ದ್ವಿತೀಯ ಪಿಯುಸಿ ಪರೀಕ್ಷೆ 1ರಲ್ಲಿ ಅಂಕ ಕಡಿಮೆ ಬಂತಾ, ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಏಪ್ರಿಲ್ 13 ರ ಒಳಗೆ ಅರ್ಜಿ ಸಲ್ಲಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  ದ್ವಿತೀಯ ಪಿಯುಸಿ ಪರೀಕ್ಷೆ 1ರಲ್ಲಿ ಅಂಕ ಕಡಿಮೆ ಬಂತಾ, ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಏಪ್ರಿಲ್ 13 ರ ಒಳಗೆ ಅರ್ಜಿ ಸಲ್ಲಿಸಿ

ದ್ವಿತೀಯ ಪಿಯುಸಿ ಪರೀಕ್ಷೆ 1ರಲ್ಲಿ ಅಂಕ ಕಡಿಮೆ ಬಂತಾ, ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಏಪ್ರಿಲ್ 13 ರ ಒಳಗೆ ಅರ್ಜಿ ಸಲ್ಲಿಸಿ

ದ್ವಿತೀಯ ಪಿಯುಸಿ ಪರೀಕ್ಷೆ 1ರಲ್ಲಿ ಕಡಿಮೆ ಅಂಕ ಬಂತಲ್ಲ ಎಂದು ಚಿಂತೆ ಮಾಡ್ತಾ ಕೂರಬೇಡಿ. ಏಪ್ರಿಲ್ 13ರ ಒಳಗೆ ಉತ್ತರ ಪ್ರತಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಿ. ಅದು ಹೇಗೆ ಎಂಬ ವಿವರ ಇಲ್ಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆ 1ರಲ್ಲಿ ಅಂಕ ಕಡಿಮೆ ಬಂತಾ, ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಏಪ್ರಿಲ್ 13 ರ ಒಳಗೆ ಅರ್ಜಿ ಸಲ್ಲಿಸಿ
ದ್ವಿತೀಯ ಪಿಯುಸಿ ಪರೀಕ್ಷೆ 1ರಲ್ಲಿ ಅಂಕ ಕಡಿಮೆ ಬಂತಾ, ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಏಪ್ರಿಲ್ 13 ರ ಒಳಗೆ ಅರ್ಜಿ ಸಲ್ಲಿಸಿ

ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ನಿನ್ನೆ (ಏಪ್ರಿಲ್ 8) ಬಂದಿದೆ. ಅನೇಕರು ತಮಗೆ ಕಡಿಮೆ ಅಂಕ ಬಂತಲ್ಲ ಅಂತ ಚಿಂತೆಗೀಡಾಗಿರಬಹುದು. ಹಾಗೆ ಚಿಂತೆ ಮಾಡ್ತಾ ಕೂರೋದು ಬೇಕಾಗಿಲ್ಲ. ಈ ರೀತಿ ಭಾವನೆ ಇರುವಂಥವರು ತಮ್ಮ ಉತ್ತರ ಪ್ರತಿಕೆಗಳ ಸ್ಕ್ಯಾನ್ಡ್‌ ಪ್ರತಿ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಪರೀಕ್ಷಾ ಪ್ರಾಧಿಕಾರ ಏಪ್ರಿಲ್ 13ರ ತನಕ ಕಾಲಾವಕಾಶ ನೀಡಿದೆ. ಇದಕ್ಕಾಗಿ ಕೆಲವೊಂದು ವಿಶೇಷ ಸೂಚನೆಯನ್ನೂ ಅದು ನೀಡಿದ್ದು, ಅದನ್ನೂ ವಿದ್ಯಾರ್ಥಿಗಳು ಗಮನಿಸವುದು ಉತ್ತಮ.

