ಸೂಜಿ ಚಿಕಿತ್ಸೆ: ಕರ್ನಾಟಕ ಅಕ್ಯುಪಂಕ್ಚರ್ ರತ್ನ ಸ್ವೀಕರಿಸಿದ್ದ ಎಂ ಈಶ್ವರ್ಗೆ ಜೀವಮಾನ ಸಾಧನೆ ಪ್ರಶಸ್ತಿ
ಬೆಂಗಳೂರಿನ ಕೃಷಿ ತಂತ್ರಜ್ಞಾನ ಸಂಸ್ಥೆಯ ಅರಕೇರಿ ಸಭಾಭವನದಲ್ಲಿ ಆಯೋಜಿಸಿದ್ದ ಸೂಜಿ ಚಿಕಿತ್ಸಾ ಸ್ನಾತಕೋತ್ತರ ಹಾಗೂ ಪದಗ್ರಹಣ ಸಮಾರಂಭದಲ್ಲಿ ಅಕ್ಯುಪಂಕ್ಚರ್ (ಸೂಜಿ ಚಿಕಿತ್ಸೆ) ತಜ್ಞ ಡಾ. ಎಂ ಈಶ್ವರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಹುಬ್ಬಳ್ಳಿ: ಇಲ್ಲಿನ ಲಿಂಗರಾಜನಗರದ ಖ್ಯಾತ ಯೋಗ ಮತ್ತು ಸೂಜಿ ಚಿಕಿತ್ಸಾ ಕೇಂದ್ರದ ನಿರ್ದೇಶಕ, ಅಕ್ಯುಪಂಕ್ಚರ್ (ಸೂಜಿ ಚಿಕಿತ್ಸೆ) ತಜ್ಞ ಡಾ. ಎಂ ಈಶ್ವರ್ ಅವರಿಗೆ ಫೆಡರೇಶನ್ ಆಫ್ ಅಕ್ಯುಪಂಕ್ಚರ್ ಸಂಸ್ಥೆಯು ಜೀವಮಾನ ಸಾಧನೆ ಪ್ರಶಸ್ತಿ (ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ) ಪ್ರದಾನ ಮಾಡಿದೆ.
ಬೆಂಗಳೂರಿನ ಕೃಷಿ ತಂತ್ರಜ್ಞಾನ ಸಂಸ್ಥೆಯ ಅರಕೇರಿ ಸಭಾಭವನದಲ್ಲಿ ಆಯೋಜಿಸಿದ್ದ ಸೂಜಿ ಚಿಕಿತ್ಸಾ ಸ್ನಾತಕೋತ್ತರ ಹಾಗೂ ಪದಗ್ರಹಣ ಸಮಾರಂಭದಲ್ಲಿ ಈಶ್ವರ್ ಅವರಿಗೆ ಕೆಇಯುಪಿ ಮಂಡಳಿಯ ಗೌರವ ಅಧ್ಯಕ್ಷ ಡಾ. ಹರೀಶಬಾಬು, ಇಸ್ರೋ ವಿಜ್ಞಾನಿ ಡಾ. ಭೋಜರಾಜ ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಕರ್ನಾಟಕ ಅಕ್ಯುಪಂಕ್ಚರ್ ರತ್ನ ಪಡೆದಿದ್ದ ಈಶ್ವರ್
ಕೆಎಲ್‌ಇ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಈಶ್ವರ್ ಅವರು ಕಳೆದ 35 ವರ್ಷಗಳಿಂದ ಸಾವಿರಾರು ಜನರಿಗೆ ನೋವು ನಿವಾರಣೆಯ ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ ವರ್ಷ ಇದೇ ಸಂಸ್ಥೆಯು ಕರ್ನಾಟಕ ಅಕ್ಯುಪಂಕ್ಚರ್ ರತ್ನ ಪ್ರಶಸ್ತಿ ನೀಡಿತ್ತು. ಅಲ್ಲದೆ, ಗ್ಲೋಬಲ್ ಯೋಗ ಸಮ್ಮೇಳನ2023-24ರಲ್ಲಿ ಡಾ. ಯೋಗಿ ದೇವರಾಜ ಅವರ ಅಧ್ಯಕ್ಷತೆಯಲ್ಲಿ ಇವರ ಯೋಗ ಸಾಧನೆಗೆ ಜೀವಮಾನ ಪ್ರಶಸ್ತಿ ನೀಡಲಾಗಿತ್ತು.
ಇದಕ್ಕೂ ಮುನ್ನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಈಶ್ವರ್ ಅವರಿಗೆ ಲಭಿಸಿದ್ದು, ಇವರ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಭಿನಂದಿಸಿದ್ದಾರೆ.
