DK Shivankumar: ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆಂದು ಹೆದರಿ ಮೋದಿ, ಅಮಿತ್​ ಷಾ ಕರ್ನಾಟಕ ಬಿಟ್ಟು ಹೋಗ್ತಿಲ್ಲ; ಡಿಕೆ ಶಿವಕುಮಾರ್​ ಗುಡುಗು
ಕನ್ನಡ ಸುದ್ದಿ  /  ಕರ್ನಾಟಕ  /  Dk Shivankumar: ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆಂದು ಹೆದರಿ ಮೋದಿ, ಅಮಿತ್​ ಷಾ ಕರ್ನಾಟಕ ಬಿಟ್ಟು ಹೋಗ್ತಿಲ್ಲ; ಡಿಕೆ ಶಿವಕುಮಾರ್​ ಗುಡುಗು

DK Shivankumar: ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆಂದು ಹೆದರಿ ಮೋದಿ, ಅಮಿತ್​ ಷಾ ಕರ್ನಾಟಕ ಬಿಟ್ಟು ಹೋಗ್ತಿಲ್ಲ; ಡಿಕೆ ಶಿವಕುಮಾರ್​ ಗುಡುಗು

DK Shivankumar: ಕಮಲದ ಹೂವು ಕೆರೆಯಲ್ಲಿಅರಳಿದ್ದಾಗ, ನೋಡಲು ಸುಂದರ, ಚೆಂದ. ತೆನೆ ಹೊಲದಲ್ಲಿ ಇದ್ದರೆ ಚೆಂದ. ಆದರೆ ದಾನ ಧರ್ಮ ಮಾಡುವ ಕೈಗಳು ಅಧಿಕಾರಕ್ಕೆ ಬಂದರೆ ಚೆಂದ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​​ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​

ಚಿಕ್ಕಮಗಳೂರು (ಮೂಡಿಗೆರೆ): ಬಿಜೆಪಿಗೆ (BJP) ಭಯ ಶುರುವಾಗಿದೆ. ಅವರಿಗೆ ಅಧಿಕಾರಕ್ಕೆ ಬರಲ್ಲ ಅನ್ನೋದು ಗೊತ್ತಾಗಿದೆ. ಕಾಂಗ್ರೆಸ್​ (Congress) ಅಧಿಕಾರಕ್ಕೆ ಬರೋದು ನಿಶ್ಚಿತ ಎಂಬುದನ್ನು ಅರಿತಿದ್ದಾರೆ. ಇದೇ ಕಾರಣಕ್ಕೆ ರಾಷ್ಟ್ರೀಯ ನಾಯಕರು ಕರ್ನಾಟಕ ಬಿಟ್ಟು ಹೋಗುತ್ತಿಲ್ಲ. ಅಷ್ಟು ಭಯದಲ್ಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar)​, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ಗೆ ಅಧಿಕಾರ ಖಚಿತ

ಶುಕ್ರವಾರ ಹೊಯ್ಸಳ ಕ್ರೀಡಾಂಗಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಯನಾ ಮೋಟಮ್ಮ ಅವರ (Congress Candidate Nayana Motamma) ಪರ ಮತಯಾಚಿಸಿದ ಬಹಿರಂಗ ಸಭೆಯಲ್ಲಿ ಡಿಕೆ ಶಿವಕುಮಾರ್ ಮಾತನಾಡಿದರು. ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತದೆಂಬ ಭಯದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮಿತ್​ ಷಾ (Amit Shah) ಕರ್ನಾಟಕದಲ್ಲೇ ಮಲಗಿ ಬಿಟ್ಟಿದ್ದಾರೆ. ಅವರು ಏನೇ ಮಾಡಿದರೂ, ಕಾಂಗ್ರೆಸ್​ ಅಧಿಕಾರಕ್ಕೆ ಬರೋದು ಖಚಿತ ಎಂದು ಡಿಕೆಶಿ ಶಪಥ ಮಾಡಿದ್ದಾರೆ.

ಕಮಲ ಕೆರೆಯಲ್ಲಿದ್ದರೆ ಚೆಂದ

ಕಮಲದ ಹೂವು ಕೆರೆಯಲ್ಲಿಅರಳಿದ್ದಾಗ, ನೋಡಲು ಸುಂದರ, ಚೆಂದ. ತೆನೆ ಹೊಲದಲ್ಲಿ ಇದ್ದರೆ ಚೆಂದ. ಆದರೆ ದಾನ ಧರ್ಮ ಮಾಡುವ ಕೈಗಳು ಅಧಿಕಾರಕ್ಕೆ ಬಂದರೆ ಚೆಂದ. ಮೂಡಿಗೆರೆ ಕ್ಷೇತ್ರದಲ್ಲಿ ನಯನಾ ಮೋಟಮ್ಮ ಅವರದ್ದು ದಾನ ಧರ್ಮ ಮಾಡಿದ ಕೈ. ಅಧಿಕಾರದಲ್ಲಿ ಇಲ್ಲದೇ ಇದ್ದರೂ, ಅವರು ಜನರ ಸೇವೆಯಲ್ಲಿ ತೊಡಗಿದ್ದರು. ಇನ್ನು ಅಧಿಕಾರಕ್ಕೆ ಬಂದರೆ, ಇನ್ನೆಷ್ಟು ಸೇವೆ ಮಾಡಬಹುದು ಅಲ್ಲವೇ? ಹಾಗಾಗಿ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ರಾಜ್ಯ ಮತ್ತು ಕೇಂದ್ರದಲ್ಲೂ ಬಿಜೆಪಿಯೇ ಅಧಿಕಾರ ಇದೆ. ಮಾತೆತ್ತಿದರೆ ಡಬಲ್​ ಎಂಜಿನ್​ ಸರ್ಕಾರ ಎನ್ನುತ್ತಾರೆ. ಆದರೆ ಬೆಲೆ ಏರಿಕೆಯಿಂದ ಸರ್ಕಾರ ಸೀಜ್​ ಆಗಿದೆ. ರಿಪೇರಿ ಮಾಡೋಕು ಆಗದಷ್ಟು ಪರಿಸ್ಥಿತಿಗೆ ಬಂದು ನಿಂತಿದೆ. ಸಿ.ಟಿ ರವಿ ಈ ಸಲ ಸೋಲೋದು ಖಚಿತ. ಬರೆದಿಟ್ಟುಕೊಳ್ಳಿ, ಅವರು ಮಾಜಿ ಶಾಸಕರಾಗುವುದು ಗ್ಯಾರಂಟಿ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಒಡೆದ ಮನೆ

ಸದ್ಯ ಪರಿಸ್ಥಿತಿಯಲ್ಲಿ ಬಿಜೆಪಿ ಒಡೆದ ಮನೆ. ರಾಜ್ಯದ ಅಭಿವೃದ್ಧಿಗಾಗಿ ಜಗದೀಶ್​ ಶೆಟ್ಟರ್ (Jagadish Shettar)​ ಮತ್ತು ಲಕ್ಷ್ಮಣ್​ ಸವದಿ (Laxman Savadi) ಕಾಂಗ್ರೆಸ್​ ಸೇರಿದ್ದಾರೆ. ಇವರಷ್ಟೇ ಬಿಜೆಪಿಯ ಪ್ರಮುಖರೇ ಕಾಂಗ್ರೆಸ್​ಗೆ ಬರುತ್ತಿದ್ದಾರೆ. ಅವರು ಕಾಂಗ್ರೆಸ್​ ಸೇರುತ್ತಿದ್ದಂತೆ, ಬಿಜೆಪಿ ನಾಯಕರಿಗೆ ನಡುಕ ಶುರುವಾಗಿದೆ. ಹಾಗಾಗಿ ಅವರು ಕರ್ನಾಟಕದಲ್ಲೇ ಬೀಡು ಬಿಟ್ಟಿದ್ದಾರೆ. ಅವರು ಎಷ್ಟೇ ಪ್ರಚಾರ ಮಾಡಿದರೂ, ಕಾಂಗ್ರೆಸ್​ ಅಧಿಕಾರಕ್ಕೆ ಬರೋದು ನೂರಕ್ಕೆ ನೂರು ಸತ್ಯ ಎಂದು ಭವಿಷ್ಯ ನುಡಿದಿದ್ದಾರೆ.

ಕೊಟ್ಟ ಮಾತು ತಪ್ಪಲ್ಲ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂಪಾಯಿ, ಪದವಿ ವಿದ್ಯಾರ್ಥಿಗಳಿಗೆ 3 ಸಾವಿರ, 10 ಕೆಜಿ ಅಕ್ಕಿ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ. 200 ಯುನಿಟ್‌ ವಿದ್ಯುತ್‌ ಉಚಿತ ನೀಡುತ್ತೇವೆ. ಇದೆಲ್ಲಾ ಸುಳ್ಳು ಎಂದು ಅಪಪ್ರಚಾರ ಮಾಡುತ್ತಿರುವವ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಕೊಟ್ಟ ಮಾತು ತಪ್ಪಲ್ಲ ಎಂದು ಹೇಳಿದ್ದಾರೆ. ಈ ಚಿಕ್ಕಮಗಳೂರಿನಲ್ಲಿ 5 ಸ್ಥಾನದ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

Whats_app_banner