ದ್ವಿತೀಯ ಪಿಯುಸಿ ಪರೀಕ್ಷೆ 1ರ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಯಾಕೆ ಪಡೆಯಬೇಕು

1) ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗಳಿಗೆ ಅರ್ಜಿ ಸಲ್ಲಿಸಿ ಸ್ಕ್ಯಾನ್ ಪ್ರತಿ ಪಡೆದ ವಿಷಯಗಳಿಗೆ ಮಾತ್ರ ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

2) ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿರುವ ವಿಷಯಗಳಿಗೆ ಪ್ರತ್ಯೇಕವಾಗಿ ಮರುಎಣಿಕೆಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

3) ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು, ಹೊರತುಪಡಿಸಿ ಇನ್ನಾವುದೇ ವಿಧಾನಗಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

4) ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸುವುದಕ್ಕೆ ಪ್ರತಿ ವಿಷಯಕ್ಕೆ 530 ರೂಪಾಯಿ ಪಾವತಿಸಬೇಕು.

5) ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಗೆ ಅರ್ಜಿ ಸಲ್ಲಿಸುವುದಕ್ಕೆ ಏಪ್ರಿಲ್ 13 ಕೊನೇ ದಿನ. ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 12 ರಿಂದ 16ರ ತನಕ ಅವಕಾಶ.

ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ

1) ಪರೀಕ್ಷಾ ಮಂಡಲಿಯ ಅಧಿಕೃತ ವೆಬ್‌ಸೈಟ್ https://kseab.karnataka.gov.in ರ ಮುಖಪುಟದಲ್ಲಿ “Application for Photo copy, Re-valuation/Re-totaling” ಎಂಬ ಸಾಲು ಕಾಣಿಸುತ್ತದೆ.

2) ಆ ಸಾಲನ್ನು ಕ್ಲಿಕ್ ಮಾಡಿದರೆ Calender of Events ಪುಟ ತೆರೆಯುತ್ತದೆ. ಇದರಲ್ಲಿ "How to Apply ಅನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳುವುದು.

3) 2025 ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ನೋಂದಣಿ ಸಂಖ್ಯೆ (Register Number) ಯನ್ನು ಪ್ರವೇಶ ಪತ್ರದಲ್ಲಿರುವಂತೆ ನಮೂದಿಸಬೇಕು. ತಕ್ಷಣವೇ ವಿದ್ಯಾರ್ಥಿಗಳ ಮಾಹಿತಿ display ಆಗುತ್ತದೆ.

4) Photo copy ಪಡೆಯಲು ಇಚ್ಚಿಸಿದ ವಿಷಯ/ ವಿಷಯಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಯ/ಪೋಷಕರ ನಿಖರವಾದ ಮೊಬೈಲ್ ಸಂಖ್ಯೆ, ತಮ್ಮ ಖಾಸಗಿ ಇಮೇಲ್ ಐಡಿ ಹಾಗೂ ಸ್ವ-ವಿಳಾಸವನ್ನು ಮಾತ್ರ ನಮೂದಿಸಬೇಕು. ನಂತರ Submit ಬಟನ್ ಕ್ಲಿಕ್ ಮಾಡಿದ ಕೂಡಲೇ ಚಲನ್ ಸಂಖ್ಯೆಯು Auto-Generate ಆಗುತ್ತದೆ.

5) “Make payment” ಬಟನ್ ಕ್ಲಿಕ್ ಮಾಡಿದ ನಂತರ "Cash payment" ಅಥವಾ "Online payment” ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.

ಇಲ್ಲಿ, “Cash payment' ಆಯ್ಕೆ ಮಾಡಿಕೊಂಡರೆ, UNION BANK OF INDIA, BANGALORE-ONE, KARNATAKA-ONE, GRAMA-ONE ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ' Generate challan' ಬಟನ್ ಕ್ಲಿಕ್ ಮಾಡಬೇಕು. ಚಲನ್‌ನಲ್ಲಿ ತಾವು ದಾಖಲಿಸಿದ ಮಾಹಿತಿ display ಆಗುತ್ತದೆ. ನಂತರ ಚಲನ್ ಪ್ರಿಂಟ್ ತೆಗೆದುಕೊಳ್ಳುವುದು. ಆಯ್ಕೆ ಮಾಡಿದ ಚಲನ್ ಪ್ರಿಂಟ್ ತೆಗೆದುಕೊಂಡು, ನಂತರ ಚಲನ್ ಮುಖಾಂತರ ಹಣವನ್ನು ಮಂಡಲಿಯು ನಿಗದಿಪಡಿಸಿದ ದಿನಾಂಕದೊಳಗೆ ಸಂದಾಯ ಮಾಡುವುದು. ಮಂಡಲಿಯು ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಸಂದಾಯ ಮಾಡಲಾಗುವ ಚಲನ್/ಆನ್‌ಲೈನ್ ಪಾವತಿಗಳನ್ನು ಕಡ್ಡಾಯವಾಗಿ ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿ ಹೇಳಿದೆ.

