Karnataka Reservoirs: ಕರ್ನಾಟಕದ ಈ 9 ಜಲಾಶಯಗಳಲ್ಲಿ ಈಗಲೂ ನೀರಿನ ಸಂಗ್ರಹ ಪ್ರಮಾಣ ಶೇ. 50ಕ್ಕಿಂತ ಅಧಿಕ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕರ್ನಾಟಕದ ಈ 9 ಜಲಾಶಯಗಳಲ್ಲಿ ಈಗಲೂ ನೀರಿನ ಸಂಗ್ರಹ ಪ್ರಮಾಣ ಶೇ. 50ಕ್ಕಿಂತ ಅಧಿಕ

Karnataka Reservoirs: ಕರ್ನಾಟಕದ ಈ 9 ಜಲಾಶಯಗಳಲ್ಲಿ ಈಗಲೂ ನೀರಿನ ಸಂಗ್ರಹ ಪ್ರಮಾಣ ಶೇ. 50ಕ್ಕಿಂತ ಅಧಿಕ

Karnataka Reservoirs: ಕರ್ನಾಟಕದಲ್ಲಿ ಬೇಸಿಗೆ ಪ್ರಮಾಣ ಹೆಚ್ಚುತ್ತಿದ್ದರೂ ಕೆಲವು ಜಲಾಶಯಗಳಲ್ಲಿ ನೀರಿನ ಸಂಗ್ರಹ ಈಗಲೂ ಚೆನ್ನಾಗಿದೆ. ಇದರ ವಿವರ ಇಲ್ಲಿದೆ

ಕರ್ನಾಟಕದಲ್ಲಿ ಕೆಆರ್‌ಎಸ್‌ ಸಹಿತ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಈಗಲೂ ಚೆನ್ನಾಗಿದೆ.
ಕರ್ನಾಟಕದಲ್ಲಿ ಕೆಆರ್‌ಎಸ್‌ ಸಹಿತ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಈಗಲೂ ಚೆನ್ನಾಗಿದೆ.

Karnataka Reservoirs: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಪ್ರಮಾಣ ಏರಿಕೆಯಾಗುತ್ತಿರುವ ಕುಡಿಯುವ ನೀರಿನ ಬೇಡಿಕೆ ಹೆಚ್ಚಿದೆ. ಬೇಸಿಗೆ ಬೆಳೆಗೆ ಕೆಲವು ಭಾಗಗಳಲ್ಲಿ ನೀರು ಹರಿಸುವ ಚಟುವಟಿಕೆಯೂ ನಡೆದಿದೆ. ಇದರ ನಡುವೆಯು ಕರ್ನಾಟಕದ ಪ್ರಮುಖ ಹತ್ತು ಜಲಾಶಯಗಳಲ್ಲಿ ಈಗಲೂ ನೀರಿನ ಮಟ್ಟ ಶೇ. 50ಕ್ಕೂ ಹೆಚ್ಚೇ ಇದೆ. ನೀರಿನ ಸಂಗ್ರಹ ಚೆನ್ನಾಗಿ ಇರುವುದರಿಂದ ನೀರಿನ ಸಮರ್ಪಕ ನಿರ್ವಹಣೆಯನ್ನು ಬೇಸಿಗೆ ಮುಗಿಯುವವರೆಗೂ ಮಾಡುವ ವಿಶ್ವಾಸವನ್ನು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹೊಂದಿದ್ದಾರೆ. ಚಿತ್ರದುರ್ಗ ಜಿಲ್ಲೆ ವಾಣಿವಿಲಾಸ ಸಾಗರ, ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ, ಮೈಸೂರು ಜಿಲ್ಲೆಯ ಕಬಿನಿ, ಚಿಕ್ಕಮಗಳೂರು ಜಿಲ್ಲೆಯ ಭದ್ರಾ, ಬೆಳಗಾವಿ ಜಿಲ್ಲೆಯ ಘಟಪ್ರಭಾ ಜಲಾಶಯದಲ್ಲಿ ನೀರಿನ ಸಂಗ್ರಹ ಚೆನ್ನಾಗಿಯೇ ಇದೆ.

ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದಲ್ಲಿ ಗರಿಷ್ಠ 49.45 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ 33.01 ಟಿಎಂಸಿ ನೀರು ಸಂಗ್ರಹವಿದೆ. ಶೇ. 67ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ. ಕಳೆದ ವರ್ಷ ಇದೇ ವೇಳೆ 14.90 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು. ಜಲಾಶಯದಲ್ಲಿ111.26 ಅಡಿ ನೀರು ಸದ್ಯ ಸಂಗ್ರಹವಿದೆ. ಒಳಹರಿವಿನ ಪ್ರಮಾಣ 120ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ 2615 ಕ್ಯೂಸೆಕ್‌ ಇದೆ.

ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯದಲ್ಲಿ ಗರಿಷ್ಠ30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ 28.57 ಟಿಎಂಸಿ ನೀರು ಸಂಗ್ರಹವಿದೆ. ಶೇ. 94 ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ. ಕಳೆದ ವರ್ಷ ಇದೇ ವೇಳೆ 19.18 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು. ಜಲಾಶಯದಲ್ಲಿ 2137.80 ಅಡಿ ನೀರು ಸದ್ಯ ಸಂಗ್ರಹವಿದೆ. ಒಳಹರಿವಿನ ಪ್ರಮಾಣ 0 ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ 705 ಕ್ಯೂಸೆಕ್‌ ಇದೆ.

