Karnataka SSLC Exam 3 Result 2024: ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ?
ಜುಲೈ 10ರಂದು ಎಸ್ಎಸ್ಎಲ್ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿತ್ತು. ಇದೀಗ ಆಗಸ್ಟ್ 26ರಂದು ಎಸ್ಎಸ್ಎಲ್ಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ.
ಬೆಂಗಳೂರು: ಇಂದು (ಆಗಸ್ಟ್ 26ರ ಸೋಮವಾರ) ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ -3ರ ಪರೀಕ್ಷೆಯನ್ನು ಆಗಸ್ಟ್ 02 ರಿಂದ ಆಗಸ್ಟ್ 09 ರವರೆಗೆ ನಡೆಸಲಾಗಿತ್ತು. ಇದೀಗ ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮುಕ್ತಾಯಗೊಂಡಿದ್ದು, ನಾಳೆ ಫಲಿತಾಂಶ ಪ್ರಕಟವಾಗಲಿದೆ.
ಫಲಿತಾಂಶ ನೋಡಲು ಹೀಗೆ ಮಾಡಿ
ಎಸ್ಎಸ್ಎಲ್‌ಸಿ ಪರೀಕ್ಷೆ-3ರ ಫಲಿತಾಂಶ ಚೆಕ್ ಮಾಡಲು ಈ ಕ್ರಮ ಅನುಸರಿಸಿ. https://karresults.nic.in ಜಾಲತಾಣದಲ್ಲಿ ಆಗಸ್ಟ್ 26ರ ಮಧ್ಯಾಹ್ನ 12ಗಂಟೆಯ ನಂತರ ವೀಕ್ಷಿಸಬಹುದಾಗಿದೆ ಎಂದು ಮಂಡಳಿ ತಿಳಿಸಿದೆ. ಎಸ್ಎಸ್ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಜುಲೈ 10ರಂದು ಪ್ರಕಟವಾಗಿತ್ತು.
ವೃತ್ತಿಪರ ಕೋರ್ಸ್ ಅಣುಕು ಫಲಿತಾಂಶ ಪ್ರಕಟಿಸಿದ ಕೆಇಎ
ಇಂಜಿನಿಯರಿಂಗ್, ವೈದ್ಯಕೀಯ, ದಂತ, ಆಯುಷ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್ ಗಳ ಪ್ರವೇಶದ ಮೊದಲ ಸುತ್ತಿನ ಅಣುಕು ಸೀಟು ಹಂಚಿಕೆಯ ಫಲಿತಾಂಶ ಆಗಸ್ಟ್ 25ರಂದು ಪ್ರಕಟವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಕೆಇಎ ವೆಬ್‌ಸೈಟ್‌ನಲ್ಲಿ ಅಣುಕು ಫಲಿತಾಂಶ ಲಭ್ಯವಾಗಿದೆ. ವಿದ್ಯಾರ್ಥಿಗಳು ಅವಶ್ಯಕತೆ ಕಂಡು ಬಂದಲ್ಲಿ ತಮ್ಮ ಇಚ್ಛೆಯ ಕಾಲೇಜು ಮತ್ತು ಕೋರ್ಸ್ ಅನ್ನು ಆಗಸ್ಟ್ 27ರ ಬೆಳಗ್ಗೆ 11 ಗಂಟೆಯೊಳಗೆ ಬದಲಾಯಿಸಬಹುದು ಎಂದು ಕೆಇಎ ಕಾರ್ಯಕಾರಿ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಸೆಪ್ಟೆಂಬರ್ 1 ರಂದು ಮೊದಲ ಸುತ್ತಿನ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ರೋಸ್ಟರ್ ಮತ್ತು ಅರ್ಹತೆ ಆಧಾರದಲ್ಲಿ ಆಗಸ್ಟ್ 22, ಸಂಜೆ 5 ಗಂಟೆಯೊಳಗೆ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ಕಾಲೇಜು ಮತ್ತು ಕೋರ್ಸ್ ಹಂಚಿಕೆ ಮಾಡಲಾಗುತ್ತದೆ. ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ, ಕೃಷಿ ವಿಜ್ಞಾನ, ಬಿ ಎಸ್ ಸಿ ( ನರ್ಸಿಂಗ್), ಬಿ ಫಾರ್ಮ್ ಮತ್ತು ಫಾರ್ಮ್ -ಡಿ ಗೆ ಸೀಟು ಹಂಚಿಕೆಯಾಗಲಿದೆ. ಇದುವರೆಗೂ ಕೋರ್ಸ್ ಮತ್ತು ಕಾಲೇಜು ಆಯ್ಕೆ ಮಾಡದ ವಿದ್ಯಾರ್ಥಿಗಳು ಮಂಗಳವಾರ 11 ಗಂಟೆಯೊಳಗೆ ಆಯ್ಕೆ ಮಾಡಲು ಅವಕಾಶವಿದೆ.