ಕರ್ನಾಟಕದ ಜಲಾಶಯ ಮಟ್ಟ ಜೂನ್ 5; ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಎಷ್ಟಿದೆ ನೀರು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಜಲಾಶಯ ಮಟ್ಟ ಜೂನ್ 5; ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಎಷ್ಟಿದೆ ನೀರು

ಕರ್ನಾಟಕದ ಜಲಾಶಯ ಮಟ್ಟ ಜೂನ್ 5; ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಎಷ್ಟಿದೆ ನೀರು

ಕರ್ನಾಟಕದಲ್ಲಿ ಸದ್ಯ ಮಳೆಯಾಗುತ್ತಿದ್ದು, ಕೆಲವು ಜಲಾಶಯಗಳಗೆ ಒಳಹರಿವು ಶುರುವಾಗಿದೆ. ಕರ್ನಾಟಕದ ಜಲಾಶಯ ಮಟ್ಟ ಜೂನ್ 5ರ ಪ್ರಕಾರ 14 ಜಲಾಶಯಗಳ ನೀರಿನ ಮಟ್ಟ 172.59 ಟಿಎಂಸಿ ಇದೆ. ಇದರಲ್ಲಿ, ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಎಷ್ಟಿದೆ ನೀರು ಎಂಬುದರ ವಿವರ ಇಲ್ಲಿದೆ.

ಕರ್ನಾಟಕದ ಜಲಾಶಯ ಮಟ್ಟ ಜೂನ್ 5; ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಎಷ್ಟಿದೆ ನೀರು (ಸಾಂಕೇತಿಕ ಚಿತ್ರ)
ಕರ್ನಾಟಕದ ಜಲಾಶಯ ಮಟ್ಟ ಜೂನ್ 5; ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಎಷ್ಟಿದೆ ನೀರು (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಚೆನ್ನಾಗಿ ಆಗಿದ್ದು, ಈಗಲೂ ಕೆಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಜನವರಿಯಿಂದ ಮೇ ಮಧ್ಯಭಾಗದ ತನಕವೂ ಸುಡುಬಿಸಿಲು, ಬರ ಪರಿಸ್ಥಿತಿ ಎದುರಿಸಿದ್ದ ಕರ್ನಾಟಕದ ಬಹುತೇಕ ಜಲಾಶಯಗಳಲ್ಲಿ ನೀರು ತಳ ಸೇರಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದ್ದು, ಬಹುತೇಕ ಜಲಾಶಯಗಳಲ್ಲಿ ನೀರು ಭರ್ತಿಯಾಗತೊಡಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದ 7 ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 25ರ ಒಳಗೆ ಇದೆ. 7 ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 55 ರಿಂದ ಶೇಕಡ 75 ನಡುವೆ ಇದೆ. ಇನ್ನೂ ಏಳು ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 25 ರಿಂದ ಶೇಕಡ 55ರ ನಡುವೆ ಇದೆ. ಸದ್ಯ ಮಳೆಯಾಗುತ್ತಿರುವ ಕಾರಣ ಕೆಲವು ಕಡೆ ಜಲಾಶಯಗಳಿಗೆ ನೀರಿನ ಒಳ ಹರಿವು ಉಂಟಾಗಿದೆ.

ಕರ್ನಾಟಕದ ಜಲಾಶಯ ಮಟ್ಟ ಜೂನ್ 5

1) ಲಿಂಗನಮಕ್ಕಿ ಜಲಾಶಯ

ನೀರಿನ ಮಟ್ಟ - 13.86 (ಟಿಎಂಸಿ)

ಒಳಹರಿವು 221 ಕ್ಯೂಸೆಕ್‌

ಹೊರಹರಿವು 2479 ಕ್ಯೂಸೆಕ್

2) ಸುಪಾ ಜಲಾಶಯ

ನೀರಿನ ಮಟ್ಟ - 33.08 (ಟಿಎಂಸಿ)

