ಕನ್ನಡ ಸುದ್ದಿ  /  Karnataka  /  Karnataka Election News Congress Burnt 40 Percent Replica Former Chief Minister Siddaramaiah Lashes Out Against Bjp Prs

Siddaramaiah: ಬಿಜೆಪಿಯ 40 ಪರ್ಸೆಂಟ್ ಭ್ರಷ್ಟಾಸುರನನ್ನು ಸುಟ್ಟಿದ್ದೇವೆ, ಮೇ 10ರಂದು ಮತದಾರರಿಂದ ಅಸ್ಥಿ ವಿಸರ್ಜನೆ; ಸಿದ್ದರಾಮಯ್ಯ ವಾಗ್ದಾಳಿ

ವರುಣಾ ವಿಧಾನಸಭೆ ಕ್ಷೇತ್ರದ (Varuna Assembly constituency) ಮೆಲ್ಲಹಳ್ಳಿಯಲ್ಲಿ ನಟರಾದ ದುನಿಯಾ ವಿಜಿ (Duniya Vijay), ಯೋಗೇಶ್ (Yogesh), ನಟಿ ನಿಶ್ವಿಕಾ ನಾಯ್ಡು ಅವರು ಸಿದ್ಧರಾಮಯ್ಯ ಅವರ ಜೊತೆ ರೋಡ್‌ ಶೋನಲ್ಲಿ ಪಾಲ್ಗೊಂಡು, ಪ್ರಚಾರಕ್ಕೆ ಮೆರುಗು ನೀಡಿದರು.

40 ಪರ್ಸೆಂಟ್​ ಸರ್ಕಾರ ಎಂಬ ಪ್ರತಿಕೃತಿಯನ್ನು ದಹಿಸಿದ ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ.
40 ಪರ್ಸೆಂಟ್​ ಸರ್ಕಾರ ಎಂಬ ಪ್ರತಿಕೃತಿಯನ್ನು ದಹಿಸಿದ ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ. (Siddaramaiah Twitter)

ಭಾರತೀಯ ಜನತಾ ಪಾರ್ಟಿ (BJP) ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು (Chief Minister Siddaramaiah) ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮುಕ್ತ ಕರ್ನಾಟಕ ಮಾಡಲು ಹೊರಟಿರುವ ಕಾಂಗ್ರೆಸ್ (Congress)​, 40% ಸರ್ಕಾರವನ್ನು ಸುಟ್ಟು ಹಾಕಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್​ ಮೂಲಕ ಸಿದ್ಧರಾಮಯ್ಯ ಕಿಡಿ ಕಾರಿದ್ದಾರೆ.

ಮೇ 13ರಂದು ವಿಮೋಚನೆ

ರಾಜ್ಯ ಬಿಜೆಪಿಯ 40% 'ಭ್ರಷ್ಟಾಸುರ'ನನ್ನು (BJP's 40% Commission) ನಾವಿಂದು ಬೆಂಕಿಯಿಟ್ಟು ಸುಟ್ಟಿದ್ದೇವೆ. ಮೇ 10ರಂದು ನಾಡಿನ ಮತದಾರರು ಅಸ್ಥಿ ವಿಸರ್ಜನೆ ಮಾಡುತ್ತಾರೆ. ಮೇ 13ರಂದು ರಾಜ್ಯವು 'ಭ್ರಷ್ಟಾಸುರ'ರಿಂದ ಸಂಪೂರ್ಣ ವಿಮೋಚನೆ ಪಡೆಯಲಿದೆ. ಸಮೃದ್ಧ, ಸಶಕ್ತ, ಸ್ವಾಭಿಮಾನಿ ಕರ್ನಾಟಕ ಮತ್ತೆ ಪ್ರಜ್ವಲಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ 40% ಸರ್ಕಾರ ಎಂಬ ಪ್ರತಿಕೃತಿಯನ್ನು ಸಿದ್ಧರಾಮಯ್ಯ, ಡಿಕೆ ಶಿವಕುಮಾರ್​​ ಮತ್ತು ಕಾಂಗ್ರೆಸ್​ ನಾಯಕರು ದಹಿಸಿದರು.

ದುನಿಯಾ ವಿಜಯ್​ ಸಾಥ್​

ವರುಣಾ ವಿಧಾನಸಭೆ ಕ್ಷೇತ್ರದ (Varuna Assembly constituency) ಮೆಲ್ಲಹಳ್ಳಿಯಲ್ಲಿ ನಟರಾದ ದುನಿಯಾ ವಿಜಿ (Duniya Vijay), ಯೋಗೇಶ್ (Yogesh), ನಟಿ ನಿಶ್ವಿಕಾ ನಾಯ್ಡು ಅವರು ಸಿದ್ಧರಾಮಯ್ಯ ಅವರ ಜೊತೆ ರೋಡ್‌ಶೋನಲ್ಲಿ ಪಾಲ್ಗೊಂಡು, ಪ್ರಚಾರಕ್ಕೆ ಮೆರುಗು ನೀಡಿದರು. ಬಿಜೆಪಿಯವರ ಭ್ರಷ್ಟ ಹಣ, ಅಧಿಕಾರ ದುರ್ಬಳಕೆ, ಕೇಂದ್ರ ನಾಯಕರ ಅಪಪ್ರಚಾರ ಇವೆಲ್ಲವನ್ನು ಧಿಕ್ಕರಿಸಿ ಇಂದು ನಾನು ಹೋದ ಕಡೆಯೆಲ್ಲ ಸಾವಿರಾರು ಜನ ಸೇರುತ್ತಿದ್ದಾರೆಂದರೆ ಅದಕ್ಕೆ ಕಾರಣ ನನ್ನ ಮೇಲಿರುವ ಪ್ರೀತಿ, ನಂಬಿಕೆ. ಈ ನನ್ನ ಜನರ ಪ್ರೀತಿಯನ್ನು ಹಣ ಕೊಟ್ಟು ಖರೀದಿಸಲು ನಿಮ್ಮಿಂದಾಗದು. ಇಲ್ಲಿನ ಮನೆಮಗ ನಾನು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಗೆಲ್ಲಬೇಕು, ಅವರು ನಮ್ಮವರು ಎಂಬ ನನ್ನ ಮೇಲಿರುವ ಪ್ರೀತಿ ಅಭಿಮಾನದ ಕಾರಣಕ್ಕೆ ಇಷ್ಟುದೂರ ಬಂದು ಹಲವು ಗಂಟೆಗಳ ಕಾಲ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ವಿಜಿಗೆ ಧನ್ಯವಾದಗಳು. ನಿಮ್ಮ ಈ ಕೋರಿಕೆಯನ್ನು ವರುಣಾದ ನನ್ನ ಜನ ಖಂಡಿತಾ ಈಡೇರಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಸಿದ್ಧು ಪರ ಹ್ಯಾಟ್ರಿಕ್​ ಹೀರೋ ಮತಯಾಚನೆ

ದುನಿಯಾ ವಿಜಿ ಮಾತ್ರವಲ್ಲದೆ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್ (Shivaraj Kumar) ಅವರು ಕೂಡ ಸಿದ್ಧರಾಮಯ್ಯ ಅವರ ಪರ ಮತಯಾಚಿಸಿದ್ದರು. ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಶಿವರಾಜ್ ಕುಮಾರ್ ಅವರು ನನ್ನ ಮೇಲಿನ ಪ್ರೀತಿ ಮತ್ತು ನನ್ನ ಹಾಗೂ ಡಾ.ರಾಜ್ ಕುಟುಂಬದ ನಂಟಿನ ಕಾರಣದಿಂದ ಪತ್ನಿ ಗೀತಾ ಅವರ ಜೊತೆ ಬಂದು ನನಗಾಗಿ ಮತಯಾಚಿಸಿದರು.

ಡಾ.ರಾಜ್ ಕುಮಾರ್ (RajKumar) ಬದುಕಿರುವಷ್ಟು ದಿನ ನನ್ನನ್ನು ಕಂಡಾಕ್ಷಣ 'ನಮ್ಮ ಕಾಡಿನವರು' ಎಂದು ತಬ್ಬಿಕೊಳ್ಳುವವರು. ಈಗ ಶಿವರಾಜ್ ಕುಮಾರ್ ಅವರೂ ' ನಮ್ಮ ಕಾಡಿನವರು' ಆಗಿ ಬಿಟ್ಟರು. ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ (Geetha Shivarajkumar) ಅವರಿಗೆ ಧನ್ಯವಾದಗಳು ಎಂದು ಸಿದ್ಧರಾಮಯ್ಯ ಹೇಳಿದ್ದರು.

ವರುಣಾ ವಿಧಾನಸಭೆ ಕ್ಷೇತ್ರದ ಕೆಂಪಿಸಿದ್ದನಹುಂಡಿ, ಹುಳಿಮಾವು ಹಾಗೂ ಹದಿನಾರು ಗ್ರಾಮದಲ್ಲಿ ಮಾಜಿ ಸಂಸದರಾದ ರಮ್ಯಾ (Ramya), ಮಾಜಿ ಸಚಿವರಾದ ಎಂ.ಆರ್.ಸೀತಾರಾಂ ಹಾಗೂ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರು ಸಿದ್ಧರಾಮಯ್ಯ ಅವರ ಜೊತೆಯಾಗಿ ರೋಡ್ ಶೋನಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.