Corruption Rate Card: ಇದು ಬಿಜೆಪಿಯ ಭ್ರಷ್ಟಾಚಾರದ ದರ ಪಟ್ಟಿ; ಸಿಎಂ ಪೋಸ್ಟ್​ಗೆ 2500 ಕೋಟಿ, ಸಚಿವ ಸ್ಥಾನ 500 ಕೋಟಿಗೆ ಡೀಲ್​​; ಆರೋಪ
ಕನ್ನಡ ಸುದ್ದಿ  /  ಕರ್ನಾಟಕ  /  Corruption Rate Card: ಇದು ಬಿಜೆಪಿಯ ಭ್ರಷ್ಟಾಚಾರದ ದರ ಪಟ್ಟಿ; ಸಿಎಂ ಪೋಸ್ಟ್​ಗೆ 2500 ಕೋಟಿ, ಸಚಿವ ಸ್ಥಾನ 500 ಕೋಟಿಗೆ ಡೀಲ್​​; ಆರೋಪ

Corruption Rate Card: ಇದು ಬಿಜೆಪಿಯ ಭ್ರಷ್ಟಾಚಾರದ ದರ ಪಟ್ಟಿ; ಸಿಎಂ ಪೋಸ್ಟ್​ಗೆ 2500 ಕೋಟಿ, ಸಚಿವ ಸ್ಥಾನ 500 ಕೋಟಿಗೆ ಡೀಲ್​​; ಆರೋಪ

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಪ್ರಮುಖ ನಾಯಕರು, ಭ್ರಷ್ಟಾಚಾರದ ಆರೋಪಗಳಿಗೆ ಮೊದಲು ಉತ್ತರ ಕೊಡಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ. ಅಲ್ಲದೆ ಪ್ರಧಾನಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​
ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​

ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ (BJP vs Congress)​​ ಮತ್ತೊಮ್ಮೆ ಭ್ರಷ್ಟಾಚಾರದ (Corruption) ಆರೋಪ ಮಾಡಿದೆ. ಇದಕ್ಕೆ ಸಂಬಂಧಿಸಿ ಕಾಂಗ್ರೆಸ್ ಶುಕ್ರವಾರ ಪೋಸ್ಟ್‌ ಮತ್ತು ಜಾಹೀರಾತು ನೀಡಿದೆ. ಮುಖ್ಯಮಂತ್ರಿ, ಸಚಿವ ಸ್ಥಾನ​​ ಎಷ್ಟು ಕೋಟಿಗೆ? ಡೀಲ್​ ಆಗುತ್ತದೆ ಎಂಬುದನ್ನು ಈ ಪೋಸ್ಟರ್, ಜಾಹೀರಾತಿ​ನಲ್ಲಿ ಉಲ್ಲೇಖಿಸಿದೆ. ಅಲ್ಲದೆ, ಯಾವ್ಯಾವ ಪೋಸ್ಟ್​​​​​​​​​​​​​​ಗೆ ಎಷ್ಟು ಕೋಟಿ ಫಿಕ್ಸ್​ ಆಗಿದೆ ಎಂಬುದನ್ನು ತಿಳಿಸಿದೆ.

ಬಿಜೆಪಿಯನ್ನು 40% ಕಮೀಷನ್​ ಸರ್ಕಾರ ಎಂದಿರುವ ಕಾಂಗ್ರೆಸ್​, ಎಷ್ಟೆಷ್ಟು ಪರ್ಸೆಂಟ್​ ಲೂಟಿ ಮಾಡಿದೆ ಎಂದು ಆರೋಪಿಸಿದೆ. ಅಂಕಿ-ಅಂಶದ ಸಮೇತ ‘ಭ್ರಷ್ಟಾಚಾರ ದರ ಪಟ್ಟಿ‘ಯನ್ನು (Corruption Rate Card) ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್​​ನ ಪ್ರಮುಖ ನಾಯಕರು, ಈ ಆರೋಪಗಳಿಗೆ ಮೊದಲು ಉತ್ತರ ಕೊಡಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

ಕನ್ನಡಿಗರೇ! 'ಟ್ರಬಲ್ ಇಂಜಿನ್' 40% ಸರ್ಕಾರದ ಭ್ರಷ್ಟಾಚಾರ ದರ ಪಟ್ಟಿ ಇಲ್ಲಿದೆ ಎಂದು ಕಾಂಗ್ರೆಸ್ ಟ್ವೀಟ್​ ಮಾಡಿದೆ. ಸ್ಥಳೀಯ ಪತ್ರಿಕೆಗಳಲ್ಲಿ ಇದೇ ಜಾಹೀರಾತನ್ನು ನೀಡಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕರು, ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು 2500 ಕೋಟಿ ರೂಪಾಯಿ (CM Post For 2500 Cr) ಮತ್ತು ಸಚಿವ ಸ್ಥಾನಗಳ ದರ 500 ಕೋಟಿ ರೂಪಾಯಿಗೆ ನಿಗದಿಯಾಗಿದೆ ಎಂದು ಆರೋಪಿಸಿದೆ.

ಹಾಗೆಯೇ ನೇಮಕಾತಿಯಲ್ಲಿ ಪಿಎಸ್​ಐ, ಸಹಾಯಕ ಪ್ರಾಧ್ಯಾಪಕ ಹುದ್ದೆ ಸೇರಿದಂತೆ ಪ್ರಮುಖ ಹುದ್ದೆಗಳಿಗೆ ದರ ನಿಗದಿಯಾಗಿದೆ. ಮುಖ್ಯಮಂತ್ರಿ, ಸಚಿವ ಸ್ಥಾನ, ಸರ್ಕಾರಿ ಕೆಲಸಗಳನ್ನು ಹರಾಜಿಗೆ ಇಡಲಾಗಿದೆ ಎಂದು ಕಾಂಗ್ರೆಸ್​ ಗಂಭೀರ್ ಆರೋಪ ಮಾಡಿದೆ. ಬಿಡಿಎ ಆಯುಕ್ತರ ಹುದ್ದೆಗೆ 10 ಕೋಟಿಯಿಂದ ರಿಂದ 15 ಕೋಟಿ, ಕೆಪಿಎಸ್​​ಸಿ ಮುಖ್ಯಸ್ಥರ ಹುದ್ದೆ, ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ ಹುದ್ದೆಗೆ 5 ಕೋಟಿಯಿಂದ ರಿಂದ 15 ಕೋಟಿಗೆ ಹರಾಜು ಇಡಲಾಗಿದೆ ಎಂಬುದು ಜಾಹೀರಾತಿನಲ್ಲಿದೆ.

ವೈಸ್​ ಚಾನ್ಸಲರ್ 5 ಕೋಟಿಯಿಂದ 10 ಕೋಟಿ​​, ಎಸಿ, ತಹಸಿಲ್ದಾರ್​ ಹುದ್ದೆ 50 ಲಕ್ಷದಿಂದ 3 ಕೋಟಿಗೆ ಹರಾಜಿಗೆ ಇಡಲಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಆಡಳಿತದುದ್ದಕ್ಕೂ ಲೂಟಿಯನ್ನೇ ಪರಮಧೈವ ಎಂದುಕೊಂಡು ರಾಜ್ಯದ ಖಜಾನೆಯನ್ನು ಬರಿದು ಮಾಡಿದ ಸರ್ಕಾರ ಕನ್ನಡಿಗರನ್ನು, ಕರ್ನಾಟಕದ ಅಭಿವೃದ್ಧಿಯನ್ನು ಮಣ್ಣುಪಾಲು ಮಾಡಿದೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷವು 85 ಶೇಕಡಾ ಕಮಿಷನ್ ಪಕ್ಷವಾಗಿದೆ ಎಂದು ಆರೋಪಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಖೇರಾ ಅವರು ಮಾತನಾಡಿ, ಸಮಾಜದ ಎಲ್ಲಾ ಜನರು ಬಿಜೆಪಿಯ 40% ಕಮಿಷನ್ ಸರ್ಕಾರದ ಸಂತ್ರಸ್ತರೇ. ಈ ಬಗ್ಗೆ ಪ್ರಧಾನಿ ಮೋದಿ ಉತ್ತರ ಕೊಡಬೇಕು. ಮೇ 10ರಂದು ಜನರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ. ಪ್ರಚಾರ ಮಾಡುವುದು ಹೊರತುಪಡಿಸಿ ಆಡಳಿತ ನಡೆಸಲು ಬಾರದ ಮೋದಿಗೆ ಪಾಠ ಕಲಿಸಲು ಹೆಚ್ಚಿನ ದಿನಗಳನ್ನು ಕಾಯಬೇಕಿಲ್ಲ. ಮತ ಹಾಕುವ ಮುನ್ನ ಕರ್ನಾಟಕದ ಭವಿಷ್ಯವನ್ನು ಪರಿಗಣಿಸಿ ಕಾಂಗ್ರೆಸ್ ಬೆಂಬಲಿಸಿ ಎಂದು ಆರೋಪಿಸಿದ್ದಾರೆ.

ಕರ್ನಾಟಕದ ಬಿಜೆಪಿ ಸರ್ಕಾರವನ್ನು ವಿವರಿಸಲು ಕಾಂಗ್ರೆಸ್ ಶೇ. 40 ಕಮಿಷನ್ ಎಂಬ ಪದವನ್ನು ಬಳಸುತ್ತಿದೆ. ರ್ಯಾಲಿಯೊಂದರ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಜನರು ಈ ಪದವನ್ನು ಸೃಷ್ಟಿಸಿದ್ದಾರೆಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ರಾಜ್ಯದಲ್ಲಿ ಬಿಜೆಪಿಯ ಆಡಳಿತದ ದಾಖಲೆಯನ್ನು ಕಾಂಗ್ರೆಸ್ ಟೀಕಿಸುತ್ತಿದ್ದು, ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

Whats_app_banner