ಮೈಕ್ರೋಫೈನಾನ್ಸ್ ಕಿರುಕುಳ ವಿರೋಧಿಸಿ ಸರ್ಕಾರಕ್ಕೆ ಮಾಂಗಲ್ಯ ಸರ ರವಾನೆ, ಗಮನ ಸೆಳೆಯಿತು ವಿಶೇಷ ಅಭಿಯಾನ, ಜ 25ಕ್ಕೆ ಸಿಎಂ ನೇತೃತ್ವದಲ್ಲಿ ಸಭೆ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಕ್ರೋಫೈನಾನ್ಸ್ ಕಿರುಕುಳ ವಿರೋಧಿಸಿ ಸರ್ಕಾರಕ್ಕೆ ಮಾಂಗಲ್ಯ ಸರ ರವಾನೆ, ಗಮನ ಸೆಳೆಯಿತು ವಿಶೇಷ ಅಭಿಯಾನ, ಜ 25ಕ್ಕೆ ಸಿಎಂ ನೇತೃತ್ವದಲ್ಲಿ ಸಭೆ

ಮೈಕ್ರೋಫೈನಾನ್ಸ್ ಕಿರುಕುಳ ವಿರೋಧಿಸಿ ಸರ್ಕಾರಕ್ಕೆ ಮಾಂಗಲ್ಯ ಸರ ರವಾನೆ, ಗಮನ ಸೆಳೆಯಿತು ವಿಶೇಷ ಅಭಿಯಾನ, ಜ 25ಕ್ಕೆ ಸಿಎಂ ನೇತೃತ್ವದಲ್ಲಿ ಸಭೆ

Microfinance Harassment: ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್‌ ಪ್ರತಿನಿಧಿಗಳ ಕಿರಕುಳ ಹೆಚ್ಚಾಗಿದೆ. ಈಗಾಗಲೇ ಅನೇಕರು ಪ್ರಾಣಕಳೆದುಕೊಂಡಿದ್ದಾರೆ. ಸಂತ್ರಸ್ತ ಮಹಿಳೆಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ ಅವರಿಗೆ ಮಾಂಗಲ್ಯ ಸರ ಕಳುಹಿಸಿ ರಕ್ಷಣೆ ಕೋರುವ ಅಭಿಯಾನ ಶುರುಮಾಡಿದ್ದಾರೆ. ಹೀಗಾಗಿ ಜ 25ರಂದು ವಿಶೇಷ ಸಭೆ ನಡೆಯಲಿದೆ.

ಮೈಕ್ರೋಫೈನಾನ್ಸ್ ಕಿರುಕುಳ ವಿರೋಧಿಸಿ ಮಹಿಳೆಯರು ಸರ್ಕಾರಕ್ಕೆ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ ಅವರಿಗೆ ಮಾಂಗಲ್ಯ ಸರ ರವಾನೆ ಅಭಿಯಾನ ಶುರುಮಾಡಿದ್ದಾರೆ. ವಿಶೇಷ ಅಭಿಯಾನ ಗಮನಸೆಳೆದಿದೆ. ಜ 25ಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಲಿದೆ.
ಮೈಕ್ರೋಫೈನಾನ್ಸ್ ಕಿರುಕುಳ ವಿರೋಧಿಸಿ ಮಹಿಳೆಯರು ಸರ್ಕಾರಕ್ಕೆ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ ಅವರಿಗೆ ಮಾಂಗಲ್ಯ ಸರ ರವಾನೆ ಅಭಿಯಾನ ಶುರುಮಾಡಿದ್ದಾರೆ. ವಿಶೇಷ ಅಭಿಯಾನ ಗಮನಸೆಳೆದಿದೆ. ಜ 25ಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಲಿದೆ.