• Cash payment ಮುಖಾಂತರ ಹಣ ಸಂದಾಯ ಮಾಡಿದ 5 ಗಂಟೆಗಳ ಒಳಗೆ ತಾವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಬರುತ್ತದೆ. ಬಾರದಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್‌ನ್ನು ಸಂಪರ್ಕಿಸಬೇಕು.

ಇನ್ನು, “Online payment" ಆಯ್ಕೆ ಮಾಡಿಕೊಂಡರೆ: ಆಗ Karnataka-one ಬಟನ್ ಕ್ಲಿಕ್ ಮಾಡಬೇಕು. ನೀವು ದಾಖಲಿಸಿದ ಮಾಹಿತಿ display ಆಗುತ್ತದೆ. "pay now" ಬಟನ್ ಕ್ಲಿಕ್ ಮಾಡುವುದು. Karnataka-one ಪುಟದಲ್ಲಿ Continue for payment ಆಯ್ಕೆ ಮಾಡುವುದು. ಇದರಲ್ಲಿ “Terms and conditions" ಕಡ್ಡಾಯವಾಗಿ ಓದಿ "check box" ಅನ್ನು ಕ್ಲಿಕ್ ಮಾಡುವುದು, continue for payment ಆಯ್ಕೆ ಮಾಡುವುದು. ನಂತರ "pay now" ಕ್ಲಿಕ್ ಮಾಡುವುದು.

ಆಗ ಆ ಪ್ರಕ್ರಿಯೆ ಪೂರ್ಣವಾಗುವ ತನಕ "Back button"/"Close button" ಅಥವಾ "Refresh button"ಗಳನ್ನು ಒತ್ತಬೇಡಿ. "Online payment' ಮುಖಾಂತರ ಹಣ ಸಂದಾಯ ಆದ ನಂತರ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಬರುತ್ತದೆ. SMS ಸಂದೇಶ ಬಾರದಿದ್ದಲ್ಲಿ ಹಣ ಸಂದಾಯಿಸಿದ Karnataka-one ಅನ್ನು ಕೂಡಲೇ ಸಂಪರ್ಕಿಸಿ.

6) Photo copy ಗೆ Apply ಮಾಡಿದ ನಂತರ Challan Generate ಆಗುತ್ತದೆ. ವಿದ್ಯಾರ್ಥಿಯು ಅದೇ ಚಲನ್ ಸಂಖ್ಯೆಯನ್ನು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಉಪಯೋಗಿಸುವಂತಿಲ್ಲ. ಮರುಮೌಲ್ಯಮಾಪನಕ್ಕೆ ಪ್ರತ್ಯೇಕ Challan Generate ಮಾಡಿಕೊಳ್ಳಬೇಕು.

7) Photo copy ಗೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು/ ಪೋಷಕರು ಅವರ ಚಾಲ್ತಿಯಲ್ಲಿರುವ ಮೊಬೈಲ್ ಮೊಬೈಲ್ ಸಂಖ್ಯೆಯನ್ನು ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು, ಮಂಡಲಿಯು ಆದೇ ಮೊಬೈಲ್ ಸಂಖ್ಯೆಗೆ OTP (One Time Password) ಕಳುಹಿಸುತ್ತದೆ. ಇದಲ್ಲದೆ ಸದರಿ ಮೊಬೈಲ್ ಸಂಖ್ಯೆಯು ಈ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಚಾಲ್ತಿಯಲ್ಲಿರಬೇಕು.

