ಕರ್ನಾಟಕ ಅಣೆಕಟ್ಟೆ ನೀರಿನ ಮಟ್ಟ ಮೇ 15; ರಾಜ್ಯದ 22 ಜಲಾಶಯಗಳ ಪೈಕಿ ಬರಿದಾಗಿವೆ 8 ಡ್ಯಾಮ್‌ಗಳು, ಬಳಕೆಗೆ ಸಿಗುವ ನೀರು ಶೇಕಡ 8.81 ಮಾತ್ರ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಅಣೆಕಟ್ಟೆ ನೀರಿನ ಮಟ್ಟ ಮೇ 15; ರಾಜ್ಯದ 22 ಜಲಾಶಯಗಳ ಪೈಕಿ ಬರಿದಾಗಿವೆ 8 ಡ್ಯಾಮ್‌ಗಳು, ಬಳಕೆಗೆ ಸಿಗುವ ನೀರು ಶೇಕಡ 8.81 ಮಾತ್ರ

ಕರ್ನಾಟಕ ಅಣೆಕಟ್ಟೆ ನೀರಿನ ಮಟ್ಟ ಮೇ 15; ರಾಜ್ಯದ 22 ಜಲಾಶಯಗಳ ಪೈಕಿ ಬರಿದಾಗಿವೆ 8 ಡ್ಯಾಮ್‌ಗಳು, ಬಳಕೆಗೆ ಸಿಗುವ ನೀರು ಶೇಕಡ 8.81 ಮಾತ್ರ

ಕರ್ನಾಟಕ ಅಣೆಕಟ್ಟೆ ನೀರಿನ ಮಟ್ಟ ಮೇ 15: ರಾಜ್ಯದ 22 ಜಲಾಶಯಗಳ ಪೈಕಿ 8 ಡ್ಯಾಮ್‌ಗಳು ಬರಿದಾಗಿವೆ. ಬಳಕೆಗೆ ಸಿಗುವ ನೀರು ಶೇಕಡ 8.81 ಮಾತ್ರ ಎಂದು ಕರ್ನಾಟಕ ಜಲಸಂಪನ್ಮೂಲ ಸಚಿವಾಲಯದ ದತ್ತಾಂಶಗಳು ತಿಳಿಸಿವೆ. ಯಾವ ಡ್ಯಾಮ್‌ನಲ್ಲಿ ಎಷ್ಟು ನೀರಿದೆ. ಕಳೆದ ವರ್ಷ ಇದೇ ದಿನ ಎಷ್ಟಿತ್ತು ಎಂಬುದರ ವಿವರ ಇಲ್ಲಿದೆ.

ಕರ್ನಾಟಕ ಅಣೆಕಟ್ಟೆ ನೀರಿನ ಮಟ್ಟ ಮೇ 15; ರಾಜ್ಯದ 22 ಜಲಾಶಯಗಳ ಪೈಕಿ ಬರಿದಾಗಿವೆ 8 ಡ್ಯಾಮ್‌ಗಳು. (ಸಾಂಕೇತಿಕ ಚಿತ್ರ)
ಕರ್ನಾಟಕ ಅಣೆಕಟ್ಟೆ ನೀರಿನ ಮಟ್ಟ ಮೇ 15; ರಾಜ್ಯದ 22 ಜಲಾಶಯಗಳ ಪೈಕಿ ಬರಿದಾಗಿವೆ 8 ಡ್ಯಾಮ್‌ಗಳು. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಮಳೆಯಾಗುತ್ತಿದ್ದು, ಸುಡುಬಿಸಿಲಿನ ವಾತಾವರಣ ಹೋಗಿ ಕೊಂಚ ತಂಪು ವಾತಾವರಣ ನೆಲೆಸುತ್ತಿದೆ. ಹವಾಮಾನದಲ್ಲೂ ಸುಧಾರಣೆಯಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಬಹುತೇಕ ಕುಸಿತವಾಗಿತ್ತು. ಕೆಲವು ಜಲಾಶಯಗಳಿಗೆ ಒಳ ಹರಿವು ನಿಂತುಹೋಗಿತ್ತು. ಇನ್ನು ಕೆಲವು ತಳಮಟ್ಟ ತಲುಪಿದ್ದವು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಬಿದ್ದ ಬೇಸಿಗೆ ಮಳೆಯ ನಂತರದಲ್ಲಿ ಮೇ 15 ರ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ. ರಾಜ್ಯದ 22 ಜಲಾಶಯಗಳಲ್ಲಿ ಈ ದಿನ (ಮೇ 15) ಒಟ್ಟು ಬಳಕೆಗೆ ಸಿಗಬಹುದಾದ ನೀರಿನ ಪ್ರಮಾಣ 46.883 ಟಿಎಂಸಿ (ಶೇಕಡ 8.81). ಮಾತ್ರ ಇದೆ ಕಳೆದ ವರ್ಷ (2023 ಮೇ 15) 76.719 ಟಿಎಂಸಿ (ಶೇಕಡ 14.40) ಇತ್ತು. ಅದಕ್ಕೂ ಹಿಂದಿನ ವರ್ಷ ಅಂದರೆ 2022ರ ಮೇ 15 ರಂದು 116.008 ಟಿಎಂಸಿ (ಶೇಕಡ 21.77) ಇತ್ತು.

ರಾಜ್ಯ 8 ಜಲಾಶಯಗಳಲ್ಲಿ ನೀರಿನ ಕೊರತೆ ಕಾಡಿದೆ. ಈ ಜಲಾಶಯಗಳಲ್ಲಿ ನೀರಿನ ಪ್ರಮಾಣ ಶೇಕಡ 25ಕ್ಕಿಂತಲೂ ಕಡಿಮೆ ಇದೆ ಅಥವಾ ಬತ್ತಿಹೋಗಿದೆ. ಇನ್ನು 7 ಜಲಾಶಯಗಳಲ್ಲಿ ಸಾಧಾರಣ ನೀರು ಇದ್ದು ಶೇಕಡ 25 ರಿಂದ ಶೇಕಡ 55 ನೀರು ತುಂಬಿದೆ. ಇನ್ನು 7 ಜಲಾಶಯಗಳಲ್ಲಿ ನೀರಿನ ಪ್ರಮಾಣ ಶೇಕಡ 55 ರಿಂದ ಶೇಕಡ 75ರ ನಡುವೆ ಇದೆ.

ಕರ್ನಾಟಕದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ (ಮೇ 14 ರಂದು)

1) ಹೈಡೆಲ್ ಜಲಾಶಯಗಳು

ಒಟ್ಟು ಸಾಮರ್ಥ್ಯ 328.18 ಟಿಎಂಸಿ

ಈ ವರ್ಷದ ನೀರು 58.32 ಟಿಎಂಸಿ

ಕಳೆದ ವರ್ಷ ನೀರು 77.26 ಟಿಎಂಸಿ

1) ಲಿಂಗನಮಕ್ಕಿ

ಒಟ್ಟು ಸಾಮರ್ಥ್ಯ 151.75 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 24.59 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 16.81 ಟಿಎಂಸಿ

2) ಸುಪಾ

ಒಟ್ಟು ಸಾಮರ್ಥ್ಯ 145.33 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 49.37 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 37.13 ಟಿಎಂಸಿ

3) ವಾರಾಹಿ

ಒಟ್ಟು ಸಾಮರ್ಥ್ಯ 31.10 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 4.38 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 3.30 ಟಿಎಂಸಿ

2) ಕಾವೇರಿ ಜಲಾಶಯಗಳು

ಒಟ್ಟು ಸಾಮರ್ಥ್ಯ 114.57 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 29.07 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 38.59 ಟಿಎಂಸಿ

1. ಹಾರಂಗಿ

ಒಟ್ಟು ಸಾಮರ್ಥ್ಯ 8.50 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 2.94 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 2.67 ಟಿಎಂಸಿ

2) ಹೇಮಾವತಿ

ಒಟ್ಟು ಸಾಮರ್ಥ್ಯ 37.10 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 9.11 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 17.49 ಟಿಎಂಸಿ

ಕೆಆರ್‌ಎಸ್ ಅಣೆಕಟ್ಟು

ಒಟ್ಟು ಸಾಮರ್ಥ್ಯ 49.45 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 10.63 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 13.63 ಟಿಎಂಸಿ

ಕಬಿನಿ

ಒಟ್ಟು ಸಾಮರ್ಥ್ಯ 19.52 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 6.38 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 4.81 ಟಿಎಂಸಿ

3) ಕೃಷ್ಣಾ ನದಿ ಜಲಾಶಯಗಳು

ಒಟ್ಟು ಸಾಮರ್ಥ್ಯ 422.45 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 81.25 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 89.14 ಟಿಎಂಸಿ

ಭದ್ರಾ

ಒಟ್ಟು ಸಾಮರ್ಥ್ಯ 71.54 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 13.38 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 28.07 ಟಿಎಂಸಿ

ತುಂಗಭದ್ರಾ

ಒಟ್ಟು ಸಾಮರ್ಥ್ಯ 105.79 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 3.42 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 3.30 ಟಿಎಂಸಿ

ಘಟಪ್ರಭಾ

ಒಟ್ಟು ಸಾಮರ್ಥ್ಯ 51.00 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 13.74 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 7.92 ಟಿಎಂಸಿ

ಮಲಪ್ರಭಾ

ಒಟ್ಟು ಸಾಮರ್ಥ್ಯ 37.73 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 7.92 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 9.49 ಟಿಎಂಸಿ

ಆಲಮಟ್ಟಿ

ಒಟ್ಟು ಸಾಮರ್ಥ್ಯ 123.08 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 27.15 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 24.24 ಟಿಎಂಸಿ

ನಾರಾಯಣಪುರ

ಒಟ್ಟು ಸಾಮರ್ಥ್ಯ 33.31 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 15.65 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 16.12 ಟಿಎಂಸಿ

ವಾಣಿ ವಿಲಾಸಸಾಗರ

ಒಟ್ಟು ಸಾಮರ್ಥ್ಯ 30.42 ಟಿಎಂಸಿ

ಈ ವರ್ಷದ ನೀರಿನ ಪ್ರಮಾಣ 16.81 ಟಿಎಂಸಿ

ಕಳೆದ ವರ್ಷದ ನೀರಿನ ಪ್ರಮಾಣ 26.53 ಟಿಎಂಸಿ

Whats_app_banner