Microfinance Harassment: ಕರ್ನಾಟಕದ ಉದ್ದಗಲಕ್ಕೂ ಮೈಕ್ರೋ ಫೈನಾನ್ಸ್ ಕಿರುಕುಳದ ವಿಚಾರ ಗಮನಸೆಳೆದಿದೆ. ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಈಗಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದು, ಇದರಿಂದ ರೊಚ್ಚಿಗೆದ್ದ ಮಹಿಳೆಯರು ಸರ್ಕಾರಕ್ಕೆ ಬಿಸಿಮುಟ್ಟಿಸಲು, ಮಾಂಗಲ್ಯ ಸರ ಉಳಿಸಿ ಎನ್ನುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ ಅವರಿಗೆ ಮಾಂಗಲ್ಯ ಸರವನ್ನೇ ಕಳುಹಿಸುವ ಅಭಿಯಾನ ಶುರುಮಾಡಿದ್ದಾರೆ.

ಮೈಕ್ರೋಫೈನಾನ್ಸ್ ಕಿರುಕುಳ ತಪ್ಪಿಸಿ, ಮಾಂಗಲ್ಯ ಉಳಿಸಿ ಅಭಿಯಾನ

ಹಾವೇರಿ ಜಿಲ್ಲೆಯ ನೊಂದ ಮಹಿಳೆಯರು ಹಾಗೂ ರೈತ ಮುಖಂಡರು 'ಮಾಂಗಲ್ಯ ಸರ ಉಳಿಸಿ' ಎಂಬ ಅಭಿಯಾನ ಆರಂಭಿಸಿದ್ದಾರೆ. ಹಾವೇರಿಯ ಮಹಿಳೆಯರು ನಗರದ ಅಂಚೆ ಕಚೇರಿ ಮೂಲಕ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಂಗಲ್ಯ ಸರವನ್ನೇ ರವಾನಿಸಿದ್ದು, ಮೈಕ್ರೋಫೈನಾನ್ಸ್ ಕಿರುಕುಳ ತಪ್ಪಿಸಿ, ನಮ್ಮ ಮಾಂಗಲ್ಯ ಉಳಿಸಿ ಎಂದು ಮನವಿ ಮಾಡಿದ್ದಾರೆ. ಮೈಕ್ರೋ ಫೈನಾನ್ಸ್ ಕಂಪನಿ ಪ್ರತಿನಿಧಿಗಳು ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಮನೆಯಲ್ಲಿ ನೆಮ್ಮದಿಯಾಗಿ ಇರುವಂತಿಲ್ಲ. ಮನೆಗೆ ಬಂದರೆ ಇವರ ಕಿರುಕುಳ, ಇವರು ಬಂದು ಹೋದ ಬಳಿಕ ಸುತ್ತಮುತ್ತಲಿನವರ ಮೂದಲಿಕೆ ಮಾತು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಹಾಗೂ ಎಸಿ ಕಚೇರಿಗೆ ತೆರಳಿದ ಮಹಿಳೆಯರು, ಮೈಕ್ರೋಫೈನಾನ್ಸ್‌ ಕಂಪನಿಗಳ ವಿರುದ್ಧ ಕ್ರಮಕೈಗೊಂಡು ನಮ್ಮ ಮಾಂಗಲ್ಯ ಉಳಿಸಿಕೊಡಿ ಎಂದು ಮನವಿ ಸಲ್ಲಿಸಿದರು.

ಮೈಕ್ರೋಫೈನಾನ್ಸ್ ಕಿರುಕುಳದ ವಿರುದ್ಧ ಹೋರಾಟಕ್ಕಿಳಿದ ಮೃತನ ಪತ್ನಿ

ರಾಯಚೂರು ಜಿಲ್ಲೆ ಮಾನ್ವಿ ತಾಲೂಕು ಕಪಗಲ್ ಗ್ರಾಮದ ಶರಣಬಸವ ಎಂಬ ವ್ಯಕ್ತಿ ಜನವರಿ 17 ರಂದು ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಕಿರುಕುಳಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶರಣಬಸವ ಅವರಿಗೆ ಮೈಕ್ರೋಫೈನಾನ್ಸ್ ಕಂಪನಿ ಪ್ರತಿನಿಧಿಗಳು ನಿತ್ಯ ಕಿರುಕುಳ ನೀಡಿದ್ದೇ ಆತ್ಮಹತ್ಯೆ ಕಾರಣ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಇನ್ನೂ ಕೆಲವರು ಇದೇ ಮೈಕ್ರೋಫೈನಾನ್ಸ್ ಕಂಪನಿಯಿಂದ ಸಾಲ ಪಡೆದುಕೊಂಡಿದ್ದು ತಲೆಮರೆಸಿಕೊಂಡು ತಿರುಗಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇವೆಲ್ಲವನ್ನೂ ಮನಗಂಡ ಮೃತ ಶರಣಬಸವನ ಕುಟುಂಬ ಈಗ ನ್ಯಾಯಕ್ಕಾಗಿ ಹೋರಾಟ ಶುರುಮಾಡಿದೆ. ಶರಣಬಸವ ಡ್ರೈವಿಂಗ್ ಜತೆಗೆ ಕೂಲಿ ಕೆಲಸ ಮಾಡಿ ಕುಟುಂಬ ಪೋಷಣೆ ಮಾಡ್ತಾ ಇದ್ದ. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ 8 ಲಕ್ಷ ರೂಪಾಯಿ ತನಕ ಸಾಲ ಪಡೆದುಕೊಂಡಿದ್ದ. ಸಾಲದ ಕಂತುಗಳು ಬಾಕಿ ಇದ್ದ ಕಾರಣ ಮೈಕ್ರೋ ಫೈನಾನ್ಸ್ ಕಂಪನಿ ಪ್ರತಿನಿಧಿಗಳ ಕಿರುಕುಳ ಹೆಚ್ಚಾಗಿತ್ತು. ಮನೆ ಬಳಿಗೆ ಬಂದು ಸಾಲ ವಸೂಲಿಗೆ ನಿಂತುಕೊಂಡಿದ್ದರು. ಇದರಿಂದ ಶರಣಬಸವ ಮನನೊಂದು ಈ ಅತಿರೇಕ ಮಾಡಿಕೊಂಡ ಎಂಬುದು ಕುಟುಂಬ ಸದಸ್ಯರ ನೋವಿನ ಮಾತು.

ಮೃತ ಶರಣಬಸವನ ಪತ್ನಿ ಪಾರ್ವತಿ, ಮಕ್ಕಳು ಹಾಗೂ ಆತನ ಪಾಲಕರು ಹೋರಾಟ ಶುರುಮಾಡಿಕೊಂಡಿದ್ದಾರೆ. ಪಾರ್ವತಿ ತನ್ನ ಮಾಂಗಲ್ಯ ಸರವನ್ನು ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಪೋಸ್ಟ್ ಮೂಲಕ ರವಾನಿಸಿದ್ದು, ಮೈಕ್ರೋಫೈನಾನ್ಸ್ ಕಂಪನಿ ಪ್ರತಿನಿಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಮೈಕ್ರೋಫೈನಾನ್ಸ್ ಕಿರುಕುಳ; ಜ 25ಕ್ಕೆ ಸಿಎಂ ನೇತೃತ್ವದಲ್ಲಿ ಸಭೆ

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯ ಗಾಂಭೀರ್ಯವನ್ನು ಅರ್ಥಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ಜನವರಿ 25ರಂದು ವಿಶೇಷ ಸಭೆ ನಡೆಸಲು ಮುಂದಾಗಿದ್ದಾರೆ. ಸಜನವರಿ 25ರಂದು ಗೃಹಕಚೇರಿ ಕೃಷ್ಣಾದಲ್ಲಿ ಚಿವರು ಹಾಗೂ ಅಧಿಕಾರಿಗಳ ಜತೆಗೆ ಸಮಾಲೋಚನೆ ಸಭೆ ನಡೆಸಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಆಹ್ವಾನ ಹೋಗಿದೆ. ಉಳಿದಂತೆ ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್ ಜನರಲ್, ಪೊಲೀಸ್ ಮಹಾನಿರ್ದೇಶಕರು, ಆರ್ಥಿಕ ಇಲಾಖೆ, ಸಹಕಾರ ಇಲಾಖೆ, ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸೇರಿ ವಿವಿಧ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner