ಕನ್ನಡ ಸುದ್ದಿ  /  Karnataka  /  Karnataka Election 2023 Sandalwood Actor Sudeep Campaigned For Bjp Candidate Nagaraj Chabbi From Kalaghatagi Alnavar Mnk

Karnataka Election 2023: ಕಲಘಟಗಿ ಅಳ್ನಾವರ ಕ್ಷೇತ್ರದಲ್ಲಿ ಸುದೀಪ್‌ ಪ್ರಚಾರ ಅಬ್ಬರ; ಕಿಚ್ಚನ ಮದಕರಿ ಡೈಲಾಗ್‌ಗೆ ಶಿಳ್ಳೆ ಹೊಡೆದ ಜನ

Karnataka Election 2023: ಕಿಚ್ಚ ಸುದೀಪ್‌ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿಜೆಪಿ ಪರ ಪ್ರಚಾರಕ್ಕಿಳಿದಿದ್ದಾರೆ. ಅದೇ ರೀತಿ ಇಂದು (ಏ. 28) ಕಲಘಟಗಿ ವಿಧಾನಸಭಾ ಕ್ಷೇತ್ರದ ಅಳ್ನಾವರದಲ್ಲಿ ಬಿಜೆಪಿ ಅಭ್ಯರ್ಥಿ ನಾಗರಾಜ್‌ ಛಬ್ಬಿ ಪರ ಪ್ರಚಾರ ಮಾಡಿದರು. ಮದಕರಿ ಡೈಲಾಗ್‌ ಮೂಲಕವೂ ಎಲ್ಲರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು.

ಕಲಘಟಗಿ ಅಳ್ನಾವರ ಕ್ಷೇತ್ರದಲ್ಲಿ ಸುದೀಪ್‌ ಪ್ರಚಾರ ಅಬ್ಬರ; ಕಿಚ್ಚನ ಮದಕರಿ ಡೈಲಾಗ್‌ಗೆ ಶಿಳ್ಳೆ ಹೊಡೆದ ಜನ
ಕಲಘಟಗಿ ಅಳ್ನಾವರ ಕ್ಷೇತ್ರದಲ್ಲಿ ಸುದೀಪ್‌ ಪ್ರಚಾರ ಅಬ್ಬರ; ಕಿಚ್ಚನ ಮದಕರಿ ಡೈಲಾಗ್‌ಗೆ ಶಿಳ್ಳೆ ಹೊಡೆದ ಜನ

ಕಲಘಟಗಿ: ‘ಕರಿದಿದ್ದ ಕಡೆ ಹೋಗೋಕೆ, ಕರೆದಲೆಲ್ಲ ಹೋಗೋಕೆ ಕಂತ್ರಿ, ಕಜ್ಜಿ , ಗುಂಡಾ ರೌಡಿ ನಾನಂತೂ ಅಲ್ಲ.. ಮದಕರಿ.. ವೀರ ಮದಕರಿ! ಹೀಗೆ ತಮ್ಮದೇ ಸಿನಿಮಾದ ಡೈಲಾಗ್‌ ಮೂಲಕವೇ ಕಲಘಟಗಿ- ಅಳ್ನಾವರ ಮತಕ್ಷೇತ್ರದ ಜನತೆಯನ್ನು ಸೆಳೆದಿದ್ದಾರೆ ಕಿಚ್ಚ ಸುದೀಪ್.‌

ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡ ಅಳ್ನಾವರ ಪಟ್ಟಣದಲ್ಲಿ ಶುಕ್ರವಾರ ನಟ ಸುದೀಪ್ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಅಬ್ಬರದ ಪ್ರಚಾರ ಕೈಗೊಂಡರು. ಅರೇ ಮಲೆನಾಡು ಕಲಘಟಗಿ- ಅಳ್ನಾವರದಲ್ಲಿ ಸದ್ಯ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಷ್ಟು ದಿನ ಅಭ್ಯರ್ಥಿಗಳ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದ ಕ್ಷೇತ್ರಕ್ಕೆ ಸ್ಟಾರ್ ಪ್ರಚಾರಕರು ಲಗ್ಗೆ ಇಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿ ಛಬ್ಬಿ ಪರ ಅಳ್ನಾವರದಲ್ಲಿ ನಟ ಸುದೀಪ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಟ ಸುದೀಪ್, ‘ನಾಗರಾಜ ಛಬ್ಬಿ ಅವರು ಒಳ್ಳೆಯವರು. ಛಬ್ಬಿ ವ್ಯಕ್ತಿಯಾಗಿ ನನಗೆ ಪರಿಚಯವಿದ್ದಾರೆ. ಹಾಗಾಗಿ ನಾನೂ ಇಲ್ಲಿಗೆ ಬಂದಿದ್ದೇನೆ. ಎಂಎಲ್‌ಸಿ ಆಗಿ ಒಳ್ಳೆಯ ಕೆಲಸ ಮಾಡಿ ಎಲ್ಲರ ಮನಸ್ಸಲ್ಲಿ ನೆಲೆಸಿದ್ದಾರೆ. ಈಗ ಎಂಎಲ್ಎ ಆಗಲು ಚುನಾವಣೆಗೆ ನಿಂತಿದ್ದಾರೆ. ಅವರಿಗೆ ಮತ ನೀಡಿ ಗೆಲ್ಲಿಸಿ. ಅವರು ಉತ್ತಮ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿದೆ. ಛಬ್ಬಿ ಇದೇ ಊರಿನ ಮೊಮ್ಮಗ. ಗೆದ್ದ ಮೇಲೆ ಅವರು ಇಲ್ಲಿಯೇ ಮನೆ ಮಾಡಿ ಇಲ್ಲೇ ನೆಲೆಸುತ್ತಾರೆ’ ಎಂದರು.

‘ಜನಪ್ರತಿನಿಧಿ ಆಗುವವರು ಜನರನ್ನು ನೆನಪಿಟ್ಟಿಕೊಳ್ಳಬೇಕು. ಗೆದ್ದ ಮೇಲೆ ಯಾರನ್ನೂ ಮರೆಯಬಾರದು. ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರ ಕಲ್ಯಾಣವೇ ಅವರ ಮೂಲ ಮಂತ್ರವಾಗಿಬೇಕು. ಕ್ಯಾಂಪೇನ್ ಗೆ ಬಂದ ಮಾತ್ರಕ್ಕೆ ನಾನು ರಾಜಕಾರಣಿಯಲ್ಲ. ಚಿತ್ರರಂಗದವನು. ನಮಗೆ ಪ್ರೀತಿಗೆ ಪ್ರೀತಿ ವಾಪಸ್ ಕೊಟ್ಟು ಗೊತ್ತು. ನಿಮ್ಮನ್ನು ಗೆಲ್ಲಿಸಿದ್ದಕ್ಕೆ ಜನರಿಗೆ ಕೆಲಸ ಮಾಡಿಕೊಡಬೇಕು’ ಎಂದು ಛಬ್ಬಿಗೆ ಸಲಹೆ ನೀಡಿದರು.

‘ನಾಗರಾಜ ಛಬ್ಬಿ ಒಳ್ಳೆಯ ಕೆಲಸ ಅವರು ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಜನರ ಕೆಲಸ ಮಾಡದಿದ್ದರೆ ಆಗ ನಾನು ಮತ್ತೆ ಬಂದೇ ಬರುತ್ತೇನೆ. ಚೆನ್ನಾಗಿ ಮಾಡಿದರೆ ನಿಮ್ಮನ್ನು ನೋಡಿಕೊಳ್ಳಲು ಬರುತ್ತೇನೆ. ಚೆನ್ನಾಗಿ ಕೆಲಸ ಮಾಡದಿದ್ದರೆ ಅವರನ್ನು ನೋಡಿಕೊಳ್ಳಲು ಬರುತ್ತೇನೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ರಾಜ್ಯದಲ್ಲಿ ಮೂರು ದಿನಗಳಿಂದ ಕ್ಯಾಂಪೇನ್ ಮಾಡುತ್ತಿದ್ದೇನೆ. ಹೋದ ಕಡೆ ಎಲ್ಲ ಜನರು ಉತ್ತಮ ಸ್ವಾಗತ ನೀಡಿದ್ದಾರೆ. 27 ವರ್ಷ ಆಯ್ತು ಚಿತ್ರರಂಗಕ್ಕೆ ಬಂದು ನಾನೇನು ಗಳಿಸಿದ್ದೇನೋ ಗೊತ್ತಿಲ್ಲ. ಆದರೆ ನಿಮ್ಮ ಪ್ರೀತಿ ಸಂಪಾದಿಸಿದ್ದೇನೆ. ಇಷ್ಟು ಸಾಕು ನನಗೆ. ನನ್ನನ್ನು ಶ್ರೀಮಂತನಾಗಿ ಮಾಡೋದಕ್ಕೆ’ ಎಂದು ಹೇಳಿ ಜನರತ್ತ ಕೈ ಬೀಸಿದರು.

IPL_Entry_Point