KCET Results: ಶೀಘ್ರದಲ್ಲೇ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ಪರಿಶೀಲಿಸಲು ಸರಳ ಹಂತಗಳಿವು
ಕನ್ನಡ ಸುದ್ದಿ  /  ಕರ್ನಾಟಕ  /  Kcet Results: ಶೀಘ್ರದಲ್ಲೇ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ಪರಿಶೀಲಿಸಲು ಸರಳ ಹಂತಗಳಿವು

KCET Results: ಶೀಘ್ರದಲ್ಲೇ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ಪರಿಶೀಲಿಸಲು ಸರಳ ಹಂತಗಳಿವು

ಕರ್ನಾಟಕ ಕೆಸಿಇಟಿ 2025ರ ಫಲಿತಾಂಶ ಶೀಘ್ರ ಪ್ರಕಟವಾಗುವ ಸಾಧ್ಯತೆ ಇದೆ. ಅಭ್ಯರ್ಥಿಗಳು ಪರೀಕ್ಷೆ ಫಲಿತಾಂಶ ವೀಕ್ಷಿಸಲು ಅನುಸರಿಸಬೇಕಾದ ಹಂತಗಳ ವಿವರ, ಸ್ಕೋರ್ ಕಾರ್ಡ್ ಡೌನ್ ಲೋಡ್ ಮಾಡುವ ವಿವರ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಶೀಘ್ರದಲ್ಲೇ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ಪರಿಶೀಲಿಸಲು ಸರಳ ಹಂತಗಳಿವು
ಶೀಘ್ರದಲ್ಲೇ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ಪರಿಶೀಲಿಸಲು ಸರಳ ಹಂತಗಳಿವು (File)

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority -ಕೆಇಎ) ಶೀಘ್ರದಲ್ಲೇ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಕೆಸಿಇಟಿ 2025 ಫಲಿತಾಂಶವನ್ನು ಮೇ 25ರೊಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕರ್ನಾಟಕದ ಕಾಲೇಜುಗಳಲ್ಲಿ ಪದವಿಪೂರ್ವ ಎಂಜಿನಿಯರಿಂಗ್, ಫಾರ್ಮಸಿ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕೆಸಿಇಟಿ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಕರ್ನಾಟಕ ಸಿಇಟಿ ಪರೀಕ್ಷೆಯ ಫಲಿತಾಂಶವು ಅಧಿಕೃತ ವೆಬ್‌ಸೈಟ್‌ karresults.nic.in ಇದರಲ್ಲಿ ಪ್ರಟವಾಗಲಿದೆ. ಫಲಿತಾಂಶ ಬಿಡುಗಡೆ ದಿನ ಕರ್ನಾಟಕ ಉನ್ನತ ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಿದ್ದಾರೆ.

ಕೆಸಿಇಟಿ ಫಲಿತಾಂಶ ಪ್ರಕಟವಾಗಲಿರುವ ಅಧಿಕೃತ ವೆಬ್‌ಸೈಟ್‌ಗಳು

karresults.nic.in ಮಾತ್ರವಲ್ಲದೆ kea.kar.nic.in ಮತ್ತು cetonline.karnataka.gov.in ಇದರಲ್ಲೂ ಫಲಿತಾಂಶ ಲಭ್ಯವಾಗಲಿದೆ.

  • karresults.nic.in
  • kea.kar.nic.in
  • cetonline.karnataka.gov.in

ಸ್ಕೋರ್ ಕಾರ್ಡ್ ಡೌನ್ ಲೋಡ್ ಮಾಡುವುದು ಹೇಗೆ?

ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶ ಪ್ರಕಟವಾದ ನಂತರ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಕೆಸಿಇಟಿ 2025 ಸ್ಕೋರ್ ಕಾರ್ಡ್‌ಗಳನ್ನು ಡೌನ್ ಲೋಡ್ ಮಾಡಬಹುದು. ಈ ಸರಳ ಹಂತಗಳನ್ನು ಅನುಸರಿಸಿದರೆ, ಫಲಿತಾಂಶ ಪಡೆಯಬಹುದು.

  • ಮೊದಲಿಗೆ ಕೆಸಿಇಟಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. cetonline.karnataka.gov.in, cetonline.karnataka.gov.in.
  • ಮುಖಪುಟದಲ್ಲಿ, Admissions ವಿಭಾಗಕ್ಕೆ ಹೋಗಿ ಯುಜಿಸಿಇಟಿ -2025 ಅನ್ನು ಆಯ್ಕೆ ಮಾಡಿ.
  • ಇಲ್ಲಿ 'ಯುಜಿ ಸಾಮಾನ್ಯ ಪ್ರವೇಶ ಪರೀಕ್ಷೆ 2025 ಫಲಿತಾಂಶಗಳು' ಅಥವಾ 'ಕೆಸಿಇಟಿ ಫಲಿತಾಂಶಗಳು 2025 ಅನ್ನು ಡೌನ್ಲೋಡ್ ಮಾಡಿ' ಎಂದು ಹೇಳುವ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಲಾಗಿನ್ ರುಜುವಾತುಗಳನ್ನು (ಕ್ರೆಡೆನ್ಷಿಯಲ್‌) ನಮೂದಿಸಿದ ಬಳಿಕ ಸಬ್ಮಿಟ್‌ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಕೆಸಿಇಟಿ 2025 ಫಲಿತಾಂಶ ಪರದೆಯ ಮೇಲೆ ಕಾಣುತ್ತದೆ.
  • ಫಲಿತಾಂಶವನ್ನು ಡೌನ್ ಲೋಡ್ ಮಾಡಿ. ನಿಮ್ಮ ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಕೆಸಿಇಟಿ 2025ರ ಫಲಿತಾಂಶಗಳಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದರೆ, ಅದನ್ನು ಪ್ರಶ್ನಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತದೆ. ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಕೆಳಗೆ ವಿವರಿಸಿದ ಪ್ರಕ್ರಿಯೆಯನ್ನು ಅನುಸರಿಸಬಹುದು.

ಅಭ್ಯರ್ಥಿಗಳು ತಮ್ಮ ಕೆಸಿಇಟಿ 2025 ಫಲಿತಾಂಶದಲ್ಲಿ ಯಾವುದೇ ದೋಷಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು, ಫಲಿತಾಂಶ ಘೋಷಣೆಯ ದಿನಾಂಕದಿಂದ ಮೂರು ದಿನಗಳವರೆಗೆ ಅವಕಾಶವಿದೆ. ಅಭ್ಯರ್ಥಿಗಳು ಫಲಿತಾಂಶದಲ್ಲಿ ಉಲ್ಲೇಖಿಸಲಾದ ತಮ್ಮ ಅರ್ಹತಾ ಅಂಕಗಳನ್ನು ಕ್ರಾಸ್ ಚೆಕ್ ಮಾಡಬೇಕು. ಯಾವುದೇ ವ್ಯತ್ಯಾಸಗಳು ಕಂಡುಬಂದರೆ, ಅವರು ತಕ್ಷಣ ಕೆಇಎ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಸಲ್ಲಿಸಿದ ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ, ಕೆಇಎ ಮಾನ್ಯ ಹಕ್ಕುಗಳನ್ನು ಪರಿಗಣಿಸಿ ಅಂತಿಮ ಪರಿಷ್ಕೃತ ಫಲಿತಾಂಶಗಳನ್ನು ನಂತರ ಬಿಡುಗಡೆ ಮಾಡುತ್ತದೆ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.