ಕನ್ನಡ ಸುದ್ದಿ  /  Karnataka  /  Karnataka Election 2023 Sandalwood Actor Shiva Rajkumar Wife Geeta S First Reaction After Joining Congress Party Mnk

Karnataka Election 2023: ನೀವು ಹೇಳಿದಲ್ಲಿ ಪ್ರಚಾರ ಕಣಕ್ಕಿಳಿಯುವೆ; ಕಾಂಗ್ರೆಸ್‌ ಸೇರಿದ ಬಳಿಕ ಗೀತಾ ಶಿವರಾಜ್‌ಕುಮಾರ್‌ ಮೊದಲ ಪ್ರತಿಕ್ರಿಯೆ

ಕಾಂಗ್ರೆಸ್‌ ಪಕ್ಷ ಸೇರಿರುವ ನಟ ಶಿವರಾಜ್‌ಕುಮಾರ್‌ ಅವರ ಪತ್ನಿ ಗೀತಾ, ಚುನಾವಣೆ ನಿಮಿತ್ತ ರಾಜ್ಯದ ಹಲವೆಡೆ ಸ್ಟಾರ್ ಪ್ರಚಾರಕರಾಗಿ ಓಡಾಡುವುದಾಗಿ ಹೇಳಿದ್ದಾರೆ.

ನೀವು ಹೇಳಿದಲ್ಲಿ ಪ್ರಚಾರ ಕಣಕ್ಕಿಳಿಯುವೆ; ಕಾಂಗ್ರೆಸ್‌ ಸೇರಿದ ಬಳಿಕ ಗೀತಾ ಶಿವರಾಜ್‌ಕುಮಾರ್‌ ಮೊದಲ ಪ್ರತಿಕ್ರಿಯೆ
ನೀವು ಹೇಳಿದಲ್ಲಿ ಪ್ರಚಾರ ಕಣಕ್ಕಿಳಿಯುವೆ; ಕಾಂಗ್ರೆಸ್‌ ಸೇರಿದ ಬಳಿಕ ಗೀತಾ ಶಿವರಾಜ್‌ಕುಮಾರ್‌ ಮೊದಲ ಪ್ರತಿಕ್ರಿಯೆ

Karnataka Election 2023: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ಅವರ ಸಮ್ಮುಖದಲ್ಲಿ ಡಾ. ರಾಜ್‌ ಕುಟುಂಬದ ಹಿರಿ ಸೊಸೆ, ಶಿವರಾಜ್‌ಕುಮಾರ್‌ ಪತ್ನಿ ಗೀತಾ ಶಿವರಾಜ್‌ಕುಮಾರ್‌ (Geeta Shivarajkumar) ಶುಭ ಶುಕ್ರವಾರದಂದು ಕಾಂಗ್ರೆಸ್‌ (Congress) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಬಾವುಟ ನೀಡಿ ಡಿಕೆ ಶಿವಕುಮಾರ್‌ ಸೇರಿ ಪಾರ್ಟಿಯ ಹಲವು ಮುಖಂಡರು ಗೀತಾ ಅವರನ್ನು ಸ್ವಾಗತಿಸಿದರು.

ಗೀತಾ ಶಿವರಾಜ್‌ಕುಮಾರ್‌ ಪ್ರತಿಕ್ರಿಯೆ

ಈ ವೇಳೆ ಕಾಂಗ್ರೆಸ್‌ ಸೇರಿದ ಬಳಿಕ ಮಾತನಾಡಿದ ಗೀತಾ ಶಿವರಾಜ್‌ಕುಮಾರ್‌, ಕೈ ಬಳಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ. "ಕಾಂಗ್ರೆಸ್ ಐತಿಹಾಸಿಕ ಪಕ್ಷ. ಈ ಪಕ್ಷಕ್ಕೆ ಸೇರುತ್ತಿರುವುದು ಬಹಳ ಸಂತೋಷವಾಗುತ್ತಿದೆ. ನನ್ನನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ತಂದೆ ಜತೆ ಕೆಲಸ ಮಾಡಿದ್ದಾರೆ. ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸುತ್ತೇನೆ" ಎಂದಿದ್ದಾರೆ.

"ನನ್ನ ತಮ್ಮ ಮಧು ಕಾಂಗ್ರೆಸ್ ಸೇರಿದಾಗಲೇ ನಾನು ಕಾಂಗ್ರೆಸ್ ಜತೆಗಿದ್ದೆ. ಶಿವರಾಜಕುಮಾರ್ ಅವರು ಕೂಡ ಕಾಂಗ್ರೆಸ್ ಪಕ್ಷದ ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಅವರು ಚಿತ್ರೀಕರಣದಲ್ಲಿ ಬಿಜಿ ಇರುವುದರಿಂದ ಸಮಯ ಬಿಡುವು ಮಾಡಿಕೊಂಡು ಪ್ರಚಾರ ಮಾಡುತ್ತಾರೆ. ಪಕ್ಷ ನನಗೆ ಎಲ್ಲಿ ಹೇಳುತ್ತದೆಯೋ ಅಲ್ಲಿ ಹೋಗಿ ಪ್ರಚಾರ ಮಾಡಲು ಸಿದ್ಧನಿದ್ದೇನೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರಿಗೂ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.

ಕಾಂಗ್ರೆಸ್‌ ಗ್ಯಾರಂಟಿಯ ಬಲೆಗೆ ಬಿದ್ದರು

ಇನ್ನು ಗೀತಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಡಿ.ಕೆ ಶಿವಕುಮಾರ್‌, ಈ ವಿಶೇಷ ಕಾರ್ಯಕ್ರಮಕ್ಕೆ ಮಂಗಳೂರಿನಿಂದ ಬಂದಿದ್ದೇನೆ. ನಾನು ಅನೇಕ ದಿನಗಳಿಂದ ಗಾಳ ಹಾಕುತ್ತಿದ್ದೆ. ಮಧು ಬಂಗಾರಪ್ಪ ಅವರು ಗಾಳಕ್ಕೆ ಸಿಕ್ಕರು. ನಂತರ ಸಹೋದರಿ ಗೀತಾ ಶಿವರಾಜಕುಮಾರ್ ಅವರಿಗೆ ಬಲೆಯನ್ನೇ ಬೀಸಬೇಕಾಯಿತು. ಅವರು ನನ್ನ ಬಲೆಗೂ ಬೀಳಲಿಲ್ಲ. ಅವರು ರಾಹುಲ್ ಗಾಂಧಿ ಅವರು ರಾಜ್ಯದ ಜನರಿಗೆ ಘೋಷಣೆ ಮಾಡಿರುವ ಜನಪರ ಕಾರ್ಯಕ್ರಮಗಳ ಬಲೆಗೆ ಬಿದ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಟೀಕೆ ಮಾಡಿದ್ದರು. ಅವರ ಟೀಕೆಗೆ ರಾಜಕುಮಾರ್ ಅವರ ಸೊಸೆ, ನಮ್ಮ ಶಿವಣ್ಣನ ಧರ್ಮಪತ್ನಿ, ನನ್ನ ನಾಯಕರಾದ ಬಂಗಾರಪ್ಪ ಅವರ ಪುತ್ರಿ ಗೀತಾ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು ಉತ್ತರ ನೀಡಿದ್ದಾರೆ.

ರಾಹುಲ್ ಗಾಂಧಿ ಅವರು ಗೀತಾ ಅವರನ್ನು ಪಕ್ಷಕ್ಕೆ ನೀನೇ ಹೋಗಿ ಸೇರಿಸಿಕೊಳ್ಳಬೇಕು ಎಂದು ಹೇಳಿದರು. ಹೀಗಾಗಿ ಮಂಗಳೂರಿನಿಂದ ಈ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದೇನೆ. ಇಂದು ಕಾಂಗ್ರೆಸ್ ಪಕ್ಷದ ಪರವಾಗಿ ಬಹಳ ಸಂತೋಷದಿಂದ ಗೀತಾ ಶಿವರಾಜಕುಮಾರ್ ಅವರನ್ನು ಪಕ್ಷಕ್ಕೆ ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದೇನೆ" ಎಂದರು.

ಹುಬ್ಬಳ್ಳಿಯಲ್ಲಿ ಸುದೀಪ್‌ ಹೇಳಿದ್ದು ಹೀಗೆ…

"ಗೀತಕ್ಕ ಅವರು ನನ್ನಿಷ್ಟದ ವ್ಯಕ್ತಿ. ನನಗೆ ಅಕ್ಕ ಅವರು. ನನಗೆ ಬಹಳ ಬೇಕಾದವರು. ನನಗೆ ಪ್ರೀತಿಯ ವ್ಯಕ್ತಿ. ಅವರಿಗೆ ಒಳ್ಳೆಯದಾಗಲಿ. ಅವರಿಗೆ ಬಹಳ ಒಳ್ಳೆಯ ಮನಸ್ಸು. ಅವರು ಲೈಫ್‌ನಲ್ಲಿ ಏನೇ ಮಾಡಿದರೂ ತುಂಬ ಯೋಚನೆ ಮಾಡಿ ಮಾಡ್ತಾರೆ. ಅವರಿಗೆ ಒಳ್ಳೆಯದಾಗಬೇಕು, ಗೀತಕ್ಕನಿಗೆ ಒಳ್ಳೆಯದಾಗಬೇಕು" ಎಂದಿದ್ದಾರೆ.

"ಕಾಲಾಯ ತಸ್ಮೈ ನಮಃ. ರಾಜಕೀಯದಲ್ಲಿ ನಾನಿಲ್ಲ. ಯಾರ್ಯಾರು ಏನೇನು ಮಾಡಬೇಕಿತ್ತೋ, ಆ ಜಾಗದಲ್ಲಿದ್ದುಕೊಂಡು ಅದನ್ನು ಚೆನ್ನಾಗಿ ಮಾಡುತ್ತಿದ್ದಾರೆ. ನಾನೀಗ ಬಸವರಾಜ್‌ ಬೊಮ್ಮಾಯಿ ಪರವಾಗಿ ನಿಂತಿದ್ದೇನೆ ಎಂದರೆ ಅವರ ಪರವಾಗಿ ಅಪಾರ ಅಭಿಮಾನ ಇದೆ. ಅವರೊಬ್ಬ ಗ್ರೇಟ್‌ ಲೀಡರ್.‌ ಎಲ್ಲ ಪಕ್ಷದಲ್ಲೂ ಗ್ರೇಟ್‌ ಲೀಡರ್‌ಗಳಿದ್ದಾರೆ. ನಾನು ಇಲ್ಲ ಎಂದು ಹೇಳುತ್ತಿಲ್ಲ. ಅದೇ ರೀತಿ ಸಿನಿಮಾ ಕ್ಷೇತ್ರದಲ್ಲಿ ನಾನು ಖುಷಿಯಾಗಿದ್ದೇನೆ. ಅಲ್ಲಿ ಮಾಡಬೇಕಿರುವ ಕೆಲಸ ಇನ್ನೂ ತುಂಬ ಇದೆ" ಎಂದೂ ಟಿವಿ9 ಜತೆಗೆ ಸುದೀಪ್ ಮಾತನಾಡಿದ್ದಾರೆ.‌

IPL_Entry_Point