Karnataka Budget 2023: ಬೊಮ್ಮಾಯಿ ಮಂಡಿಸಿದ್ದ ಜನಪ್ರಿಯ ಬಜೆಟ್‌ಗೂ ಸಿದ್ದರಾಮಯ್ಯ ಗ್ಯಾರಂಟಿ ಬಜೆಟ್‌ಗೂ ಏನೇನಿದೆ ವ್ಯತ್ಯಾಸ? ಇಲ್ಲಿದೆ ವಿವರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು (Karnataka Budget 2023) ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಬಸವರಾಜ ಬೊಮ್ಮಾಯಿ ಕೂಡ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಬಜೆಟ್ ಮಂಡಿಸಿದ್ದರು. ಇಬ್ಬರ ಬಜೆಟ್‌ನ ನಡುವಿನ ಸಂಚಿತ ನಿಧಿ ಗಾತ್ರ, ಸ್ವೀಕೃತಿ, ವೆಚ್ಚ, ಅನುದಾನ ಇತ್ಯಾದಿಗಳ ನಡುವಿನ ವ್ಯತ್ಯಾಸ ಗಮನಿಸೋಣ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು (Karnataka Budget 2023) ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಬಸವರಾಜ ಬೊಮ್ಮಾಯಿ ಕೂಡ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಬಜೆಟ್ ಮಂಡಿಸಿದ್ದರು. ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಛಾಯೆ ಕಾಣಿಸಿಕೊಂಡಿದೆ. ಈ ವರ್ಷ ಮಂಡನೆಯಾದ ಎರಡು ರಾಜ್ಯ ಬಜೆಟ್‌ಗಳ ನಡುವೆ ವ್ಯತ್ಯಾಸ ಈ ಮುಂದಿನಂತೆ ಇದೆ.
ಬಜೆಟ್ ಗಾತ್ರದಲ್ಲಿ ಏನು ವ್ಯತ್ಯಾಸವಿದೆ.
ಸಿದ್ದರಾಮಯ್ಯ ಬಜೆಟ್‌ನ ಗಾತ್ರ: 3,27,747 ಕೋಟಿ ರೂ.
ಬಸವರಾಜ ಬೊಮ್ಮಾಯಿ ಅವರ ಬಜೆಟ್‌ನ ಸಂಚಿತ ನಿಧಿ ಗಾತ್ರ 3,09,182 ಕೋಟಿ ರೂಪಾಯಿ ಇತ್ತು.
ಒಟ್ಟು ಸ್ವೀಕೃತಿಯಲ್ಲಿ ವ್ಯತ್ಯಾಸ
ಸಿದ್ದರಾಮಯ್ಯ ಬಜೆಟ್: ಒಟ್ಟು ಸ್ವೀಕೃತಿ 3,24,478 ಕೋಟಿ ರೂ.; ರಾಜಸ್ವ ಸ್ವೀಕೃತಿ 2,38,410 ಕೋಟಿ ರೂ.: ಸಾರ್ವಜನಿಕ ಋಣ – 85,818 ಕೋಟಿ ರೂ. ಸೇರಿದಂತೆ ಬಂಡವಾಳ ಸ್ವೀಕೃತಿ - 86,068 ಕೋಟಿ ರೂ. ಇದೆ.
ಬೊಮ್ಮಾಯಿ ಬಜೆಟ್: ಒಟ್ಟು ಸ್ವೀಕೃತಿ 3,03,910 ಕೋಟಿ ರೂಪಾಯಿ. ಇದರಲ್ಲಿ ರಾಜಸ್ವ ಸ್ವೀಕೃತಿ 2,25,900 ಕೋಟಿ ರೂಪಾಯಿ, ಸಾರ್ವಜನಿಕ ಋಣ- 77,780 ಕೋಟಿ ರೂ ಸೇರಿದಂತೆ ಬಂಡವಾಳ ಸ್ವೀಕೃತಿ 78,000 ಕೋಟಿ ರೂಪಾಯಿ ಇತ್ತು.
ಒಟ್ಟು ವೆಚ್ಚ, ಮರುಪಾವತಿ ಇತ್ಯಾದಿ
ಸಿದ್ದರಾಮಯ್ಯ ಬಜೆಟ್: ಒಟ್ಟು ವೆಚ್ಚ - 3,27,747 ಕೋಟಿ ರೂ.; ರಾಜಸ್ವ ವೆಚ್ಚ – 2,50,933 ಕೋಟಿ ರೂ.,ಬಂಡವಾಳ ವೆಚ್ಚ - 54,374 ಕೋಟಿ ರೂ. ಹಾಗೂ ಸಾಲ ಮರುಪಾವತಿ - 22,441 ಕೋಟಿ ರೂ. ಇದೆ.
