Karnataka Cabinet Reshuffle: ಕರ್ನಾಟಕದಲ್ಲಿ ಸಚಿವ ಸಂಪುಟ ಪುನರಚನೆ ಚಟುವಟಿಕೆ ಬಿರುಸು: 20 ತಿಂಗಳ ಸೂತ್ರದಡಿ ಯಾವೆಲ್ಲಾ ಸಚಿವರಿಗೆ ಕೊಕ್
Karnataka Cabinet Reshuffle: ಕರ್ನಾಟದಲ್ಲಿ ಒಂದೂವರೆ ವರ್ಷದ ಆಡಳಿತ ಪೂರೈಸಿರುವ ಕಾಂಗ್ರೆಸ್, 20 ತಿಂಗಳ ಲೆಕ್ಕದಲ್ಲಿ ಸಂಪುಟ ಪುನರಚನೆ ಮಾಡಿ ಕೆಲ ಹಿರಿಯ ಶಾಸಕರಿಗೆ ಅಧಿಕಾರ ನೀಡುವ ಇರಾದೆ ಹೊಂದಿದೆ.
Karnataka Cabinet Reshuffle:ಕರ್ನಾಟಕದಲ್ಲಿ ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆ ಮೂರಕ್ಕೆ ಮೂರು ಕ್ಷೇತ್ರದಲ್ಲಿ ಗೆದ್ದು ಭರ್ಜರಿ ಉಮೇದಿನಲ್ಲಿರುವ ಕಾಂಗ್ರೆಸ್ ಇದೇ ನೆಪದಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಿ ಆಡಳಿತಕ್ಕೆ ಬಲ ತುಂಬಲು ಮುಂದಾಗಿದೆ. ಒಂದು ಸ್ಥಾನದ ಜತೆಗೆ ವಿರೋಧಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನ ಒಂದೊಂದು ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್‌ಗೆ ಈಗ ಮುಂದಿನ ಮೂರೂವರೆ ವರ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಇರಾದೆ ಇದೆ. ಈ ಕಾರಣದಿಂದಲೇ ಸಚಿವ ಸಂಪುಟ ಪುನರ್ ರಚಿಸುವ ಲೆಕ್ಕಾಚಾರವನ್ನು ಕಾಂಗ್ರೆಸ್ ವರಿಷ್ಠರು ಹಾಕಿಕೊಂಡಿದ್ದಾರೆ. ಈಗಾಗಲೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೆಹಲಿ ತಲುಪಿದ್ದು. ಸಿಎಂ ಸಿದ್ದರಾಮಯ್ಯ ಅವರು ಇಂದು ಸಂಜೆ ದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟ ಪುನರಚನೆ ಕುರಿತು ಸ್ಪಷ್ಟ ಸಂದೇಶ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಇಬ್ಬರಿಗೂ ಸಿಗುವ ಸಾಧ್ಯತೆಯಿದೆ.
ಲೆಕ್ಕಾಚಾರ ಹೇಗಿದೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷ ಕಳೆದಿದೆ. ಈಗಾಗಲೇ ಸಚಿವರಾಗಿ ಕೆಲಸ ಮಾಡಿರುವ ಕೆಲವರನ್ನು ಕೈ ಬಿಟ್ಟು ಅದೇ ಸಮುದಾಯ ಹಾಗೂ ಜಿಲ್ಲಾವಾರು ಪ್ರಾತಿನಿಧ್ಯ ನೀಡುವ ಉದ್ದೇಶವನ್ನು ಕೈ ಕಮಾಂಡ್ ಹೊಂದಿದೆ. 20 ತಿಂಗಳ ಅವಧಿಯ ಮೂರು ಭಾಗ ಮಾಡಿ ಅಧಿಕಾರ ಹಂಚುವ ಇರಾದೆಯೂ ಇದ್ದಂತಿದೆ. ವಿರೋಧ ಬಂದರೆ ಎರಡೂವರೆ ವರ್ಷದ ಅವಧಿ ಹಂಚಿಕೆಯೂ ಆಗಬಹುದು ಎನ್ನಲಾಗುತ್ತಿದೆ.
ಇದು ಒಂದು ರೀತಿ ಜೇನುಗೂಡಿಗೆ ಕೈ ಹಾಕಿದ ರೀತಿಯೇ. ಕಳೆದ ಬಾರಿ ಸಿದ್ದರಾಮಯ್ಯ ಅರ್ಧ ಅವಧಿಯಲ್ಲಿ ಶ್ರೀನಿವಾಸಪ್ರಸಾದ್, ಅಂಬರೀಷ್ ಸಹಿತ ಹಲವರನ್ನು ಸಂಪುಟದಲ್ಲಿ ಕೈ ಬಿಟ್ಟು ಭಾರೀ ಭಿನ್ನಮತ ಎದುರಿಸಬೇಕಾಯಿತು. ಈ ಬಾರಿ ಎಚ್ಚರಿಕೆಯಿಂದಲೇ ಹೆಜ್ಜೆ ಇಡಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಉದ್ದೇಶ ಹೊಂದಿದ್ದಾರೆ.
ಹೈಕಮಾಂಡ್ ಸೂಚನೆ
ಈ ನಡುವೆ ಒಂದೂವರೆ ವರ್ಷದಲ್ಲ ಕೆಲಸ ಮಾಡಿರುವ ಹಿರಿಯರ ಸಚಿವರು ಹಾಗೂ ಮೊದಲ ಬಾರಿ ಸಚಿವರಾದವರ ಸಾಧನೆಯ ವಿವರಗಳನ್ನು ಹೈಕಮಾಂಡ್ ತರಿಸಿಕೊಂಡಿದೆ. ಸಚಿವರಿಂದಲೇ ಇಲಾಖೆ ಸಾಧನೆಗಳ ವಿವರ ಪಡೆದುಕೊಳ್ಳಲಾಗಿದ್ದು. ಸಿಎಂ ಹಾಗೂ ಡಿಸಿಎಂ ಕೂಡ ಮಾಹಿತಿ ನೀಡಿದ್ದಾರೆ.
ಈ ಪ್ರಕಾರ ಇಲಾಖೆಯಲ್ಲಿ ಕೆಲಸವನ್ನೇ ಮಾಡದೇ, ಪ್ರವಾಸ ಹೋಗದೇ ಕ್ಷೇತ್ರಕ್ಕೆ ಸೀಮಿತವಾಗಿರುವ,ವಿವಾದದಿಂದ ಮುಜುಗರ ತಂದ ಕೆಲ ಸಚಿವರ ಪಟ್ಟಿ ಮಾಡಲಾಗಿದೆ. ಇದರಲ್ಲಿ ಹಲವರ ಹೆಸರುಗಳಿವೆ. ಅಂಥವರಿಗೆ ಕೊಕ್ ನೀಡುವ ಸಾಧ್ಯತೆ ದಟ್ಟವಾಗಿದೆ.
ಕೆ.ವೆಂಕಟೇಶ್, ರಹೀಮ್ ಖಾನ್, ಶರಣ ಪ್ರಕಾಶ್ ಪಾಟೀಲ್, ಬೋಸರಾಜು,ಡಿ.ಸುಧಾಕರ್, ಶಿವಾನಂದ ಪಾಟೀಲ್ ಸಹಿತ ಕೆಲ ಸಚಿವರು ಸಕ್ರಿಯರಾಗಿಲ್ಲ. ಮಧುಬಂಗಾರಪ್ಪ. ಬೈರತಿ ಸುರೇಶ್, ತಿಮ್ಮಾಪುರ ಅವರ ವಿವಾದಗಳಿಂದ ಸಚಿವ ಸ್ಥಾನ ಕಳೆದುಕೊಳ್ಳಬಹುದು ಎನ್ನಲಾಗುತ್ತಿದೆ.
ಯಾರಿಗೆಲ್ಲಾ ಕೊಕ್
ಮಧುಬಂಗಾರಪ್ಪ
ಆರ್‌ಬಿ ತಿಮ್ಮಾಪುರ
ರಹೀಮ್ ಖಾನ್
ಶರಣಪ್ರಕಾಶ್ ಪಾಟೀಲ್
ಮಂಕಾಳ ವೈದ್ಯ
ಕೆ.ವೆಂಕಟೇಶ್
ಎನ್.ಎಸ್.ಬೋಸರಾಜು
ಚಲುವರಾಯಸ್ವಾಮಿ
ಕೆಎನ್ ರಾಜಣ್ಣ
ಶಿವಾನಂದ ಪಾಟೀಲ್
ಬೈರತಿ ಸುರೇಶ್
ಡಾ.ಮಹದೇವಪ್ಪ
ಡಿ.ಸುಧಾಕರ್
ಯಾರಿಗೆಲ್ಲ ಅವಕಾಶ
ಬಿ.ಕೆ.ಹರಿಪ್ರಸಾದ್( ವಿಧಾನಪರಿಷತ್ ಸದಸ್ಯ)
ತನ್ವೀರ್ ಸೇಠ್( ನರಸಿಂಹರಾಜ ಕ್ಷೇತ್ರ/ಮೈಸೂರು)
ನರೇಂದ್ರ ಸ್ವಾಮಿ( ಮಳವಳ್ಳಿ/ಮಂಡ್ಯ ಜಿಲ್ಲೆ)
ನಾಗೇಂದ್ರ( ಬಳ್ಳಾರಿ ಗ್ರಾಮಾಂತರ/ ಬಳ್ಳಾರಿ ಜಿಲ್ಲೆ)
ಶಿವಲಿಂಗೇಗೌಡ( ಅರಸಿಕೇರೆ/ ಹಾಸನ ಜಿಲ್ಲೆ)
ಬಸವರಾಜ ಶಿವಣ್ಣವರ( ಬ್ಯಾಡಗಿ ಕ್ಷೇತ್ರ/ ಹಾವೇರಿ ಜಿಲ್ಲೆ)
ಲಕ್ಷ್ಮಣ ಸವದಿ( ಅಥಣಿ ಕ್ಷೇತ್ರ/ ಬೆಳಗಾವಿ ಜಿಲ್ಲೆ)
ಯಶವಂತರಾಯಗೌಡ( ಇಂಡಿ/ ವಿಜಯಪುರ ಜಿಲ್ಲೆ)
ಆನೆಕಲ್ ಶಿವಣ್ಣ( ಆನೆಕಲ್/ಬೆಂಗಳೂರು )
ವಿಜಯಾನಂದ ಕಾಶಪ್ಪನವರ( ಹುನಗುಂದ/ ಬಾಗಲಕೋಟೆ ಜಿಲ್ಲೆ)
ಪುಟ್ಟರಂಗಶೆಟ್ಟಿ( ಚಾಮರಾಜನಗರ ಕ್ಷೇತ್ರ)
ರೂಪಾ ಶಶಿಧರ್( ಕೆಜಿಎಫ್/ ಕೋಲಾರ)