ಕನ್ನಡ ಸುದ್ದಿ  /  Karnataka  /  Kannada Sahitya Sammelana 2023: Restricted Holiday For Govt Employees Who Want Participate In Haveri Kannada Sahitya Sammelana With Some Conditions

Kannada Sahitya Sammelana 2023: ಸರ್ಕಾರಿ ನೌಕರರ ಗಮನಕ್ಕೆ; ಸಮ್ಮೇಳನಕ್ಕೆ ಹೋಗಲು 100 ನೌಕರರಿಗೆ ರಜೆ; ಅವರಲ್ಲಿ ನೀವೂ ಒಬ್ಬರಾಗಬೇಕೆ?

Kannada Sahitya Sammelana 2023: ಏಲಕ್ಕಿ ನಾಡು ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯಕ್ಕೆ ಸಜ್ಜಾಗಿದೆ. ನೀವು ಸರ್ಕಾರಿ ನೌಕರರಾಗಿದ್ದು, ಸ್ಮರಣೀಯ ಸಮ್ಮೇಳನದಲ್ಲಿ ಭಾಗವಹಿಸುವ ಚಿಂತನೆಯಲ್ಲಿದ್ದೀರಾ? ರಜೆ ತಗೊಳ್ಳುವುದು ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡಿದೆಯೇ? ಹಾಗಿದ್ದರೆ ಈ ವರದಿ ನಿಮಗಾಗಿ.

ವಿಧಾನಸೌಧ (ಸಾಂಕೇತಿಕ ಚಿತ್ರ)
ವಿಧಾನಸೌಧ (ಸಾಂಕೇತಿಕ ಚಿತ್ರ)

ಬೆಂಗಳೂರು: ಏಲಕ್ಕಿ ನಾಡು ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯಕ್ಕೆ ಸಜ್ಜಾಗಿದೆ. ಜನವರಿ 6 ರಿಂದ 8 ರ ತನಕ ಸಮ್ಮೇಳನ ನಡೆಯಲಿದೆ. ನೀವು ಸರ್ಕಾರಿ ನೌಕರರಾಗಿದ್ದು, ಸ್ಮರಣೀಯ ಸಮ್ಮೇಳನದಲ್ಲಿ ಭಾಗವಹಿಸುವ ಚಿಂತನೆಯಲ್ಲಿದ್ದೀರಾ? ರಜೆ ತಗೊಳ್ಳುವುದು ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡಿದೆಯೇ? ಹಾಗಿದ್ದರೆ ಸರ್ಕಾರ ವಿಶೇಷ ಅವಕಾಶವನ್ನು ನೀಡಿದೆ.

ಈ ಸಲದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಷರತ್ತುಬದ್ಧ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆದರೆ, ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರು ಕೆಲವು ಷರತ್ತುಗಳನ್ನು ಪಾಲಿಸಲೇಬೇಕು. ಈ ವಿಚಾರವಾಗಿ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಸಂಖ್ಯೆ 100ಕ್ಕೆ ಮೀರಬಾರದು. ಇವರಿಗಷ್ಟೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಸಿಗಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕಾರ್ಯದರ್ಶಿಗಳ ಪತ್ರದ ಅನ್ವಯ ಪ್ರತಿ ವರ್ಷವೂ ಈ ರಜೆ ಸಿಗಲಿದೆ. ಇದು ಪ್ರತಿ ಸಮ್ಮೇಳನದ ವಾಡಿಕೆ.

ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಪಡೆಯಲು ಷರತ್ತುಗಳೇನು?

ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸರ್ಕಾರ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಇದರಂತೆ -

  • ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ನೌಕರರು ಅವರ ಆಸಕ್ತಿಯ ಒಂದು ಅಥವಾ ಎರಡು ದಿನಗಳ ಅವಧಿಗೆ ರಜೆ ಪಡೆಯಬಹುದು. ಈ ರಜೆಯು ಹೋಗಿಬರುವ ಪ್ರಯಾಣಕ್ಕೆ ಬೇಕಾಗುವ ಅವಧಿಯನ್ನೂ ಒಳಗೊಂಡಿರಬೇಕು.
  • ಕನ್ನಡ ಸಾಹಿತ್ಯದ ಜ್ಞಾನ ಮತ್ತು ಅಭಿರುಚಿ ಇದ್ದು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಮಂತ್ರಿಸಲ್ಪಟ್ಟ ಸರ್ಕಾರಿ ನೌಕರರು ಈ ರಜೆಯ ಸೌಲಭ್ಯ ಪಡೆಯಬಹುದು.
  • ಕನ್ನಡ ಸಾಹಿತ್ಯದ ಅಭಿರುಚಿಯುಳ್ಳ ನೌಕರರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದರೆ ಅವರಿಗೂ ಈ ಸೌಲಭ್ಯ ಸಿಗಲಿದೆ.
  • ಯಾವುದೇ ವಿಶೇಷ ಗುರುತರ ಸರ್ಕಾರಿ ಕೆಲಸದ ಮೇಲೆ ನೇಮಿಸಲ್ಪಟ್ಟ ನೌಕರರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅನುಮತಿ ಸಿಗಲ್ಲ.
  • ಈ ಸಮ್ಮೇಳನ ಮುಗಿದ ಮೇಲೆ ಸಮ್ಮೇಳನದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರಿಗೆ ಸಾಹಿತ್ಯ ಪರಿಷತ್ತಿನವರು ಅಧಿಕೃತ ಹಾಜರಿಪತ್ರ ಕೊಡಬೇಕು. ಈ ಆಧಾರದ ಮೇಲೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರಾಗಲಿದೆ.
  • ಈ ರಜೆ ಪಡೆಯಲಿಚ್ಛಿಸುವ ನೌಕರರು ರಜೆ ಮಂಜೂರು ಮಾಡುವ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.

Kannada Sahitya Sammelana 2023: ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ಕನ್ನಡ ಹಬ್ಬಕ್ಕೆ ಕ್ಷಣಗಣನೆ; ಕಾರ್ಯಕ್ರಮದ ಸ್ವರೂಪ ಹೀಗಿರಲಿದೆ ನೋಡಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಹಾವೇರಿ-ಹುಬ್ಬಳ್ಳಿ ರಸ್ತೆಯ ಶ್ರೀ ಅಜ್ಜಯ್ಯ ದೇವಸ್ಥಾನದ ಎದುರು ಈಗಾಗಲೇ ವೇದಿಕೆ ಸಿದ್ಧವಾಗಿದ್ದು, ಅಲಂಕಾರಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಗಮನಾರ್ಹ ಸುದ್ದಿಗಳು

Covid 19 Karnataka guidelines: ಆಟ ಆಡುವಾಗ ಮಕ್ಕಳು ಮಾಸ್ಕ್‌ ಧರಿಸಬೇಕಾಗಿಲ್ಲ; ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸ್ಪಷ್ಟೀಕರಣ

Covid 19 Karnataka Guidelines: ಶಾಲಾ ತರಗತಿ ಮತ್ತು ಒಳಾಂಗಣದಲ್ಲಿ ಮಕ್ಕಳು ಮಾಸ್ಕ್‌ ಧರಿಸಬೇಕು ಎಂದು ಖಾಸಗಿ ಶಾಲೆಗಳು ಪಾಲಕರಿಗೆ ಸೂಚನೆ ಕಳುಹಿಸಿವೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಮೇರೆಗೆ ಈ ಸೂಚನೆ ರವಾನೆ ಆಗಿದೆ. ಆದರೆ, ಆಟ ಆಡುವಾಗ ಮಕ್ಕಳು ಮಾಸ್ಕ್‌ ಧರಿಸಬೇಕಾಗಿಲ್ಲ ಎಂದು ಅಧಿಕಾರಿಗಳು ಈಗ ಸ್ಪಷ್ಟೀಕರಣ ನೀಡಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point