ಬೊಮ್ಮಾಯಿ ಬಜೆಟ್: ಒಟ್ಟು ವೆಚ್ಚ 3.03.910 ಕೋಟಿ ರೂಪಾಯಿ ಇತ್ತು. ಇದರಲ್ಲಿ ರಾಜಸ್ವ ವೆಚ್ಚವು 2,25,507 ಕೋಟಿ ರೂಪಾಯಿ ಇದೆ. ಬಂಡವಾಳ ವೆಚ್ಚ 61,234 ಕೋಟಿ ರೂ., ಸಾಲ ಮರುಪಾವತಿ- 22,441 ಕೋಟಿ ರೂಪಾಯಿ ಇತ್ತು.
ವಿವಿಧ ವಲಯಕ್ಕೆ ಬೊಮ್ಮಾಯಿ ಎಷ್ಟು ನೀಡಿದ್ದರು?
ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳು-39031 ಕೋಟಿ ರೂ. ನೀಡಲಾಗಿತ್ತು. ಹೀಗಾಗಿ ಬೊಮ್ಮಾಯಿಗೆ ಹೋಲಿಸಿದರೆ ಕೃಷಿಗೆ ಸಿದ್ದರಾಮಯ್ಯ ತುಸು ಕಡಿಮೆ ನೀಡಿದ್ದಾರೆ.
ಬೊಮ್ಮಾಯಿ ಬಜೆಟ್‌ನಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ- 80,318 ಕೋಟಿ ರೂ ನೀಡಲಾಗಿತ್ತು. ಬೊಮ್ಮಾಯಿ ಬಜೆಟ್‌ನಲ್ಲಿ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ- 61488 ಕೋಟಿ ರೂ ನೀಡಲಾಗಿತ್ತು.
ಬೊಮ್ಮಾಯಿ ಬಜೆಟ್‌ನಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿ- 9,699 ಕೋಟಿ ರೂ. ನೀಡಲಾಗಿತ್ತು. ಬೊಮ್ಮಾಯಿ ಅವರು ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ 3458 ಕೋಟಿ ರೂಪಾಯಿ ನೀಡಲಾಗಿತ್ತು. ಉದ್ದೇಶಿತ ಆಯವ್ಯಯದಲ್ಲಿ ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಅನುದಾನ 46,278 ಕೋಟಿ ರೂ. ಘೋಷಿಸಲಾಗಿತ್ತು. ಬಸವರಾಜ ಬೊಮ್ಮಾಯಿ ಅವರು ಮಕ್ಕಳ ಅಭ್ಯುದಯಕ್ಕೆ ಆಯವ್ಯಯದಲ್ಲಿ ಒದಗಿಸಿದ ಅನುದಾನ 47,256 ಕೋಟಿ ರೂ ಆಗಿತ್ತು.
ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗೆ ಎಷ್ಟು ಮೀಸಲಿಟ್ಟಿದ್ದಾರೆ?
ಶಕ್ತಿ' ಯೋಜನೆ: ರಾಜ್ಯ ಸರ್ಕಾರದ ಸ್ವಾಮ್ಯದ ಎಲ್ಲಾ 4 ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಸೌಲಭ್ಯ, ಪ್ರತಿ ದಿನ ಸರಾಸರಿ 50 ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರಿಗೆ ಅನುಕೂಲ: ವಾರ್ಷಿಕ 4,000 ಕೋಟಿ ರೂ.
'ಗೃಹ ಜ್ಯೋತಿ': 200 ಯುನಿಟ್ ವರೆಗಿನ ಗೃಹ ಬಳಕೆ ವಿದ್ಯುತ್ ಉಚಿತ. 2 ಕೋಟಿಗೂ ಹೆಚ್ಚು ಗ್ರಾಹಕರಿಗೆ ಅನುಕೂಲ: ವಾರ್ಷಿಕ 13,910 ಕೋಟಿ ರೂ. ವೆಚ್ಚ. `ಗೃಹ ಲಕ್ಷ್ಮಿ': ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ.
ನೆರವು ನೇರ ವರ್ಗಾವಣೆ: 30,000 ಕೋಟಿ ರೂ. ವೆಚ್ಚ. 'ಅನ್ನ ಭಾಗ್ಯ': ಎಲ್ಲ ಅರ್ಹ ಫಲಾನುಭವಿಗಳಿಗೆ 5 ಕೆ.ಜಿ. ಹೆಚ್ಚುವರಿ ಆಹಾರಧಾನ್ಯ ವಿತರಣೆ, ಆಹಾರಧಾನ್ಯ ಲಭ್ಯವಾಗುವವರೆಗೆ ಪ್ರತಿ ಫಲಾನುಭವಿಗೆ 170 ರೂ. ನಂತೆ ಡಿಬಿಟಿ ಮೂಲಕ ನಗದು ವರ್ಗಾವಣೆ. ವಾರ್ಷಿಕ 10,000 ಕೋಟಿ ರೂ. ವೆಚ್ಚ.
'ಯುವ ನಿಧಿ': ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ. ಹಾಗೂ ಡಿಪ್ಲೊಮಾ ಪಡೆದವರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.