ಕನ್ನಡ ಸುದ್ದಿ  /  Karnataka  /  Karnataka Election News In Kannada Congress And Bjp Facing Internal Conflict In Gundlupete Ahead Of Assembly Polls Nkn

Chamarajnagar Politics: ಗುಂಡ್ಲುಪೇಟೆಯಲ್ಲಿ ಕಾವೇರಿದ ಚುನಾವಣೆ ಬಿಸಿ; ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಅವರನ್ನು ಕಂಡರೆ ಇವರಿಗಾಗದು

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರಚಾರ ಭರದಿಂದ ಸಾಗಿದೆ. ಈ ನಡುವೆ ಎರಡೂ ಪಕ್ಷಗಳಲ್ಲೇ ಅಪಸ್ವರದ ಮಾತುಗಳು ಕೇಳಿಬರುತ್ತಿದ್ದು, ಒಬ್ಬರ ಮೇಲೊಬ್ಬರಯ ಆರೋಪಗಳನ್ನು ಮಾಡುತ್ತಿರುವುದು ಗಮನ ಸೆಳೆದಿದೆ. ಈ ಕುರಿತು ಇಲ್ಲಿದೆ ಮಾಹಿತಿ..

ಮನು ಶಾನಬೋಗ್
ಮನು ಶಾನಬೋಗ್ (HT)

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರಚಾರ ಭರದಿಂದ ಸಾಗಿದೆ. ಈ ನಡುವೆ ಬಿಜೆಪಿ ಕಟ್ಟಾಳು ವೃಷಬೇಂದ್ರಪ್ಪ ಅವರ ಕುಟುಂಬ ಒಡೆದು ರಾಜಕಾರಣ ಮಾಡಲು, ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಂದಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಜಿ ವಕ್ತಾರ ಮನು ಶಾನಬೋಗ್ ಆರೋಪಿಸಿದ್ದಾರೆ.

ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮನು ಶಾನಬೋಗ್‌, ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ವೃಷಬೇಂದ್ರಪ್ಪ ಮಗ ಭರತ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲು ಶಾಸಕರ ಕೆಲ ಹಿಂಬಾಲಕರು ಪ್ರಯತ್ನ ನಡೆಸಿದ್ದಾರೆ. ಆದರೆ ಇದು ವಿಫಲಗೊಂಡಿದೆ. ಇಂತಹ ಕೀಳು ರಾಜಕಾರಣ ಮಾಡಬಾರದು. ಬಿಜೆಪಿ ಅಭ್ಯರ್ಥಿ ಹಿಂಬಾಲಕರು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಮೊದಲು ಬಿಡಬೇಕು. ಇಲ್ಲದಿದ್ದರೆ ಮತದಾರರು ಅವರಿಗೆ ಬುದ್ದಿ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

ಮತ್ತೊಂದೆಡೆ, ಗುಂಡ್ಲುಪೇಟೆಯ ಕಾಂಗ್ರೆಸ್‌ ಕಾರ್ಯಕರ್ತರಾದ ಚನ್ನಬಸಪ್ಪ, ನಾಗರಾಜು, ಬಸವೇಗೌಡ, ಪುಟ್ಟಸ್ವಾಮಿ ಅವರು ಶ್ಯಾನಾಡ್ರಹಳ್ಳಿ ಗ್ರಾಮದಲ್ಲಿ ಗ್ಯಾರಂಟಿ ಕಾರ್ಡ್ ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಗ್ರಾಮದ ರಾಜೇಂದ್ರ ಎಸ್.ಎಂ. ಎಂಬುವವರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಶ್ಯಾನಾಡ್ರಹಳ್ಳಿ ಗ್ರಾಮದಲ್ಲಿ ಗುರುವಾರದಂದು ಕಾರ್ಯಕರ್ತರು ಗ್ರಾಮದ ಮನೆಮನೆಗಳಿಗೆ ಹೋಗಿ ಗ್ಯಾರೆಂಟಿ ಕಾರ್ಡ್ ನೀಡಿ ನಮ್ಮ ಸರ್ಕಾರ ಬಂದರೆ ಮಹಿಳೆಯರಿಗೆ 2000 ರೂ, ನಿರುದ್ಯೋಗಿಗಳಿಗೆ 3000 ರೂ ನೀಡುತ್ತೇವೆ ಎಂದು ಆಧಾರ್ ಕಾರ್ಡ್ ಜೆರಾಕ್ಸ್, ಫೋನ್ ನಂಬರ್ ಬರೆದುಕೊಂಡು ಜನರಿಗೆ ಆಸೆ ಆಮಿಷಗಳನ್ನು ತೋರಿಸುತ್ತಿದ್ದು, ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋಗಳ ಸಮೇತ ಎಂಬುವವರು ಚುನಾವಣಾಧಿಕಾರಿಗಳಿಗೆ ದೂರು ನೀಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.

ಇಂದಿನ ಪ್ರಮುಖ ಸುದ್ದಿ

Yediyurappa on Siddaramaiah: ಕಾಂಗ್ರೆಸ್‌ ಗೆದ್ರೆ ತಾನೆ ಮೀಸಲಾತಿ ಹೆಚ್ಚಿಸೋದು; ಸಿದ್ದರಾಮಯ್ಯಗೆ ಬಿಎಸ್‌ವೈ ತಿರುಗೇಟು

ಚುನಾವಣೆ ವೇಳೆ ಕಾಂಗ್ರೆಸ್ ನೀಡುವ ಭರವಸೆಗಳನ್ನು ಹಿಂದೆದಿಗೂ ನೆರವೇರಿಸಿಲ್ಲ. ಹೀಗಾಗಿ ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್‌ ಸೋಲುವುದು ಖಚಿತ ಎಂದು ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Karnataka Election 2023: ಹಳೆ ಮೈಸೂರಿನ ಜೆಡಿಎಸ್‌ ಭದ್ರಕೋಟೆ ಛಿದ್ರವಾಗಲಿದೆ; ಹುಬ್ಬಳ್ಳಿಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಕಿಡಿನುಡಿ

ʼಹಳೆ ಮೈಸೂರಿನ ಜೆಡಿಎಸ್‌ ಭದ್ರಕೋಟೆ ಈ ಚುನಾವಣೆಯಲ್ಲಿ ಛಿದ್ರವಾಗಲಿದೆ. ಈ ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಲು ಬಿಜೆಪಿ ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆʼ ಎಂದು ಹುಬ್ಬಳ್ಳಿಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Karnataka Election 2023: ಸ್ಟಾರ್‌ ಕ್ಯಾಂಪೇನರ್‌ ಬಾಯಲ್ಲಿ ಇಂಥ ಮಾತೇ; ಕೋಮು ಗಲಭೆಗೆ ಪ್ರಚೋದನೆ ನೀಡಿದ ಶಾ ವಿರುದ್ಧ ಕಾಂಗ್ರೆಸ್‌ ದೂರು

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಸೃಷ್ಟಿಯಾಗಲಿದೆ ಎಂಬ ಅಮಿತ್‌ ಶಾ ಹೇಳಿಕೆ ಖಂಡಿಸಿರುವ ಕಾಂಗ್ರೆಸ್‌, ಬಿಜೆಪಿಯ ಸ್ಟಾರ್‌ ಕ್ಯಾಂಪೇನರ್‌ ವಿರುದ್ಧ ದೂರು ನೀಡಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.