Cabinet Expansion: ಕರ್ನಾಟಕ ಸಂಪುಟ ವಿಸ್ತರಣೆ, ನೂತನ ಸಚಿವರಿಗೆ ಖಾತೆ ಹಂಚಿಕೆ, ಅಧಿಕೃತ ಘೋಷಣೆ ಬಾಕಿ, ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ
Karnataka Ministers And Their Portfolios: ಕರ್ನಾಟಕ ಸಂಪುಟ ವಿಸ್ತರಣೆಯಾಗಿದ್ದು, ನೂತನ ಸಚಿವರಿಗೆ ಖಾತೆ ಹಂಚಿಕೆ ಬಾಕಿ ಉಳಿದಿದೆ. ಇದೀಗ ಯಾರಿಗೆ ಯಾವ ಖಾತೆ ಎಂಬ ಮಾಹಿತಿ ಹೊರಬಿದ್ದಿದ್ದು, ಸರಕಾರ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರಕಾರವು ಇಂದು ಪರಿಪೂರ್ಣ ಸಂಪುಟ ರಚನೆ ಮಾಡಿದೆ. ಖಾತೆ ಹಂಚಿಕೆ ಕುರಿತು ಸರಕಾರ ಅಧಿಕೃತವಾಗಿ ಇನ್ನೂ ಪಟ್ಟಿ ಪ್ರಕಟಿಸದೆ ಇದ್ದರೂ ಯಾವ ಸಚಿವರಿಗೆ ಯಾವ ಖಾತೆ ಎಂಬ ವಿವರವನ್ನು ಬಲ್ಲ ಮೂಲಗಳು ನೀಡಿವೆ. ಈಗಾಗಲೇ ಹಾಲಿ ಹತ್ತು ಮಂದಿಯ ಸಸಚಿವ ಸಂಪುಟಕ್ಕೆ 24 ಸಚಿವರು ಸೇರಿದ್ದು, ಪರಿಪೂರ್ಣ ಸಂಪುಟ ರಚನೆಯಾಗಿದೆ.
ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು ಹಣಕಾಸು, ಆಡಳಿತ ಸುಧಾರಣೆ , ವಾರ್ತಾ ಇಲಾಖೆ ಹಾಗೂ ಹಂಚಿಕೆ ಮಾಡದಿರುವ ಇತರೆ ಖಾತೆಗಳನ್ನು ಇಟ್ಟುಕೊಳ್ಳಲಿದ್ದಾರೆ. ಇದೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ (ಬಿಡಿಎ, ಬಿಬಿಎಂಪಿ. ಇತ್ಯಾದಿ) ಖಾತೆಗಳನ್ನು ಪಡೆದಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎಂಬ ಪಟ್ಟಿ ಇಲ್ಲಿ ನೀಡಲಾಗಿದೆ. "ಈ ಪಟ್ಟಿ ಅಂತಿಮವಾಗಿದ್ದು, ಸರಕಾರ ಅಧಿಕೃತವಾಗಿ ಘೋಷಣೆ ಮಾಡುವುದಷ್ಟೇ ಬಾಕಿ" ಎಂದು ಬಲ್ಲಮೂಲಗಳು ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿವೆ.
ಯಾರಿಗೆ ಯಾವ ಖಾತೆ?
- ಸಿಎಂ ಸಿದ್ದರಾಮಯ್ಯ - ಹಣಕಾಸು, ಆಡಳಿತ ಸುಧಾರಣೆ , ವಾರ್ತಾ ಇಲಾಖೆ ಹಾಗೂ ಹಂಚಿಕೆ ಮಾಡದಿರುವ ಇತರೆ ಖಾತೆಗಳು
- ಡಾ.ಜಿ ಪರಮೇಶ್ವರ - ಗೃಹ
- ಡಿಸಿಎಂ ಡಿಕೆ ಶಿವಕುಮಾರ್ - ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ (ಬಿಡಿಎ, ಬಿಬಿಎಂಪಿ. ಇತ್ಯಾದಿ)
- ಎಂಬಿ ಪಾಟೀಲ್ - ಬೃಹತ್ ಮತ್ತು ಮಧ್ಯಮ ಕೈಗಾರಿಕೆ
- ಕೆಹೆಚ್ ಮುನಿಯಪ್ಪ - ಆಹಾರ ಮತ್ತು ನಾಗರಿಕ ಪೂರೈಕೆ
- ಕೆಜೆ ಜಾರ್ಜ್ - ಇಂಧನ
- ಜಮೀರ್ ಅಹ್ಮದ್ - ವಸತಿ ಮತ್ತು ವಕ್ಫ್
- ರಾಮಲಿಂಗಾರೆಡ್ಡಿ - ಸಾರಿಗೆ
- ಸತೀಶ ಜಾರಕಿಹೊಳಿ - ಲೋಕೋಪಯೋಗಿ
- ಪ್ರಿಯಾಂಕ್ ಖರ್ಗೆ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ
- ಹೆಚ್ಕೆ ಪಾಟೀಲ್ - ಕಾನೂನು ಮತ್ತು ಸಂಸದೀಯ ವ್ಯವಹಾರ
- ಕೃಷ್ಣ ಭೈರೇಗೌಡ -ಕಂದಾಯ
- ಚೆಲುವರಾಯಸ್ವಾಮಿ - ಕೃಷಿ
- ಕೆ. ವೆಂಕಟೇಶ್ - ಪಶು ಸಂಗೋಪನೆ ಮತ್ತು ರೇಷ್ಮೆ
- ಡಾ. ಮಹದೇವಪ್ಪ - ಸಮಾಜ ಕಲ್ಯಾಣ
- ಈಶ್ವರ ಖಂಡ್ರೆ - ಅರಣ್ಯ
- ಕೆ.ಎನ್. ರಾಜಣ್ಣ - ಸಹಕಾರ
- ದಿನೇಶ್ ಗುಂಡೂರಾವ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಶರಣ ಬಸಪ್ಪ ದರ್ಶನಾಪೂರ - ಸಣ್ಣ ಕೈಗಾರಿಕೆ
- ಶಿವಾನಂದ ಪಾಟೀಲ್ - ಜವಳಿ ಮತ್ತು ಸಕ್ಕರೆ
- ಆರ್ಬಿ ತಿಮ್ಮಾಪುರ - ಅಬಕಾರಿ ಮತ್ತು ಮುಜರಾಯಿ
- ಎಸ್ಎಸ್ ಮಲ್ಲಿಕಾರ್ಜುನ - ಗಣಿಗಾರಿಕೆ ಮತ್ತು ತೋಟಗಾರಿ
- ಕೆ.ಶಿವರಾಜ ತಂಗಡಗಿ - ಹಿಂದುಳಿದ ವರ್ಗಗಳ ಕಲ್ಯಾಣ
- ಡಾ. ಶರಣ ಪ್ರಕಾಶ್ ಪಾಟೀಲ್ - ಉನ್ನತ ಶಿಕ್ಷಣ
- ಮಂಕಾಳೆ ವೈದ್ಯ - ಮೀನುಗಾರಿಕೆ
- ಲಕ್ಷ್ಮಿ ಹೆಬ್ಬಾಳ್ಕರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ರಹೀಂ ಖಾನ್ - ಪೌರಾಡಳಿತ
- ಡಿ. ಸುಧಾಕರ್ - ಯೋಜನೆ ಮತ್ತು ಸಾಂಖಿಕ
- ಸಂತೋಷ್ ಲಾಡ್ - ಕಾರ್ಮಿಕ
- ಭೋಸರಾಜ್ - ಸಣ್ಣ ನೀರಾವರಿ
- ಭೈರತಿ ಸುರೇಶ್ - ನಗರಾಭಿವೃದ್ಧಿ
- ಮಧು ಬಂಗಾರಪ್ಪ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ಡಾ. ಎಂಸಿ ಸುಧಾಕರ್ - ವೈದ್ಯಕೀಯ ಶಿಕ್ಷಣ
- ಬಿ. ನಾಗೇಂದ್ರ - ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ
ಸಚಿವ ಸಂಪುಟದ ಎಲ್ಲ 34 ಸ್ಥಾನಗಳನ್ನು ಭರ್ತಿ ಮಾಡಲಾಗಿದ್ದು, ಆಡಳಿತಕ್ಕೆ ಹೊಸ ರೂಪ ಕೊಡುವ ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸಲಾಗಿದೆ. ಮುಖ್ಯಮಂತ್ರಿ ಹೊರತುಪಡಿಸಿ, 33 ಸ್ಥಾನಗಳನ್ನೂ ಭರ್ತಿ ಮಾಡಲಾಗಿದೆ. ಖಾತೆ ಹಂಚಿಕೆ ಇವತ್ತು ಅಥವಾ ನಾಳೆ ಮಾಡಲಾಗುವುದು ಎಂದು ತಿಳಿಸಿದರು.
ಸಚಿವ ಸಂಪುಟದ ಸ್ವರೂಪದ ಕುರಿತು ವಿವರಿಸಿದ ಮುಖ್ಯಮಂತ್ರಿಗಳು, ಸಚಿವ ಸಂಪುಟವು ಹೊಸ ಹಾಗೂ ಹಳೆ ಮುಖಗಳ ಸಮ್ಮಿಶ್ರಣವಾಗಿದೆ. ಮೊದಲ ಬಾರಿ ಗೆದ್ದವರನ್ನು ಮಂತ್ರಿ ಮಾಡಿಲ್ಲ ಎಂದರು.