8) ವಿದ್ಯಾರ್ಥಿಯ ಪ್ರತಿ ಮತ್ತು ಬ್ಯಾಂಕ್ ಪ್ರತಿಯನ್ನೊಳಗೊಂಡ ಎರಡು ಭಾಗಗಳಿರುವ ಚಲನ್ ಡೌನ್‌ಲೋಡ್ ಮಾಡಿಕೊಂಡು ನಿಗದಿಪಡಿಸಿರುವ ಶುಲ್ಕವನ್ನು ಆಯ್ಕೆ ಮಾಡಿಕೊಂಡಿರುವ ಬ್ಯಾಂಕ್ ಮುಖಾಂತರ ಪಾವತಿ ಮಾಡಿದ ನಂತರ Challan ಸಂಖ್ಯೆಯನ್ನು ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೂ ಬಳಸಿಕೊಳ್ಳಬೇಕಾಗಿರುವುದರಿಂದ ಅಭ್ಯರ್ಥಿಗಳು ಈ ಸಂಖ್ಯೆಯನ್ನು ಕಾಯ್ದಿರಿಸಿಕೊಳ್ಳಬೇಕು.

9) Scanned ಉತ್ತರ ಪತ್ರಿಕೆಯನ್ನು ಮಂಡಲಿ ವೆಬ್‌ಸೈಟ್‌ನಲ್ಲಿ UPLOAD ಮಾಡಿದ ಕೂಡಲೇ ವಿದ್ಯಾರ್ಥಿಯು ನೀಡಿರುವ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ.

10) UPLOAD ಮಾಡಲಾದ scanned ಉತ್ತರ ಪತ್ರಿಕೆಗಳನ್ನು ಮಂಡಲಿಯ ಜಾಲತಾಣದಲ್ಲಿ ನೀಡಲಾಗಿರುವ ಲಿಂಕ್ ಮುಖಾಂತರವೇ ಡೌನ್‌ಲೋಡ್ ಮಾಡಿಕೊಳ್ಳುವುದು.

11) ಸಂದೇಶ ಸ್ವೀಕರಿಸಿದ ವಿದ್ಯಾರ್ಥಿಗಳು ಈ ಮೊದಲೇ ನೀಡಲಾದ ಚಲನ್ ಸಂಖ್ಯೆಯನ್ನು ಬಳಸಿ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಯನ್ನು ಏಪ್ರಿಲ್ 12 ರಿಂದ ಏಪ್ರಿಲ್ 16ರ ಒಳಗೆ ಡೌನ್‌ಲೋಡ್ ಮಾಡಬೇಕು.

12) Photo copy ಯನ್ನು Download ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು:- scanned copy ಗಾಗಿ ಶುಲ್ಕ ಪಾವತಿಸಿರುವ ಚಲನ್ ಸಂಖ್ಯೆಯನ್ನು Enter ಮಾಡಿ Submit ಮಾಡುವುದು. Submit ಮಾಡಿದ ನಂತರ ನೀವು scanned copy ಗೆ Apply ಮಾಡುವಾಗ ನೀಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ನಂತರ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ಶುಲ್ಕ ಪಾವತಿಸಿರುವ ವಿಷಯಗಳು Display ಆಗುತ್ತವೆ. ತಾವು ಇಚ್ಛಿಸಿದ ಭಾಷೆ/ವಿಷಯವನ್ನು (Subject) ಆಯ್ಕೆ ಮಾಡಿಕೊಳ್ಳಬೇಕು. Scanned copy ಯನ್ನು Download ಮಾಡಿಕೊಳ್ಳಬೇಕು. Scanned copy ಗೆ Apply ಮಾಡುವಾಗ ನಮೂದಿಸಿದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಮಾತ್ರ ಉಪಯೋಗಿಸತಕ್ಕದ್ದು.

ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮರುಮೌಲ್ಯಮಾಪನದ ಫಲಿತಾಂಶಕ್ಕೆ ಕಾಯದೆ ಅವಶ್ಯಕತೆಯಿದ್ದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನಿಗದಿತ ದಿನಾಂಕದೊಳಗಾಗಿ ನೊಂದಾಯಿಸಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner