ಕನ್ನಡ ಸುದ್ದಿ  /  Karnataka  /  Karnataka Election 2023 Jds Releases Bengaluru Manifesto Hd Devegogwda Kumaraswamy Election News In Kannada Pcp

JDS Bengaluru Manifesto: ಜೆಡಿಎಸ್‌ನಿಂದ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಪ್ರಣಾಳಿಕೆ ಬಿಡುಗಡೆ, ಪ್ರತಿವಾರ್ಡ್‌ನಲ್ಲೂ ಆಸ್ಪತ್ರೆ

ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election)ಗಾಗಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಕ್ಷವು ಬೆಂಗಳೂರು ಮಹಾನಗರಕ್ಕೆ (JDS Bengaluru Manifesto) ಪ್ರತ್ಯೇಕ ಪ್ರಣಾಳಿಕೆ ಪ್ರಕಟಿಸಿದೆ.

ಮಾಜಿ ಪ್ರಧಾನಮಂತ್ರಿಗಳಾದ ಹೆಚ್‌ಡಿ ದೇವೇಗೌಡರು ಇಂದು ಬೆಳಗ್ಗೆ ಬೆಂಗಳೂರು ಮಹಾನಗರದ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಮಾಜಿ ಪ್ರಧಾನಮಂತ್ರಿಗಳಾದ ಹೆಚ್‌ಡಿ ದೇವೇಗೌಡರು ಇಂದು ಬೆಳಗ್ಗೆ ಬೆಂಗಳೂರು ಮಹಾನಗರದ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election)ಗಾಗಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಕ್ಷವು ಬೆಂಗಳೂರು ಮಹಾನಗರಕ್ಕೆ (JDS Bengaluru Manifesto) ಪ್ರತ್ಯೇಕ ಪ್ರಣಾಳಿಕೆ ಪ್ರಕಟಿಸಿದೆ. ಆ ಪ್ರಣಾಳಿಕೆಯಲ್ಲಿ ಬೆಂಗಳೂರಿಗೆ ಭರಪೂರ ಕೊಡುಗೆ ಘೋಷಿಸಲಾಗಿದೆ. ಮಾಜಿ ಪ್ರಧಾನಮಂತ್ರಿಗಳಾದ ಹೆಚ್‌ಡಿ ದೇವೇಗೌಡರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಬೆಂಗಳೂರು ಮಹಾನಗರದ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆ ಸಮಿತಿ ಸದಸ್ಯರಾದ ಕುಪೇಂದ್ರ ರೆಡ್ಡಿ ಅವರು,ಕೆ.ಎನ್.ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಸರವಣ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಬೆಂಗಳೂರು ನಗರದ ಜೆಡಿಎಸ್ ಅಧ್ಯಕ್ಷ ಹೆಚ್‌ಎಂ ರಮೇಶ್ ಗೌಡ ಮುಂತಾದವರು ಹಾಜರಿದ್ದರು.

ಪ್ರಣಾಳಿಕೆಯಲ್ಲೇನಿದೆ?

  1. ನಗರ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಅಸರೆ ಕಲ್ಪಿಸಲಾಗುವುದು. ನಗರದ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ವಿಶೇಷ ಯೋಜನೆ ಅಡಿ ವಸತಿ ಸೌಲಭ್ಯ ನೀಡಲಾಗುವುದು. ಖಾಸಗಿ ಶಾಲಾ ಶಿಕ್ಷಕರಿಗೆ, ಆಟೋ ಚಾಲಕರಿಗೆ ಮತ್ತು ಬೀದಿ ಬದಿ ವ್ಯಾಪರಿಗಳಿಗೆ ಭದ್ರತೆ ನೀಡಲಾಗುವುದು.
  2. ಖಾಸಗಿ ಶಾಲೆಗಳಲ್ಲಿ ರೂ. 10,000 ಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿರುವ ಶಿಕ್ಷಕರಿಗೆ ಸಹಾಯಧನ ನೀಡಲಾಗುವುದು. ನೋಂದಾಯಿತ ಆಟೋ ಚಾಲಕರಿಗೆ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಮಾಹೆಯಾನ ರೂ 2,000 ಸಹಾಯಧನ ಯೋಜನೆ ಹಮ್ಮಿಕೊಳ್ಳಲಾಗುವುದು. ಬೀದಿ ಬದಿಯ ವ್ಯಾಪಾರಿಗಳಿಗೆ ದುಡಿಮೆ ರೂಪದಲ್ಲಿ ವೇತನ ನೀಡುವ ಯೋಜನೆ ತರಲಾಗುವುದು.
  3. ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗುವುದು. ಸ್ವಚ್ಛ ಬೆಂಗಳೂರಿಗಾಗಿ ಕ್ರಮ ಕೈಗೊಳ್ಳಲಾಗುವುದು. ನಗರದ ಜನ ಸ೦ದಣಿ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ 1100 ನೂತನವಾದ ಹಾಗೂ “ಮಕ್ಕಳ – ವಯಸ್ಕರ ಸ್ನೇಹಮಯಿ ಶೌಚಾಲಯಗಳನ್ನು ನಿರ್ಮಿಸಿ, ಗುತ್ತಿಗೆ ಆಧಾರದ (Franchise) ಮುಖೇನ ಸಂಘ-ಸಂಸ್ಥೆಗಳಿಗೆ ನಿರ್ವಹಿಸಲು ನೀಡಲಾಗುವುದು.
  4. ಪಡಿತರ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಪ್ರತಿ ತಿಂಗಳು ನೀಡಲಾಗುವುದು. ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿಯೊಂದು ವಲಯವನ್ನು ಶೈಕ್ಷಣಿಕ ಜಿಲ್ಲೆಯಾಗಿ ಘೋಷಣೆ ಮಾಡಲಾಗುವುದು. ಜಿಲ್ಲಾ ಶಾಲಾ ಶಿಕ್ಷಣ ಪರಿಷತ್ ಸ್ಥಾಪಿಸಲಾಗುವುದು.
  5. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಸುವ್ಯವಸ್ಥೆಗಾಗಿ, ಕ್ಷೇತ್ರವಾರು ಮರು ವಿಂಗಡಣೆ ಮಾಡಿ, ಮೀಸಲಾತಿ ಗೊಂದಲ ಬಗೆಹರಿಸಿ, ಶೀಘ್ರದಲ್ಲೇ ಚುನಾವಣೆ ನಡೆಸಿ, ಮಹಾನಗರ ಪಾಲಿಕೆ ಆಡಳಿತವನ್ನು ಚುನಾಯಿತ ಪ್ರತಿನಿಧಿಗಳಿಗೆ ವಹಿಸಲಾಗುವುದು.
  6. 5ನೇ ಹಂತ ಕಾವೇರಿ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಗ್ರಾಮಗಳಿಗೆ ಪೈಪ್‌ ಲೈನ್ ಗಳನ್ನು ವಿಸ್ತರಿಸಿ, ಕುಡಿಯುವ ನೀರು ನೀಡಲಾಗುವುದು.
  7. ನಗರದಲ್ಲಿ 'ಬಿ' ಖಾತೆಯಲ್ಲಿರುವ ಆರು ಲಕ್ಷ ಸ್ವತ್ತುಗಳನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯಿದೆ - 1961 ಅಡಿ ನಿಯಮಗಳನ್ನು ರೂಪಿಸಿ, ದ೦ಡವಿಧಿಸಿ ಈ ಸ್ವತ್ತುಗಳನ್ನು 'ಎ' ಖಾತಾ ಸ್ವತ್ತುಗಳಾಗಿ 'ಪರಿವರ್ತಿಸಲಾಗುವುದು.
  8. ಪ್ರತಿ ಮನೆಯಲ್ಲಿ, ಅಪಾರ್ಟ್ ಮೆಂಟ್ ಆವರಣದಲ್ಲಿ ಮತ್ತು ಹೋಟೆಲ್ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಬಯೋ-ಗ್ಯಾಸ್ ಉತ್ಪಾದನೆ ಪ್ಲಾಂಟ್ ಅನ್ನು ಸ್ಥಾಪಿಸಿ, ಗ್ಯಾಸನ್ನು ಅಡಿಗೆ ಅನಿಲವಾಗಿ ಉಪಯೋಗಿಸಲು ಉತ್ತೇಜನ ನೀಡಲಾಗುವುದು.
  9. ನಗರದ ಹೋಟೆಲ್ ಗಳಲ್ಲಿ, ಸಾಮೂಹಿಕ ಸಭಾಂಗಣಗಳಲ್ಲಿ ಮತ್ತು ಮದುವೆ ಛತ್ರಗಳಲ್ಲಿ ಯಾವುದೇ ರೂಪದಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿ ಎಲ್ಲಾ ಸಭೆ ಮತ್ತು ಸಮಾರಂಭಗಳಲ್ಲಿ ಸಾವಯವ ತಟ್ಟೆಗಳು ಮತ್ತು ಲೋಟಗಳನ್ನು ಬಳಸುವಂತೆ ಸೂಚಿಸಲಾಗುವುದು.
  10. 2025 ರ ಅಂತ್ಯಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗುವುದು.
  11. ಪ್ರತಿಯೊಂದು ವಾರ್ಡ್ ನಲ್ಲೂ 30 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯನ್ನು ಸ್ಥಾಪಿಸಿ, ವಿನೂತನ ಮತ್ತು ಮಾದರಿ ರೀತಿಯಲ್ಲಿ ಪ್ರತಿದಿನ 24X7 ಕಾಲ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು.
  12. ಬೆಂಗಳೂರು ಸಾರ್ವಜನಿಕ ಆರೋಗ್ಯ ಮಂಡಳಿ ಸ್ಥಾಪಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಗ್ಗೆ ನಿಗಾವಹಿಸುವುದರೊಂದಿಗೆ ತ್ಯಾಜ್ಯ ನಿರ್ವಹಣೆ ಅಂಟು ರೋಗಗಳ ತಡೆಗಟ್ಟುವಿಕೆ, ಮಾಲಿನ್ಯ ತಡೆಗಟ್ಟುವಿಕೆ ಮುಂತಾದ ಆರೋಗ್ಯ ನಿರ್ವಹಣೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಉಸ್ತುವಾರಿ ವಹಿಸಲಾಗುವುದು.
  13. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಸುವ್ಯವಸ್ಥೆಗಾಗಿ, ಕ್ಷೇತ್ರವಾರು ಮರು ವಿಂಗಡಣೆ ಮಾಡಿ, ಮೀಸಲಾತಿ ಗೊಂದಲ ಬಗೆಹರಿಸಿ, ಶೀಘ್ರದಲ್ಲೇ ಚುನಾವಣೆ ನಡೆಸಿ, ಮಹಾನಗರ ಪಾಲಿಕೆ ಆಡಳಿತವನ್ನು ಚುನಾಯಿತ ಪ್ರತಿನಿಧಿಗಳಿಗೆ ವಹಿಸಲಾಗುವುದು.
  14. 5ನೇ ಹಂತ ಕಾವೇರಿ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಗ್ರಾಮಗಳಿಗೆ ಪೈಪ್‌ ಲೈನ್ ಗಳನ್ನು ವಿಸ್ತರಿಸಿ, ಕುಡಿಯುವ ನೀರು ನೀಡಲಾಗುವುದು.
  15. ನಗರದಲ್ಲಿ 'ಬಿ' ಖಾತೆಯಲ್ಲಿರುವ ಆರು ಲಕ್ಷ ಸ್ವತ್ತುಗಳನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯಿದೆ - 1961 ಅಡಿ ನಿಯಮಗಳನ್ನು ರೂಪಿಸಿ, ದ೦ಡವಿಧಿಸಿ ಈ ಸ್ವತ್ತುಗಳನ್ನು 'ಎ' ಖಾತಾ ಸ್ವತ್ತುಗಳಾಗಿ 'ಪರಿವರ್ತಿಸಲಾಗುವುದು.
  16. ಪ್ರತಿ ಮನೆಯಲ್ಲಿ, ಅಪಾರ್ಟ್ ಮೆಂಟ್ ಆವರಣದಲ್ಲಿ ಮತ್ತು ಹೋಟೆಲ್ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಬಯೋ-ಗ್ಯಾಸ್ ಉತ್ಪಾದನೆ ಪ್ಲಾಂಟ್ ಅನ್ನು ಸ್ಥಾಪಿಸಿ, ಈ ಗ್ಯಾಸ್‌ ಅನ್ನು ಅಡುಗೆ ಅನಿಲವಾಗಿ ಉಪಯೋಗಿಸಲು ಉತ್ತೇಜನ ನೀಡಲಾಗುವುದು.
  17. ನಗರದ ಹೋಟೆಲ್ ಗಳಲ್ಲಿ, ಸಾಮೂಹಿಕ ಸಭಾಂಗಣಗಳಲ್ಲಿ ಮತ್ತು ಮದುವೆ ಛತ್ರಗಳಲ್ಲಿ ಯಾವುದೇ ರೂಪದಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿ ಎಲ್ಲಾ ಸಭೆ ಮತ್ತು ಸಮಾರಂಭಗಳಲ್ಲಿ ಸಾವಯವ ತಟ್ಟೆಗಳು ಮತ್ತು ಲೋಟಗಳನ್ನು ಬಳಸುವಂತೆ ನಿರ್ಭಂದ ಹೇರಲಾಗುವುದು.
  18. 2025 ರ ಅಂತ್ಯಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗುವುದು.
  19. ಪ್ರತಿಯೊಂದು ವಾರ್ಡ್ ನಲ್ಲೂ 30 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯನ್ನು ಸ್ಥಾಪಿಸಿ, ಏನೂತನ ಮತ್ತು ಮಾದರಿ ಗೀತಿಯಲ್ಲಿ ಪ್ರತಿದಿನ 24X7 ಕಾಲ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು.
  20. ಬೆಂಗಳೂರು ಸಾರ್ವಜನಿಕ ಆರೋಗ್ಯ ಮಂಡಳಿ ಸ್ಥಾಪಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಗ್ಗೆ ನಿಗಾವಹಿಸುವುದರೊಂದಿಗೆ ತ್ಯಾಜ್ಯ ನಿರ್ವಹಣೆ ಅಂಟು ರೋಗಗಳ ತಡೆಗಟ್ಟಲಕ, ಮಾಲಿನ್ಯ ತಡೆಗಟ್ಟುವಿಕೆ ಮುಂತಾದ ಆರೋಗ್ಯ ನಿರ್ವಹಣೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಉಸ್ತುವಾರಿ ವಹಿಸಲಾಗುವುದು.
  21. ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಕಾಲಾನುಕಾಲಕ್ಕೆ ಬೇಕಾಗಿರುವ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ಹಾಗೂ ಸರ್ಕಾರದ ಅಂಗ ಸಂಸ್ಥೆಗಳಾದ ಬಿ.ಬಿ.ಎಂ.ಪಿ, ಬಿ.ಡಿ.ಎ. ಇತ್ಯಾದಿ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಲು ಬೆಂಗಳೂರು ಕಾರ್ಯಾಚರಣೆ ಸಂಶೋಧನ ಕೇಂದ್ರ ( Bangalore Operational Research centre) ಸ್ಥಾಪಿಸಲಾಗುವುದು.
  22. ಮನೆ ಅಂಗಳದಲ್ಲಿ ಗಿಡ ನೆಟ್ಟು ಬೆಳಸಿದ ಮನೆ ಮಾಲೀಕನಿಗೆ ಪ್ರತಿ ಗಿಡಕ್ಕೆ ಪ್ರತಿ ವರ್ಷ ರೂ.2000 ರಂತೆ ನಗರ ಪಾಲಿಕೆಗೆ ಪಾವತಿಸಬೇಕಾದ ಸತ್ತಿನ ತೆರಿಗೆ ವಿನಾಯಿತಿ ನೀಡಲಾಗುವುದು.
  23. 2007 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ 110 ಗ್ರಾಮಗಳಲ್ಲಿ 300 ಸಾರ್ವಜನಿಕ ಉದ್ಯಾನವನಗಳನ್ನು ನಿರ್ಮಿಸಲಾಗುವುದು.
  24. ನಗರದ ನಿವಾಸಿಗಳು ತಮ್ಮ ನಿವೇಶನದಲ್ಲಿ 900 ಚದರ ಮೀಟರ್ ಗಿಂತ ಕಡಿಮೆ ವಿಸ್ತೀರ್ಣದ ಮನೆಯನ್ನು ನಿರ್ಮಿಸಿದರೆ, ಒ೦ದು ಲಕ್ಷ ರೂ.ಗಳ ಸಹಾಯ ಧನವನ್ನು ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಲು ನೀಡಲಾಗುವುದು.
  25. ನಮ್ಮಮೆಟ್ರೋ ಮಾರ್ಗ ವಿಸ್ತರಿಸಿ 60 ಕೀ.ಮೀ. ಉದ್ದದ ಎಡ – ಬಲ ಪಾರ್ಶ್ವದ ಪ್ರದೇಶಗಳಿಗೆ ಮೆಟ್ರೋ ಮಾರ್ಗ ಒದಗಿಸಲಾಗುವುದು
  26. ಕಾವೇರಿ ನದಿಗೆ ಕನಕಪುರ ಬಳಿ ಮೇಕೆದಾಟುವಿಗೆ ಅಡ್ಡಲಾಗಿ 60 ಟಿ.ಎಂ.ಸಿ. ನೀರನ್ನು ಸಂಗ್ರಹಿಸುವ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಿ, ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲಾಗುವುದು,
  27. ಎತ್ತಿನಹೊಳೆ ಯೋಜನೆಯಿಂದ ಟಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 1.8 ಟಿ.ಎಂ.ಸಿ. ಮತ್ತು ಹೆಸರಘಟ್ಟ ಜಲಾಶಯಕ್ಕೆ 0.8 ಟಿ.ಎಂ.ಸಿ. ನೀರನ್ನು ತುಂಬಿಸಲಾಗುವುದು.
  28. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡು, ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರು ಹೊರವರ್ತುಲ ರಸ್ತೆ (Peripheral Ring Road) ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.