CET Result 2025: ನಾಳೆ ಕರ್ನಾಟಕ ಯುಜಿ ಸಿಇಟಿ ಪರೀಕ್ಷೆ2025ರ ಫಲಿತಾಂಶ ಪ್ರಕಟ, ಫಲಿತಾಂಶದ ವಿವರ ಪಡೆಯುವುದು ಹೇಗೆ
ಕನ್ನಡ ಸುದ್ದಿ  /  ಕರ್ನಾಟಕ  /  Cet Result 2025: ನಾಳೆ ಕರ್ನಾಟಕ ಯುಜಿ ಸಿಇಟಿ ಪರೀಕ್ಷೆ2025ರ ಫಲಿತಾಂಶ ಪ್ರಕಟ, ಫಲಿತಾಂಶದ ವಿವರ ಪಡೆಯುವುದು ಹೇಗೆ

CET Result 2025: ನಾಳೆ ಕರ್ನಾಟಕ ಯುಜಿ ಸಿಇಟಿ ಪರೀಕ್ಷೆ2025ರ ಫಲಿತಾಂಶ ಪ್ರಕಟ, ಫಲಿತಾಂಶದ ವಿವರ ಪಡೆಯುವುದು ಹೇಗೆ

ಕರ್ನಾಟಕ ಸಿಇಟಿ ಫಲಿತಾಂಶವನ್ನು ಮೇ 24ರ ಶನಿವಾರ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಪ್ರಕಟಣೆ ಮೂಲಕ ತಿಳಿಸಿದೆ.

ಕರ್ನಾಟಕ ಸಿಇಟಿ ಫಲಿತಾಂಶ ಶನಿವಾರ ಪ್ರಕಟವಾಗಲಿದೆ.
ಕರ್ನಾಟಕ ಸಿಇಟಿ ಫಲಿತಾಂಶ ಶನಿವಾರ ಪ್ರಕಟವಾಗಲಿದೆ.

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ತಿಂಗಳಿನಲ್ಲಿ ನಡೆಸಿದ್ದ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (CET Result 2025) ಫಲಿತಾಂಶವನ್ನು ಶನಿವಾರ (ಮೇ 24) ಪ್ರಕಟಿಸಲಿದೆ. ಅಂದು ಬೆಳಿಗ್ಗೆ 11.30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರು ಪ್ರಾಧಿಕಾರದ ಕಚೇರಿಯಲ್ಲಿ ಸಿಇಟಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಧ್ಯಾಹ್ನ 2 ಗಂಟೆ ನಂತರ ಈ ಕೆಳಗಿನ ವೆಬ್ ಸೈಟ್ ನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಫಲಿತಾಂಶದ ವಿವರಗಳು ಲಭ್ಯವಾಗಲಿವೆ. https://karresults.nic.in ಮೂಲಕವಿವರಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಾಧಿಕಾರವು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಎಂಜಿನಿಯರಿಂಗ್‌ , ಕೃಷಿ, ಫಾರ್ಮಸಿ, ಆಯುಷ್‌ ಸೇರಿದಂತೆ ವಿವಿಧ ವಿಷಯಗಳ ಟಾಪರ್‌ಗಳು ಹಾಗೂ ಫಲಿತಾಂಶದ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಬೆಳಿಗ್ಗೆ ಸಚಿವರ ಪತ್ರಿಕಾಗೋಷ್ಠಿಯಲ್ಲಿ ಸಿಇಟಿಯಲ್ಲಿ ಉತ್ತೀರ್ಣರಾದ ವಿವರಗಳನ್ನು ಪ್ರಕಟಿಸಲಾಗುತ್ತದೆ. ಆನಂತರ ಸಂಪೂರ್ಣ ವಿವರ ವೆಬ್‌ಸೈಟ್‌ನಲ್ಲಿ ಸಿಗಲಿದೆ. ಕಾಲೇಜುಗಳಲ್ಲಿ ಇಲ್ಲವೇ ವಿದ್ಯಾರ್ಥಿಗಳು ಸೆಂಟರ್‌ಗಳು ಇಲ್ಲವೇ ಮೊಬೈಲ್‌ ಮೂಲಕವೂ ವೀಕ್ಷಿಸಬಹುದು ಎಂದು ತಿಳಿಸಲಾಗಿದೆ.

