ಕನ್ನಡ ಸುದ್ದಿ  /  Karnataka  /  Karnataka Assembly Election: Legislative Assembly Elections 2023 Union Minister Dharmendra Pradhan Appointed As Bjp In Charge, K. Annamalai As Co In Charge

Karnataka assembly election: ವಿಧಾನಸಭಾ ಚುನಾವಣೆ 2023; ಧರ್ಮೇಂದ್ರ ಪ್ರಧಾನ್‌ ಬಿಜೆಪಿ ಉಸ್ತುವಾರಿ; ಕೆ.ಅಣ್ಣಾಮಲೈ ಬಿಜೆಪಿ ಸಹ-ಉಸ್ತುವಾರಿ

Karnataka assembly election: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ಚುನಾವಣಾ ಸಹ-ಉಸ್ತುವಾರಿಯಾಗಿ ಕೆ.ಅಣ್ಣಾಮಲೈ ನೇಮಕ.

ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿ‌ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಯಾಗಿ ಕೆ.ಅಣ್ಣಾಮಲೈ ನೇಮಕವಾಗಿದ್ದಾರೆ.
ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿ‌ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಯಾಗಿ ಕೆ.ಅಣ್ಣಾಮಲೈ ನೇಮಕವಾಗಿದ್ದಾರೆ.

ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಬಿಜೆಪಿ ಹಂತ ಹಂತವಾಗಿ ಸಿದ್ಧತೆ ನಡೆಸಿದೆ. ಈಗ ಈ ಚುನಾವಣೆ ಸಂದರ್ಭದಲ್ಲಿ ಪಕ್ಷದ ಸಂಘಟನಾತ್ಮಕ ಉಸ್ತುವಾರಿಗಳು ಯಾರು ಎಂಬುದನ್ನು ಶನಿವಾರ ಪಕ್ಷದ ವರಿಷ್ಠರು ಪ್ರಕಟಿಸಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ಚುನಾವಣಾ ಸಹ ಉಸ್ತುವಾರಿಯಾಗಿ ತಮಿಳುನಾಡು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೇಮಕ ಮಾಡಿದ್ದಾರೆ.

ಧರ್ಮೇಂದ್ರ ಪ್ರಧಾನ್‌ ಅವರು ಕರ್ನಾಟಕದ ನಾಯಕರು ಮತ್ತು ಕಾರ್ಯಕರ್ತರ ಜತೆಗೆ ಈ ಹಿಂದೆಯೂ ಕೆಲಸ ಮಾಡಿದವರು. ಅವರ ಜತೆಗೆ ಸಹ ಪ್ರಭಾರಿಯಾಗಿ ನೇಮಕವಾಗಿರುವ ಕೆ. ಅಣ್ಣಾಮಲೈ ಅವರು ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿದವರು. ಅವರು ಕರ್ನಾಟಕಕ್ಕೆ, ಕನ್ನಡಿಗರಿಗೆ ಚಿರಪರಿಚಿತರು. ಕೆ. ಅಣ್ಣಾಮಲೈ ಅವರು ಭಾರತೀಯ ಪೊಲೀಸ್ ಸೇವೆಗೆ 2019ರಲ್ಲಿ ರಾಜೀನಾಮೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಭಾವಿತರಾಗಿ, 2020ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದರು. ಬಳಿಕ ತಮಿಳುನಾಡಿನ ಬಿಜೆಪಿ ರಾಜಾಧ್ಯಕ್ಷರ ಹೊಣೆಗಾರಿಕೆ ಹೊತ್ತುಕೊಂಡು ಅಲ್ಲಿ ಪಕ್ಷ ಸಂಘಟನೆಯ ಕೆಲಸವನ್ನು ಮಾಡುತ್ತಿದ್ದಾರೆ.

ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಸಭೆ

ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ಪಕ್ಷದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಂದಿನ ಚುನಾವಣೆಯಲ್ಲಿ ಬಿಜೆಪಿ 130-140 ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿರುವ ಬಿಎಸ್‌ವೈ, ಕಾಂಗ್ರೆಸ್‌ನಲ್ಲಿ 'ನಾನೇ ಸಿಎಂ' ಎಂಬ ಸಂಘರ್ಷ ಶುರುವಾಗಿದೆ ಎಂದು ಲೇವಡಿ ಮಾಡಿದರು.

ಗಮನಿಸಬಹುದಾದ ಸುದ್ದಿಗಳು

ಹಿಂದು ದೇವಾಲಯಗಳ ತ್ಯಾಜ್ಯ ನಿರ್ವಹಣೆಗೆ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ಮಹತ್ವಾಕಾಂಕ್ಷೆಯ "ಸ್ವಚ್ಛ ಮಂದಿರ ಅಭಿಯಾನ"ವನ್ನು ರೂಪಿಸಿದೆ. ಇದರ ಮೊದಲ ಹಂತಕ್ಕೆ ಫೆ.10ರಂದು ರಾಜ್ಯದ 12 ದೇಗುಲಗಳಲ್ಲಿ ಚಾಲನೆ ಸಿಗಲಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

World Cancer Day: ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ 2022ರ ಪ್ರಕಾರ, ಸಾಂಕ್ರಾಮಿಕವಲ್ಲದ ರೋಗಗಳು (NCD) ವಾರ್ಷಿಕವಾಗಿ 41 ದಶಲಕ್ಷ ಸಾವುಗಳಿಗೆ ಕಾರಣವಾಗಿದೆ. ಇದು ಪ್ರಪಂಚದಾದ್ಯಂತ ಶೇಕಡ 74 ಸಾವುಗಳಿಗೆ ಸಮನಾಗಿದೆ. ಹಾಗಾಗಿ, ನಮ್ಮ ದೇಶ/ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ನಿರ್ದಿಷ್ಟವಾಗಿ ಕ್ಯಾನ್ಸರ್ ಕಾಯಿಲೆ ಹರಡುವುದನ್ನು ತಡೆಯಲು ಏನು ಮಾಡಬೇಕು? ಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್‌ ಮಾಡಿ

PM to visit Bengaluru: ಫೆ.6ರಂದು ಪ್ರಧಾನಿ ಮೋದಿ ಬೆಂಗಳೂರಿಗೆ; ಇಂಡಿಯಾ ಎನರ್ಜಿ ವೀಕ್‌ 2023 ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿ

PM to visit Bengaluru: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.6ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ವೀಕ್‌ 2023(India Energy Week 2023)ಕ್ಕೆ ಚಾಲನೆ ನೀಡಲಿದ್ದಾರೆ. ಅದಾಗಿ, E20 ಇಂಧನ ಲೋಕಾರ್ಪಣೆ, ಗ್ರೀನ್‌ ಮೊಬಿಲಿಟಿ ರಾಲಿಗೆ ಚಾಲನೆ ಸೇರಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