ಕನ್ನಡ ಸುದ್ದಿ / ಕರ್ನಾಟಕ /
Karnataka Budget 2023: ಸ್ಟಾರ್ಟಪ್, ಸಂಶೋಧನೆ, ಇನ್ನೋವೇಶನ್ ಕಡೆಗೆ ಗಮನ; ಕರ್ನಾಟಕ ಬಜೆಟ್ನಲ್ಲಿದ್ದ 12 ಅಂಶಗಳು
Karnataka Budget 2023: ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಈ ಸಲದ ಕರ್ನಾಟಕ ಬಜೆಟ್ನಲ್ಲಿ ಕೆಲವು ಹೊಸ ಉಪಕ್ರಮಗಳನ್ನು ಘೋಷಿಸಲಾಗಿದೆ. ಬಹುತೇಕ ಸ್ಟಾರ್ಟಪ್, ಸಂಶೋಧನೆ, ಇನ್ನೋವೇಶನ್ ಕಡೆಗೆ ಹೆಚ್ಚಿನ ಗಮನ ಇದ್ದು, ಬಜೆಟ್ನಲ್ಲಿದ್ದ 12 ಅಂಶಗಳು ಹೀಗಿವೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಈ ಸಲದ ಕರ್ನಾಟಕ ಬಜೆಟ್ನಲ್ಲಿ ಕೆಲವು ಹೊಸ ಉಪಕ್ರಮಗಳನ್ನು ಘೋಷಿಸಲಾಗಿದೆ. (ಸಾಂಕೇತಿಕ ಚಿತ್ರ) (Canva)
ಜಾಗತಿಕವಾಗಿ ಭಾರತವು ವಿಜ್ಞಾನ, ತಂತ್ರಜ್ಞಾನ, ಸ್ಟಾರ್ಟಪ್, ಸಂಶೋಧನೆ, ಇನ್ನೋವೇಶನ್ ಮುಂತಾದ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ. ಇದರಲ್ಲಿ ಕರ್ನಾಟಕದ್ದೂ ಬಹುಪಾಲು ಇದೆ. ಇಂತಹ ಸನ್ನಿವೇಶದಲ್ಲಿ ಕರ್ನಾಟಕದ ಬಜೆಟ್ನಲ್ಲಿ ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಮಟ್ಟಿಗೆ ಕೆಲವು ಯೋಜನೆಗಳನ್ನು ಘೋಷಿಸಲಾಗಿದೆ.
ಈ ಘೋಷಣೆಗಳ ಪೈಕಿ, ಸಂಶೋಧನಾ ಕೇಂದ್ರ ಸ್ಥಾಪನೆ, ಇನ್ನೋವೇಶನ್ ಸೆಂಟರ್, ಮೂಲಸೌಕರ್ಯ ಅಭಿವೃದ್ಧಿ ಮುಂತಾದ ಉಪಕ್ರಮಗಳು ಕೂಡ ಸೇರಿಕೊಂಡಿವೆ. ಹೆಲ್ತ್ ಟೆಕ್, ಮೆಡ್ ಟೆಕ್ ಕ್ಷೇತ್ರಗಳನ್ನೂ ಬಜೆಟ್ ಪರಿಗಣಿಸಿದ್ದು, ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆಯನ್ನೂ ಘೋಷಿಸಿದೆ.
ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಕುರಿತಾಗಿ ಕರ್ನಾಟಕ ಬಜೆಟ್ನಲ್ಲಿದ್ದ 12 ಅಂಶಗಳು ಹೀಗಿವೆ..
- ನವೋದ್ಯಮಿಗಳಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ವಿಶ್ವದರ್ಜೆಯ ಪರಿಪೋಷಣ ಕೇಂದ್ರ ʻINNOVERSEʼ ಅನ್ನು 50 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂಪಾಯಿ ಅನುದಾನ ಘೋಷಣೆ
- ಸ್ಟಾರ್ಟಪ್ ನೀತಿಯಡಿಯಲ್ಲಿ ಅನುದಾನ ನೀಡಿರುವ ಸ್ಟಾರ್ಟ್ಅಪ್ಗಳ ಪರಿಹಾರಗಳ ಅಳವಡಿಕೆಯನ್ನು ವೇಗಗೊಳಿಸಲು ʻPropelʼ ಎಂಬ 5 ಕೋಟಿ ರೂಪಾಯಿ ವೆಚ್ಚದ ಯೋಜನೆ ಜಾರಿಗೆ 1 ಕೋಟಿ ರೂಪಾಯಿ ಅನುದಾನ.
- ಸ್ಟಾರ್ಟ್ಅಪ್ಗಳಿಗೆ Global Innovation Alliance- Market Access Programme (GIA-MAP) ಎಂಬ 3 ಕೋಟಿ ರೂಪಾಯಿ ಕಾರ್ಯಕ್ರಮಕ್ಕಾಗಿ 1 ಕೋಟಿ ರೂಪಾಯಿ.
- New Age Incubation Network (NAIN) ಕೇಂದ್ರಗಳನ್ನು ಬೆಂಬಲಿಸಲು ತಂತ್ರಜ್ಞಾನ ವರ್ಗಾವಣೆ ಸಂಸ್ಥೆಯನ್ನು (Technology Transfer Organisation) 4 ಕೋಟಿ ರೂಪಾಯಿ ಯೋಜನಾ ವೆಚ್ಚದಲ್ಲಿ ಸ್ಥಾಪಿಸಲು ಎರಡು ಕೋಟಿ ರೂಪಾಯಿ ಅನುದಾನ ನಿಗದಿ
- ಹೆಲ್ತ್-ಟೆಕ್ ಮತ್ತು ಮೆಡ್-ಟೆಕ್ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ (Centre of Excellence in Health Tech & Med Tech) ಕೇಂದ್ರವನ್ನು 50 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲು 10 ಕೋಟಿ ರೂಪಾಯಿ ಅನುದಾನ ಘೋಷಣೆ
- ಜೈವಿಕ-ಬ್ಯಾಂಕ್ (Bio Bank) ಅನ್ನು 5 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಪ್ರಸಕ್ತ ಸಾಲಿನಲ್ಲಿ 2 ಕೋಟಿ ರೂಪಾಯಿ ಅನುದಾನ
- ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ʻCentre of Excellence in Wireless & Wired Technologies in Karnataka (COEWWT)ʼ ಅನ್ನು 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲು 5 ಕೋಟಿ ರೂ. ಅನುದಾನ
- ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಡಿಸೈನ್ (Centre of Excellence in Design) ಕೇಂದ್ರವನ್ನು 20 ಕೋಟಿ ರೂಪಾಯಿ ಯೋಜನಾ ವೆಚ್ಚದಲ್ಲಿ ಸ್ಥಾಪಿಸಲು ಈ ವರ್ಷಕ್ಕೆ 8 ಕೋಟಿ ರೂ. ನಿಗದಿ.
- ಕರ್ನಾಟಕ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನೀತಿಯ ಅನುಷ್ಠಾನಕ್ಕೆ ದೃಢವಾದ ಮತ್ತು ಪಾರದರ್ಶಕ ಆಡಳಿತದ ಚೌಕಟ್ಟನ್ನು ರಚಿಸುವುದು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು ಅಗತ್ಯ. ಈ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನವನ್ನು (ಕೆಎಸ್ಆರ್ಎಫ್) ರಚನೆ.
- ರಾಜ್ಯದ ವಿಜ್ಞಾನ ಕೇಂದ್ರಗಳ ಮೂಲಸೌಲಭ್ಯಗಳನ್ನು ಬಲಪಡಿಸಲು, ಎರಡು ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ತಲಾ 50 ಲಕ್ಷ ರೂ. ವೆಚ್ಚದಲ್ಲಿ ಮತ್ತು ನಾಲ್ಕು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ತಲಾ 30 ಲಕ್ಷ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು. ಈ ಯೋಜನೆಗೆ ಪ್ರಸ್ತುತ ವರ್ಷದಲ್ಲಿ 2 ಕೋಟಿ ರೂ. ಅನುದಾನ
- ಸಂಶೋಧನೆ ಮತ್ತು ನಾವೀನ್ಯತೆ ವ್ಯವಸ್ಥೆಯು ಉದ್ಯಮಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಗಳ ನಡುವಿನ ಸಂಕೀರ್ಣ ವ್ಯವಸ್ಥೆಯನ್ನು ಒಟ್ಟುಗೂಡಿಸಲು, ಅವುಗಳ ನಡುವೆ ಸಮನ್ವಯ ಸಾಧಿಸಲು ಇ-ಪ್ಲಾಟ್ಫಾರ್ಮ್ e-KRDIP ಅನ್ನು ರಚಿಸಲಾಗುತ್ತದೆ.
- ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ರೈತರು, ಕುಶಲಕರ್ಮಿಗಳು, ಕಾರ್ಮಿಕರು, ಯಂತ್ರಕಾರರು ಮತ್ತು ಸಾಮಾನ್ಯ ಜನರು ರಚಿಸಿದ ತಳಹಂತದ ನಾವೀನ್ಯತೆಗಳನ್ನು ಗುರುತಿಸಿ, ವ್ಯಾಖ್ಯಾನಿಸಲು ಮತ್ತು ಅವುಗಳಿಗೆ ಮೌಲ್ಯವನ್ನು ದೊರಕಿಸುವ ಮೂಲಕ ವಾಣಿಜ್ಯೀಕರಣಕ್ಕೆ ಬೆಂಬಲವನ್ನು ನೀಡುವ ಯೋಜನೆಗೆ 5 ಕೋಟಿ ರೂ. ಒದಗಿಸಲಾಗುತ್ತದೆ.