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದ ಏಪ್ರಿಲ್‌ನ ಮೂರನೇ ವಾರದ ಎರಡೂ ದಿನಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶೇ 92.93ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಒಟ್ಟು 3,30,808 ಅಭ್ಯರ್ಥಿಗಳ ಪೈಕಿ ಗಣಿತ ಪರೀಕ್ಷೆಯನ್ನು 3,04,186 (ಶೇ 91.95) ಹಾಗೂ ಜೀವ ವಿಜ್ಞಾನ ಪರೀಕ್ಷೆಯನ್ನು 2,63,867 ಅಭ್ಯರ್ಥಿಗಳ ಪೈಕಿ 2,39,848 (ಶೇ 90.90) ಮಂದಿ ಬರೆದಿದ್ದರು. ಭೌತವಿಜ್ಞಾನ ವಿಷಯವನ್ನು 3,11,690 (ಶೇ 94.22) ಹಾಗೂ ರಸಾಯನ ವಿಜ್ಞಾನ ವಿಷಯವನ್ನು 3,11,690 (ಶೇ 94.25) ಮಂದಿ ಬರೆದಿದ್ದರು. ಮೊದಲ ಬಾರಿಗೆ ಕ್ಯೂಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆ ವ್ಯವಸ್ಥೆ ಮೂಲಕವೇ ಎಲ್ಲ ಕಡೆಯೂ ಅಭ್ಯರ್ಥಿಗಳನ್ನು ತಪಾಸಣೆ ಮಾಡಲಾಗಿತ್ತು.ಕೆಇಎ ಅಭಿವೃದ್ಧಿಪಡಿಸಿರುವ ಹಾಗೂ ಇದೇ ಮೊದಲ ಬಾರಿಗೆ ಜಾರಿಗೆ ತಂದಿರುವ ಈ ವ್ಯವಸ್ಥೆಯ ಕಾರ್ಯನಿರ್ವಹಣೆ ನೋಡಿ ಮೆಚ್ವುಗೆ ವ್ಯಕ್ತಪಡಿಸಿದ್ದರು.

ಕೆಸಿಇಟಿ ಫಲಿತಾಂಶ ಪ್ರಕಟವಾಗಲಿರುವ ಅಧಿಕೃತ ವೆಬ್‌ಸೈಟ್‌ಗಳು

karresults.nic.in

kea.kar.nic.in

cetonline.karnataka.gov.in ವೆಬ್‌ಸೈಟ್‌ ನಲ್ಲೂ ಫಲಿತಾಂಶ ಪ್ರಕಟವಾಗಲಿದೆ.

ಸ್ಕೋರ್ ಕಾರ್ಡ್ ಹೀಗೆ ಡೌನ್ ಲೋಡ್ ಮಾಡಿಕೊಳ್ಳಿ

ಕಳೆದ ತಿಂಗಳಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶ ಪ್ರಕಟವಾದ ನಂತರ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಕೆಸಿಇಟಿ 2025 ಸ್ಕೋರ್ ಕಾರ್ಡ್‌ಗಳನ್ನು ಡೌನ್ ಲೋಡ್ ಮಾಡಬಹುದು. ಈ ಸರಳ ಹಂತಗಳನ್ನು ಅನುಸರಿಸಿದರೆ, ಫಲಿತಾಂಶ ಪಡೆಯಲು ಅವಕಾಶವಿದೆ.

ಮೊದಲಿಗೆ ಕೆಸಿಇಟಿ ಅಧಿಕೃತ ವೆಬ್‌ಸೈಟ್‌ ಓಪನ್‌ ಮಾಡಿಕೊಳ್ಳಿ cetonline.karnataka.gov.in, cetonline.karnataka.gov.in.

ಮುಖಪುಟದಲ್ಲಿ, Admissions ವಿಭಾಗದ ಮೇಲೆ ಕ್ಲಿಕ್‌ ಮಾಡಿ ಯುಜಿಸಿಇಟಿ -2025 ಅನ್ನು ಆಯ್ಕೆ ಮಾಡಿ.

ಇಲ್ಲಿ 'ಯುಜಿ ಸಾಮಾನ್ಯ ಪ್ರವೇಶ ಪರೀಕ್ಷೆ 2025 ಫಲಿತಾಂಶಗಳು' ಅಥವಾ 'ಕೆಸಿಇಟಿ ಫಲಿತಾಂಶಗಳು 2025 ಅನ್ನು ಡೌನ್ಲೋಡ್ ಮಾಡಿ' ಎಂದು ಹೇಳುವ ಲಿಂಕ್ ಅನ್ನು ಒತ್ತಿರಿ

ನಿಮ್ಮ ಲಾಗಿನ್ ಮಾಹಿತಿಗಳನ್ನು ಒದಗಿಸಿದ ನಂತರ ಸಬ್ಲಿಟ್‌ ಎನ್ನುವ ಕಡೆ ಕ್ಲಿಕ್ ಮಾಡಿ.

ನೀವು ಸಲ್ಲಿಸಿದ ಮಾಹಿತಿ ನಿಖರವಾಗಿದ್ದರೆ. ನಿಮ್ಮ ಕೆಸಿಇಟಿ 2025 ಫಲಿತಾಂಶ ಪರದೆಯ ಮೇಲೆ ಕಾಣಸಿಗಲಿದೆ/

ಫಲಿತಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಮುಂದಿನ ಶೈಕ್ಷಣಿಕ ಚಟುವಟಿಕೆ, ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶದ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.