ಕರ್ನಾಟಕ: 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಿಸಿದ ಬಿಜೆಪಿ; ಯಾವ ಜಿಲ್ಲೆಗೆ, ಯಾರು ಆಯ್ಕೆ? ಇಲ್ಲಿದೆ ಪಟ್ಟಿ
ಕರ್ನಾಟಕದ 23 ಜಿಲ್ಲೆಗಳಿಗೆ ನೂತನ ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕಗೊಳಿಸಿ ಬಿಜೆಪಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಬಿವೈ ವಿಜಯೇಂದ್ರ ತನ್ನ ಆಪ್ತರಿಗೆ ಹೆಚ್ಚು ಮಣೆ ಹಾಕಿದ್ದಾರೆ ಎಂದು ಸ್ವಪಕ್ಷದಲ್ಲೇ ಆರೋಪ ಕೇಳಿ ಬಂದಿದೆ.

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳು ಸಮೀಪಿಸಿದ ಬೆನ್ನಲ್ಲೇ ಕರ್ನಾಟಕದ 23 ಜಿಲ್ಲೆಗಳಿಗೆ ಜಿಲ್ಲಾ ಘಟಕದ ಅಧ್ಯಕ್ಷರನ್ನು (Karnataka BJP district President) ನೇಮಕಗೊಳಿಸಿ ರಾಜ್ಯ ಬಿಜೆಪಿ (BJP) ಆದೇಶ ಹೊರಡಿಸಿದೆ. ಕೆಲ ಜಿಲ್ಲೆಗಳಲ್ಲಿ ಹಳಬರನ್ನೇ ಮುಂದುವರೆಸಿದ್ದರೆ, ಕೆಲ ಜಿಲ್ಲೆಗಳಿಗೆ ಹೊಸಬರನ್ನು ನೇಮಿಸಲಾಗಿದೆ. ತಳಮಟ್ಟದಿಂದ ಬಿಜೆಪಿ ಪಕ್ಷವನ್ನು ಬಲಿಷ್ಠಗೊಳಿಸಲು ಮತ್ತು ಪಕ್ಷದ ವರ್ಚಸನ್ನು ಹೆಚ್ಚಿಸುವ ನಾಯಕರನ್ನೇ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರ ನೇಮಕದ ಪಟ್ಟಿಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬೆನ್ನಲ್ಲೇ ವಿಜಯೇಂದ್ರ ತನ್ನ ಆಪ್ತರಿಗೆ ಹೆಚ್ಚು ಮಣೆ ಹಾಕಿದ್ದಾರೆ ಎಂದು ಸ್ವಪಕ್ಷದಲ್ಲೇ ಆರೋಪ ಕೇಳಿ ಬಂದಿದೆ.
ಪಕ್ಷದ ಸಂಘಟನಾ ಪರ್ವದ ಭಾಗವಾಗಿ ರಾಜ್ಯದಲ್ಲಿ 23 ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನೂತನ ಜಿಲ್ಲಾಧ್ಯಕ್ಷರುಗಳಿಗೆ ಆತ್ಮೀಯ ಅಭಿನಂದನೆಗಳು. ತಮಗೆ ದೊರೆತಿರುವ ಜವಾಬ್ದಾರಿಗಳನ್ನು ನಿರೀಕ್ಷೆ ಮೀರಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲವೃದ್ದಿಗೊಳಿಸುವ ನಿಟ್ಟಿನಲ್ಲಿ ತಾವು ನಿರೀಕ್ಷೆ ಮೀರಿ ಗುರಿ ಸಾಧಿಸಲೆಂದು ಹಾರೈಸುತ್ತೇನೆ ಎಂದು ಬಿವೈ ವಿಜಯೇಂದ್ರ ಪೋಸ್ಟ್ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: Bjp Politics: ಬಿ.ವೈ.ವಿಜಯೇಂದ್ರ ವಿರುದ್ದ ತಿರುಗಿ ಬಿದ್ದ ಸಂಸದ ಡಾ.ಸುಧಾಕರ್, ಅವರ ಧೋರಣೆಗೆ ನನ್ನ ಧಿಕ್ಕಾರ ಎಂದು ಬಹಿರಂಗ ಟೀಕೆ
ಯಾವ ಜಿಲ್ಲೆಗೆ, ಯಾರು ಆಯ್ಕೆ?
1. ಮೈಸೂರು ನಗರ - ಎಲ್ ನಾಗೇಂದ್ರ
2. ಚಾಮರಾಜನಗರ - ಸಿಎಸ್ ನಿರಂಜನಕುಮಾರ್
3. ಚಿಕ್ಕಮಗಳೂರು - ದೇವರಾಜ ಶೆಟ್ಟಿ
4. ಶಿವಮೊಗ್ಗ - ಎಸ್ಕೆ ಜಗದೀಶ್
5. ದಕ್ಷಿಣಕನ್ನಡ - ಸತೀಶ್ ಕುಂಪಲ
6. ಉತ್ತರಕನ್ನಡ - ನಾರಾಯಣ್ ಶ್ರೀನಿವಾಸ್ ಹೆಗಡೆ
7. ಧಾರವಾಡ ಗ್ರಾಮಾಂತರ - ನಿಂಗಪ್ಪ ಡಿ. ಸುತಗಟ್ಟಿ
8. ಹುಬ್ಬಳ್ಳಿ-ಧಾರವಾಡ - ತಿಪ್ಪಣ್ಣ ಮಜ್ಜಗಿ
9. ಬೆಳಗಾವಿ ನಗರ - ಗೀತಾ ಸುತಾರ್
10. ಬೆಳಗಾವಿ ಗ್ರಾಮಾಂತರ - ಸುಭಾಷ್ ದುಂಡಪ್ಪ ಪಾಟೀಲ್
11. ಚಿಕ್ಕೋಡಿ - ಸತೀಶ್ ಅಪ್ಪಾಜಿಗೋಳ್
12. ಕಲಬುರಗಿ ನಗರ - ಚಂದ್ರಕಾಂತ್ ಬಿ. ಪಾಟೀಲ್
13. ಕಲಬುರಗಿ ಗ್ರಾಮಾಂತರ - ಅಶೋಕ್ ಬಗಲಿ
14. ಬೀದರ್ - ಸೋಮನಾಥ್ ಪಾಟೀಲ್
15. ಯಾದಗಿರಿ - ಬಸವರಾಜಪ್ಪಗೌಡ ವಿ
16. ಕೊಪ್ಪಳ - ದಡೇಸಗೂರು ಬಸವರಾಜ್
17. ಬಳ್ಳಾರಿ - ಅನಿಲ್ ಕುಮಾರ್ ಮೋಕಾ
18. ವಿಜಯನಗರ - ಸಂಜೀವ್ ರೆಡ್ಡಿ
19. ಬೆಂಗಳೂರು ಉತ್ತರ - ಎಸ್ ಹರೀಶ್
20. ಬೆಂಗಳೂರು ಕೇಂದ್ರ - ಎಆರ್ ಸಪ್ತಗಿರಿಗೌಡ
21. ಬೆಂಗಳೂರು ದಕ್ಷಿಣ - ಸಿಕೆ ರಾಮಮೂರ್ತಿ
22. ಚಿಕ್ಕಬಳ್ಳಾಪುರ - ಬಿ ಸಂದೀಪ್
23. ಕೋಲಾರ - ಓಂ ಶಕ್ತಿ ಛಲಪತಿ
ಯಾವ ಜಿಲ್ಲೆಗೆ ನೂತನ ಅಧ್ಯಕ್ಷರು ನೇಮಕ?
ಯಾದಗಿರಿ, ಕೊಪ್ಪಳ, ವಿಜಯಪುರ, ಶಿವಮೊಗ್ಗ, ಕಲಬುರಗಿ ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನ ನೇಮಿಸಲಾಗಿದೆ. ಉಳಿದಂತೆ ಹಳಬರನ್ನೇ ಮರು ಆಯ್ಕೆ ಮಾಡಲಾಗಿದೆ.
ಬಾಕಿ ಉಳಿದಿರುವ ಜಿಲ್ಲೆಗಳು
ಹಾಸನ, ಮಂಡ್ಯ, ಉಡುಪಿ, ಕೊಡಗು, ಮೈಸೂರು ಗ್ರಾಮಾಂತರ, ಗದಗ, ಬಾಗಲಕೋಟೆ, ಹಾವೇರಿ, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ರಾಯಚೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ.
