನನ್ನ ಹೆಮ್ಮೆ ಸರಣಿಯಲ್ಲಿ ಸಂಗ್ರಹ ಯೋಗ್ಯ ವಿಚಾರಗಳಿರಲಿವೆ. ಡೌನ್‌ಲೋಡ್‌ ಮಾಡಿ ಪ್ರೀತಿಪಾತ್ರರ ಜತೆಗೆ ಹಂಚಿಕೊಳ್ಳಬಹುದು.

ಅಪ್ಪುಗೆ ‘ಕರ್ನಾಟಕ ರತ್ನ’; ಈ ಹಿಂದಿನ 9 ಮಹನೀಯರು ಯಾರು?

‘ಕರ್ನಾಟಕ ರತ್ನ’ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1992ರಲ್ಲಿ ಪ್ರಾರಂಭಿಸಲಾಯಿತು. ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನೀಡಲು ನಿರ್ದೇಶಿಸಲಾಗಿದೆ. ಹಾಗಾದರೆ ಇಲ್ಲಿಯವರೆಗೂ ಯಾವೆಲ್ಲ ಮಹನೀಯರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಲ್ಲಿದೆ ನೋಡಿ ಫೋಟೋ ಸಹಿತ ವಿವರ..