Karnataka Budget 2023: ಎಟಿಎಂ ಸರ್ಕಾರದ ರಿವರ್ಸ್‌ಗೇರ್‌ ಬಜೆಟ್;‌ ಮಾಜಿ ಸಿಎಂ ಬೊಮ್ಮಾಯಿ ನಿಖರ ಟೀಕೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget 2023: ಎಟಿಎಂ ಸರ್ಕಾರದ ರಿವರ್ಸ್‌ಗೇರ್‌ ಬಜೆಟ್;‌ ಮಾಜಿ ಸಿಎಂ ಬೊಮ್ಮಾಯಿ ನಿಖರ ಟೀಕೆ

Karnataka Budget 2023: ಎಟಿಎಂ ಸರ್ಕಾರದ ರಿವರ್ಸ್‌ಗೇರ್‌ ಬಜೆಟ್;‌ ಮಾಜಿ ಸಿಎಂ ಬೊಮ್ಮಾಯಿ ನಿಖರ ಟೀಕೆ

Karnataka Budget 2023: ಕಾಂಗ್ರೆಸ್‌ ಸರ್ಕಾರ ಬಜೆಟ್‌ ಅನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ ಕುರಿತು ನಿಖರವಾಗಿ ಮತ್ತು ತುಲನಾತ್ಮಕವಾದ ಟೀಕೆಯನ್ನು ಮಾಡಿದ್ದಾರೆ. ಇದರ ವಿವರ ಇಲ್ಲಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (HT_PRINT)

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ (Congress Govt) ಈ ಅವಧಿಯ ಮೊದಲ ಬಜೆಟ್‌ ಮಂಡನೆ ಆಗಿದ್ದು, ವಿಪಕ್ಷಗಳಿಂದ ವ್ಯಾಪಕ ಟೀಕೆಗೆ ಒಳಗಾಗಿದೆ. ಬಿಜೆಪಿ (BJP) ಈ ಕುರಿತು ಟ್ವೀಟ್‌ ಮಾಡಿದ್ದು, ಕಾಂಗ್ರೆಸ್‌ ಗ್ಯಾರಂಟಿಗಳಿಗೆ (Congress Guarantees) ಒದಗಿಸಬೇಕಾದ ಹಣಕಾಸಿನ ಗೊಂದಲ ಇನ್ನೂ ಮುಂದುವರೆದಿದೆ ಎಂದು ಟೀಕೆ ಮಾಡಿದೆ.

ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿ ಸೇರಿ ಅನೇಕ ಕ್ಷೇತ್ರಗಳಿಗೆ ಮೀಸಲಿರಿಸಲಾದ ಹಣಕಾಸಿನಲ್ಲಿ ನಮ್ಮ ಬಜೆಟ್‌ಗೆ ಹೋಲಿಸಿದರೆ ಕಡಿತವಾಗಿದೆ. ಇದೊಂದು ನಿರಾಶದಾಯಕ ಬಜೆಟ್‌, ಆಯವ್ಯಯ ಮಂಡನೆಯಲ್ಲೂ ಕಾಂಗ್ರೆಸ್‌ ಸರ್ಕಾರ ದ್ವೇಷದ ರಾಜಕಾರಣ ಮಾಡಿದೆ ಎಂಬ ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಉಲೇಖಿಸಿದೆ.

ಬಸವರಾಜ ಬೊಮ್ಮಾಯಿ ಅವರು ಹೇಳಿರುವುದು ಇಷ್ಟು

ಬಜೆಟ್‌ ಸರ್‌ಪ್ಲಸ್‌ ಆಗುವುದು ಬಹಳ ಮುಖ್ಯ.ಇವತ್ತು ಅವರು ಸರ್‌ಪ್ಲಸ್‌ ಬಜೆಟ್‌ ಅನ್ನು ಮತ್ತೆ ಡೆಫ್‌ಸಿಟ್‌ ಬಜೆಟ್‌ಗೆ ಕೊಂಡುಹೋಗಿದ್ದಾರೆ. ಹೀಗಾಗಿ ಇದನ್ನು ರಿವರ್ಸ್‌ಗೇರ್‌ ಗವರ್ನಮೆಂಟ್‌ ಮತ್ತು ರಿವರ್ಸ್‌ಗೇರ್‌ ಬಜೆಟ್‌ ಎಂದು ಹೇಳುತ್ತೇನೆ.

ಯಾವುದೇ ಆಶಯಗಳಿಲ್ಲದೆ, ಸರಿಯಾದ ಡೈರೆಕ್ಷನ್‌ ಇಲ್ಲದೆ ಹಣಕಾಸಿನ ಗೊಂದಲ ಮೂಡಿಸುವಂತಹ ಕೆಲಸಗಳನ್ನು ಮಾಡಿ ಜನರಿಗೆ ತಾವು ಏನೋ ಪ್ರಯೋಜನ ಒದಗಿಸುತ್ತಿದ್ದೇವೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇಕಡ 12 ಅನುದಾನ ಇಟ್ಟಿದ್ದೆ. ಈಗ 10% ಹೆಲ್ತ್‌ ಶೇಕಡ 5 ಇದ್ದದ್ದು ಶೇಕಡ 4ಕ್ಕೆ ಇಳಿದಿದೆ. ಕೃಷಿಗೆ 3 ಇದ್ದದ್ದು 2, ಆರ್ಡಿಪಿಆರ್‌ 6 ಇದ್ದದ್ದು 5, ಜಲಸಂಪನ್ಮೂಲ 7 ಇದ್ದದ್ದು 5 ಆಗಿದೆ. ಇವೆಲ್ಲದರಲ್ಲೂ ಈ ಬಜೆಟ್‌ನಲ್ಲಿ ಅಲೋಕೇಶನ್‌ ಕಡಿಮೆ ಆಗಿದೆ.

3.09 ಲಕ್ಷ ಕೋಟಿ ರೂಪಾಯಿ ಬಜೆಟ್‌ನಲ್ಲಿ ಇಷ್ಟೆಲ್ಲ ಮಾಡಿದ್ದೆ. ಈ ಬಜೆಟ್‌ನ ಗಾತ್ರ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ಈ ಎಲ್ಲ ಕ್ಷೇತ್ರಗಳ ಅಲೋಕೇಶನ್‌ ಕೂಡ ಹೆಚ್ಚಾಗಬೇಕಾಗಿತ್ತು. ಶಿಕ್ಷಣ, ಆರೋಗ್ಯ, ಜಲಸಂಪನ್ಮೂಲ, ಕೃಷಿ ಮುಂತಾದವುಗಳಿಗೆ ಹೆಚ್ಚು ಅಲೋಕೇಶನ್‌ ಮಾಡದೇ ಇದ್ದರೆ ರಾಜ್ಯದ ಅಭಿವೃದ್ಧಿ ಹೇಗಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ರಾಜ್ಯದ ಪ್ರಗತಿ ಹಿಂದಕ್ಕೆ ಬಿದ್ದೀತು ಎಂದು ಟೀಕೆ ಮಾಡಿದರು.

ಹೆಚ್ಚುವರಿ ಅದಾಯ ಸಂಗ್ರಹದ ಗುರಿ ಇಟ್ಟುಕೊಂಡ ಮೇಲೆ ಸಾಲ ಯಾಕೆ

ರಾಜ್ಯ ಬಜೆಟ್‌ನಲ್ಲಿ 21000 ಕೋಟಿ ರೂಪಾಯಿ ಹೆಚ್ಚು ಆದಾಯ ತರುವುದಾಗಿ ಘೋಷಿಸಿದ್ದಾರೆ. ಹೆಚ್ಚುವರಿ ಆದಾಯ ಬಂದರೆ ಸಾಲ ಯಾಕೆ ಮಾಡಬೇಕು? ಎಂದು ಅವರು ಪ್ರಶ್ನಿಸಿದರು.