ಒಳಹರಿವು - 579 ಕ್ಯೂಸೆಕ್‌

ಹೊರ ಹರಿವು - 4143 ಕ್ಯೂಸೆಕ್

3) ವಾರಾಹಿ ಜಲಾಶಯ

ನೀರಿನ ಮಟ್ಟ - 3.55 ಟಿಎಂಸಿ

ಒಳಹರಿವು - 424 ಕ್ಯೂಸೆಕ್

ಹೊರ ಹರಿವು -

4) ಹಾರಂಗಿ ಜಲಾಶಯ

ನೀರಿನ ಮಟ್ಟ - 3.05 ಟಿಎಂಸಿ

ಒಳ ಹರಿವು - 260 ಕ್ಯೂಸೆಕ್

ಹೊರ ಹರಿವು - 200 ಕ್ಯೂಸೆಕ್

5) ಹೇಮಾವತಿ ಜಲಾಶಯ

ನೀರಿನ ಮಟ್ಟ 10 ಟಿಎಂಸಿ

ಒಳಹರಿವು - 1049 ಕ್ಯೂಸೆಕ್

ಹೊರ ಹರಿವು - 250 ಕ್ಯೂಸೆಕ್‌

6) ಕೆಆರ್‌ಎಸ್ ಜಲಾಶಯ

ನೀರಿನ ಮಟ್ಟ - 12.90 ಟಿಎಂಸಿ

ಒಳಹರಿವು - 1001 ಕ್ಯೂಸೆಕ್

ಹೊರ ಹರಿವು - 550 ಕ್ಯೂಸೆಕ್

7) ಕಬಿನಿ ಜಲಾಶಯ

ನೀರಿನ ಮಟ್ಟ - 7.68 ಟಿಎಂಸಿ

ಒಳ ಹರಿವು - 695 ಕ್ಯೂಸೆಕ್

ಹೊರ ಹರಿವು - 300 ಕ್ಯೂಸೆಕ್

8) ಭದ್ರಾ ಜಲಾಶಯ

ನೀರಿನ ಮಟ್ಟ 14.37 ಟಿಎಂಸಿ

ಒಳಹರಿವು - 445 ಕ್ಯೂಸೆಕ್

ಹೊರ ಹರಿವು - 341 ಕ್ಯೂಸೆಕ್

9) ತುಂಗಭದ್ರಾ ಜಲಾಶಯ

ನೀರಿನ ಮಟ್ಟ 3.5 ಟಿಎಂಸಿ

ಒಳಹರಿವು - 445 ಕ್ಯೂಸೆಕ್

ಹೊರ ಹರಿವು - 66 ಕ್ಯೂಸೆಕ್

10) ಘಟಪ್ರಭಾ ಜಲಾಶಯ

ನೀರಿನ ಮಟ್ಟ - 8.79 ಟಿಎಂಸಿ

ಒಳಹರಿವು -

ಹೊರ ಹರಿವು - 2340 ಕ್ಯೂಸೆಕ್

11) ಮಲಪ್ರಭಾ ಜಲಾಶಯ

ನೀರಿನ ಮಟ್ಟ 6.69 ಟಿಎಂಸಿ

ಒಳಹರಿವು -

ಹೊರ ಹರಿವು -194 ಕ್ಯೂಸೆಕ್

12) ಆಲಮಟ್ಟಿ ಜಲಾಶಯ

ನೀರಿನ ಮಟ್ಟ - 20.65 ಟಿಎಂಸಿ

ಒಳಹರಿವು -

ಹೊರ ಹರಿವು - 1643 ಕ್ಯೂಸೆಕ್

13) ನಾರಾಯಣಪುರ ಜಲಾಶಯ

ನೀರಿನ ಮಟ್ಟ - 16.33 ಟಿಎಂಸಿ

ಒಳಹರಿವು - 5518 ಕ್ಯೂಸೆಕ್

ಹೊರಹರಿವು - 246 ಕ್ಯೂಸೆಕ್

14) ವಾಣಿ ವಿಲಾಸ ಸಾಗರ ಜಲಾಶಯ

ನೀರಿನ ಮಟ್ಟ 18.14 ಟಿಎಂಸಿ

ಒಳಹರಿವು -

ಹೊರ ಹರಿವು 147 ಕ್ಯೂಸೆಕ್‌

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner