Karnataka Budget 2023: ಬಜೆಟ್‌ನ ಪೂರ್ಣ ಪಠ್ಯದ ಪಿಡಿಎಫ್‌ ಪ್ರತಿ ಇಲ್ಲಿ ಲಭ್ಯ, ಈಗಲೇ ಡೌನ್‌ಲೋಡ್‌ ಮಾಡಿಕೊಂಡು ಪರಿಶೀಲನೆ ಮಾಡಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget 2023: ಬಜೆಟ್‌ನ ಪೂರ್ಣ ಪಠ್ಯದ ಪಿಡಿಎಫ್‌ ಪ್ರತಿ ಇಲ್ಲಿ ಲಭ್ಯ, ಈಗಲೇ ಡೌನ್‌ಲೋಡ್‌ ಮಾಡಿಕೊಂಡು ಪರಿಶೀಲನೆ ಮಾಡಿ

Karnataka Budget 2023: ಬಜೆಟ್‌ನ ಪೂರ್ಣ ಪಠ್ಯದ ಪಿಡಿಎಫ್‌ ಪ್ರತಿ ಇಲ್ಲಿ ಲಭ್ಯ, ಈಗಲೇ ಡೌನ್‌ಲೋಡ್‌ ಮಾಡಿಕೊಂಡು ಪರಿಶೀಲನೆ ಮಾಡಿ

karnataka budget 2023 pdf in Kannada: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ. ರಾಜ್ಯ ಬಜೆಟ್‌ನ ಸಂಪೂರ್ಣ ಚಿತ್ರಣ ನೀಡುವಂತಹ ಕನ್ನಡ ಅಥವಾ ಇಂಗ್ಲಿಷ್‌ ಪಿಡಿಎಫ್‌ ಪ್ರತಿಗಳನ್ನು ಇಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ.

Karnataka Budget 2023: ಬಜೆಟ್‌ನ ಪೂರ್ಣ ಪಠ್ಯದ ಪಿಡಿಎಫ್‌ ಪ್ರತಿ ಇಲ್ಲಿ ಲಭ್ಯ
Karnataka Budget 2023: ಬಜೆಟ್‌ನ ಪೂರ್ಣ ಪಠ್ಯದ ಪಿಡಿಎಫ್‌ ಪ್ರತಿ ಇಲ್ಲಿ ಲಭ್ಯ

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ. ರಾಜ್ಯ ಬಜೆಟ್‌ನ ಸಂಪೂರ್ಣ ಚಿತ್ರಣ ನೀಡುವಂತಹ ಕನ್ನಡ ಪಿಡಿಎಫ್‌ ಪ್ರತಿಗಳನ್ನು ಬಹುತೇಕರು ಹುಡುಕುತ್ತಿದ್ದಾರೆ. ಈ ಪಿಡಿಎಫ್‌ ಪ್ರತಿಗಳನ್ನು ಈ ಲೇಖನದೊಂದಿಗೆ ನೀಡಲಾಗಿದ್ದು, ಕೆಲವೊಂದು ಪಿಡಿಎಫ್‌ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಲಿಂಕ್‌ ಕೂಡ ಇಲ್ಲಿ ನೀಡಲಾಗಿದೆ. ಕರ್ನಾಟಕ ರಾಜ್ಯ ಬಜೆಟ್‌ನ ಅವಲೋಕನ ಮಾಡಲು ಈ ಪ್ರತಿಗಳು ನೆರವಾಗಬಹುದು. ಇಂದಿನ ಬಜೆಟ್‌ನ ಪ್ರಮುಖಾಂಶಗಳ ಬೆಳಕು ಚೆಲ್ಲುವ ಹಲವು ಲೇಖನಗಳನ್ನು ಹಿಂದೂಸ್ತಾನ್‌ ಟೈಮ್ಸ್‌ ಪ್ರಕಟಿಸಿದ್ದು, ಈ ಮೂಲಕವೂ ಬಜೆಟ್‌ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಕರ್ನಾಟಕ ಬಜೆಟ್‌ ಪಿಡಿಎಫ್‌ನಲ್ಲಿ ಏನೇನಿದೆ?

ಕರ್ನಾಟಕ ರಾಜ್ಯ ಸರಕಾರವು ಮಂಡಿಸಿದ ಬಜೆಟ್‌ನಲ್ಲಿ ಹಲವು ಅಂಶಗಳು ಇರುತ್ತವೆ. ಕೆಲವೊಂದು ವಿಷಯಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗದಂತೆ ಇರುತ್ತವೆ. ಆದರೆ, ಬಜೆಟ್‌ ಮುಖ್ಯಾಂಶ ಪ್ರತಿಯಲ್ಲಿ ಸರಳವಾಗಿ ಸಾಕಷ್ಟು ವಿಚಾರಗಳನ್ನು ಬರೆಯಲಾಗಿದೆ. ಇವುಗಳ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು. ಕರ್ನಾಟಕ ಬಜೆಟ್‌ಗೆ ಸಂಬಂಧಪಟ್ಟಂತೆ ಹತ್ತು ಹಲವು ಪಿಡಿಎಫ್‌ಗಳು ಇದೀಗ ಡೌನ್‌ಲೋಡ್‌ ಮಾಡಿಕೊಳ್ಳಲು ಸಿದ್ಧವಿದೆ. ಮೊದಲು ಯಾವೆಲ್ಲ ಪಿಡಿಎಫ್‌ಗಳು ಇವೆ ಎಂದು ತಿಳಿದುಕೊಳ್ಳೋಣ.

ಸಿದ್ದರಾಮಯ್ಯ ಇವರ ಆಯವ್ಯಯ ಭಾಷಣವೂ ಪಿಡಿಎಫ್‌ ರೂಪದಲ್ಲಿ ಲಭ್ಯವಿದೆ. ಅವರ ಮಾತುಗಳನ್ನು ಅಕ್ಷರ ರೂಪದಲ್ಲಿ ಓದಿಕೊಳ್ಳಬಹುದು. ಇನ್ನೊಂದು ಪಿಡಿಎಫ್‌ ಆಯವ್ಯಯ ಮುಖ್ಯಾಂಶಗಳನ್ನು ಹೊಂದಿದೆ. ವಾರ್ಷಿಕ ವಿತ್ತ ನಿರೂಪಣೆ, ಆಯವ್ಯಯದ ಪಕ್ಷಿನೋಟ, ರಾಜಸ್ವ ಮತ್ತು ಇತರೆ ಜಮೆಗಳ ಸವಿವರ ಅಂದಾಜುಗಳು, ಆರ್ಥಿಕ/ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ/ಒಳಾಡಳಿತ ಮತ್ತು ಸಾರಿಗೆ/ಕಾನೂನು/ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ/ಋಣ ಮೇಲುಸ್ತುವಾರಿ ವೆಚ್ಚ ಸಂಪುಟ ಪಿಡಿಎಫ್‌ ಕೂಡ ಡೌನ್‌ಲೋಡ್‌ಗೆ ಲಭ್ಯವಿದೆ.

ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆ/ಶಿಕ್ಷಣ/ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ಕನ್ನಡ ಮತ್ತು ಸಂಸ್ಕೃತಿ, ಕೃಷಿ ಮತ್ತು ತೋಟಗಾರಿಕೆ/ಪಶುಸಂಗೋಪನೆ ಮತ್ತು ಮೀನುಗಾರಿಕೆ/ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ/ಸಹಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್/ನಗರಾಭಿವೃದ್ಧಿ ಮತ್ತು ವಸತಿ, ಸಮಾಜ ಕಲ್ಯಾಣ/ಮಹಿಳಾ ಮತ್ತು ಮಕ್ಕಳ ಕಲ್ಯಾಣ/ಆಹಾರ ಮತ್ತು ನಾಗರಿಕ ಸರಬರಾಜು/ಕಂದಾಯ/ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ, ಲೋಕೋಪಯೋಗಿ/ನೀರಾವರಿ/ಇಂಧನ, ಬೆಂಗಳೂರು ವಿಭಾಗ , ಮೈಸೂರು ವಿಭಾಗ, ಬೆಳಗಾವಿ ವಿಭಾಗ, ಕಲಬುರಗಿ ವಿಭಾಗದ ಪಿಡಿಎಫ್‌ ಪ್ರತಿಗಳನ್ನೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇನ್ನುಳಿದಂತೆ ಸಂಕ್ಷಿಪ್ತ ಅನುದಾನಗಳ ಅಭಿಯಾಚನೆ, ಮಹಿಳಾ ಉದ್ದೇಶಿತ ಆಯವ್ಯ, ಮಕ್ಕಳ ಉದ್ದೇಶಿತ ಆಯವ್ಯಯ ಇತ್ಯಾದಿ ಹಲವು ಪಿಡಿಎಫ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಕರ್ನಾಟಕ ಬಜೆಟ್‌ ಪಿಡಿಎಫ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

  1. ರಾಜ್ಯ ಬಜೆಟ್‌ ಪಿಡಿಎಫ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುಲು ಕರ್ನಾಟಕ ಸರಕಾರದ ಹಣಕಾಸು ಇಲಾಖೆಯ ವೆಬ್‌ಸೈಟ್‌ಗೆ ಹೋಗಬೇಕು. ವೆಬ್‌ಸೈಟ್‌ ಲಿಂಕ್‌: finance.karnataka.gov.in
  2. ಈ ವೆಬ್‌ಸೈಟ್‌ನಲ್ಲಿ ಈ ಬಾರಿಯ ಆಯವ್ಯಯದ ಪಿಡಿಎಫ್‌ ಪ್ರತಿಗಳನ್ನು ಒಂದು ಕಡೆ ಪ್ರತ್ಯೇಕವಾಗಿ ನೀಡಲಾಗಿರುತ್ತದೆ. ಅದಕ್ಕೆ ನೇರ ಲಿಂಕ್‌ ಇಲ್ಲಿದೆ.
  3. ಹಣಕಾಸು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಈ ಹಿಂದಿನ ಬಜೆಟ್‌ಗಳ ಪಿಡಿಎಫ್‌ ಪ್ರತಿಗಳೂ ಲಭ್ಯವಿದ್ದು, ಆಸಕ್ತರು ಡೌನ್‌ಲೋಡ್‌ ಮಾಡಿಕೊಳ್ಳಬಹುದು.
  4. ಬಜೆಟ್‌ ಪಿಡಿಎಫ್‌ ಏಕೆ ಡೌನ್‌ಲೋಡ್‌ ಮಾಡಿಕೊಳ್ಳಬೇಕು?
  5. ಕರ್ನಾಟಕ ಬಜೆಟ್‌ ಕುರಿತು ಸಂಪೂರ್ಣ ವಿವರ ಪಡೆದುಕೊಳ್ಳಬಹುದು.
  6. ಯುಪಿಎಸ್‌ಸಿ, ಕೆಪಿಎಸ್‌ಸಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು ಇದನ್ನು ಅಧ್ಯಯನ ಮಾಡಬಹುದು.
  7. ರಾಜ್ಯದ ಆರ್ಥಿಕತೆ, ಭವಿಷ್ಯದ ಖರ್ಚಿನ ಸ್ಪಷ್ಟ ಮುನ್ನೋಟ ದೊರಕುತ್ತದೆ. ಇದರಿಂದ ಆರ್ಥಿಕ ಜ್ಞಾನವೂ ಉತ್ತಮಗೊಳ್ಳುತ್ತದೆ.

Whats_app_banner