ಆರ್ಥಿಕ ಶಿಸ್ತು ತರುವುದಾಗಿ ಹೇಳಿದ್ರಿ. ಯಾವ ಆರ್ಥಿಕ ಶಿಸ್ತು ಇಲ್ಲ. ಪೆಂಡಿಂಗ್‌ ಬಿಲ್‌ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಹಿಂದಿನ ಅವಧಿಯಲ್ಲಿ ನೀವು ಎಷ್ಟು ಹಣ ಇಟ್ಟು ಹೋಗಿದ್ರಿ? ಒಂದೇ ಒಂದು ಉದಾಹರಣೆ ಕೊಡ್ತೇವೆ. ಹೌಸಿಂಗ್‌ಗೆ 15,000 ಕೋಟಿ ಬೇಕಾಗಿತ್ತು. ಅಂದು ಮೂರು ಸಾವಿರ ಕೋಟಿ ಇಟ್ಟು ಹೋಗಿದ್ರಿ.. ಆದ್ದರಿಂದ ರಾಜ್ಯದ ಜನತೆಗೆ ನಿರಾಶೆ ಉಂಟುಮಾಡುವ ಬಜೆಟ್.‌ ರಾಜ್ಯವನ್ನು ಅಭಿವೃದ್ಧಿ ವಿಚಾರದಲ್ಲಿ ಹಿಂದಕ್ಕೆ ಕರೆದೊಯ್ಯುವ ಬಜೆಟ್‌ ಇದು. ಹೀಗಾಗಿ ಇದು ರಿವರ್ಸ್‌ಗೇರ್‌ ಬಜೆಟ್‌ ಎಂದು ಬೊಮ್ಮಾಯಿ ಅವರು ಜರೆದರು.

ಟೀಕೆಗಳಿಗೆ ಮೀಸಲಾಗಿದೆ ಬಜೆಟ್‌ ಪುಸ್ತಕ

ಬಜೆಟ್‌ ಪುಸ್ತಕದ ಬಹುಪಾಲು ಪುಟಗಳು ಟೀಕೆಗೆ ಮೀಸಲಾಗಿಬಿಟ್ಟಿವೆ. ಬಜೆಟ್‌ ಅನ್ನು ಟೀಕೆಗೆ ಬಳಸಿಕೊಂಡಿರುವುದು ದೇಶದಲ್ಲಿ ಇದೇ ಮೊದಲು. ಟೀಕೆ ಮಾಡುವುದಕ್ಕೆ ಬೇಕಾದಷ್ಟು ವೇದಿಕೆಗಳಿವೆ. ದ್ವೇಷದ ರಾಜಕಾರಣವನ್ನು ಬಜೆಟ್‌ನಲ್ಲೂ ತೋರಿಸಿದ್ದಾರೆ. ರೈತರಿಗೂ ನಿರಾಶೆ ಆಗಿದೆ.

ನಾವು ಮಾಡಿರುವ ಹಲವಾರು ಕಾರ್ಯಕ್ರಮಗಳ ವಿಚಾರಗಳ ಬಗ್ಗೆ ಮೌನವಾಗಿದ್ದಾರೆ. ನಾವು ಒಂದರಿಂದ ಡಿಗ್ರಿ ವರೆಗೆ ಶಿಕ್ಷಣ ಉಚಿತವಾಗಿ ನೀಡುವುದಾಗಿ ಹೇಳಿದ್ದೆವು. ಆದರೆ, ಅವರು ಈ ವಿಚಾರ ನಿರ್ಲಕ್ಷಿಸಿದ್ದಾರೆ. ಅನಕ್ಷರಸ್ಥರಾಗಿದ್ದರೂ ಯುವಕರಿಗೆ ಕೌಶಲ ತರಬೇತಿ ನೀಡಿ, ಸ್ಟೈಫಂಡ್‌ ನೀಡಿ ಅವರಿಗೆ ಕೆಲಸ ಕೊಡಿಸುವ ಯೋಜನೆ ಘೋಷಿಸಿದ್ದೆವು. ಅದರ ಬಗ್ಗೆ ಏನೂ ಹೇಳಿಲ್ಲ.

ನಾವು ಸ್ತ್ರೀ ಸಾಮರ್ಥ್ಯ ಎಂಬ ಕಾರ್ಯಕ್ರಮ ಮಾಡಿದ್ದೆವು. ಸ್ವಾಮಿ ವಿವೇಕಾನಂದ ಯೋಜನೆ ಬಗ್ಗೆ ಕೂಡ ಏನೂ ಹೇಳಿಲ್ಲ. ಇವರ ನಡೆ ನುಡಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಅಭಿವೃದ್ಧಿ ವಿರೋಧಿ ಹೊಸ ಭರವಸೆ ನೀಡದ ಬಜೆಟ್‌ ಇದು ಎಂದು ಬಸವರಾಜ ಬೊಮ್ಮಾಯಿ ಅವರು ಟೀಕಿಸಿದರು.

Whats_app_banner