ಬೆಳಗಾವಿ ಜಿಲ್ಲೆಯ ಘಟಪ್ರಭಾ ಜಲಾಶಯದಲ್ಲಿ ಗರಿಷ್ಠ 51 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ 26.03 ಟಿಎಂಸಿ ನೀರು ಸಂಗ್ರಹವಿದೆ. ಶೇ. 51 ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ. ಕಳೆದ ವರ್ಷ ಇದೇ ವೇಳೆ 26.03 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು. ಜಲಾಶಯದಲ್ಲಿ 2138.16 ಅಡಿ ನೀರು ಸದ್ಯ ಸಂಗ್ರಹವಿದೆ. ಒಳಹರಿವಿನ ಪ್ರಮಾಣ 0 ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ 99 ಕ್ಯೂಸೆಕ್‌ ಇದೆ.

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ಗರಿಷ್ಠ37.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ 20.35 ಟಿಎಂಸಿ ನೀರು ಸಂಗ್ರಹವಿದೆ. ಶೇ.55 ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ. ಕಳೆದ ವರ್ಷ ಇದೇ ವೇಳೆ 12.99 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು. ಜಲಾಶಯದಲ್ಲಿ 2901 ಅಡಿ ನೀರು ಸದ್ಯ ಸಂಗ್ರಹವಿದೆ. ಒಳಹರಿವಿನ ಪ್ರಮಾಣ 62 ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ 450 ಕ್ಯೂಸೆಕ್‌ ಇದೆ.

ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯದಲ್ಲಿ ಗರಿಷ್ಠ 33.31 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ 25.46 ಟಿಎಂಸಿ ನೀರು ಸಂಗ್ರಹವಿದೆ. ಶೇ.76 ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ. ಕಳೆದ ವರ್ಷ ಇದೇ ವೇಳೆ 20.06 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು. ಜಲಾಶಯದಲ್ಲಿ 1608.87 ಅಡಿ ನೀರು ಸದ್ಯ ಸಂಗ್ರಹವಿದೆ. ಒಳಹರಿವಿನ ಪ್ರಮಾಣ 266 ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ 266 ಕ್ಯೂಸೆಕ್‌ ಇದೆ.

ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯದಲ್ಲಿ ಗರಿಷ್ಠ 71.54 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ 48.17 ಟಿಎಂಸಿ ನೀರು ಸಂಗ್ರಹವಿದೆ. ಶೇ. 67 ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ. ಕಳೆದ ವರ್ಷ ಇದೇ ವೇಳೆ 24.90 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು. ಜಲಾಶಯದಲ್ಲಿ 2137.12 ಅಡಿ ನೀರು ಸದ್ಯ ಸಂಗ್ರಹವಿದೆ. ಒಳಹರಿವಿನ ಪ್ರಮಾಣ 51ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ 3685 ಕ್ಯೂಸೆಕ್‌ ಇದೆ.

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ಗರಿಷ್ಠ 19.52 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ12. 81 ಟಿಎಂಸಿ ನೀರು ಸಂಗ್ರಹವಿದೆ. ಶೇ. 66 ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ. ಕಳೆದ ವರ್ಷ ಇದೇ ವೇಳೆ 10.67 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು. ಜಲಾಶಯದಲ್ಲಿ2272.24 ಅಡಿ ನೀರು ಸದ್ಯ ಸಂಗ್ರಹವಿದೆ. ಒಳಹರಿವಿನ ಪ್ರಮಾಣ 59 ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ 2000 ಕ್ಯೂಸೆಕ್‌ ಇದೆ.

ಉಡುಪಿ ಜಿಲ್ಲೆಯ ವರಾಹಿ ಜಲಾಶಯದಲ್ಲಿ ಗರಿಷ್ಠ 31.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ 15.65 ಟಿಎಂಸಿ ನೀರು ಸಂಗ್ರಹವಿದೆ. ಶೇ.50 ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ. ಕಳೆದ ವರ್ಷ ಇದೇ ವೇಳೆ 7.17 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು. ಜಲಾಶಯದಲ್ಲಿ 1919.16 ಅಡಿ ನೀರು ಸದ್ಯ ಸಂಗ್ರಹವಿದೆ. ಒಳಹರಿವಿನ ಪ್ರಮಾಣ 0 ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ 1536 ಕ್ಯೂಸೆಕ್‌ ಇದೆ.

ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯದಲ್ಲಿ ಗರಿಷ್ಠ 145.33 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ 78.51 ಟಿಎಂಸಿ ನೀರು ಸಂಗ್ರಹವಿದೆ. ಶೇ.54 ರಷ್ಟು ನೀರು ಜಲಾಶಯದಲ್ಲಿ ಲಭ್ಯವಿದೆ. ಕಳೆದ ವರ್ಷ ಇದೇ ವೇಳೆ 47.51 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು. ಜಲಾಶಯದಲ್ಲಿ 1791.13 ಅಡಿ ನೀರು ಸದ್ಯ ಸಂಗ್ರಹವಿದೆ. ಒಳಹರಿವಿನ ಪ್ರಮಾಣ 0 ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ 4726 ಕ್ಯೂಸೆಕ್‌ ಇದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner