After PUC Education: ಪಿಯುಸಿ ನಂತರ ಫಾರ್ಮಸಿ ಕೋರ್ಸ್‌ಗಳಲ್ಲೂ ಶಿಕ್ಷಣಕ್ಕೆ ಉಂಟು ಅವಕಾಶ, ಉದ್ಯೋಗವೂ ಅಧಿಕ
ಕನ್ನಡ ಸುದ್ದಿ  /  ಕರ್ನಾಟಕ  /  After Puc Education: ಪಿಯುಸಿ ನಂತರ ಫಾರ್ಮಸಿ ಕೋರ್ಸ್‌ಗಳಲ್ಲೂ ಶಿಕ್ಷಣಕ್ಕೆ ಉಂಟು ಅವಕಾಶ, ಉದ್ಯೋಗವೂ ಅಧಿಕ

After PUC Education: ಪಿಯುಸಿ ನಂತರ ಫಾರ್ಮಸಿ ಕೋರ್ಸ್‌ಗಳಲ್ಲೂ ಶಿಕ್ಷಣಕ್ಕೆ ಉಂಟು ಅವಕಾಶ, ಉದ್ಯೋಗವೂ ಅಧಿಕ

After PUC Education: ಪಿಯುಸಿ ಉತ್ತೀರ್ಣರಾದ ನಂತರ ವಿಜ್ಞಾನ ವಿಷಯದವರಿಗೆ ಫಾರ್ಮಸಿ ವಿಷಯದಲ್ಲೂ ಸಾಕಷ್ಟು ಅವಕಾಶಗಳಿವೆ. ಈ ಕುರಿತು ವಿಜಯಪುರದ ಶ್ರೀ ಶರಣಬಸವೇಶ್ವರ ಕಾಲೇಜ್‌ ಆಫ್‌ ಫಾರ್ಮಸಿ (ಎಸ್‌ಎಸ್‌ಬಿ ಜಿಐ ಕ್ಯಾಂಪಸ್‌) ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಾದ ಡಾ.ಶಿವಕುಮಾರ ಹೂಗಾರ್ ವಿವರಿಸಿದ್ದಾರೆ.

ಪಿಯುಸಿ ನಂತರ ಫಾರ್ಮ ಶಿಕ್ಷಣದ ಅವಕಾಶಗಳ ಕುರಿತು ಡಾ.ಶಿವಕುಮಾರ ಹೂಗಾರ್‌  ವಿವರಿಸಿದ್ದಾರೆ.
ಪಿಯುಸಿ ನಂತರ ಫಾರ್ಮ ಶಿಕ್ಷಣದ ಅವಕಾಶಗಳ ಕುರಿತು ಡಾ.ಶಿವಕುಮಾರ ಹೂಗಾರ್‌ ವಿವರಿಸಿದ್ದಾರೆ.

After PUC Education: ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ವಿಜ್ಞಾನ ವಿಷಯದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗಳಿಗೆ ಸಿದ್ದತೆ ನಡೆಸಿದ್ದರೆ ಇತರೆ ವಿಷಯದವರು ಪದವಿ ಶಿಕ್ಷಣದ ತಯಾರಿಯಲ್ಲಿದ್ದಾರೆ. ಪದವಿಯಲ್ಲಿ ಯಾವ ಕೋರ್ಸ್‌ ಸೇರಿದರೆ ನನ್ನ ಭವಿಷ್ಯ ರೂಪುಗೊಳ್ಳಲಿದೆ ಎಂದು ವಿದ್ಯಾರ್ಥಿಗಳು ಯೋಚಿಸುತ್ತಿದ್ದರೆ, ಪೋಷಕರು, ಕುಟುಂಬದವರು, ಸ್ನೇಹಿತರು ಕೂಡ ಅವರ ಸಹಕಾರಕಕ್ಕೆ ನಿಂತಿದ್ದಾರೆ. ಕರ್ನಾಟಕದಲ್ಲಿ ವಿಜ್ಞಾನ ವಿಷಯ ಮುಗಿಸಿದವರಿಗೆ ಹಲವಾರು ಕೋರ್ಸ್‌ಗಳ ಅವಕಾಶಗಳಂತೂ ಇವೆ. ಅವುಗಳಲ್ಲಿ ಫಾರ್ಮಸಿಗೆ ಸಂಬಂಧಿಸಿದ ಹಲವು ಕೋರ್ಸ್‌ಗಳು ಲಭ್ಯವಿವೆ. ಈ ಕೋರ್ಸ್‌ಗಳನ್ನು ಮುಗಿಸಿ ಕೊಂಡರೆ ಔಷೋಧ್ಯಮದ ವಲಯದಲ್ಲಿ ವಿಪುಲ ಅವಕಾಶಗಳೂ ಉಂಟು. ಫಾರ್ಮಸಿ ಶಿಕ್ಷಣ ವಲಯದ ಕುರಿತು ವಿಜಯಪುರದ ಶ್ರೀ ಶರಣಬಸವೇಶ್ವರ ಕಾಲೇಜ್‌ ಆಫ್‌ ಫಾರ್ಮಸಿ (ಎಸ್‌ಎಸ್‌ಬಿ ಜಿಐ ಕ್ಯಾಂಪಸ್‌) ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಾದ ಡಾ.ಶಿವಕುಮಾರ ಹೂಗಾರ್ ಅವರು ವಿವರಣೆ ನೀಡಿದ್ದಾರೆ,

ಫಾರ್ಮಸಿ ಶಿಕ್ಷಣದ ಪೂರಕ ವಿವರಗಳು

1. ಡಿ.ಫಾರ್ಮ್ (ಡಿಪ್ಲೊಮಾ ಇನ್ ಫಾರ್ಮಸಿ):

ಅವಧಿ: 2 ವರ್ಷಗಳ ಪಾಠ್ಯಕ್ರಮ + 3 ತಿಂಗಳ (500 ಗಂಟೆಗಳ) ಇಂಟರ್ನ್‌ಶಿಪ್.

ಅರ್ಹತೆ: 10+2 (ಪಿಯುಸಿ ವಿಜ್ಞಾನ – ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಅಥವಾ ಗಣಿತ ಹೊಂದಿದ ವಿದ್ಯಾರ್ಥಿಗಳು)

ಪ್ರವೇಶ ವಿಧಾನ: ಕೆಲ ರಾಜ್ಯಗಳಲ್ಲಿ ನೇರ ಪ್ರವೇಶ, ಕೆಲ‌ವು ರಾಜ್ಯಗಳಲ್ಲಿ ಪ್ರವೇಶ ಪರೀಕ್ಷೆಗಳ ಮೂಲಕ.

ಉದ್ದೇಶ: ಸಾಮಾನ್ಯ ಫಾರ್ಮಸಿ ಜ್ಞಾನ, ಔಷಧಿಗಳ ತಯಾರಿಕೆ, ಸಂರಕ್ಷಣೆ ಮತ್ತು ನೀಡುವ ವಿಧಾನಗಳಲ್ಲಿ ತರಬೇತಿ. ಕರ್ನಾಟಕದ ಹಲವು ನಗರಗಳಲ್ಲಿ ಫಾರ್ಮಸಿ ಕಾಲೇಜುಗಳು ಉಂಟು.

2. ಬಿ.ಫಾರ್ಮ್ (ಬ್ಯಾಚುಲರ್ ಆಫ್ ಫಾರ್ಮಸಿ):

ಅವಧಿ: 4 ವರ್ಷಗಳು (8 ಸೆಮಿಸ್ಟರ್‌ಗಳು)

ಅರ್ಹತೆ: 10+2 (ಪಿಯುಸಿ) ವಿಜ್ಞಾನ ವಿಭಾಗ (ಪಿಸಿಬಿ ಅಥವಾ ಪಿಸಿಎಂ) + ಕನಿಷ್ಠ ಶೇ. 50% ಅಂಕ

ಪ್ರವೇಶ ವಿಧಾನ:ಕೆಸೆಟ್‌, ಎಂಎಚ್‌ಸಿಇಟಿ, ನೀಟ್‌ ಅಥವಾ ಇತರ ರಾಜ್ಯ/ಖಾಸಗಿ ಸಂಸ್ಥೆಗಳ ಪ್ರವೇಶ ಪರೀಕ್ಷೆ

ಉದ್ದೇಶ: ಔಷಧಶಾಸ್ತ್ರದ ಆಧಾರಿತ ಶಿಕ್ಷಣ, ರಸಾಯನಶಾಸ್ತ್ರ, ಶರೀರಶಾಸ್ತ್ರ, ಔಷಧ ತಯಾರಿಕೆ, ಗುಣಮಟ್ಟ ನಿಯಂತ್ರಣ ಮುಂತಾದ ವಿಷಯಗಳ ಅಧ್ಯಯನ.

3. ಫಾರ್ಮ ಡಿ (ಡಾಕ್ಟರ್ ಆಫ್ ಫಾರ್ಮಸಿ):

ಅವಧಿ: 6 ವರ್ಷಗಳು (5 ವರ್ಷ ಪಾಠ್ಯಕ್ರಮ + 1 ವರ್ಷ ಇಂಟರ್ನ್‌ಶಿಪ್)

ಅರ್ಹತೆ: 10+2 (PCB/PCM) ಅಥವಾ ಡಿ.ಫಾರ್ಮ್

ಪ್ರವೇಶ ವಿಧಾನ: ರಾಜ್ಯ/ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳು ಅಥವಾ ನೇರ ಪ್ರವೇಶ

ಉದ್ದೇಶ: ಕ್ಲಿನಿಕಲ್ ಫಾರ್ಮಸಿ, ರೋಗಿಗಳ ಔಷಧ ವ್ಯವಸ್ಥೆ ನಿರ್ವಹಣೆ, ಆಸ್ಪತ್ರೆ ಹಾಗೂ ಆರೋಗ್ಯ ಸಂಸ್ಥೆಗಳಲ್ಲಿ ಕೆಲಸಕ್ಕೆ ತಯಾರಿ.

ಫಾರ್ಮಸಿ ಕೋರ್ಸ್‌ಗಳ ವಿಶೇಷತೆಗಳು

1. ಫಾರ್ಮಸೆಟಿಕ್ಸ್: ಔಷಧ ತಯಾರಿಕೆ ಮತ್ತು ವಿನ್ಯಾಸ

2. ಫಾರ್ಮಕಾಲಜಿ: ಔಷಧದ ದೇಹದ ಮೇಲೆ ಪರಿಣಾಮ

3. ಫಾರ್ಮಸ್ಯೂಟಿಕಲ್ ಕೆಮಿಸ್ಟ್ರಿ: ಔಷಧಗಳ ಸಂಶ್ಲೇಷಣೆ ಮತ್ತು ವಿಶ್ಲೇಷಣೆ

4. ಫಾರ್ಮಕೊಗ್ನೋಸಿ: ಜೈವಿಕ ಮೂಲದ ಔಷಧಿ

5. ಕ್ಲಿನಿಕಲ್ ಫಾರ್ಮಸಿ: ಆಸ್ಪತ್ರೆಯ ಆರೋಗ್ಯ ವ್ಯವಸ್ಥೆಯಲ್ಲಿ ಔಷಧ ನಿರ್ವಹಣೆ

6. ಇಂಡಸ್ಟ್ರಿಯಲ್ ಫಾರ್ಮಸಿ: ಉತ್ಪಾದನೆ, ಪ್ಯಾಕೇಜಿಂಗ್, ಕಣ್ಸೂಕ್ಷ್ಮ ನಿಯಂತ್ರಣ

7. ರೆಗ್ಯುಲೇಟರಿ ಅಫೇರ್ಸ್: ಔಷಧ ನಿಯಮಗಳು ಮತ್ತು ಅನುಮೋದನೆ

8. ಫಾರ್ಮಸಿ ಪ್ರ್ಯಾಕ್ಟೀಸ್: ರೋಗಿಗೆ ಔಷಧ ಮಾಹಿತಿ ಮತ್ತು ಮಾರ್ಗದರ್ಶನ

9. ಆಸ್ಪತ್ರೆ ಮತ್ತು ಕ್ಲಿನಿಕಲ್ ಫಾರ್ಮಸಿ

10. ಬಯೋಟೆಕ್ನಾಲಜಿ ಮತ್ತು ಬಯೋಇನ್ಫೋಮ್ಯಾಟಿಕ್ಸ್

ಉದ್ಯೋಗಾವಕಾಶಗಳು (Career Opportunities):

ಭಾರತದ ಸರ್ಕಾರಿ ಕ್ಷೇತ್ರದಲ್ಲಿ: ಡ್ರಗ್ ಇನ್ಸ್‌ಪೆಕ್ಟರ್

ಸರ್ಕಾರಿ ಆಸ್ಪತ್ರೆ ಫಾರ್ಮಸಿಸ್ಟ್, ಡ್ರಗ್ ವಿಶ್ಲೇಷಕ, ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್, ಆರೋಗ್ಯ ಇಲಾಖೆ

ಖಾಸಗಿ ಕ್ಷೇತ್ರದಲ್ಲಿ: ಕಮ್ಯೂನಿಟಿ ಫಾರ್ಮಸಿಸ್ಟ್, ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್, ಔಷಧ ಉತ್ಪಾದನೆ ಮತ್ತು ಮಾರಾಟ, ಮೆಡಿಕಲ್ ಬರಹಗಾರ, ಫಾರ್ಮಕೋವಿಜಿಲೆನ್ಸ್ (ಔಷಧ ಸುರಕ್ಷತೆ ವಿಶ್ಲೇಷಣೆ), ರೆಗ್ಯುಲೇಟರಿ ಅಫೇರ್ಸ್ ಎಕ್ಸಿಕ್ಯೂಟಿವ್

ಶೈಕ್ಷಣಿಕ ಕ್ಷೇತ್ರ: ಸಹ ಪ್ರಾಧ್ಯಾಪಕ / ಪ್ರಾಧ್ಯಾಪಕ, ಸಂಶೋಧಕ (CSIR, ICMR), ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಪ್ರಮುಖ ಸಂಶೋಧಕರು

ವಿದೇಶದಲ್ಲಿ ಉದ್ಯೋಗ ಅವಕಾಶಗಳು:

ಯುಎಸ್‌, ಯುಕೆ, ಆಸ್ಟ್ರೇಲಿಯಾ ಇತ್ಯಾದಿ ರಾಷ್ಟ್ರಗಳಲ್ಲಿ:

ಹಾಸ್ಪಿಟಲ್ ಫಾರ್ಮಸಿಸ್ಟ್, ಕ್ಲಿನಿಕಲ್ ಫಾರ್ಮಸಿಸ್ಟ್, ಮೆಡಿಕೇಷನ್ ಥೆರಪಿ ಮ್ಯಾನೇಜ್ಮೆಂಟ್, ಸಂಶೋಧನೆ ಮತ್ತು ಅಭಿವೃದ್ಧಿ, ಯುನಿವರ್ಸಿಟಿ ಪಾಠಶಾಲೆಯಲ್ಲಿ ಪ್ರಾಧ್ಯಾಪಕ ಸ್ಥಾನ

5. ಉನ್ನತ ಕೌಶಲ್ಯಗಳು ಮತ್ತು ಮುಂದಿನ ತಂತ್ರಜ್ಞಾನ ಪ್ರವೃತ್ತಿಗಳು:

ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಜ್ಞಾನ – ಔಷಧ ಸಂಶೋಧನೆ ಮತ್ತು ವಿನ್ಯಾಸದಲ್ಲಿ

ಫಾರ್ಮಕೋಜಿನೋಮಿಕ್ಸ್ – ವೈಯಕ್ತಿಕ ಔಷಧ ಚಿಕಿತ್ಸೆಯಲ್ಲಿ

ಡಿಜಿಟಲ್ ಹೆಲ್ತ್ ಮತ್ತು ಟೆಲಿಫಾರ್ಮಸಿ – ದೂರದ ಆರೋಗ್ಯ ಸೇವೆಗಳು

ಕ್ಲಿನಿಕಲ್ ಡೇಟಾ ನಿರ್ವಹಣೆ

ಆರೋಗ್ಯ ಕ್ಷೇತ್ರದಲ್ಲಿ ಉದ್ಯಮಶೀಲತೆ – ನವೀನ ಆಯ್ದ ಸೇವೆಗಳಲ್ಲಿ ವಿಪುಲ ಅವಕಾಶಗಳುಂಟು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner