ಕನ್ನಡ ಸುದ್ದಿ  /  ಕರ್ನಾಟಕ  /  Bengaluru Rain: ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ವರ್ಷಧಾರೆ; ಬೆಂಗಳೂರಿನಲ್ಲಿ ಭಾನುವಾರ ಎಷ್ಟು ಪ್ರಮಾಣದ ಮಳೆಯಾಗಿದೆ

Bengaluru Rain: ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ವರ್ಷಧಾರೆ; ಬೆಂಗಳೂರಿನಲ್ಲಿ ಭಾನುವಾರ ಎಷ್ಟು ಪ್ರಮಾಣದ ಮಳೆಯಾಗಿದೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೂನ್ 2ರ ಭಾನುವಾರ ಕುಂಭದ್ರೋಣ ಮಳೆಯಾಗಿದೆ. ಇದು ಜನಜೀವನ ಅಸ್ತವ್ಯಸ್ತಕ್ಕೆ ಕಾರಣವಾಯಿತು. ನಗರದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಮಳೆಯ ಪ್ರಮಾಣ ಸೇರಿದಂತೆ ಇದರ ಸಂಪೂರ್ಣ ವಿವರ ಇಲ್ಲಿದೆ.

ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ವರ್ಷಧಾರೆ; ಬೆಂಗಳೂರಿನಲ್ಲಿ ಭಾನುವಾರ ಎಷ್ಟು ಪ್ರಮಾಣದ ಮಳೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ವರ್ಷಧಾರೆ; ಬೆಂಗಳೂರಿನಲ್ಲಿ ಭಾನುವಾರ ಎಷ್ಟು ಪ್ರಮಾಣದ ಮಳೆಯಾಗಿದೆ.

ಬೆಂಗಳೂರು: ಭಾನುವಾರ (ಜೂನ್ 2) ರಾತ್ರಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಕುಂಭದ್ರೋಣ ಮಳೆಯಾಗಿದ್ದು (Bengaluru Heavy Rain), ಮತ್ತೊಮ್ಮೆ ನಾಗರಿಕರಲ್ಲಿ ಭೀತಿಯನ್ನು ಸೃಷ್ಟಿಸಿದೆ. ಭಾರಿ ಅಂದ್ರೆ ಭಾರಿ ಮಳೆಯಿಂದಾಗಿ ನಗರದಲ್ಲಿ ನಿನ್ನೆ ರಾತ್ರಿ ಸೃಷ್ಟಿಯಾದ ಅವಾಂತರಗಳು ಒಂದೆರಡಲ್ಲ. ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಹಲವು ಮರಗಳು ಬುಡಮೇಲಾಗಿ ರಸ್ತೆಗಳ ಮೇಲೆ ಬಿದ್ದಿದ್ದವು. ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆ ಸಾರಿಗೆಗೆ ಮಾತ್ರವಲ್ಲದೆ, ರೈಲು ಸಂಚಾರಕ್ಕೂ ಅಡ್ಡಿಯುಂಟಾಯಿತು. ಮರಗಳು ಧರೆಗುರುಳಿದ ಪರಿಣಾಮ ನಗರದ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಿತ್ತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನಲ್ಲಿ ಜೂನ್ 2ರ ಭಾನುವಾರ ದಾಖಲೆಯ ಮಳೆಯಾಗಿದೆ. ಬರೋಬ್ಬರಿ 103.55 ಮಿಲಿ ಮೀಟರ್ ಮಳೆಯಾಗಿದೆ ಎಂದು ವರದಿಯಾಗಿದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮಿಸಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅದರಂತೆ ನಗರದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ.

"ಟ್ರಿನಿಟಿ ನಿಲ್ದಾಣದ ನಂತರ ಎಂಜಿ ರಸ್ತೆಯ ಕಡೆಗೆ ಸಾಗುವ ಮೆಟ್ರೋ ಹಳಿಗಳ ಮೇಲೆ ಮರದ ಕೊಂಬೆ ಬಿದ್ದ ಕಾರಣ ನೇರಳ ಮಾರ್ಗದ ಮೆಟ್ರೋ ಕೆಲಕಾಲ ಸ್ಥಗಿತವಾಗಿತ್ತು. ಇಂದಿರಾನಗರದಿಂದ ವೈಟ್‌ಫೀಲ್ಡ್ ಮತ್ತು ಎಂ.ಜಿ.ರಸ್ತೆಯಿಂದ ಚಲ್ಲಘಟ್ಟದವರೆಗೆ ರಾತ್ರಿ 7.26ರಿಂದ ಮಾತ್ರ ರೈಲುಗಳು ಸಂಚಾರದಲ್ಲಿ ವ್ಯತ್ಯಾಯ ಕಂಡುಬಂದಿತು. ಮರಗ ಕೊಂಬೆಗಳನ್ನು ತೆರವುಗೊಳಿಸಿದ ನಂತರ ಮೆಟ್ರೋ ಸುಗಮ ಸಂಚಾರವನ್ನು ಪುನರಾರಂಭಿಸಲಾಯಿತು.

ಇಡೀ ನೇರಳೆ ಮಾರ್ಗದಲ್ಲಿ ಸೇವೆ ಸಹಜ ಸ್ಥಿತಿಗೆ ಮರಳಿದ್ದು, ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ ವರೆಗಿನ ರೈಲುಗಳು ವೇಳಾಪಟ್ಟಿಯಂತೆ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಗಂಟೆಗಳ ಕಾಲ ಮಳೆ ಮುಂದುವರಿದಿದ್ದರಿಂದ, ರಸ್ತೆಯಲ್ಲಿ ತೀವ್ರ ಜಲಾವೃತಗೊಂಡು ಪ್ರಯಾಣಿಕರಿಗೆ ದೊಡ್ಡ ಅನಾನುಕೂಲತೆ ಉಂಟಾಯಿತು. ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಮಾತನಾಡಿ, 'ಭಾರಿ ಮಳೆಯಿಂದಾಗಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ 58 ಸ್ಥಳಗಳಲ್ಲಿ ನೀರು ನಿಂತಿದೆ. 39 ಸ್ಥಳಗಳಲ್ಲಿ ಮರಗಳು ಬಿದ್ದಿವೆ. ರಸ್ತೆಗಳಲ್ಲಿ ಬಿದ್ದಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸುವ ಕೆಲಸ ಕಾರ್ಯಚರಣೆ ನಡೆದಿದೆ ಎಂದು ಹೇಳಿದ್ದಾರೆ.

ಮಳೆಯಿಂದ ಎದುರಿಸಿದ ಸಮಸ್ಯೆಗಳ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ಹೃದ್ರೋಗ ತಜ್ಞ ದೀಪಕ್ ಕೃಷ್ಣಮೂರ್ತಿ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ಸರ್ಕಾರ ಯಾವುದೇ ಇರಲಿ, 30 ನಿಮಿಷಗಳ ಕಾಲ ಮಳೆ ಬಂದರೂ ಸಾಮಾನ್ಯ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಇದು ಮಾರತ್ತಹಳ್ಳಿಯ ಸ್ಪೈಸ್ ಗಾರ್ಡನ್ ಏರಿಯಾದ ದೃಶ್ಯ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗರು "ಮನೆಗೆ ಹೋಗಲು ಸಾಮಾನ್ಯ 40 ರ ಬದಲು 1.5 ಗಂಟೆ ತೆಗೆದುಕೊಂಡಿತು. ಏಕೆಂದರೆ ಮಳೆ ಅಥವಾ ಸಂಚಾರ ದಟ್ಟಣೆಯಿಂದಾಗಿ ಅಲ್ಲ, ಆದರೆ ಮನೆಯ ಕಡೆಗೆ ಪ್ರತಿ ತಿರುವಿನಲ್ಲಿ ಕನಿಷ್ಠ 1 ಮರ ಬಿದ್ದಿದ್ದರಿಂದ ಸುತ್ತಿ ಬಳಸಿ ಬರಬೇಕಾಯಿತು ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಜೂನ್ 2ರ ಭಾನುವಾರ ವೈಟ್‌ಫೀಲ್ಡ್, ಕೆಆರ್‌ಪುರಂ, ಹಳೆಯ ಮದ್ರಾಸ್ ರಸ್ತೆ, ಇಂದಿರಾ ನಗರ, ಹಲಸೂರು, ಟ್ರಿನಿಟಿ, ಎಂಜಿ ರಸ್ತೆ, ಕಬ್ಬನ್ ಪಾರ್ಕ್, ವಿಧಾನಸೌಧ, ಕೆಆರ್ ಮಾರುಕಟ್ಟೆ, ಮೆಜೆಸ್ಟಿಕ್, ಶಿವಾಜಿನಗರ, ವಂಸತನಗರ, ಹೆಬ್ಬಾಳ, ಆರ್‌ಟಿ ನಗರ, ಮಲ್ಲೇಶ್ವರಂ, ಯಶವಂತಪುರ, ನಾಗವಾರ, ಕಲ್ಯಾಣ ನಗರ, ಕಸ್ತೂರಿ ನಗರ, ಟಿನ್ ಫ್ಯಾಕ್ಟರಿ ಸೇರಿದಂತೆ ಹಲವೆಡೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಅಂದರೆ ಭಾರಿ ಮಳೆಯಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024